“ವೈಜ್ಞಾನಿಕ ಆವಿಷ್ಕಾರದಿಂದ ಭಾಷೆಯ ಅವನತಿ’
Team Udayavani, Mar 4, 2019, 1:00 AM IST
ಕುಂದಾಪುರ: ವಿಜ್ಞಾನದ ಹೊಸ – ಹೊಸ ಆವಿಷ್ಕಾರಗಳಿಂದ ಭಾಷೆಗಳು ಅವನತಿಯತ್ತ ಸಾಗುತ್ತಿವೆೆ. ಕನ್ನಡ, ಕುಂದಗನ್ನಡ ಕೂಡ ಇದರಿಂದ ಹೊರತಾಗಿಲ್ಲ ಎಂದು ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇಗುಲ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ, ಕುಂದಾಪುರ ಮೂಲದ ಮೊಳಹಳ್ಳಿ ಪ್ರೊ| ಬಾಲಕೃಷ್ಣ ಶೆಟ್ಟಿ ಹೇಳಿದರು.
ಅವರು ರವಿವಾರ ಹೊಸಾಡು ಸರಕಾರಿ ಹಿ. ಪ್ರಾ. ಶಾಲೆಯಲ್ಲಿ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಕುಂದಾಪುರ ತಾಲೂಕು ಘಟಕದ ಆಶ್ರಯದಲ್ಲಿ ವಿವಿಧ ಸ್ಥಳೀಯ ಸಂಘ – ಸಂಸ್ಥೆಗಳ ಸಹಯೋಗದಲ್ಲಿ ಜರಗಿದ ಕುಂದಾಪುರ ತಾಲೂಕಿನ 17ನೇ ಕನ್ನಡ ಸಾಹಿತ್ಯ ಸಮ್ಮೇಳನ “ಹೊಸಹಾಡು’ವನ್ನು ಉದ್ಘಾಟಿಸಿ ಮಾತನಾಡಿದರು.
“ಭಾವಾಭಿವ್ಯಕ್ತ ಭಾಷೆ’
250 ವರ್ಷಗಳಿಂದ ಕನ್ನಡದ ಏಕೀಕರಣಕ್ಕಾಗಿ, ಏಳ್ಗೆಗಾಗಿ ಶ್ರಮಿಸಿದ, ಕನ್ನಡ ಕಟ್ಟುವ ಕಾರ್ಯದಲ್ಲಿ ಕಂಕಣಬದ್ಧವಾಗಿರು ಎಲ್ಲ ಹಿರಿಯ ಚೇತನರನ್ನು ನೆನೆಯಬೇಕಾದ ದಿನವಿದು ಎಂದ ಅವರು, ಸಾರ್ವತ್ರಿಕವಾದ ಕನ್ನಡದೊಂದಿಗೆ ಸೇರ ಬಯಸುವ ಪ್ರಬುದ್ಧ ಭಾಷೆಯೇ ನಮ್ಮ ಕುಂದಗನ್ನಡ. ಇಲ್ಲಿ ಈಗಲೂ ಕನ್ನಡದ ಕಂಪನ್ನು ಪಸರಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಕುಂದಗನ್ನಡದ ಪದಗಳು ಭಾವಾಭಿವ್ಯಕ್ತಿಗೊಳಿಸಿದಷ್ಟು ಬೇರೆ ಯಾವ ಭಾಷೆಯು ಮೂಡಿಸುವುದಿಲ್ಲ ಎಂದರು.
ಅಧ್ಯಯನಕ್ಕೆ ಅವಕಾಶ
ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಬಿ. ಅಪ್ಪಣ್ಣ ಹೆಗ್ಡೆ ಅವರು, ಕುಂದಾಪುರದ ಸಾಂಸ್ಕೃತಿಕ ಬಹುತ್ವ ಕನ್ನಡ ನಾಡಿನ ಉದ್ದಗಲಕ್ಕೂ ಪಸರಿಸಿದೆ. ಇಲ್ಲಿನ ಆಚರಣೆಗಳು ವೈವಿಧ್ಯ ಮಯವಾಗಿದೆ. ಇಲ್ಲಿನ ಭಾಷೆ, ಬುಡಕಟ್ಟು ಸಮುದಾಯಗಳು, ತುಳು ನಾಡಿಗಿಂತ ಭಿನ್ನವಾದ ದೈವರಾಧನೆ, ಜಾನಪದ ಆಚರಣೆಗಳ ಕುರಿತ ಅಧ್ಯಯನಕ್ಕೆ ವಿಪುಲ ಅವಕಾಶಗಳಿವೆ ಎಂದವರು ಹೇಳಿದರು.
ಈ ಸಂದರ್ಭ ಹೊಸಾಡಿನ ಕವಿ ಜಗದೀಶ ಅವರ ಸ್ವರಚಿತ ಕವನಗಳ “ಮಾರ್ದನಿ’ ಕವನ ಸಂಕಲನವನ್ನು ಬಿಡುಗಡೆಗೊಳಿಸಲಾಯಿತು. ಹೊಸಾಡು ಗ್ರಾ.ಪಂ. ಅಧ್ಯಕ್ಷ ಚಂದ್ರಶೇಖರ ಪೂಜಾರಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.
ಹೊಸಾಡು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ವಂದನಾ ಖಾರ್ವಿ, ಕಾರ್ಕಳ ತಾ| ಕಸಾಪ ಅಧ್ಯಕ್ಷ ಕೊಂಡಳ್ಳಿ ಜಯರಾಮ ಪಟಗಾರ್, ಶಾಲೆಯ ಮುಖ್ಯೋಪಾಧ್ಯಾಯ ಜಯರಾಮ ಪಟಗಾರ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರದೀಪ ಆಚಾರ್ಯ, ಎಸ್‌ಡಿಎಂಸಿ ಅಧ್ಯಕ್ಷೆ ಹೇಮಲತಾ, ನಿವೃತ್ತ ಶಿಕ್ಷಕ ಸದಾಶಿವ ಭಟ್ ಹೊಸಾಡು, ಕುಂದಾಪುರ ತಾ| ಕಸಾಪ ಗೌರವ ಕಾರ್ಯದರ್ಶಿ ಪ್ರೊ| ಚೇತನ್ ಶೆಟ್ಟಿ ಕೋವಾಡಿ ಮತ್ತಿತರರು ಉಪಸ್ಥಿತರಿದ್ದರು.
ಉಡುಪಿ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಆಶಯ ನುಡಿಗಳನ್ನಾಡಿದರು. ಕುಂದಾಪುರ ತಾ| ಕಸಾಪ ಅಧ್ಯಕ್ಷ ಡಾ| ಕಿಶೋರ ಕುಮಾರ ಶೆಟ್ಟಿ ಸ್ವಾಗತಿಸಿ, ಗೌರವ ಕಾರ್ಯದರ್ಶಿ ಅಶ್ವಿನಿ ಎನ್. ಹಕ್ಲಾಡಿ ವಂದಿಸಿದರು. ಉಪನ್ಯಾಸಕಿ ಅಮೃತಾ ಕಾರ್ಯಕ್ರಮ ನಿರೂಪಿಸಿದರು.
ಕುಂದಗನ್ನಡ ನಮ್ಮ ಅಸ್ಮಿತೆಯ ಪ್ರತೀಕ
ಶ್ರೀಮಂತ ಜಾನಪದ ಸೊಗಡಿನ ಭಾಷೆ ಕುಂದಗನ್ನಡ. ನಾವು ಯಾವುದೇ ಊರಿಗೆ ಹೋದರೂ, ಇದು ನಮ್ಮ ಅಸ್ಮಿತೆಯ ಗುರುತು. ಭಾಷೆಯನ್ನು ಅವಗಣಿಸುವುದರಿಂದ ಅದರ ಅವನತಿ ಯಾಗುತ್ತದೆ. ಈ ವಿಶಿಷ್ಟ ಆಡುಭಾಷೆ ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರದು ಎಂದು ಲೇಖಕಿ, ಸಾಹಿತಿ, ನಿವೃತ್ತ ಉಪನ್ಯಾಸಕಿ ಡಾ| ಪಾರ್ವತಿ ಜಿ. ಐತಾಳ್ ಹೇಳಿದರು.
ಕುಂದಾಪುರ ತಾಲೂಕಿನ 17ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಆಂಗ್ಲ ಭಾಷಾ ವ್ಯಾಮೋಹದಿಂದ ಯುವ ಜನತೆ ಕನ್ನಡವನ್ನು ಮರೆ ಯುತ್ತಿದ್ದು, ಇದು ನಗರ ಮಾತ್ರವಲ್ಲದೆ ಗ್ರಾಮೀಣ ಭಾಗಕ್ಕೂ ವ್ಯಾಪಿಸಿರುವುದು ಆತಂಕಕಾರಿ ಸಂಗತಿ. ಇಂಗ್ಲಿಷ್ ಕಲಿಯಿರಿ ಆದರೆ ಕನ್ನಡಕ್ಕೆ ಪರ್ಯಾಯವೆಂದು ಭಾವಿಸದಿರಿ ಎಂದರು. ಕುಂದಾಪುರದ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಲೋಕ, ಇಲ್ಲಿರುವ ಧರ್ಮ, ಪಕ್ಷ, ಪಂಥಗಳ ವಿಚಾರದಲ್ಲಿ ಹೊಂದಿರಬೇಕಾದ ಸಮನ್ವ ಯತೆಗಳ ಬಗೆಗೂ ಬೆಳಕು ಚೆಲ್ಲಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ
Health Card: ಮಣಿಪಾಲ ಆರೋಗ್ಯಕಾರ್ಡ್ ನೋಂದಾವಣೆಗೆ ಐದು ದಿನ ಬಾಕಿ: ನ.30 ಕೊನೆಯ ದಿನ
ಉಡುಪಿ: ಶಿಕ್ಷಣ ಇಲಾಖೆಯಲ್ಲಿ ಪ್ರತ್ಯೇಕ ಪರಿಹಾರ ನಿಧಿಯೇ ಇಲ್ಲ !
Fish Farming: ಲಾಭದಾಯಕ ಪಂಜರ ಮೀನು ಕೃಷಿ ಯೋಜನೆಯೇ ಸ್ತಬ್ಧ
Kambala Time Table: ಡಿ.13ರ ವರೆಗೆ ಸಾಂಪ್ರದಾಯಿಕ ಕಂಬಳ ಹಬ್ಬ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.