ವಕೀಲ ವೃತ್ತಿ ಮೌಲ್ಯ ಎತ್ತಿ ಹಿಡಿಯಿರಿ
Team Udayavani, Mar 3, 2019, 11:11 AM IST
ದಾವಣಗೆರೆ: ನ್ಯಾಯವಾದಿಗಳು ಒತ್ತಡ, ಭಾವುಕತೆಗೆ ಒಳಗಾಗದೆ ವೃತ್ತಿಯ ಮೌಲ್ಯಗಳನ್ನು ಸದಾ ಎತ್ತಿ ಹಿಡಿಯಬೇಕು ಎಂದು ಶಿವಮೊಗ್ಗ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಜಿ. ನರೇಂದರ್ ತಿಳಿಸಿದ್ದಾರೆ.
ಶನಿವಾರ ರಾಜ್ಯ, ಜಿಲ್ಲಾ ವಕೀಲರ ಸಂಘ, ಕಾನೂನು ಸೇವಾ ಪ್ರಾಧಿಕಾರ, ಮರಣೋತ್ತರ ಪರಿಹಾರ ನಿಧಿ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ವಕೀಲರ ಸಾಂಸ್ಕೃತಿಕ ಭವನದಲ್ಲಿ ಏರ್ಪಡಿಸಿದ್ದ ಕಾನೂನು ಕಾರ್ಯಾಗಾರ ಸಮಾರೋಪದಲ್ಲಿ ಮಾತನಾಡಿದ ಅವರು, ಅತಿ ಪ್ರಮುಖವಾದ ವಕೀಲ ವೃತ್ತಿಯಲ್ಲಿನ ಮೌಲ್ಯಗಳು ಅತ್ಯಮೂಲ್ಯ. ಎಂತದ್ದೇ ಸಂದರ್ಭದಲ್ಲಿ ಮೌಲ್ಯಕ್ಕೆ ಕುಂದುಂಟಾಗದಂತೆ ನಡೆದುಕೊಳ್ಳಬೇಕು. ವಕೀಲರ ವೃತ್ತಿಯಲ್ಲಿ ಹಲವಾರು ಗಣ್ಯರನ್ನು ಕಂಡಿದ್ದೇವೆ. ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಸಹ ವಕೀಲ ವೃತ್ತಿಯಿಂದ ಬಂದವರು ಎಂದು ತಿಳಿಸಿದರು.
ವಕೀಲ ವೃತ್ತಿಯ ಮೌಲ್ಯ ಅತೀ ಮಹತ್ವದ್ದವು. ಜನ ಸಾಮಾನ್ಯರು ಬೇರೆಲ್ಲ ವ್ಯವಸ್ಥೆಗಳಲ್ಲಿ ನಂಬಿಕೆ ಕಳೆದುಕೊಂಡ ಮೇಲೆ ನ್ಯಾಯಾಂಗದ ಬಳಿ ಬರುತ್ತಾರೆ. ನ್ಯಾಯ ದೊರೆಯುತ್ತದೆ ಎಂದು ಜನ ಸಾಮಾನ್ಯರು ಬರುವುದರಿಂದ ನ್ಯಾಯವಾದಿಗಳ ಮೇಲೆ ಗುರುತರ ಜವಾಬ್ದಾರಿ ಇದ್ದೇ ಇರುತ್ತದೆ. ನ್ಯಾಯವಾದಿಗಳು ವೃತ್ತಿಯ ಮೌಲ್ಯಗಳ ಘನತೆ ಎತ್ತಿ ಹಿಡಿಯಬೇಕು ಎಂದು ತಿಳಿಸಿದರು.
ಈಚೆಗೆ ಮೌಲ್ಯಗಳು ಕುಸಿಯುತ್ತಿವೆ. ನಾವು ಓದುವಾಗ ಸಾಮಾಜಿಕ ಮೌಲ್ಯಗಳು, ಸಂಪ್ರದಾಯಗಳು ಬಹು ಅಮೂಲ್ಯವಾಗಿದ್ದವು. ಈಗ ಮೌಲ್ಯಗಳು ಕುಸಿಯುತ್ತಿರುವುದರಿಂದ ಸಮಾಜದಲ್ಲಿ ಅತೃಪ್ತಿ ಕಂಡು ಬರುತ್ತಿದೆ ಎಂದು ತಿಳಿಸಿದರು. ನ್ಯಾಯಾಧಿಧೀಶರ ಜೀವನ ಕಠಿಣ ಎಂಬುದು ಆಹುರೆಯಲ್ಲಿರುವವರಿಗೆ ಗೊತ್ತಿದೆ.
ನ್ಯಾಯಾಂಗ ವ್ಯವಸ್ಥೆಯಲ್ಲಿ ನ್ಯಾಯಮೂರ್ತಿಗಳು ಪಂಜರದೊಳಗಿನ ಗಿಳಿಗಳಿದ್ದಂತೆ. ಬಹಳ ಜಾಗರೂಕತೆ ಮತ್ತು ಎಚ್ಚರಿಕೆಯಿಂದಲೇ ಪ್ರತಿ ಹೆಜ್ಜೆ ಇಡಬೇಕಾಗುತ್ತದೆ. ವಕೀಲರಿಗೆ ಅಂತಹ ನಿರ್ಬಂಧ ಇರುವುದಿಲ್ಲ. ಸಾಕಷ್ಟು ಸ್ವಾತಂತ್ರ್ಯಾ ಇರುವ ಹಿನ್ನೆಲೆಯಲ್ಲಿ ಕೆಲವಾರು ಸಾಹಸಗಳನ್ನೂ ಮಾಡಬಹುದು.
ಆದರೂ, ನ್ಯಾಯಾಂಗ ವ್ಯವಸ್ಥೆಯಲ್ಲಿ ಇರುವುದರಿಂದ ಎಚ್ಚರಿಕೆಯಿಂದ ಇರಬೇಕಾಗುತ್ತದೆ ಎಂದರು. ನ್ಯಾಯಾಂಗ ವ್ಯವಸ್ಥೆಯಲ್ಲಿ ನ್ಯಾಯಾಧೀಶರರು ಮತ್ತು ನ್ಯಾಯವಾದಿಗಳು ಒಂದೇ ನಾಣ್ಯದ ಎರಡು ಮುಖ. ಜೊತೆಯಾಗಿರಬೇಕೇ ಹೊರತು ಯಾವ ಕಾರಣಕ್ಕೂ ಎಲ್ಲಿಯೂ ಶಾಮೀಲಾಗಬಾರದು. ವಕೀಲರು ತಮ್ಮ ಸಾಮರ್ಥ್ಯ, ಕೌಶಲ್ಯದ ಕಾರಣದಿಂದ ಗುರುತಿಸಿಕೊಳ್ಳಬೇಕೇ ಹೊರತು ನ್ಯಾಯಾಧೀಶರ ಜೊತೆ ವೈಯಕ್ತಿಕವಾಗಿ ಗುರುತಿಸಿಕೊಳ್ಳಬಾರದು.
ನ್ಯಾಯಾಧೀಶರನ್ನು ದೇವರಂತೆ ಕಾಣಲು ನಾನು ಹೇಳುವುದಿಲ್ಲ. ಆದರೆ, ಮನುಷ್ಯರಂತೆ ಕಾಣಿ. ಮನುಷ್ಯ ಮಾತ್ರರಿಂದ ತಪ್ಪು ಆಗಬಹುದು ಎಂದರು. ದಾವಣಗೆರೆ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಕೆ. ಸೋಮಶೇಖರ್ ಮಾತನಾಡಿ, ಕಾನೂನು ವೃತ್ತಿಯಲ್ಲಿ ನೈತಿಕತೆಗೆ ಗಮನ ನೀಡಿದಾಗ ಮಹಾನತೆ ಬರುತ್ತದೆ. ವಕೀಲಿ ವೃತ್ತಿಯಲ್ಲಿ ಶ್ರದ್ಧೆ, ಶಿಸ್ತು, ನಿಷ್ಠೆ ಮೂರು ಮೂಲ ಮಂತ್ರ. ಬಾರ್(ವಕೀಲರ ಸಂಘ) ಹಾಗೂ ಬೆಂಚ್(ನ್ಯಾಯಾಲಯದಲ್ಲಿ) ಮೂಲ ಮಂತ್ರಗಳೊಂದಿಗೆ ವೃತ್ತಿ ಜೀವನದಲ್ಲಿ ಯಶ ಕಾಣಬೇಕು ಎಂದು ಸಲಹೆ ನೀಡಿದರು.
ದೇಶದಲ್ಲಿ ಎಲ್ಲಾ ರಾಜ್ಯ ವೈವಿಧ್ಯಮಯವಾಗಿವೆ. ಜನರು ವಿಭಿನ್ನವಾಗಿದ್ದಾರೆ. ಹಾಗಾಗಿ ಕಾನೂನು ಅಳವಡಿಕೆಯಲ್ಲಿ ವೈವಿಧ್ಯತೆ ಇರುವ ಕಾರಣಕ್ಕೆ ಸಮಸ್ಯೆಗಳು ಕಂಡು ಬರುತ್ತವೆ. ಆ ನಡುವೆಯೂ ನ್ಯಾಯವಾದಿಗಳು ಮತ್ತು ವಕೀಲರ ಮೇಲೆ ನ್ಯಾಯ ಒದಗಿಸುವ ಗುರುತರ ಜವಾಬ್ದಾರಿ ಇದೆ ಎಂದು
ತಿಳಿಸಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎನ್.ಟಿ. ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕುಲಕರ್ಣಿ ಅಂಬಾದಾಸ್ ಜಿ, ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಬಿ.ಎಸ್. ಲಿಂಗರಾಜ್ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davangere:ಡಾ| ಬಿ.ಆರ್. ಅಂಬೇಡ್ಕರ್ ಅವಹೇಳನ; ಶಾ ರಾಜೀನಾಮೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ
Davanagere:ಅಮಿತ್ ಶಾರನ್ನು ಸಂಪುಟದಿಂದ ವಜಾ ಮಾಡಬೇಕೆಂದು ಒತ್ತಾಯಿಸಿ ಅರೆಬೆತ್ತಲೆ ಮೆರವಣಿಗೆ
Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಭಾರತೀಯ ಸಂಸ್ಕೃತಿ ಮತ್ತು ಭಗವದ್ಗೀತೆ ಕುರಿತು ಕೆ.ಪಿ.ಪುತ್ತೂರಾಯ ಉಪನ್ಯಾಸ
BBK11: ಬಿಗ್ ಬಾಸ್ ರೆಸಾರ್ಟ್ ನಲ್ಲಿ ಹೆಣ್ಮಕ್ಕಳ ಬಟ್ಟೆ ಒಗೆದ ರಜತ್ – ತ್ರಿವಿಕ್ರಮ್
ಶ್ರೀಕೃಷ್ಣ ಮಠದಲ್ಲಿ ಡಿ.25ಕ್ಕೆ ನ್ಯಾಯಾಂಗದಲ್ಲಿ ಭಗವದ್ಗೀತೆ ಪ್ರಸ್ತುತತೆಯ ವಿಶೇಷ ಸಂವಾದ
New Appointment: ಐದು ರಾಜ್ಯಗಳಿಗೆ ಹೊಸ ರಾಜ್ಯಪಾಲರ ನೇಮಿಸಿದ ಕೇಂದ್ರ ಸರ್ಕಾರ
Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.