ಐಎಎಫ್ ವಾಯು ದಾಳಿಗೆ 250ಕ್ಕೂ ಹೆಚ್ಚು ಜೈಶ್ ಉಗ್ರರು ಬಲಿ: ಅಮಿತ್ ಶಾ
Team Udayavani, Mar 4, 2019, 6:50 AM IST
ಅಹ್ಮದಾಬಾದ್ : ಭಾರತೀಯ ವಾಯು ಪಡೆ ಕಳೆದ ಫೆ.27ರ ನಸುಕಿನ ವೇಳೆ ಪಾಕಿಸ್ಥಾನದ ಖೈಬರ್ ಫಖ್‌ತೂನ್‌ಖ್ವಾ ಪ್ರಾಂತ್ಯದ ಬಾಲಾಕೋಟ್ ನಲ್ಲಿನ ಜೈಶ್ ಉಗ್ರ ಶಿಬಿರದ ಮೇಲೆ ನಡೆಸಿದ ಬಾಂಬ್ ದಾಳಿಗೆ 250ಕ್ಕೂ ಹೆಚ್ಚು ಜೈಶ್ ಉಗ್ರರು ಬಲಿಯಾಗಿರುವುದಾಗಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಇಂದು ಸೋಮವಾರ ಹೇಳಿದ್ದಾರೆ.
‘ಭಾರತೀಯ ವಾಯು ಪಡೆ ನಡೆಸಿದ ಬಾಂಬ್ ದಾಳಿಯಲ್ಲಿ ಜೈಶ್ ಉಗ್ರರು ಸತ್ತಿದ್ದಾರೆಯೇ, ಸತ್ತಿದ್ದರೆ ಅವರ ಸಂಖ್ಯೆ ಎಷ್ಟು; ಅದಕ್ಕೆ ಸಾಕ್ಷ್ಯವೇನು’ ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿರುವ ವಿರೋಧ ಪಕ್ಷಗಳನ್ನು ಕಟುವಾಗಿ ಟೀಕಿಸಿದ ಅಮಿತ್ ಶಾ, ಐಎಎಫ್ ಬಾಂಬ್ ದಾಳಿಯಲ್ಲಿ 250ಕ್ಕೂ ಅಧಿಕ ಉಗ್ರರು ಸತ್ತಿರುವುದು ನಿಜ ಎಂದು ಹೇಳುವ ಮೂಲಕ ವಿಪಕ್ಷಗಳ ಬಾಯಿ ಮುಚ್ಚಿಸುವ ಯತ್ನ ಮಾಡಿದರು.
ಎನ್‌ಡಿಎ ಸರಕಾರದ ಅವಧಿಯಲ್ಲಿ ಕಳೆದ ಐದು ವರ್ಷಗಲ್ಲಿ ಸೇನೆ ಉಗ್ರರ ಮೇಲೆ ಎರಡು ಪ್ರಮುಖ ದಾಳಿ ನಡೆಸಿದೆ ಎಂದು ಅಮಿತ್ ಶಾ ಅವರು ನಗರದಲ್ಲಿ ಏರ್ಪಡಿಸಲಾಗಿದ್ದ ‘Lakshya JITO’ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಹೇಳಿದರು.
ಜೈಶ್ ಆತ್ಮಾಹುತಿ ಬಾಂಬ್ ದಾಳಿಕೋರ 40 ಸಿಆರ್‌ಪಿಎಫ್ ಯೋಧರನ್ನು ಬಲಿ ಪಡೆದ ಪುಲ್ವಾಮಾ ದಾಳಿಯ ಬಳಿಕ ಪ್ರತಿಯೊಬ್ಬರು ಈ ಬಾರಿ ಸರ್ಜಿಕಲ್ ದಾಳಿಯನ್ನು ನಡೆಸಲಾಗದು; ಈಗೇನಾಗುವುದು ಎಂಬ ತಳಮಳ ಹೊಂದಿದ್ದರು. ಆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಪುಲ್ವಾಮಾ ದಾಳಿಯ 13ನೇ ದಿನ ವಾಯು ದಾಳಿ ನಡೆಸಿ, ನಮ್ಮ ಕಡೆಯಲ್ಲಿ ಯಾವುದೇ ಹಾನಿ ಉಂಟಾಗದಂತೆ, 250ಕ್ಕೂ ಹೆಚ್ಚು ಉಗ್ರರನ್ನು ಬಲಿಪಡೆಯಿತು ಎಂದು ಅಮಿತ್ ಶಾ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra: ಏಕ್‌ನಾಥ್ ಹೇ ತೋ ಸೇಫ್ ಹೇ: ಶಿಂಧೆ ಶಿವಸೇನೆ ಹೊಸ ಮಂತ್ರ
Old Parliament House: ಭಾರತದ ಸಂವಿಧಾನವು ಜೀವಂತಿಕೆಯ, ಪ್ರಗತಿಪರ ದಾಖಲೆ: ರಾಷ್ಟ್ರಪತಿ
Maharaja: ಬಾಂಧವ್ಯವೃದ್ಧಿ ಬಳಿಕ 29ಕ್ಕೆ ಚೀನಾದಲ್ಲಿ ಮೊದಲ ಬಾರಿಗೆ ತಮಿಳು ಸಿನಿಮಾ ರಿಲೀಸ್!
Actress: ಫ್ರೆಂಚ್ ಗೆಳೆಯನೊಂದಿಗೆ ಬ್ರೇಕ್‌ಅಪ್ ಆಗಿದೆ: ಮಲ್ಲಿಕಾ ಶೆರಾವತ್
Chhattisgarh: ಹಳಿ ತಪ್ಪಿದ ಗೂಡ್ಸ್ ರೈಲಿನ 20 ಬೋಗಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.