ಒಳ ಚರಂಡಿ ದುರಸ್ತಿಯಾಗಲಿ
Team Udayavani, Mar 3, 2019, 8:07 AM IST
ಮಂಗಳೂರು ನಗರ ವ್ಯಾಪ್ತಿಯಲ್ಲಿ ಒಳಚರಂಡಿ ವ್ಯವಸ್ಥೆ ಇದ್ದರೂ ಸರಿಯಾದ ನಿರ್ವಹಣೆ ಇಲ್ಲದೇ ಇದ್ದರೆ ಅನೇಕ ಸಮಸ್ಯೆಗಳಿಗೆ ಕಾರಣವಾಗುವುದು. ಮಂಗಳೂರು ನಗರ ಪ್ರದೇಶದೊಳಗಿನ ಒಳ ಚರಂಡಿ ದುರಸ್ತಿಗೆ ಮಹಾನಗರ ಪಾಲಿಕೆ ಕೂಡಲೇ ಕ್ರಮ ಕೈಗೊಂಡರೂ ಒಳಭಾಗದ ಕೆಲವೆಡೆ ಇರುವ ಒಳ ಚರಂಡಿ ಗಳು ತತ್ ಕ್ಷಣ ದುರಸ್ತಿಯಾಗದೇ ಇರುವುದರಿಂದ ಸುತ್ತಮುತ್ತಲಿನ ಮನೆಯವರು ಅಲ್ಲಿ ವಾಸಿಸುವುದೇ ಕಷ್ಟ ಎನ್ನುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಅಲ್ಲದೇ ಆ ಭಾಗದಲ್ಲಿ ಸಂಚರಿಸುವ ಜನರು ಕೂಡ ಮೂಗು ಮುಚ್ಚಿ ಕೊಂಡು ತೆರಳಬೇಕಾಗುತ್ತದೆ. ಇದರಿಂದ ಚರಂಡಿಯ ಕಲುಷಿತ ನೀರು ಸುತ್ತ ಮುತ್ತಲಿನ ಬಾವಿಗಳಿಗೆ ಸೇರುವುದರಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿಯೂ ಇದೆ.
ಒಳಚರಂಡಿಗಳ ನಿರ್ವಹಣೆಯ ಹೊಣೆಯನ್ನು ಮಂಗಳೂರು ಮಹಾನಗರ ಪಾಲಿಕೆ ವಹಿಸುವುದರಿಂದ ಸಂಬಂಧಪಟ್ಟವರು ಕಾಲಕಾಲಕ್ಕೆ ಈ ಬಗ್ಗೆ ತಪಾಸಣೆ ನಡೆಸಿ ಒಳಚರಂಡಿಗಳ ದುರಸ್ತಿಗೆ ಕ್ರಮಕೈಗೊಳ್ಳಬೇಕಿದೆ. ನಗರದಲ್ಲಿ ನೈರ್ಮಲ್ಯ ಕಾಪಾಡಲು ಆಡಳಿತ ಸಾಕಷ್ಟು ಶ್ರಮಿಸುತ್ತಿದೆ. ಒಳಚರಂಡಿ ಸೇರುವ ನೀರಿನಲ್ಲಿ ಇತರೆ ತ್ಯಾಜ್ಯ ಸೇರದಂತೆ ಎಚ್ಚರಿಕೆ ವಹಿಸುವ ಕಾರ್ಯವನ್ನು ಆಯಾ ಪ್ರದೇಶದಲ್ಲಿ ಓರ್ವ ಸಿಬಂದಿಗೆ ಅಥವಾ ಸ್ಥಳೀಯರಿಗೆ ವಹಿಸಿಕೊಡಬೇಕು. ಇವರು ಆಯಾ ಭಾಗದ ಜನರಿಗೆ ತಿಳುವಳಿಕೆ ನೀಡುವ ಪ್ರಯತ್ನ ಮಾಡಬೇಕಿದೆ. ಇನ್ನು ಮರದ ಕಸಕಡ್ಡಿಗಳು ಒಳಚರಂಡಿ ಸೇರದಂತೆ ಸಮರ್ಪಕ ಮುಚ್ಚಿಗೆ ಅಳವಡಿಸಬೇಕಿದೆ. ಇದರಿಂದ ಒಳಚರಂಡಿ ಸ್ವಚ್ಛವಾಗಿರುವುದು ಮತ್ತು ಬ್ಲಾಕ್ ಆಗದಂತೆ ತಡೆಯಲು ಸಾಧ್ಯವಿದೆ. ಮಾತ್ರವಲ್ಲದೇ ತೆರೆದಿರುವ ಮ್ಯಾನ್ ಹೋಲ್ ಗಳಿದ್ದರೆ ಕೂಡಲೇ ಅದನ್ನು ಮುಚ್ಚಿ ಮುಂಜಾಗ್ರತಾ ಕ್ರಮಕೈಗೊಳ್ಳಬೇಕಿದೆ.
ನಿತ್ಯಾ, ಜಪ್ಪಿನಮೊಗರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.