ಜಿಲ್ಲಾಡಳಿತ ಭವನದ ಸಭಾಂಗಣ ಲೋಕಾರ್ಪಣೆ
Team Udayavani, Mar 4, 2019, 7:31 AM IST
ಚಿಕ್ಕಬಳ್ಳಾಪುರ: ಜಿಲ್ಲಾಡಳಿತ ಭವನದಲ್ಲಿ ಅಂತೂ ಇಂತೂ ಕುಂಟುತ್ತಾ ಸಾಗಿದ್ದ ಸಭಾಂಗಣ ನಿರ್ಮಾಣ ಕಾಮಗಾರಿ ದಶಕದ ಬಳಿಕ ಪೂರ್ಣಗೊಂಡು ಭಾನುವಾರ ಜಿಲ್ಲೆಗೆ ಲೋಕಾರ್ಪಣೆಗೊಂಡಿದ್ದು, ಇಡೀ ಸಭಾಂಗಣ ಹೈಟೆಕ್ ಸ್ಪರ್ಶದಿಂದ ಕೂಡಿದ್ದು ಸಂಪೂರ್ಣ ಹವಾ ನಿಯಂತ್ರಣದಿಂದ ಕೂಡಿದೆ.
ಡೀಸಿ ಕಚೇರಿ, ಜಿಪಂ ಸೇರಿದಂತೆ ಸರಿ ಸುಮಾರು 40 ಕ್ಕೂ ಹೆಚ್ಚು ಸರ್ಕಾರದ ವಿವಿಧ ಇಲಾಖೆಗಳ ಶಕ್ತಿ ಕೇಂದ್ರವಾಗಿರುವ ಜಿಲ್ಲಾಡಳಿತ ಭವನದ ಮಧ್ಯ ಭಾಗದಲ್ಲಿ ಸಭಾಂಗಣ ಕಾಮಗಾರಿ ಜಿಲ್ಲಾಡಳಿತದ ಅಸಡ್ಡೆಗೆ ಒಳಗಾಗಿ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿತ್ತು. ಇದರಿಂದ ಜಿಲ್ಲಾಡಳಿತ, ಜಿಪಂ ನಡೆಸುವ ಬೃಹತ್ ಕಾರ್ಯ ಕ್ರಮಗಳಿಗೆ ಖಾಸಗಿ ಕಲ್ಯಾಣ ಮಂಟಪಗಳನ್ನು ಆಶ್ರಯಿಸಬೇಕಿತ್ತು. ಇದಕ್ಕಾಗಿಜಿಲ್ಲಾಡಳಿತ ದುಬಾರಿ ಬಾಡಿಗೆ ತೆರಬೇಕಿತ್ತು.
ಡೀಸಿ ಅವರಿಂದ ಕಾಯಕಲ್ಪ: ಜಿಲ್ಲಾಡಳಿತ ಭವನದಲ್ಲಿ ಸಭಾಂಗಣ ನಿರ್ಮಾಣ ಕಾಮಗಾರಿ ನೆನೆಗುದಿಗೆ ಬಿದ್ದಿರುವ ವಿಷಯ ತಿಳಿದ ಕೂಡಲೇ ಜಿಲ್ಲೆಗೆ ನೂತನ ಡೀಸಿ ಆಗಿ ಆಗಮಿಸಿರುವ ಅನಿರುದ್ಧ್ ಶ್ರವಣ್ ಜಿಲ್ಲಾಡಳಿತ ಭವನಕ್ಕೆ ಅಗತ್ಯವಾದ ಸಭಾಂಗಣದ ಕಾಮಗಾರಿ ಕಡತಕ್ಕೆ ಕೊನೆಗೂ ಮುಕ್ತಿ ಕಲ್ಪಿಸಿದ್ದು, ಸುಮಾರು 1.30 ಕೋಟಿ ರೂ. ವೆಚ್ಚದಲ್ಲಿ ಜಿಲ್ಲಾಡಳಿತ ಭವನದ ಸಭಾಂಗಣವನ್ನು ಸಜ್ಜುಗೊಳಿಸಿದ್ದಾರೆ.
800 ಮಂದಿಗೆ ಆಸನ ವ್ಯವಸ್ತೆ: ಸದ್ಯ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಬರೋಬ್ಬರಿ 800 ಮಂದಿ ಕುಳಿತು ಕಾರ್ಯಕ್ರಮ ವೀಕ್ಷಣೆ ಮಾಡುವ ನಿಟ್ಟಿನಲ್ಲಿ ಅತ್ಯಾಧುನಿಕವಾಗಿ ಆಸನಗಳ ವ್ಯವಸ್ಥೆ ಮಾಡಲಾಗಿದ್ದು, ಇಡೀ ಸಭಾಂಗಣಕ್ಕೆ ಎಲ್‌ಇಡಿ ವಿದ್ಯುತ್ ಬಲ್ಬ್ಗಳಿಂದ ಸಿಂಗರಿಸಲಾಗಿದೆ.
ಪ್ರತ್ಯೇಕ ಶೌಚಾಲಯ ವ್ಯವಸ್ಥೆ: ಸಭಾಂಗಣದ ಮಧ್ಯಭಾಗದಲ್ಲಿ ಆಕರ್ಷಕ ವೇದಿಕೆ ನಿರ್ಮಿಸ ಲಾಗಿದ್ದು, ವೇದಿಕೆ ಎರಡು ಬದಿ ಡ್ರೆಸ್ಸಿಂಗ್ ರೂಮ್ ಸಹ ನಿರ್ಮಿಸಲಾಗಿದೆ. ಗಣ್ಯರಿಗೆ, ಸಾರ್ವಜನಿಕರಿಗೆ ಪ್ರತ್ಯೇಕವಾಗಿ ಶೌಚಾಲಯ ವ್ಯವಸ್ಥೆ ಮಾಲಾಗಿದೆ. ಸಭಾಂಗಣವನ್ನು ನವ ನವೀನ ರೀತಿಯಲ್ಲಿ ನಿರ್ಮಿಸಲಾಗಿದೆ. 800 ಕ್ಕೂ ಹೆಚ್ಚು ಮಂದಿ ಕೂರುವ ವ್ಯವಸ್ಥೆ ಮಾಡಿರುವುದರಿಂದ ಜಿಲ್ಲಾಡಳಿತ ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳುವ ಸಭೆ, ಸಮಾರಂಭ ಹಾಗೂ ಬೃಹತ್ ಕಾರ್ಯಾಗಾರಗಳಿಗೆ ಈ ಸಭಾಂಗಣ ಬಳಕೆಯಾಗಲಿದೆ. ಗುಣಮಟ್ಟದ ಧ್ವನಿವರ್ಧಕ ಸೇರಿದಂತೆ ವಿಶೇಷ ಸೌಲಭ್ಯಗಳನ್ನು ಗಾಳಿ, ಬೆಳಕು ಬರುವ ರೀತಿಯಲ್ಲಿ ಸಭಾಂಗಣವನ್ನು ಸಿದ್ಧಪಡಿಸಲಾಗಿದೆ.
ಜಿಲ್ಲಾಡಳಿತ ಭವನದಲ್ಲಿ ನಿರ್ಮಿಸಲಾಗಿರುವ ಸಭಾಂಗಣ ಚೆನ್ನಾಗಿ ನಿರ್ಮಿಸಲಾಗಿದೆ. ಸುಮಾರು 800 ಮಂದಿ ಕೂತು ಕಾರ್ಯಕ್ರಮ ವೀಕ್ಷಣೆ ಮಾಡಬಹುದು. ಜಿಲ್ಲಾಡಳಿತ ಇದರ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡಿಕೊಂಡು ಹೋಗಬೇಕು. ಬೃಹತ್ ಕಾರ್ಯಕ್ರಮಗಳ ಆಯೋಜನೆಗೆ ಉತ್ತಮ ಸಭಾಂಗಣ ಇದಾಗಿದೆ.
ಶಿವಶಂಕರರೆಡ್ಡಿ, ಜಿಲ್ಲಾ ಉಸ್ತುವಾರಿ ಸಚಿವರು
ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಕೊನೆಗೂ ಹೊಸ ಸಭಾಂಗಣವನ್ನು ಲೋಕಾರ್ಪಣೆಗೊಳಿಸಿರುವುದು ಸಂತಸ ತಂದಿದೆ. ಸಭಾಂಗಣದ ಸ್ವತ್ಛತೆ, ನಿರ್ವಹಣೆ ಬಗ್ಗೆ ಜಿಲ್ಲಾಡಳಿತ ಆದ್ಯತೆ ನೀಡಬೇಕು.
ಎನ್.ಚಂದ್ರಶೇಖರ್, ಉಪನ್ಯಾಸಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkaballapura: ಕಾರಿನಲ್ಲಿ ಸಾಗಿಸುತ್ತಿದ್ದ 7.20 ಲಕ್ಷ ರೂ. ಮೌಲ್ಯದ ಗಾಂಜಾ ವಶ
Karnataka Govt: ಹಿಂದೂಗಳ ದಮನಕ್ಕೆ ಮುಂದಾದ ಕಾಂಗ್ರೆಸ್: ಆರ್. ಅಶೋಕ್ ಆರೋಪ
Dr. Sudhakar: ಹಿಂದಿನ ಕಾಂಗ್ರೆಸ್‌ರ ಸರ್ಕಾರದ ಭ್ರಷ್ಟಾಚಾರ ಬಿಚ್ಚಿಡುವೆ
Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್
Chikkaballapur: ಪರಿಹಾರ ಕೊಡದ ಎಸಿ ಕಚೇರಿ ಸಂತ್ರಸ್ತರಿಂದ ಜಪ್ತಿ!
MUST WATCH
ಹೊಸ ಸೇರ್ಪಡೆ
Karnataka By Poll Results: ಮತಎಣಿಕೆ-ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು “ಕೈ” ಮುನ್ನಡೆ
By Election: ನಿಖಿಲ್ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್; ಕುತೂಹಲದತ್ತ ಚನ್ನಪಟ್ಟಣ
Karkala: ಶಾಲಾ ವಾಹನಕ್ಕೆ ಢಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವು
Zebra Movie Review: ಜೀಬ್ರಾ ಕ್ರಾಸ್‌ನಲ್ಲಿ ಕಣ್ಣಾ ಮುಚ್ಚಾಲೆ!
Wayanad: ಪ್ರಿಯಾಂಕಾ ಗಾಂಧಿ ‘ಕೈ’ ಹಿಡಿಯಲಿದ್ದಾರಾ ಮತದಾರರು… 85,000 ಮತಗಳಿಂದ ಮುನ್ನಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.