ಕಲಾವಿದರಿಗೆ ವಿಧೇಯತೆ ಮುಖ್ಯ
Team Udayavani, Mar 4, 2019, 10:49 AM IST
ರಾಮನಗರ: ಕಲಾವಿದರಾಗ ಬಯಸುವವರಲ್ಲಿ ವಿನಯ ಮತ್ತು ವಿಧೇಯತೆ ಇರಬೇಕು. ಆಗ ಮಾತ್ರ ಜನ ಮೆಚ್ಚುವಕಲಾವಿದನಾಗಿ ರೂಪುಗೊಳ್ಳಲು ಸಾಧ್ಯಎಂದು ರಂಗಭೂಮಿಯ ಹಿರಿಯ ನಿರ್ದೇಶಕ ವೆಂಕಟರಾಮ್ ಕುಪ್ಯ ಹೇಳಿದರು.
ತಾಲೂಕಿನ ಕೃಷ್ಣಾಪುರದೊಡ್ಡಿಯ ತಾನಿನಾರಂಗದಂಗಳದಲ್ಲಿ ಶನಿವಾರ ಶಾಂತಲಾಚಾರಿಟಬಲ್ ಟ್ರಸ್ಟ್ ಹಮ್ಮಿಕೊಂಡಿದ್ದ ತಿಂಗಳಕಲಾ ಬೆಳಕು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಾವು ಹಿರಿಯ ಕಲಾವಿದರ ಸೇವೆ ಮಾಡಿದ್ದರಿಂದಲೇ ಪರಿಪೂರ್ಣ ಕಲಾವಿದನಾಗಿ ರೂಪು ಗೊಂಡಿದ್ದಾಗಿ ಅವರುಹೇಳಿದರು.
ಸದ್ಯ 91 ವರ್ಷ ವಯೋಮಾನದ ತಾವು 1943ರಲ್ಲಿ ಎಚ್.ಆರ್.ಶಾಸಿŒಯವರ ನಾಟಕ ಕಂಪನಿಗೆ ಸೇರಿಕೊಂಡಿದ್ದಾಗಿ ತಮ್ಮ ಜೀವನದ ಪುಟಗಳನ್ನು ತೆರೆದಿಟ್ಟರು. ನಂತರ ಸುಬ್ಬಯ್ಯನಾಯ್ಡು ಅವರ ನಾಟಕ ಕಂಪನಿಸೇರಿದ್ದಾಗಿ ಹೇಳಿದರು. ಆಗ ಎಣ್ಣೆ ದೀಪ, ಪುಟ್‌ಲೆçಟ್ ಬೆಳಕಿನಲ್ಲಿ ನಾಟಕ ಪ್ರದರ್ಶನ ನಡೆಯುತ್ತಿತ್ತು. ಧ್ವನಿವರ್ಧಕವೂ ಇರಲಿಲ್ಲ ಎಂದು ಹೇಳಿದರು.
ತಿಂಗಳುಗಟ್ಟಲೇ ಕಾಯುತ್ತಿದ್ದೆವು: ತಾವು17ನೇ ವಯಸ್ಸಿನಲ್ಲಿ ತಮಿಳುನಾಡಿನ ಎಂ.ಜಿ.ರಾಮಚಂದ್ರನ್ ಜತೆ ತಮಿಳು ನಾಟಕದಲ್ಲಿ ನಟಿಸಿದ್ದಾಗಿ, ಹೊನ್ನಪ್ಪ ಭಾಗವತರ್,ಸಮ್ಮನ್ ಮೂರ್ತಿ ಭಾಗವತರ್ ಹತ್ತಿರಸಂಗೀತ ಕಲಿತಿದ್ದಾಗಿ ಹೇಳಿದರು. ಆಗಿನಕಾಲದಲ್ಲಿ ಅಭಿನಯಿಸಲು ತಿಂಗಳು ಗಟ್ಟಲೆ ಕಾಯಬೇಕಾಗಿತ್ತು ಎಂದು ಹೇಳಿದರು.
ಮಗುವಿನ ಹಾಲಿಗೂ ಕಾಸಿಲ್ಲ: 1956ರಲ್ಲಿ ಚಾಮುಂಡೇಶ್ವರಿ ಕಂಪನಿಯಲ್ಲಿ ಕೆಲಸ ಮಾಡಿದೆ. ಮಗುವಿನ ಹಾಲಿಗೂ ಕಾಸಿಲ್ಲದೆ ಪರಿಸ್ಥಿತಿ. ರಸ್ತೆಯಲ್ಲಿ ಸಿಕ್ಕಿದ ಒಂದಾಣೆಯಿಂದ ಮಗುವಿಗೆ ಹಾಲು ಖರೀದಿ ಮಾಡಿದ್ದು, ತಾವು ಜೀವನದಲ್ಲಿ ಪಟ್ಟ ಸಂಕಷ್ಟದ ಸನ್ನಿವೇಶಗಳ ಬಗ್ಗೆ ಅವರು ತಿಳಿಸಿದರು. ಈಗ ಭಗೀರಥನನ್ನು ಕುರಿತ ನಾಟಕ ರಚನೆಯಲ್ಲಿ ತೊಡಗಿಸಿಕೊಂಡಿರುವು ದಾಗಿ ತಿಳಿಸಿದರು. ತಮ್ಮ ಕುಟುಂಬದ ಬಗ್ಗೆ ಮಾತನಾಡಿದ ಅವರು, ನಾಟಕ ರಂಗದಲ್ಲೇ ದುಡಿದು ಏಳು ಮಕ್ಕಳನ್ನು ಸಾಕಿ ಸಲಹಿ, ಮದುವೆ ಮಾಡಿದೆ. ಬಾಲಕ ನಿದ್ದಾಗಲೇ ನಾಟಕದ ಗೀಳು ಹಚ್ಚಿಕೊಂಡ ತಮಗೆ ರಂಗಭೂಮಿ ಕ್ಷೇತ್ರ ಜನಮನ್ನಣೆ ತಂದುಕೊಟ್ಟಿದೆ ಎಂದು ಅವರು ಹೇಳಿದರು.
80 ವರ್ಷ ನಿರಂತರ ರಂಗಭೂಮಿ ಸೇವೆ: ಶಾಂತಲಾ ಚಾರಿಟಬಲ್ ಟ್ರಸ್ಟಿನ ಸಂಸ್ಥಾಪಕಿ ಕವಿತಾರಾವ್ ಮಾತನಾಡಿ, ರಂಗಭೂಮಿಯ ಹಿರಿಯ ಕಲಾವಿದರಾದ ವೆಂಕಟರಾಮ್‌ಕುಪ್ಯ ಈ ತಲೆಮಾರಿನ ಕಲಾವಿದರಿಗೆ ಮಾದರಿ ಯಾಗಿದ್ದಾರೆ. 80 ವರ್ಷಗಳಿಂದ ನಿರಂತರ ವಾಗಿ ರಂಗಭೂಮಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಇವರು ಇಳಿವಯಸ್ಸಿನಲ್ಲಿಯೂ ಕ್ರಿಯಾಶೀಲತೆಯಿಂದ ಇದ್ದಾರೆ ಎಂದು ಹೇಳಿದರು.
ದೇಶಿಯ ಕಲೆ ಉಳಿಸಿ: ಅಧುನಿಕ ಮಾಧ್ಯಮಗಳು ರಂಗ ಕಲೆ ನೇಪಥ್ಯಕ್ಕೆ ಸರಿಯುತ್ತಿದೆ. ಯುವ ಸಮುದಾಯ ಈ ಕಲೆಗಳನ್ನು ಉಳಿಸಿಕೊಳ್ಳಲು ಮುಂದಾಗ ಬೇಕು. ರಂಗಭೂಮಿ ಉಳಿದರೆ ದೇಶಿಯ ಆಚಾರ, ವಿಚಾರ, ಸಂಸ್ಕೃತಿ, ಸಂಪ್ರದಾಯ ಗಳು ಉಳಿಯುತ್ತವೆ ಎಂದು ಹೇಳಿದರು.
ನಾಟಕಗಳನ್ನು ವೀಕ್ಷಿಸಿ: ನಾಟಕಗಳು ನೈಜತೆ ಮತ್ತು ಮಾನವೀಯ ಮೌಲ್ಯಗಳನ್ನು ಉತ್ತಮ ಪಡಿಸುವಲ್ಲಿ ಮಹತ್ವ ಪೂರ್ಣವಾದವುಗಳಾಗಿವೆ. ನಾಟಕಗಳನ್ನು ವೀಕ್ಷಿಸುವ ಮೂಲಕ ರಂಗ ಕಲೆಗೆ ಮತ್ತು ಕಲಾವಿದರಿಗೆ ಪೋ›ತ್ಸಾಹ ನೀಡುವಂತಹ ಕೆಲಸವಾಗಬೇಕಾಗಿದೆ ಎಂದು ಹೇಳಿದರು.
ಸಂಗೀತ ವಿದ್ವಾನ್ ಶಿವಾಜಿರಾವ್, ರಂಗಭೂಮಿ ಕಲಾವಿದ ರಂಗಸ್ವಾಮಿ, ಗಾಯಕ ಮಹದೇವಯ್ಯ, ಲೋಹಿಯಾ ಅಧ್ಯಯನ ಕೇಂದ್ರದ ಶ್ರೀನಿವಾಸ್ ಕರಿಯಪ್ಪ, ಲೇಖಕರ ವೇದಿಕೆಯ ಅಧ್ಯಕ್ಷ ಕೂ.ಗಿ. ಗಿರಿಯಪ್ಪ, ಪರಿಸರವಾದಿ ಬಿ.ಟಿ. ರಾಜೇಂದ್ರ, ರೇಣುಕಾಪ್ರಸಾದ್, ಉಪನ್ಯಾಸಕ ಸಿ. ರಮೇಶ್ ಹೊಸದೊಡ್ಡಿ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Channapatna: ಸ್ಮಶಾನಕ್ಕೆ ಜಾಗ ಬೇಕೆಂದು ತಾಲೂಕು ಕಚೇರಿಯೆದುರು ಶವವಿಟ್ಟು ಪ್ರತಿಭಟನೆ
Teacher: ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!
Road Mishap: ಬಸ್-ಕಾರು ನಡುವೆ ಡಿಕ್ಕಿ; ಮೂವರ ಸಾವು
New Scheme: ಶೀಘ್ರವೇ ಗೃಹಲಕ್ಷ್ಮೀ ಸಂಘ ಸ್ಥಾಪನೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
JDS ರಾಮನಗರದಿಂದಲೂ ಔಟ್: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Channapatna: ಸ್ಮಶಾನಕ್ಕೆ ಜಾಗ ಬೇಕೆಂದು ತಾಲೂಕು ಕಚೇರಿಯೆದುರು ಶವವಿಟ್ಟು ಪ್ರತಿಭಟನೆ
Madanthyar: ಬಾಲಕಿಯರ ಹಾಸ್ಟೆಲ್ ಕಟ್ಟಡ ಅನಾಥ!
Railway: ಪ್ರತಿ ಪ್ರಯಾಣದ ಬಳಿಕ ಹೊದಿಕೆಗಳನ್ನು ತೊಳೆಯುತ್ತಾರಾ? ಸಚಿವರು ಕೊಟ್ಟ ಉತ್ತರವೇನು?
Cyber Fraud Case: ದಾಳಿ ನಡೆಸಲು ಹೋದ ಇಡಿ ಅಧಿಕಾರಿಗಳ ಮೇಲೆಯೇ ತಂಡದಿಂದ ಹಲ್ಲೆ
Rashmika Mandanna; ಪುಷ್ಟ-3 ಸುಳಿವು ನೀಡಿದ ನಟಿ ರಶ್ಮಿಕಾ ಮಂದಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.