ಪಾಕ್ನಲ್ಲಿ ಶ್ರೀಲಂಕಾ ತಂಡದ ಮೇಲೆ ದಾಳಿಗೆ ಹತ್ತು ವರ್ಷ
Team Udayavani, Mar 4, 2019, 3:33 AM IST
ಕ್ರಿಕೆಟ್ ಇತಿಹಾಸದಲ್ಲೇ ಭೀಕರ ಎನ್ನುವ ಭಯೋತ್ಪಾದಕ ದಾಳಿ 2009, ಮಾ.3ರಂದು ಪಾಕಿಸ್ತಾನದ ಲಾಹೋರ್ನಲ್ಲಿ ನಡೆದಿತ್ತು. ಆಗ ಶ್ರೀಲಂಕಾ ಕ್ರಿಕೆಟ್ ತಂಡದ ಪಾಕಿಸ್ತಾನಕ್ಕೆ ತೆರಳಿತ್ತು. ಲಾಹೋರ್ನ ಗಡ್ಡಾ ಮೈದಾನದಲ್ಲಿ 2ನೇ ಟೆಸ್ಟ್ನ 3 ದಿನದ ಆಟ ನಡೆಯಬೇಕಿತ್ತು. ಅದಕ್ಕಾಗಿ ಶ್ರೀಲಂಕಾ ಆಟಗಾರರು ಬಸ್ನಲ್ಲಿ ಮೈದಾನಕ್ಕೆ ತೆರಳುತ್ತಿದ್ದರು. ಇದ್ದಕ್ಕಿದ್ದಂತೆ ಗನ್ ಹಿಡಿದು ಬಂದ ಭಯೋತ್ಪಾದಕನೊಬ್ಬ ಬಸ್ ಮೇಲೆ ಯದ್ವಾತದ್ವಾ ಗುಂಡಿನ ದಾಳಿ ನಡೆಸಿದ.
ಪರಿಣಾಮ ಶ್ರೀಲಂಕಾ ಕ್ರಿಕೆಟ್ ತಂಡದ ನಾಯಕ ಮಹೇಲ ಜಯವರ್ಧನೆ, ಉಪನಾಯಕ ಕುಮಾರ ಸಂಗಕ್ಕರ ಗಾಯಗೊಂಡರು. ತಿಲನ್ ಸಮರವೀರ, ತರಂಗ ಪರ್ಣವಿತನ, ಅಜಂತ ಮೆಂಡಿಸ್ಗೆ ಗಾಯವಾಗಿತ್ತು. ಈ ಪೈಕಿ ಸಮರವೀರ, ಪರ್ಣವಿತನ ಕಾಲಿಗೆ ಗಾಜಿನ ತುಂಡುಗಳು ಹೊಕ್ಕಿದ್ದವು. ಮೆಂಡಿಸ್ ಕುತ್ತಿಗೆ ಗಾಜಿನ ಚೂರು ನುಗ್ಗಿ ಗಾಯವಾಗಿತ್ತು. ಒಟ್ಟಾರೆ ಎಲ್ಲರೂ ಅಪಾಯದಿಂದ ಪಾರಾಗಿದ್ದರು. ಘಟನೆಯ ತರುವಾಯ ಮೈದಾನದಿಂದಲೇ ಶ್ರೀಲಂಕಾ ಆಟಗಾರರು ವಿಮಾನದಲ್ಲಿ ತವರಿಗೆ ಕಳುಹಿಸಲಾಗಿತ್ತು.
ಅಲ್ಲಿಂದ ನಂತರ ಸ್ವತಃ ಐಸಿಸಿಯೇ ವಿದೇಶಿ ತಂಡಗಳು ಪಾಕ್ಗೆ ತೆರಳುವುದನ್ನು ನಿಷೇಧಿಸಿತ್ತು. ಈಗಲೂ ಆ ರಾಷ್ಟ್ರಕ್ಕೆ ಯಾವುದೇ ಪ್ರಮುಖ ರಾಷ್ಟ್ರಗಳೂ ತೆರಳಿ ಕ್ರಿಕೆಟ್ ಆಡುತ್ತಿಲ್ಲ. ವೆಸ್ಟ್ ಇಂಡೀಸ್ ಮತ್ತು ಜಿಂಬಾಬ್ವೆ ತಂಡಗಳು ಮಾತ್ರ ಅಲ್ಲಿಕೆಲವು ವರ್ಷಗಳ ಹಿಂದೆ ಕ್ರಿಕೆಟ್ ಆಡಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.