ಶಿವನಾಮ ಸ್ಮರಣೆಗೆ ಸಜ್ಜುಗೊಂಡ ಕಲ್ಪತರು ನಾಡು
Team Udayavani, Mar 4, 2019, 10:55 AM IST
ತುಮಕೂರು: ಮಹಾಶಿವರಾತ್ರಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸುವುದರ ಜೊತೆಗೆ ಶಿವನಾಮ ಸ್ಮರಣೆಗೆ ಕಲ್ಪತರು ನಾಡು ತುಮಕೂರು ಸಜ್ಜುಗೊಂಡಿದೆ. ಜಿಲ್ಲೆಯ ಎಲ್ಲಾ ಶಿವಾಲಯಗಳಲ್ಲಿ ವಿಶೇಷ ಪೂಜೆ, ಜಾಗರಣೆ ಆಚರಣೆ ಮಾಡಲು ವಿವಿಧ ಕಾರ್ಯಕ್ರಮ ಏರ್ಪಡಿಸಿದ್ದು, ಸೋಮವಾರ ಬೆಳಗ್ಗೆಯಿಂದಲೇ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ಆಯೋಜನೆಗೊಂಡಿವೆ. ಬೆಲೆ ಏರಿಕೆ ನಡುವೆಯೂ ಮಹಾಶಿವರಾತ್ರಿಯನ್ನು ಸಂಭ್ರಮದಿಂದ ಆಚರಿಸಲು ಭಾನುವಾರ ನಗರದ ಮಾರುಕಟ್ಟೆಗಳಲ್ಲಿ ನಾಗರೀಕರು ಹಬ್ಬಕ್ಕೆ ಬೇಕಾದ ವಸ್ತುಗಳ ಖರೀದಿ ಭರಾಟೆ ಜೋರಾಗಿಯೇ ನಡೆದಿತ್ತು.
ಪೂಜೆಗೆ ಖರೀದಿ: ಹಿಂದೂ ಧರ್ಮದಲ್ಲಿ ಪವಿತ್ರಹಬ್ಬವೆಂದೇ ಗುರುತಿಸಿಕೊಂಡಿರುವ ಮಹಾ ಶಿವರಾತ್ರಿಯನ್ನು ಪ್ರತಿಮನೆಯಲ್ಲೂ ಆಚರಿಸುವಹಿನ್ನೆಲೆಯಲ್ಲಿ ಹಬ್ಬಕ್ಕೆ ಅಗತ್ಯವಾಗಿರುವ ದಿನ ಬಳಕೆಯ ವಸ್ತುಗಳಾದ ಹೂವು, ಹಣ್ಣು, ತರಕಾರಿ ಮೊದಲಾದ ವಸ್ತುಗಳನ್ನು ಖರೀದಿ ಮಾಡುತ್ತಿದ್ದುದು ಸಾಮಾನ್ಯವಾಗಿತ್ತು.
ಇಲ್ಲಿಯ ಅಂತರಸನಹಳ್ಳಿಯಲ್ಲಿರುವ ಕೃಷಿ ಉತ್ಪನ್ನ ಹೂವು, ಹಣ್ಣು, ತರಕಾರಿ ಮಾರುಕಟ್ಟೆ, ಸಿದ್ದಿವಿನಾಯಕ ಮಾರುಕಟ್ಟೆ, ಎಂ.ಜಿ.ರಸ್ತೆ, ಮಂಡಿಪೇಟೆ, ಎಸ್.ಎಸ್.ಪುರಂ, ಎಸ್‌ಐಟಿ, ಶಿರಾಗೇಟ್, ಹನುಮಂತಪುರ, ಶ್ರೀರಾಮ ನಗರ, ಶೆಟ್ಟಿಹಳ್ಳಿಗೇಟ್, ಕ್ಯಾತ್ಸಂದ್ರಯಲ್ಲಾಪುರ ಸೇರಿದಂತೆ ವಿವಿಧ ಭಾಗಗಳಲ್ಲಿ ನಾಗರೀಕರುಹಬ್ಬಕ್ಕೆ ಬೇಕಾದ ಹೂವು, ಹಣ್ಣು, ತರಕಾರಿ ಸೇರಿದಂತೆವಿವಿಧ ಸಾಮಗ್ರಿಗಳನ್ನು ಖರೀದಿ ಮಾಡುತ್ತಿದ್ದರು.
ಹೂವಿನ ಧಾರಣೆ ಕುಸಿತ: ಮಾರುಕಟ್ಟೆಯಲ್ಲಿ ಹೂವಿನಧಾರಣೆ ಸ್ವಲ್ಪ ಮಟ್ಟಿಗೆ ಕುಸಿದಿದೆ. ಇದರ ಜೊತೆಗೆತರಕಾರಿಗಳ ಬೆಲೆಯಲ್ಲೂ ಅಂಥ ಏರಿಕೆ ಕಂಡು ಬಂದಿಲ್ಲ. ಆದರೆ, ಹಣ್ಣು ಸ್ವಲ್ಪ ಏರಿಕೆಯಾಗಿದ್ದರೂ, ಹಬ್ಬ ಆಚರಿಸಲೇಬೇಕಾದ ಹಿನ್ನೆಲೆಯಲ್ಲಿ ಖರೀದಿ ನಡೆಯುತ್ತಿತ್ತು. ದವನ, ಬಿಲ್ವಪತ್ರೆ, ಹೊಸ ವಸ್ತ್ರ, ವಿಭೂತಿ ಗಟ್ಟಿಗಳ ಮಾರಾಟವೂ ಭರದಿಂದ ನಡೆಯುತ್ತಿತ್ತು.
ದೇಗುಲ ಶುದ್ಧೀಕರಣ: ನಗರದ ಎಲ್ಲಾ ದೇವಾಲಯಗಳಲ್ಲಿ ಮಹಾಶಿವರಾತ್ರಿಯ ಹಬ್ಬದಅಂಗವಾಗಿ ವಿಶೇಷ ಪೂಜೆ ಉತ್ಸವ ಕಾರ್ಯಕ್ರಮಆಯೋಜಿಸಿರುವ ಹಿನ್ನೆಲೆಯಲ್ಲಿ ದೇವಾಲಯಗಳ ಶುದ್ಧೀಕರಣ ಕಾರ್ಯ ಭಾನುವಾರ ನಡೆಯುತ್ತಿದ್ದುದು ಕಂಡು ಬಂದಿತು.
ವಿಶೇಷ ಪೂಜೆ: ತುಮಕೂರಿನ ಸೋಮೇಶ್ವರ ದೇವಾಲಯ, ಗಂಗಾಧರೇಶ್ವರ ದೇವಾಲಯ, ಮಹಾಗಣಪತಿ ದೇವಾಲಯ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ಏರ್ಪಡಿಸಲಾಗಿದೆ.
ಮಹಾರಥೋತ್ಸವ: ಜಿಲ್ಲೆಯ ಪವಿತ್ರ ಕ್ಷೇತ್ರವಾಗಿರುವ ಚಿಕ್ಕನಾಯಕನಹಳ್ಳಿ ತೀರ್ಥರಾಮೇಶ್ವರ ಕ್ಷೇತ್ರದಲ್ಲಿವಿಶೇಷ ಪೂಜೆ ನಡೆಯಲಿದೆ. ತಾಲೂಕಿನ ಅರೆಯೂರಿನಶ್ರೀ ವೈದ್ಯನಾಥೇಶ್ವರ ಸ್ವಾಮಿ ಮಹಾರಥೋತ್ಸವನಡೆಯಲಿದ್ದು, ಜಿಲ್ಲೆಯ ವಿವಿಧ ದೇವಾಲಯಗಳಲ್ಲೂವಿಶೇಷ ಪೂಜೆ, ಉತ್ಸವ, ಅರ್ಚನೆಗಳು ಇಡೀ ರಾತ್ರಿ ನಡೆಸಲು ವ್ಯವಸ್ಥೆ ಮಾಡಲಾಗಿದೆ. ತುರುವೇಕೆರೆ ಮಲ್ಲೇಶ್ವರ ದೇವಾಲಯ, ಪಾವಗಡದಈಶ್ವರ ದೇವಾಲಯ, ಚಿಕ್ಕ ನಾಯಕನಹಳ್ಳಿಯ ಪ್ರಸನ್ನ ರಾಮೇಶ್ವರ ದೇವಾಲಯ ಸೇರಿದಂತೆ ವಿವಿಧ ಶಿವದೇವಾಲಯಗಳಲ್ಲಿ ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಗಳು ನಡೆಯಲಿವೆ.
ಧರ್ಮಗೋಷ್ಠಿ : ಮಧುಗಿರಿ ತಾಲೂಕಿನ ದೊಡ್ಡೇರಿ ಹೋಬಳಿ ಭಸ್ಮಾಂಗಿ ಬೆಟ್ಟದಲ್ಲಿರುವ ಐತಿಹಾಸಿಕ ಪ್ರಸಿದ್ಧ ಭಸ್ಮಾಂಗಿ ರುದ್ರೇಶ್ವರ ಸ್ವಾಮಿಗೆ ಮಹಾಶಿವರಾತ್ರಿ ಅಂಗವಾಗಿ ಬೆಳಗ್ಗೆ 10 ಗಂಟೆಯಿಂದ ವಿವಿಧ ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ರಾತ್ರಿ 8 ಗಂಟೆಯಿಂದ ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ,
ಮಹಾಮಂಗಳಾರತಿ, ಧರ್ಮ ಗೋಷ್ಠಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
Tumkur: ತುಮಕೂರಲ್ಲಿ ದಲಿತ ಮಹಿಳೆ ಹ*ತ್ಯೆ: 21 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
Road Mishap: ಚಲಿಸುತ್ತಿದ್ದ ಲಾರಿಗೆ ಕಾರು ಢಿಕ್ಕಿ: ತಂದೆ-ಮಗು ಸ್ಥಳದಲ್ಲೇ ಸಾವು
Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್: ಸಚಿವ ಡಾ| ಜಿ. ಪರಮೇಶ್ವರ್
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Perth test: ಜಸ್ಪ್ರೀತ್ ಬುಮ್ರಾ ಬೌಲಿಂಗ್ ಶೈಲಿ ಅನುಮಾನ: ಏನಿದು ವಿವಾದ?
Chikkamagaluru: ಸರ್ಕಾರಿ ಬಸ್-ಲಾರಿ ಮುಖಾಮುಖಿ ಡಿಕ್ಕಿ; ಹಲವರಿಗೆ ಗಾಯ
Perth Test: ಜೈಸ್ವಾಲ್ ಶತಕದಾಟ; ರಾಹುಲ್ ಜತೆ ದಾಖಲೆಯ ಜೊತೆಯಾಟ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.