ಕನ್ನಡ ಸಂಘ ಸಾಂತಾಕ್ರೂಜ್ ಮಹಿಳಾ ವಿಭಾಗ: ಅರಸಿನ ಕುಂಕುಮ ಕಾರ್ಯಕ್ರಮ
Team Udayavani, Mar 3, 2019, 3:12 PM IST
ಮುಂಬಯಿ: ಮಹಿಳೆಯರು ತಮ್ಮಲ್ಲಿ ಸರಳ ಸ್ವಭಾವ ಮೈಗೂಡಿಸಿದಾಗ ಅವರ ಘನತೆ ಸೌಮ್ಯತೆ ಹೆಚ್ಚುತ್ತದೆ. ಅರಸಿನ ಕುಂಕುಮ ಸಾಂಪ್ರದಾಯಿಕ, ಸಾಂಸ್ಕೃತಿಕ, ಧಾರ್ಮಿಕ ಆಚರಣೆಯಾಗಿದೆ. ಮಹಿಳೆಯರು ಒಂದಾದಾಗ ಪರಸ್ಪರ ಸ್ನೇಹತ್ವ ಮತ್ತು ಬಂಧುತ್ವ ಹೆಚ್ಚಾಗುತ್ತದೆ. ಕಷ್ಟ ಸುಖಗಳನ್ನು ಅರ್ಥೈಸಿಕೊಂಡು ಸಮಾನತೆಯ ಬಾಳನ್ನು ಮೈಗೂಡಿಸಿಕೊಳ್ಳಬಹುದು. ಅರಸಿನ ಕುಂಕುಮ, ಹಸ್ತಗಳಿಗೆ ಮಣ್ಣಿನ ಬಳೆ ತೊಡಿಸುವ ಸಂಸ್ಕೃತಿಯೇ ವಿಶಿಷ್ಟವಾದುದು. ಇದು ಸಮಗ್ರ ಮಹಿಳೆಯರಿಗೆ ವಿಶೇಷ ಸ್ಥಾನಮಾನ ನೀಡುವ ಶುಭ ಸಂಕೇತವಾಗಿದೆ ಎಂದು ಬಂಟ್ಸ್ ಸಂಘ ಮುಂಬಯಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಸುಧಾಕರ್ ಹೆಗ್ಡೆ ನುಡಿದರು.
ಮಾ. 1ರಂದು ಸಂಜೆ ಸಾಂತಾಕ್ರೂಜ್ ಪೂರ್ವದ ಬಿಲ್ಲವರ ಭವನದ ಸಭಾಗೃಹದಲ್ಲಿ ಕನ್ನಡ ಸಂಘ ಸಾಂತಾಕ್ರೂಜ್ ಮಹಿಳಾ ವಿಭಾಗವು ಸಂಘದ ಅಧ್ಯಕ್ಷ ಎಲ್. ವಿ. ಅಮೀನ್ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ವಾರ್ಷಿಕ ಅರಸಿನ ಕುಂಕುಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಅವರು ಮಹಿಳೆಯರಿಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಮಾತೃ ಭೂಮಿ ಕೋಆಪರೇಟಿವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್‌ನ ನಿರ್ದೇಶಕಿ ಉಮಾಕೃಷ್ಣ ಶೆಟ್ಟಿ, ಎಸ್ಸಾರ್ ಫೈನಾನ್ಶಿಯಲ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕಿ ಅನಿತಾ ಆರ್. ಕೆ. ಶೆಟ್ಟಿ ಮತ್ತು ಸಮಾಜ ಸೇವಕಿ ಯಶೋಧಾ ಎನ್. ಟಿ. ಪೂಜಾರಿ, ಸದಸ್ಯೆಯರಾದ ಸುಧಾ ಎಲ್. ವಿ. ಅಮೀನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಮಹಾನಗರದ ವಿವಿಧ ಕನ್ನಡ ಸಂಘ ಸಂಸ್ಥೆಗಳ ಮಹಿಳಾ ವಿಭಾಗದ ಸದಸ್ಯೆಯರಿಗಾಗಿಆಯೋಜಿಸಿದ್ದ ಭಾವಗೀತೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಗಣ್ಯರುಬಹುಮಾನ ವಿತರಿಸಿ ಶುಭ ಹಾರೈಸಿದರು.
ಹುಟ್ಟೂರ ಸಂಸ್ಕೃತಿಯ ಶ್ರದ್ಧೆಯನ್ನು ಕರ್ಮ ಭೂಮಿಯಲ್ಲಿ ಅಚರಿಸಿ ಧರ್ಮ ಶ್ರದ್ಧೆಯನ್ನು ವ್ಯಾಪಿಸುವ ಮಹಿಳಾ ಪ್ರಧಾನ ಕಾರ್ಯಕ್ರಮ ಇದಾಗಿದೆ. ಒಂದು ಧರ್ಮದಲ್ಲಿ ಅರಸಿನ ಅನ್ನುವುದಕ್ಕೆ ಬಹಳ ಮಹತ್ವವಿದೆ. ಇಂತಹ ಸಂಸ್ಕೃತಿಯ ಹಬ್ಬವಾಗಿ ಆಚರಿಸಿ ಮಹಿಳೆಯರನ್ನು ಒಗ್ಗೂಡಿಸಿ ಪರಸ್ಪರ ಪರಿಚರಿಸಿ ಮುನ್ನಡೆಯುವ ಈ ಸಂಪ್ರದಾಯ ಪರಂಪರಗತವಾಗಿ ಮುನ್ನಡೆಯಲಿ ಎಂದು ಉಮಾ ಶೆಟ್ಟಿ ಶುಭ ಹಾರೈಸಿದರು.
ಅರಸಿನ ಕುಂಕುಮ ಅಂದರೆ ಹಿಂದೂ ಸಂಸ್ಕೃತಿಯಲ್ಲಿ ಮುತ್ತೆ$çದೆಯರಿಗೆ ಸದ್ಭಾವನೆ, ಸಮೃದ್ಧಿಯ ಸಂಕೇತ. ಅರಸಿನ ಅಂದರೆ ಶುದ್ಧ, ಕುಂಕುಮ ಅಂದರೆ ಶಕ್ತಿ ಎಂದರ್ಥ. ನಾರಿಯರ ಹಣೆಯಲ್ಲಿ ಕುಂಕುಮ ಇಲ್ಲವಾದರೆ ಸಂಸ್ಕೃತಿ ಶೃಂಗಾರ ಆಗದು. ಇಂತಹ ಆಚರಣೆ ನಮ್ಮೆಲ್ಲರಿಗೂ ಜೀವನ ಪೂರ್ತಿಯಾಗಿಸುವಲ್ಲಿ ಆರಿಸೋಣ ಎಂದು ಅನಿತಾ ಆರ್. ಕೆ. ಶೆಟ್ಟಿ ತಿಳಿಸಿದರು.
ಇದೇ ಸಂದರ್ಭದಲ್ಲಿ ನಡೆದ ಭಾವಗೀತೆ ಸ್ಪರ್ಧೆಯಲ್ಲಿ ವಿನಯಾ ಅನಂತಕೃಷ್ಣ ಗೋರೆಗಾಂವ್ ಪ್ರಥಮ, ವಿಮಲಾ ದೇವಾಡಿಗ ಪೊವಾಯಿ ದ್ವಿತೀಯ, ತನುಜಾ ಭಟ್ ಬೊರಿವಿಲಿ ತೃತೀಯ, ಸಮೂಹ ಗಾಯನ ಸ್ಪರ್ಧೆಯಲ್ಲಿ ಕನ್ನಡ ಸಂಘ ಧಾಣುರRರ್‌ವಾಡಿ ಪ್ರಥಮ, ಪೊವಾಯಿ ಕನ್ನಡ ಸಂಘ ದ್ವಿತೀಯ ಹಾಗೂ ಪನ್ವೇಲ್ ಕನ್ನಡ ಸಂಘ ತೃತೀಯ ಬಹುಮಾನಕ್ಕೆ ಪಾತ್ರವಾಯಿತು.
ಸದಸ್ಯೆಯರಾದ ಯಶೋದಾ ಆರ್. ಪೂಂಜಾ, ಪ್ರಮೋದಾ ಎಸ್. ಶೆಟ್ಟಿ, ಲತಾ ಪ್ರಭಾಕರ್ ಶೆಟ್ಟಿ, ಸುಜಾತಾ ಗುಣಪಾಲ್ ಶೆಟ್ಟಿ, ಹರಿಣಾಕ್ಷಿ ಜೆ. ಶೆಟ್ಟಿ, ರತ್ನಾ ಪಿ. ಶೆಟ್ಟಿ ಮತ್ತಿತರ ಗಣ್ಯರು, ಸಂಘದ ಸಲಹೆಗಾರರಾದ ಎನ್. ಎಂ. ಸನಿಲ್, ಬಿ. ಆರ್. ಪೂಂಜಾ, ಸದಸ್ಯರಾದ ಶಿವರಾಮ ಕೋಟ್ಯಾನ್, ಜಿ. ಆರ್. ಬಂಗೇರ, ವಿಜಯಕುಮಾರ್ ಕೆ. ಕೋಟ್ಯಾನ್, ಲಿಂಗಪ್ಪ ಬಿ. ಅಮೀನ್, ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ಬನ್ನಂಜೆ ರವೀಂದ್ರ ಅಮೀನ್ ಉಪಸ್ಥಿತರಿದ್ದರು. ಆದಿಯಲ್ಲಿ ಪುಲ್ವಾಮ ವಿಧ್ವಂಸಕ ದಾಳಿಗೆ ಬಲಿಯಾದ ರಾಷ್ಟ್ರದ ವೀರ ಯೋಧರಿಗೆ ಸಂತಾಪ ಸೂಚಿಸಲಾಯಿತು. ಪೊವಾಯಿ ಕನ್ನಡ ಸಂಘದ ಮಹಿಳಾ ವಿಭಾಗವು ಅಗಲಿದ ವೀರ ಯೋಧರಿಗೆ ದೇಶಭಕ್ತಿ ಗೀತೆಯನ್ನಾಡಿ ಶ್ರದ್ಧಾಂಜಲಿ ಸಲ್ಲಿಸಿದರು.
ಕಾರ್ಯಕಾರಿ ಸಮಿತಿ ಸದಸ್ಯೆ ವನಿತಾ ವೈ. ನೋಂದಾ ಸ್ವಾಗತಿಸಿದರು. ಗೌ| ಪ್ರ| ಕಾರ್ಯದರ್ಶಿ ಸುಜಾತಾ ಆರ್. ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕಾರಿ ಸಮಿತಿ ಸದಸ್ಯೆಯರಾದ ಶಾಲಿನಿ ಜಿ. ಶೆಟ್ಟಿ, ಉಷಾ ವಿ. ಶೆಟ್ಟಿ, ಸುಜಾತಾ ಸುಧಾಕರ್ ಉಚ್ಚಿಲ್ ಅತಿಥಿಗಳನ್ನು ಪರಿಚಯಿಸಿದರು. ಪದಾಧಿಕಾರಿಗಳು ಅತಿಥಿಗಳನ್ನು ಗೌರವಿಸಿದರು. ಸಾಮಾಜಿಕ ಮತ್ತು ಸಾಂಸ್ಕೃತಿಕ ಸಮಿತಿ ಕಾರ್ಯದರ್ಶಿ ಲಕ್ಷಿ ¾à ಎನ್. ಕೋಟ್ಯಾನ್ ಪ್ರಾರ್ಥನೆಗೈದು ವಂದಿಸಿದರು.
ಒಂದು ಕಾಲದಲ್ಲಿ ಮನೆಯ ನಾಲ್ಕು ಗೋಡೆಗಳ ಮಧ್ಯೆ ಇದ್ದ ಮಹಿಳೆಯರು ಇಂದು ಇಂತಹ ಕಾರ್ಯಕ್ರಮಗಳಿಂದ ವೇದಿಕೆಗಳನ್ನು ಅಲಂಕರಿಸಿ ಮಾತೃ ಸಂಸ್ಕೃತಿಯನ್ನು ಯುವ ಪೀಳಿಗೆಗೆ ಪರಿಚಯಿಸುತ್ತಿರುವುದು ಅಭಿನಂದನೀಯ. ಮಹಿಳೆಯರು ಸಮಾಜಕ್ಕೆ ಮಾರ್ಗದರ್ಶಕರಾಗಲು ಸಶಕ್ತರಾಗಿರುವುದು ಸ್ತುತ್ಯರ್ಹ. ಶಿಸ್ತುಬದ್ಧ ಕಾರ್ಯ ಚಟುವಟಿಕೆಗಳಿಗೆ ಮಹಿಳೆಯರು ಪ್ರಧಾನರಾಗಿದ್ದು ಮಹಿಳಾ ಪ್ರಾಧಾನ್ಯತೆಗೆ ಪೂರಕವಾದ ಈ ಸಂಘದ ಎಲ್ಲಾ ಕಾರ್ಯಕ್ರಮಗಳಿಗೆ ತುಳು-ಕನ್ನಡಿಗರ ಪ್ರೋತ್ಸಾಹ, ಸಹಕಾರ ಸದಾಯಿರಲಿ
– ಎಲ್. ವಿ. ಅಮೀನ್ (ಅಧ್ಯಕ್ಷರು : ಸಾಂತಾಕ್ರೂಜ್ ಕನ್ನಡ ಸಂಘ).
ಚಿತ್ರ-ವರದಿ: ರೋನ್ಸ್ ಬಂಟ್ವಾಳ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Rapper Badshah: ಬಾಲಿವುಡ್ ಗಾಯಕ ಬಾದ್‌ಶಾ ಒಡೆತನದ ಬಾರ್ & ಕ್ಲಬ್ ಹೊರಗೆ ಬಾಂಬ್ ಸ್ಪೋಟ
Hampankatte: ಸಿಟಿ ಮಾರ್ಕೆಟ್ ರಸ್ತೆಗೆ ಬೇಕಿದೆ ಕಾಯಕಲ್ಪ
Mangaluru: ಪಿ.ಎಂ. ರಾವ್ ರಸ್ತೆಯಲ್ಲಿ ಮತ್ತೆ ಎಲ್ಲೆಂದರಲ್ಲಿ ವಾಹನ ನಿಲುಗಡೆ
Thirthahalli: ತುಂಗಾ ಕಮಾನು ಸೇತುವೆ ಬಳಿ ಪತ್ತೆಯಾಗಿದ್ದ ಅಸ್ತಿ ಪಂಜರ ತಂದು ಹಾಕಿದ್ಯಾರು!!?
IPL: ಗೊಂದಲದಲ್ಲಿ ಮರಿ ಸೆಹ್ವಾಗ್ ನನ್ನು ಖರೀದಿಸಿದ ಆರ್ ಸಿಬಿ; ಯಾರು ಈ ಸ್ವಸ್ತಿಕ್ ಚಿಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.