ನೈತಿಕ ಮತದಾನ ಜಾಗೃತಿ ಹೆಚ್ಚಾಗಲಿ: ಸಿಂಧೂ ರೂಪೇಶ್
Team Udayavani, Mar 3, 2019, 1:00 AM IST
ಉಡುಪಿ: ತಪ್ಪದೇ ಮತದಾನ ಮಾಡುವ ಜತೆಗೆ ಯಾವುದೇ ಆಮಿಷಗಳಿಗೆ ಒಳಗಾಗದೆ “ನೈತಿಕ ಮತದಾನ’ ಮಾಡುವ ಕುರಿತು ಜಾಗೃತಿ ಹೆಚ್ಚಾಗಬೇಕು ಎಂದು ಜಿ.ಪಂ. ಸಿಇಒ, ಜಿಲ್ಲಾ ಸ್ವೀಪ್ ಸಮಿತಿ (ಮತದಾರರ ಜಾಗೃತಿ ಅಭಿಯಾನ) ಅಧ್ಯಕ್ಷೆ ಸಿಂದೂ ರೂಪೇಶ್ ಹೇಳಿದ್ದಾರೆ.
ಮಾ.2ರಂದು ಮತದಾನ ಜಾಗೃತಿಗಾಗಿ ಜಿಲ್ಲಾಡಳಿತ, ಸ್ವೀಪ್ ಸಮಿತಿ, ಶಿಕ್ಷಣ ಇಲಾಖೆ, ಚಿತ್ರಕಲಾ ಶಿಕ್ಷಕರ ಸಂಘ ಹಾಗೂ ಚಿತ್ರಕಲಾ ಮಂದಿರ ಕಲಾವಿದ್ಯಾಲಯದ ಸಹಯೋಗದಲ್ಲಿ ಅಜ್ಜರಕಾಡು ಭುಜಂಗ ಪಾರ್ಕ್‌ನಲ್ಲಿ ಜರಗಿದ ಚಿತ್ರಕಲಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಚಿತ್ರಕಲೆ ಪರಿಣಾಮಕಾರಿ ಮಾಧ್ಯಮ. ಇದೇ ಕಾರಣದಿಂದ ಮತದಾನ ಜಾಗೃತಿಗೆ ಚಿತ್ರಕಲೆಯನ್ನು ಕೂಡ ಬಳಸಲಾಗುತ್ತಿದೆ. ಜಿಲ್ಲೆಯಾದ್ಯಂತ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ “ಮಿಂಚಿನ ನೋಂದಣಿ’ ನಡೆಯುತ್ತಿದೆ. ಈ ಬಾರಿ ಕಳೆದ ಚುನಾವಣೆಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಮತದಾನ ನಡೆಯುವ ನಿಟ್ಟಿನಲ್ಲಿ ಎಲ್ಲರೂ ಸಹಕರಿಸಬೇಕು ಎಂದರು.
ಪಾರ್ಟಿಸಿಪೇಟರಿ ಡೆಮಾಕ್ರಸಿ
ಡಾ| ಜಿ.ಶಂಕರ್ ಮಹಿಳೆಯರ ಸರಕಾರಿ ಕಾಲೇಜಿನ ಪ್ರಾಂಶುಪಾಲ ಡಾ| ಭಾಸ್ಕರ್ ಶೆಟ್ಟಿ ಮಾತನಾಡಿ ಮತದಾನ ಎಂಬುದು ದೇಶದ ಭವಿಷ್ಯ ರೂಪಿಸಲು ದೊರೆಯುವ ಉತ್ತಮ ಅವಕಾಶ. ಮತದಾನದ ಮೂಲಕ “ಪಾರ್ಲಿಮೆಂಟರಿ ಡೆಮಾಕ್ರಸಿ’ “ಪಾರ್ಟಿಸಿಪೆಟರಿ ಡೆಮಾಕ್ರಸಿ’ ಆಗಬೇಕು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರು ಮಹಾನಗರದಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಮತದಾನವಾಗಿದೆ. ಇಂತಹ ಸಂದರ್ಭ ಅಭ್ಯರ್ಥಿ ಒಟ್ಟು ಮತದಾನದಲ್ಲಿ ಅತ್ಯಂತ ಕಡಿಮೆ ಪ್ರಮಾಣದ ಮತಗಳನ್ನು ಮಾತ್ರ ಪಡೆದು ಆಯ್ಕೆಯಾಗುತ್ತಾನೆ. ವಿದ್ಯಾವಂತರಲ್ಲಿ ಕೂಡ ಮತದಾನ ಜಾಗೃತಿ ಹೆಚ್ಚಿಸುವ ಅಗತ್ಯವಿದೆ ಎಂದರು.
ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಮತ್ತು ಎಸ್‌ಪಿ ನಿಶಾ ಜೇಮ್ಸ್ ಅವರು ಚಿತ್ರಕಲಾ ಶಿಬಿರಕ್ಕೆ ಭೇಟಿ ನೀಡಿ ಕಲಾವಿದರು ಮತ್ತು ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದರು.
ತಾ.ಪಂ. ಕಾರ್ಯನಿರ್ವಹಣಾಧಿಕಾರಿ ರಾಜು, ಕಲಾ ವಿದ್ಯಾಲಯದ ನಿರ್ದೇಶಕ ಯು.ಸಿ. ನಿರಂಜನ್, ಚಿತ್ರಕಲಾ ಸಂಘದ ಅಧ್ಯಕ್ಷ ಪ್ರಶಾಂತ್ ಉಪಸ್ಥಿತರಿದ್ದರು. ಜಿ.ಪಂ. ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ಸ್ವಾಗತಿಸಿ, ತಾ.ಪಂ. ಸಹಾಯಕ ನಿರ್ದೇಶಕ ಹರಿಕೃಷ್ಣ ಶಿವತ್ತಾಯ ವಂದಿಸಿ, ಪಿಡಿಒ ಮಹೇಶ್ ನಿರ್ವಹಿಸಿದರು.
ಮದ್ಯರಹಿತ ಮತದಾನ ಜಾಗೃತಿ
ಧ.ಗ್ರಾ.ಯೋಜನೆಯ ಸದಸ್ಯರ ಮೂಲಕವೂ ಜಾಗೃತಿ ಕಾರ್ಯಕ್ರಮ ನಡೆಯುತ್ತಿವೆ. ಮುಖ್ಯವಾಗಿ ಕುಡಿದು ಮತದಾನ ಮಾಡದಂತೆ ಜಾಗೃತಿ ಮೂಡಿಸಲಾಗುತ್ತಿದೆ.
-ಪುರುಷೋತ್ತಮ, ಧ.ಗ್ರಾ.ಯೋಜನೆ ಉಡುಪಿ ಜಿಲ್ಲಾ ಯೋಜನಾ ನಿರ್ದೇಶಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಮಲ್ಪೆ ಬಂದರಿನಲ್ಲಿ ಮೀನು ಕಳ್ಳರಿಗೆ ಧರ್ಮದೇಟು
Manipal: ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸೂಚನೆ
ಕಲಾವಿದರ ಮಾಸಾಶನ ಹೆಚ್ಚಳಕ್ಕೆ ಸಿಗದ ಆರ್ಥಿಕ ಇಲಾಖೆ ಒಪ್ಪಿಗೆ
Udupi: ಗೀತಾರ್ಥ ಚಿಂತನೆ-148: ಹೇಳುವುದು ಸುಖವಾದರೂ ಆಗುವುದು ದುಃಖ
Udupi: ಶ್ರೀಕೃಷ್ಣಮಠದಲ್ಲಿ ದಾಸವರೇಣ್ಯ ಶ್ರೀ ವಿಜಯದಾಸರು ಸಿನೆಮಾ ಪ್ರದರ್ಶನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ಮಧ್ಯಾಹ್ನ ದಿನಾಂಕ ನಿಗದಿ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.