ನ್ಯೂಜಿಲ್ಯಾಂಡ್ ಸರ್ವಾಧಿಕ ರನ್ ದಾಖಲೆ
Team Udayavani, Mar 3, 2019, 12:30 AM IST
ಹ್ಯಾಮಿಲ್ಟನ್: ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ನ್ಯೂಜಿಲ್ಯಾಂಡ್ ರನ್ ಪರ್ವವನ್ನೇರಿ ನಿಂತಿದೆ. ಪ್ರವಾಸಿಗರ 234ಕ್ಕೆ ಉತ್ತರವಾಗಿ 6 ವಿಕೆಟಿಗೆ 715 ರನ್ ಪೇರಿಸಿದೆ.
ಇದು ನ್ಯೂಜಿಲ್ಯಾಂಡ್ ಟೆಸ್ಟ್ ಇತಿಹಾಸದ ಅತೀ ಹೆಚ್ಚಿನ ಮೊತ್ತವಾಗಿದೆ. ಹಾಗೆಯೇ ಟೆಸ್ಟ್ ಚರಿತ್ರೆಯ 17ನೇ ದೊಡ್ಡ ಮೊತ್ತ. ಇದಕ್ಕೂ ಮುನ್ನ ಪಾಕಿಸ್ಥಾನ ವಿರುದ್ಧದ 2014ರ ಶಾರ್ಜಾ ಟೆಸ್ಟ್ ಪಂದ್ಯದಲ್ಲಿ 690 ರನ್ ಗಳಿಸಿದ್ದು ನ್ಯೂಜಿಲ್ಯಾಂಡಿನ ಅತ್ಯಧಿಕ ಸ್ಕೋರ್ ಆಗಿತ್ತು.481 ರನ್ನುಗಳ ಭಾರೀ ಹಿನ್ನಡೆಗೆ ಸಿಲುಕಿದ ಬಾಂಗ್ಲಾದೇಶ 4 ವಿಕೆಟಿಗೆ 174 ರನ್ ಗಳಿಸಿ 3ನೇ ದಿನದಾಟ ಮುಗಿಸಿದೆ. ಇನ್ನೂ 307 ರನ್ನುಗಳ ಹಿನ್ನಡೆಯಲ್ಲಿದೆ.
ವಿಲಿಯಮ್ಸನ್ ದ್ವಿಶತಕ
ನ್ಯೂಜಿಲ್ಯಾಂಡ್ 4 ವಿಕೆಟಿಗೆ 451 ರನ್ ಮಾಡಿದಲ್ಲಿಂದ ದಿನದಾಟ ಮುಂದುವರಿಸಿತ್ತು. 93ರಲ್ಲಿದ್ದ ನಾಯಕ ಕೇನ್ ವಿಲಿಯಮ್ಸನ್ ಭರ್ತಿ 200 ರನ್ ಹೊಡೆದರು. ತಮ್ಮ ದ್ವಿಶತಕ ಪೂರ್ತಿಯಾದೊಡನೆ ಇನ್ನಿಂಗ್ಸ್ ಡಿಕ್ಲೇರ್ ಮಾಡಿದರು. 257 ಎಸೆತಗಳ ಈ ಬ್ಯಾಟಿಂಗ್ ವೇಳೆ 19 ಬೌಂಡರಿ ಸಿಡಿಯಿತು.ಹೆನ್ರಿ ನಿಕೋಲ್ಸ್ 53, ನೀಲ್ ವ್ಯಾಗ್ನರ್ 47, ಗ್ರ್ಯಾಂಡ್‌ಹೋಮ್ ಔಟಾಗದೆ 76 ರನ್ ಹೊಡೆದರು.
ಸಂಕ್ಷಿಪ್ತ ಸ್ಕೋರ್: ಬಾಂಗ್ಲಾದೇಶ-234 ಮತ್ತು 4 ವಿಕೆಟಿಗೆ 174. ನ್ಯೂಜಿಲ್ಯಾಂಡ್-6 ವಿಕೆಟಿಗೆ 715 ಡಿಕ್ಲೇರ್.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.