ಅಜೆಕಾರು: ಕಲ್ಲೆಚ್ಚಿ ಕ್ರಷರ್ಗೆ ಗ್ರಾಮಸ್ಥರ ವಿರೋಧ
Team Udayavani, Mar 3, 2019, 1:00 AM IST
ಅಜೆಕಾರು: ಮರ್ಣೆ ಗ್ರಾ.ಪಂ. ವ್ಯಾಪ್ತಿಯ ಕಲ್ಲೆಚ್ಚಿ ಬಳಿಯ ಕ್ರಷರ್ ಸ್ಥಳೀಯರ ದೂರಿನಂತೆ 2014ನೇ ಸಾಲಿನಲ್ಲಿ ಸ್ಥಗಿತಗೊಂಡಿತ್ತು. ಆದರೆ ಇತ್ತೀಚೆಗೆ ಅದರ ಮಾಲೀಕರು ಮತ್ತೆ ಪ್ರಾರಂಭಿಸಲು ಹುನ್ನಾರ ನಡೆಸುತ್ತಿದ್ದು ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು ಎಂದು ಒತ್ತಾಯಿಸಿ ಸ್ಥಳೀಯರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ಈ ಬಗ್ಗೆ ತಾ.ಪಂ. ಕಾರ್ಯನಿರ್ವಹಣಾ ಅಧಿಕಾರಿಯವರಿಗೂ ಮನವಿ ಮಾಡಲಾಗಿದ್ದರೂ ಅವರಿಂದ ಸೂಕ್ತ ಸ್ಪಂದನೆ ದೊರೆತಿಲ್ಲ ಎಂದು ಮನವಿಯಲ್ಲಿ ದೂರಿದ್ದಾರೆ.
ಈ ಕ್ರಷರ್ನ 100 ಮೀಟರ್ ಒಳಗಿನ ವ್ಯಾಪ್ತಿಯಲ್ಲಿಯೇ ಕೃಷಿಯನ್ನೇ ಅವಲಂಬಿಸಿ ಜೀವನ ನಡೆಸುವ ಹಲವಾರು ಕುಟುಂಬಗಳಿದ್ದು ಕ್ರಷರ್ ನಿರ್ಮಾಣವಾದಲ್ಲಿ ಕೃಷಿ ಸಂಪೂರ್ಣ ನಾಶವಾಗಲಿದೆ. ಅಲ್ಲದೆ ಕ್ರಷರ್ನ ಶಬ್ದಕ್ಕೆ ಮನೆ ಬಿರುಕು ಬೀಳುವ ಸಂಭವದ ಜತೆಗೆ ಕ್ರಷರ್ ಕಲ್ಲಿನ ಹುಡಿ ಕೆರೆ, ಬಾವಿಯ ನೀರನ್ನು ಕಲುಷಿತಗೊಳಿಸುತ್ತದೆ ಎಂದು ಮನವಿಯಲ್ಲಿ ಹೇಳಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.