ನೊಬೆಲ್ ಶಾಂತಿ ಪುರಸ್ಕಾರಕ್ಕೆ ನಾನು ಅರ್ಹನಲ್ಲ: ಪಾಕ್ PM ಇಮ್ರಾನ್
Team Udayavani, Mar 4, 2019, 10:00 AM IST
ಇಸ್ಲಾಮಾಬಾದ್ : ನೊಬೆಲ್ ಶಾಂತಿ ಪುರಸ್ಕಾರಕ್ಕೆ ನಾನು ಅರ್ಹನಲ್ಲ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.
ಪುಲ್ವಾಮಾ ಉಗ್ರ ದಾಳಿಗೆ ಪ್ರತೀಕಾರವಾಗಿ ಭಾರತ ಎಲ್‌ಓಸಿ ಉಲ್ಲಂಘನೆ ಗೈದು ಪಾಕಿಸ್ಥಾನದ ಉಗ್ರ ಶಿಬಿರಗಳ ಮೇಲೆ ನಡೆಸಿದ ದಾಳಿಯ ಪರಿಣಾಮವಾಗಿ ನೆರೆಹೊರೆಯ ಈ ಎರಡು ಅಣ್ವಸ್ತ್ರ ದೇಶಗಳ ನಡುವೆ ಯುದ್ಧ ಸ್ಫೋಟಗೊಳ್ಳುವುದನ್ನು ಸಕಾಲದಲ್ಲಿ ನಿಲ್ಲಿಸಿದರೆಂಬ ಕಾರಣಕ್ಕೆ ಪಾಕ್ ಪ್ರಧಾನಿ ಇಮ್ರಾನ್ ಖಾನ್‌ಗೆ ನೊಬೆಲ್ ಶಾಂತಿ ಪುರಸ್ಕಾರ ಸಲ್ಲಬೇಕೆಂಬ ಠರಾವನ್ನು ಪಾಕ್ ಸಂಸತ್ತಿನಲ್ಲಿ ಮಂಡಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ಇಮ್ರಾನ್ ಖಾನ್ ತಾನು ನೊಬೆಲ್ ಶಾಂತಿ ಪುರಸ್ಕಾರಕ್ಕೆ ಅರ್ಹ ವ್ಯಕ್ತಿ ಅಲ್ಲ ಎಂದು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.
“ನಾನು ನೊಬೆಲ್ ಶಾಂತಿ ಪುರಸ್ಕಾರಕ್ಕೆ ಅರ್ಹನಲ್ಲ; ಕಾಶ್ಮೀರ ವಿವಾದವನ್ನು ಯಾರು ಕಾಶ್ಮೀರೀ ಜನರ ಆಶೋತ್ತರಗಳಿಗೆ ಅನುಗುಣವಾಗಿ ಬಗೆಹರಿಸಿ ಈ ಉಪ ಖಂಡದಲ್ಲಿ ಶಾಂತಿ ಮತ್ತು ಮನುಕುಲದ ಅಭಿವೃದ್ಧಿಗೆ ಹಾದಿ ಮಾಡಿಕೊಡುತ್ತಾರೋ ಅವರಿಗೆ ನೊಬೆಲ್ ಶಾಂತಿ ಪುರಸ್ಕಾರ ಸಲ್ಲಬೇಕು; ನನಗಲ್ಲ” ಎಂದು ಇಮ್ರಾನ್ ಇಂದು ಸೋಮವಾರ ಬೆಳಗ್ಗೆ ಟ್ವಿಟರ್‌ನಲ್ಲಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
America; ಭಾರತಕ್ಕೆ 84.40 ಕೋ.ರೂ. ಮೌಲ್ಯದ 1,400 ಕಲಾಕೃತಿ ವಾಪಸ್
Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್ ಪರೀಕ್ಷೆ
Iran: ಹಿಜಾಬ್ ನಿರಾಕರಿಸಿದರೆ ವಿಶೇಷ ಕ್ಲಿನಿಕ್: ಇರಾನ್ ತೀರ್ಮಾನಕ್ಕೆ ಆಕ್ರೋಶ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
MUST WATCH
ಹೊಸ ಸೇರ್ಪಡೆ
Bengaluru Airport: ಏರ್ ಪೋರ್ಟ್‌ನಲ್ಲಿ ಆಮೆ, ಮೊಸಳೆ ಸಾಗಣೆ ಯತ್ನ
Crime: ಮೊಬೈಲ್‌ಗಾಗಿ ಜಗಳ; ಪುತ್ರನ ಕೊಂದ ಅಪ್ಪ!
Bengaluru: ಕಾರಿನೊಳಗೆ ಬೆಂಕಿ ಹಚ್ಚಿಕೊಂಡು ಉದ್ಯಮಿ ಆತ್ಮಹತ್ಯೆ
AI ಆರೋಗ್ಯ ರಕ್ಷಣೆಯ ವ್ಯವಸ್ಥೆಯಲ್ಲಿ ಸ್ವೀಕಾರದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆಯೇ?
Bagalakote: ಅನರ್ಹರ ಬಿಪಿಎಲ್ ಕಾರ್ಡ್ ಗಳು ಮಾತ್ರ ರದ್ದು: ಸಿಎಂ ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.