ಉಡುಪಿ ಜಿಲ್ಲೆಯಲ್ಲಿ ನಿಲ್ಲದ ಅಕ್ರಮ ಮರಳುಗಾರಿಕೆ
Team Udayavani, Mar 6, 2019, 1:00 AM IST
ಕೋಟ: ಗ್ರಾಮೀಣ ಭಾಗದ ಹಲವೆಡೆ ಅಕ್ರಮ ಮರಳುಗಾರಿಕೆ ರಾಜಾರೋಷವಾಗಿ ನಡೆಯುತ್ತಿದ್ದು, ಸರಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂ. ನಷ್ಟ ಉಂಟಾಗುತ್ತಿದೆ.
ಕೋಟ ಪೊಲೀಸ್ ಠಾಣೆ ವ್ಯಾಪ್ತಿಯ ಕುಂದಾಪುರ ತಾಲೂಕಿನ ಮೊಳಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಹಲವೆಡೆ ಈ ದಂಧೆ ನಡೆಯುತ್ತಿದ್ದು, ಹಲವು ಬಾರಿ ದಾಳಿ ನಡೆಸಿದ್ದರೂ ಅಕ್ರಮ ಮರಳುಗಾರಿಕೆ ನಿಂತಿಲ್ಲ.
ಎರಡು ದಿನದ ಹಿಂದಷ್ಟೇ ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್ ನೇತೃತ್ವದಲ್ಲಿ ದಾಳಿ ನಡೆಸಿ 10 ದೋಣಿ, 1 ಲಾರಿ, 2 ಕಾರುಗಳೊಂದಿಗೆ ಹಲವರನ್ನು ಬಂಧಿಸಿ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ನಿಲ್ಲದ ಅಕ್ರಮ ವ್ಯವಹಾರ
ಮೊಳಹಳ್ಳಿ ಗ್ರಾ.ಪಂ. ವ್ಯಾಪ್ತಿಯ ವಿವಿಧೆಡೆ ಹಲವು ವರ್ಷದಿಂದ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದು, 2017ರಿಂದ ಇಲ್ಲಿಯ ತನಕ ಸುಮಾರು 10ಕ್ಕೂ ಹೆಚ್ಚು ಬಾರಿ ದಾಳಿ ನಡೆದಿದೆ. ಹಲವು ಸಂದರ್ಭಗಳಲ್ಲಿ ಆರೋಪಿಗಳು ಪರಾರಿಯಾದ್ದರಿಂದ ಮರಳು ಮತ್ತು ಸಾಮಗ್ರಿಗಳನ್ನು ವಶಕ್ಕೆ ಪಡೆಯಲಾಗಿತ್ತು. ಕೆಲವರ ವಿರುದ್ಧ ಮೂರಕ್ಕೂ ಹೆಚ್ಚು ಪ್ರತ್ಯೇಕ ಪ್ರಕರಣಗಳು ಕೋಟ ಠಾಣೆಯ ವ್ಯಾಪ್ತಿಯಲ್ಲಿವೆ.
ಅಕ್ರಮ ಮರಳುಗಾರಿಕೆ ತಡೆಯಲು ಕೈಲ್ಕೇರಿ ಹಾಗೂ ಮರತ್ತೂರು ಭಾಗದಲ್ಲಿ ಪೊಲೀಸ್ ಹಾಗೂ ಗಣಿ ಇಲಾಖೆಯ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಲಾಗಿತ್ತು. ಆದರೆ ಈ ಚೆಕ್‌ಪೋಸ್ಟ್‌ಗಳಿಂದಲೂ ಏನೂ ಪ್ರಯೋಜನವಾಗಿಲ್ಲ.
ಠಾಣೆಯಿಂದ ದೂರ
ಕೋಟ ಪೊಲೀಸ್ ಠಾಣೆಯಿಂದ ಹಾರ್ದಳ್ಳಿ- ಮಂಡಳ್ಳಿ, ಆವರ್ಸೆ, ಮೊಳಹಳ್ಳಿ ಹೊಂಬಾಡಿ-ಮುಂದಾಡಿ ಮುಂತಾದ ಗ್ರಾಮಗಳು 30 ಕಿ.ಮೀ.ಗಿಂತ ಅಧಿಕ ದೂರದಲ್ಲಿದ್ದು, ಈ ಪ್ರದೇಶಕ್ಕೆ ಹೋಗುವುದು ಕಷ್ಟ. ಹೀಗಾಗಿ ದೂರು ಬಂದ ಮೇಲೂ ಪೊಲೀಸರಿಗೆ ಸ್ಥಳಗಳಿಗೆ ತಲುಪಲು ಕನಿಷ್ಠ ಮುಕ್ಕಾಲು ಗಂಟೆ ಬೇಕು. ಅಷ್ಟರಲ್ಲಿ ಅಕ್ರಮ ದಂಧೆ ಯಲ್ಲಿ ತೊಡಗಿದವರು ಪರಾರಿಯಾಗಿ ರುತ್ತಾರೆ. ಹಾಗಾಗಿ ಎಷ್ಟೇ ದಾಳಿ ನಡೆಸಿದರೂ ದಂಧೆ ನಿಲ್ಲುತ್ತಿಲ್ಲ ಎಂಬುದು ಸಾರ್ವಜನಿಕ ವಲಯದ ಅಭಿಪ್ರಾಯ.
ಮರಳು ಕೊರತೆಯನ್ನೇ ಬಂಡವಾಳ ವಾಗಿಸಿಕೊಂಡ ದಂಧೆಕೋರರು ಮೂರು ಯುನಿಟ್ ಮರಳಿಗೆ 15ರಿಂದ 20 ಸಾವಿರ ರೂ. ವರೆಗೆ ವಸೂಲಿ ಮಾಡುತ್ತಿದ್ದು, ಸರಕಾರಕ್ಕೆ ಕೋಟ್ಯಂತರ ರೂ. ನಷ್ಟವಾಗುತ್ತಿದೆ.
ಅಕ್ರಮ ಮರಳುಗಾರಿಕೆಯನ್ನು ಮಟ್ಟ ಹಾಕಲು ಗಣಿ ಇಲಾಖೆ, ಆರ್‌ಟಿಒ ಹಾಗೂ ಪೊಲೀಸರ ಸಮನ್ವಯದ ಕಾರ್ಯಾಚರಣೆ ಬೇಕಿದೆ. ಸ್ಥಳೀಯ ಪೊಲೀಸರು ಅಕ್ರಮ ತಡೆಯುವಲ್ಲಿ ವಿಫಲರಾದರೆ ಹಾಗೂ ಅಕ್ರಮದ ಕುರಿತು ಮತ್ತೆ ದೂರುಗಳು ಬಂದರೆ ಜಿಲ್ಲಾ ಮಟ್ಟದಿಂದ ಸೂಕ್ತ ತಂಡವನ್ನು ನಿಯೋಜಿಸಲಾಗುವುದು.
– ನಿಶಾ ಜೇಮ್ಸ್ , ಎಸ್ಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಮಲ್ಪೆ ಬಂದರಿನಲ್ಲಿ ಮೀನು ಕಳ್ಳರಿಗೆ ಧರ್ಮದೇಟು
Manipal: ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸೂಚನೆ
ಕಲಾವಿದರ ಮಾಸಾಶನ ಹೆಚ್ಚಳಕ್ಕೆ ಸಿಗದ ಆರ್ಥಿಕ ಇಲಾಖೆ ಒಪ್ಪಿಗೆ
Udupi: ಗೀತಾರ್ಥ ಚಿಂತನೆ-148: ಹೇಳುವುದು ಸುಖವಾದರೂ ಆಗುವುದು ದುಃಖ
Udupi: ಶ್ರೀಕೃಷ್ಣಮಠದಲ್ಲಿ ದಾಸವರೇಣ್ಯ ಶ್ರೀ ವಿಜಯದಾಸರು ಸಿನೆಮಾ ಪ್ರದರ್ಶನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Horoscope: ಈ ರಾಶಯವರಿಗೆ ಸಂಸಾರದಲ್ಲಿ ಮಾನಸಿಕ ನೆಮ್ಮದಿ ಇರಲಿದೆ
Karnataka: ವಿದ್ಯುತ್ ದರದಂತೆ ವರ್ಷವೂ ಬಸ್ ಯಾನ ದರ ಹೆಚ್ಚಳ?
Dispute: ಚಿಕ್ಕಮಗಳೂರಲ್ಲಿ ತಾರಕಕ್ಕೇರಿದ ದರ್ಗಾ ವಿವಾದ: ಬಿಗು ಪರಿಸ್ಥಿತಿ
Udupi: ಮಲ್ಪೆ ಬಂದರಿನಲ್ಲಿ ಮೀನು ಕಳ್ಳರಿಗೆ ಧರ್ಮದೇಟು
Manipal: ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.