ಲೈಫ್ ಯೋಜನೆ: 72 ಮನೆಗಳ ಕೀಲಿಕೈ ವಿತರಣೆ
Team Udayavani, Mar 3, 2019, 1:00 AM IST
ಕಾಸರಗೋಡು: ಲೈಫ್ ಯೋಜನೆಯಲ್ಲಿ ಅಳವಡಿಸಿ ಚೆರುವತ್ತೂರು ಗ್ರಾಮ ಪಂಚಾಯತ್‌ನಲ್ಲಿ ನಿರ್ಮಿಸಿದ 27 ಮನೆಗಳ ಕೀಲಿಕೈ ವಿತರಣೆ ಸಮಾರಂಭ ನಡೆಯಿತು.
ರಾಜ್ಯ ಕಂದಾಯ ಸಚಿವ ಇ.ಚಂದ್ರಶೇಖರನ್ ಕೀಲಿಕೈ ವಿತರಣೆ ನಡೆಸಿದರು. ವಸತಿ ಇಲ್ಲದವರಿಗೆ ಮನೆ ನಿರ್ಮಿಸಿ ನೀಡುವ ಯೋಜನೆ ಪ್ರಕಾರ ಎರಡೂವರೆ ವರ್ಷ ಅವಧಿಯಲ್ಲಿ ಈ ಮನೆಗಳ ನಿರ್ಮಾಣ ನಡೆದಿದೆ.
ಈ ಸಂದರ್ಭ ಮಾತನಾಡಿದ ಸಚಿವ ರಾಜ್ಯ ಎಲ್ಲ ವಲಯಗಳಲ್ಲೂ ಬಲು ದೊಡ್ಡ ಬದಲಾವಣೆ ತರಲು ರಾಜ್ಯ ಸರಕಾರಕ್ಕೆ ಸಾಧ್ಯವಾಗಿದೆ ಎಂದು ಹೇಳಿದರು.
ಚೆರುವತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ಮಾಧವನ್ ಮಣಿಯರ ಅಧ್ಯಕ್ಷತೆ ವಹಿಸಿದ್ದರು.
ಪ್ಲಾಸ್ಟಿಕ್ ನಿಂದ ಕ್ಯಾನ್ಸರ್ ಬರಬಹುದಾದ ಸಾಧ್ಯತೆಗಳ ಬಗ್ಗೆ ಪಂಚಾಯತ್ ವತಿಯಿಂದ ನಿರ್ಮಿಸಲಾದ 30 ನಿಮಿಷಗಳ ಅವಧಿಯ ಕಿರುಚಿತ್ರವನ್ನೂ ಸಚಿವ ಲೋಕಾರ್ಪಣೆ ನಡೆಸಿದರು. ಬೇರೆ ಬೇರೆ ಕ್ಷೇತ್ರಗಳ ಗಣ್ಯರಾದ ಯು. ಸುಮಿತ್ರಾ, ಕೆ.ವಿ. ಕುಂಞಿರಾಮನ್, ಮಾಧವಿ ಕೃಷ್ಣನ್, ಕೆ. ನಾರಾಯಣನ್, ಒ.ವಿ. ನಾರಾಯಣನ್, ಟಿ.ವಿ. ಪ್ರಭಾಕರನ್ ಮೊದಲಾದವರು ಉಪಸ್ಥಿತರಿದ್ದರು. ಪಂ. ಉಪಾಧ್ಯಕ್ಷೆ ಸಿ.ವಿ. ಪ್ರಮೀಳಾ ಸ್ವಾಗತಿಸಿದರು. ಎಂ. ಸುರೇಶ್ ಬಾಬು ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Industrial production ಕಳೆದ ನವೆಂಬರ್‌ನಲ್ಲಿ ಹೆಚ್ಚು: ಕೇಂದ್ರ ಸರ್ಕಾರ
Irrigation Development: ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದಿಂದ ಅನುದಾನ: ವಿ.ಸೋಮಣ್ಣ
Power Prayers: ಡಿಸಿಎಂ ಟೆಂಪಲ್ ರನ್ ವಿಚಾರ; ಎಚ್‌ಡಿಕೆ ವ್ಯಂಗ್ಯ, ಡಿಕೆಶಿ ಪ್ರತ್ಯುತ್ತರ
BBK11: ದೈತ್ಯ ಸ್ಪರ್ಧಿಗಳನ್ನು ಸೋಲಿಸಿ ಫಿನಾಲೆಗೆ ಎಂಟ್ರಿ ಕೊಟ್ಟ ಹಳ್ಳಿಹೈದ ಹನುಮಂತು
Name Road Row: ಮೈಸೂರಿನ ರಸ್ತೆಗೆ ನಾಮಕರಣ ವಿಚಾರ; ಗೊಂದಲಗಳಿಗೆ ತೆರೆ ಎಳೆದ ಸಿಎಂ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.