ಹಂದ್ವಾರ ಎನ್ ಕೌಂಟರ್ ಅಂತ್ಯ: ಇಬ್ಬರು ಉಗ್ರರ ದಮನ
Team Udayavani, Mar 3, 2019, 10:18 AM IST
ಕಾಶ್ಮೀರ: ಹಂದ್ವಾರದಲ್ಲಿ ನಡೆಯುತ್ತಿರುವ ಭಾರತೀಯ ಸೇನೆ ಮತ್ತು ಉಗ್ರರ ನಡುವಿನ ಗುಂಡಿನ ಕಾಳಗ ಮುಕ್ತಾಯವಾಗಿದ್ದು, ಇಬ್ಬರು ಉಗ್ರರನ್ನು ಕೊಂದು ಹಾಕಲಾಗಿದೆ. ಶುಕ್ರವಾರದಿಂದ ನಡೆಯುತ್ತಿರುವ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಸಿಆರ್ ಪಿಎಫ್ ನ ಮೂವರು ಯೋಧರು ಮತ್ತು ಇಬ್ಬರು ಜಮ್ಮು ಕಾಶ್ಮೀರ ಪೊಲೀಸರು ಹುತಾತ್ಮರಾಗಿದ್ದಾರೆ.
ಈ ಬಗ್ಗೆ ಮಾತನಾಡಿದ ಕಾಶ್ಮೀರದ ಐಜಿಪಿ ಎಸ್.ಪಿ.ಪನಿ ಅವರು, ಕಾರ್ಯಾಚರಣೆ ಬಹುತೇಕ ಮುಗಿದಿದೆ. ಕೊನೆಯ ಹಂತದ ಹುಡುಕಾಟ ಚಾಲ್ತಿಯಲ್ಲಿದೆ. ಹತರಾದ ಇಬ್ಬರು ಉಗ್ರರ ದೇಹಗಳನ್ನು ಗುರುತಿಸಲಾಗಿದೆ. ನಾವು ನಮ್ಮ ಸೇನೆಯ ಮೂವರು ಯೋಧರು ಮತ್ತು ಇಬ್ಬರು ಪೊಲೀಸರನ್ನು ಕಳೆದುಕೊಂಡಿದ್ದೇವೆ ಎಂದರು.
ಕಠಿಣ ಭೂಪ್ರದೇಶ ಮತ್ತು ಜನ ಸಂಖ್ಯಾ ಪ್ರದೇಶವಾಗಿದ್ದರಿಂದ ಕಾರ್ಯಾಚರಣೆ ತಡವಾಯಿತು ಎಂದರು. ಕುಪ್ವಾರ ಜಿಲ್ಲೆಯ ಹಂದ್ವಾರದಲ್ಲಿ ಅವಿತಿದ್ದ ಉಗ್ರರನ್ನು ಕೊಲ್ಲಲು ಸುಮಾರು ಮೂರು ದಿನಗಳಿಂದ ಕಾರ್ಯಾಚರಣೆ ನಡೆಸುತ್ತಿದೆ.
IGP Kashmir SP Pani on Handwara encounter: Operation is almost over,final search on.We’ve recovered 2 bodies of terrorists,their identities being ascertained.The reason for prolonged Op is tough terrain along with heavy civilian population.We’ve lost 3 CRPF&2 J&K Police personnel pic.twitter.com/ML4GCpALOF
— ANI (@ANI) March 3, 2019
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
By Election: ಶಿಗ್ಗಾಂವಿ ಸವಿ ಬೊಮ್ಮಾಯಿ ಪುತ್ರನಿಗೋ, ಯಾಸಿರ್ ಪಠಾಣಗೋ?
King Cobra: “ಕಾಳಿಂಗ’ ಸರ್ಪಕ್ಕೆ ಕನ್ನಡದ್ದೇ ವೈಜ್ಞಾನಿಕ ಹೆಸರು!
Mysuru:’ಕರ್ನಾಟದಲ್ಲಿ “ಗ್ಯಾರಂಟಿ’ ಹೆಸರಲ್ಲಿ ಲೂಟಿ, ಮಹಾರಾಷ್ಟ್ರದಲ್ಲಿ ನೀವು ಘೋಷಿಸಬೇಡಿ’
By Election: ಚನ್ನಪಟ್ಟಣದಲ್ಲಿ ಎಚ್.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್ ಮೇಕೆದಾಟು ಜಟಾಪಟಿ
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.