ಭಾರತ-ಪಾಕ್ ಉದ್ವಿಗ್ನತೆಯಿಂದ ಪಾಕ್ ವಧು-ಭಾರತೀಯ ವರನ ಮದುವೆ ರದ್ದು
Team Udayavani, Mar 5, 2019, 7:12 AM IST
ಬಾರ್‌ವೆುರ್, ರಾಜಸ್ಥಾನ : 40 ಸಿಆರ್‌ಪಿಎಫ್ ಯೋಧರನ್ನು ಬಲಿಪಡೆದ ಪುಲ್ವಾಮಾ ಉಗ್ರ ದಾಳಿಯ ಬಳಿಕ ಪಾಕ್ ಉಗ್ರ ತಾಣಗಳ ಮೇಲಿನ ಐಎಎಫ್ ವಾಯು ಪಡೆ ದಾಳಿಯಿಂದಾಗಿ ಭಾರತ – ಪಾಕ್ ನಡುವಿನ ಉದ್ವಿಗ್ನತೆ ತೀವ್ರಗೊಂಡ ಕಾರಣ ಪಾಕ್ ವಧು ಮತ್ತು ಭಾರತೀಯ ವರನ ನಡುವೆ ನಡೆಯಲಿದ್ದ ಮದುವೆ ರದ್ದಾದ ಘಟನೆ ವರದಿಯಾಗಿದೆ.
ರಾಜಸ್ಥಾನದ ಗಡಿ ಜಿಲ್ಲೆಯಾದ ಬಾರ್‌ವೆುರ್‌ನ ಖೇಜಾದ್ ಕಾ ಪಾರ್ ಗ್ರಾಮದ ನಿವಾಸಿಯಾಗಿರುವ ವರ ಮಹೇಂದ್ರ ಸಿಂಗ್ ಅವರ ವಿವಾಹವು ಪಾಕಿಸ್ಥಾನದ ಪಂಜಾಬ್ ಪ್ರಾಂತ್ಯದ ಅಮರಕೋಟ್ ಜಿಲ್ಲೆಯ ಸಿನೋಯಿ ಗ್ರಾಮದ ಛಗನ್ ಕನ್ವರ್ ಜತಗೆ ನಡೆಯುವದಿತ್ತು.
ಮದುವೆ ಸಮಾರಂಭಕ್ಕೆ ತನ್ನವರನ್ನು ಕರೆದೊಯ್ಯಲು ಮಹೇಂದ್ರ ಸಿಂಗ್ ಅವರು ಥಾರ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಸಾಕಷ್ಟು ಸಂಖ್ಯೆಯ ಟಿಕೆಟ್ ಬುಕ್ ಮಾಡಿದ್ದರು.
ಆದರೆ ಭಾರತದೊಂದಿಗಿನ ಉದ್ವಿಗ್ನತೆಯು ಪರಾಕಾಷ್ಠೆ ತಲುಪಿದಂತೆಯೇ ಪಾಕ್ ಅಧಿಕಾರಿಗಳು ಈ ರೈಲು ಸೇವೆಯನ್ನು ಅಮಾನತು ಪಡಿಸಿದ್ದರು. ಹಾಗಾಗಿ ಥಾರ್ ಎಕ್ಸ್‌ಪ್ರೆಸ್ ತನ್ನ ಯಾನವನ್ನು ಕೈಗೊಳ್ಳಲಿಲ್ಲ. ಈ ರೈಲು ಭಾರತದ ಅಟ್ಟಾರಿ ಮತ್ತು ಪಾಕಿಸ್ಥಾನದ ಲಾಹೋರ್ ನಡುವೆ ಪ್ರತೀ ಸೋಮವಾರ ಮತ್ತು ಗುರುವಾರ ತನ್ನ ಯಾನವನ್ನು ಕೈಗೊಳ್ಳುತ್ತದೆ.
ತನ್ನ ಮದುವೆ ರದ್ದಾಗಿರುವ ಬಗ್ಗೆ ಎಎನ್‌ಐ ಸುದ್ದಿ ಸಂಸ್ಥೆ ಜತೆ ನಿರಾಶರಾಗಿ ಮಾತನಾಡಿದ ಮಹೇಂದ್ರ ಸಿಂಗ್ ಅವರು ಹೀಗೆ ಹೇಳಿದರು :
ಮದುವೆ ಸಮಾರಂಭಕ್ಕೆ ಹೋಗಲು ನಾವು ವೀಸಾ ಪಡೆಯಲು ಬಹಳ ಕಷ್ಟ ಪಟ್ಟೆವು. ನಾನು ವೀಸಾ ಪಡೆಯಲು ಗಜೇಂದ್ರ ಸಿಂಗ್ ಅವರನ್ನು ದುಂಬಾಲು ಬಿದ್ದೆ. ಅವರಿಂದಾಗಿ ಕೊನೆಗೂ ನಮಗೆ, ಐವರಿಗೆ, ವೀಸಾ ದೊರಕಿತು. ಮದುವೆಗಾಗಿ ನಾವು ಎಲ್ಲ ಸಿದ್ಧತೆಗಳನ್ನು ಮಾಡಿದ್ದೆವು; ಮದುವೆ ಕರೆಯೋಲೆಗಳನ್ನು ಮುದ್ರಿಸಿ ಹಂಚಿದ್ದೆವು. ಆದರೆ ಈ ನಡುವೆ ಪಾಕಿಸ್ಥಾನದ ಬಾಲಾಕೋಟ್ ನಲ್ಲಿನ ಉಗ್ರ ಶಿಬಿರಗಳ ಮೇಲೆ ಭಾರತೀಯ ವಾಯು ಪಡೆ ಬಾಂಬ್ ದಾಳಿ ನಡೆಸಿತು. ನಾವು ಪ್ರಯಾಣಿಸಬೇಕಿದ್ದ ಥಾರ್ ಎಕ್ಸ್‌ಪ್ರೆಸ್ ರೈಲು ರದ್ದಾಯಿತು. ಒಟ್ಟಾರೆ ಪರಿಸ್ಥಿತಿಯಿಂದಾಗಿ ನನ್ನ ಮದುವೆಯೇ ರದ್ದಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Results: ಝಾರ್ಖಂಡ್, ಮಹಾರಾಷ್ಟ್ರದಲ್ಲಿ ಪಟ್ಟ ಯಾರಿಗೆ?
Adani ಗ್ರೂಪ್‌ಗೆ ಸಾಲ: ಜಾಗತಿಕ ಬ್ಯಾಂಕ್‌ಗಳಿಂದ ತಾತ್ಕಾಲಿಕ ಬ್ರೇಕ್?
India: ಕೃತಕ ಬುದ್ಧಿಮತ್ತೆ ತಜ್ಞರಿರುವ 2ನೇ ಅಗ್ರ ರಾಷ್ಟ್ರ ಭಾರತ!
Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್ ಕ್ಷಮೆಗೆ ವೈದ್ಯರ ಪಟ್ಟು
Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್ ವಿರುದ್ಧ ತಾಬ್ಡೆ 100 ಕೋಟಿ ದಾವೆ!
MUST WATCH
ಹೊಸ ಸೇರ್ಪಡೆ
Election Results: ಝಾರ್ಖಂಡ್, ಮಹಾರಾಷ್ಟ್ರದಲ್ಲಿ ಪಟ್ಟ ಯಾರಿಗೆ?
Udupi: ಜಾಗ ಖರೀದಿಗೆ ಕರಾರು ಮಾಡಿಸಿ ವಂಚನೆ: ಪ್ರಕರಣ ದಾಖಲು
Adani ಗ್ರೂಪ್‌ಗೆ ಸಾಲ: ಜಾಗತಿಕ ಬ್ಯಾಂಕ್‌ಗಳಿಂದ ತಾತ್ಕಾಲಿಕ ಬ್ರೇಕ್?
Bangaluru; ವ್ಯಕ್ತಿ ಹೊಟ್ಟೆಯಿಂದ 50 ಟೂತ್‌ಬ್ರೆಷ್ ಹೊರತೆಗೆದ ವೈದ್ಯರು!
Snake; ಕಾಳಿಂಗದ ವೈಜ್ಞಾನಿಕ ಹೆಸರು ‘ಓಫಿಯೋಫೆಗಸ್ ಕಾಳಿಂಗ’:ಅಧಿಕೃತವಾಗಿ ಘೋಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.