ಕೊಪ್ಪಳ :ಅಭಿವೃದ್ದಿಯ ಜಪ, ನೀರಾವರಿಯ ನೆಪ


Team Udayavani, Mar 6, 2019, 1:55 AM IST

14.jpg

ಕೊಪ್ಪಳ: ಲೋಕಸಭಾ ಚುನಾವಣೆಗೆ ದಿನಗಣನೆ ಶುರುವಾಗಿದೆ. ಇದರ ಜೊತೆಗೆ, ಕೊಪ್ಪಳ ಲೋಕಸಭಾ ಕ್ಷೇತ್ರದ ಚುನಾವಣಾ ಕಾವೂ ಜೋರಾಗುತ್ತಿದೆ. ಬಿಜೆಪಿ, ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ , ದೂರದೃಷ್ಟಿಯ ಜಪ ಮಾಡುತ್ತಿದ್ದರೆ, ಕಾಂಗ್ರೆಸ್‌ ಮಾತ್ರ, ಮೋದಿ ಕಪ್ಪು ಹಣ ತಂದಿಲ್ಲ. ನೀರಾವರಿ ಯೋಜನೆಗಳನ್ನೇ ಗಮನಿಸಿಲ್ಲ. ರೈತರ ಹಿತ ಕಾಯುವ ಬದಲು ಬಂಡವಾಳಶಾಹಿ ಹಿತ ಕಾಯುತ್ತಿದ್ದಾರೆ ಎನ್ನುವ ಆಪಾದನೆ ಮಾಡುತ್ತ ಪ್ರಚಾರ ನಡೆಸಿದೆ.

ಕೊಪ್ಪಳ ಲೋಕಸಭಾ ಕ್ಷೇತ್ರ ಬರಪೀಡಿತ ಪ್ರದೇಶ. ಇಲ್ಲಿನ ನಾಯಕರಿಗೆ ಬರದ ತೀವ್ರತೆ ಗೊತ್ತಿದ್ದರೂ ಯಾವುದೇ ದೂರದೃಷ್ಟಿಯ ಯೋಜನೆಗಳ ಜಾರಿಗೆ ಶ್ರಮಿಸುತ್ತಿಲ್ಲ. ರೈತರ ಭೂಮಿಗೆ ಸಮರ್ಪಕ ನೀರಾವರಿ ಕಲ್ಪಿಸಲಾಗಿಲ್ಲ. ಆದರೂ ಸಹ ಪ್ರತಿ ಚುನಾವಣೆಯಲ್ಲಿ ನೀರಾವರಿಗೇ ನಮ್ಮ ಮೊದಲ ಆದ್ಯತೆ ಎನ್ನುತ್ತಿದ್ದಾರೆ. ಕೃಷ್ಣಾ “ಬಿ’ ಸ್ಕಿಂ ಜಾರಿ ಮಾಡಿ ಎನ್ನುವ ಕೂಗು ದಶಕಗಳಿಂದಲೂ ಕೇಳಿ ಬಂದರೂ ಕಮಲ-ಕೈ ನಾಯಕರು ಇದನ್ನೊಂದು ರಾಜಕೀಯ ಅಸ್ತ್ರವನ್ನಾಗಿ ಮಾಡಿಕೊಂಡಿದ್ದಾರೆಯೇ ವಿನ: ಪೂರ್ಣ ಪ್ರಮಾಣದಲ್ಲಿ ಯೋಜನೆ ಜಾರಿ ಮಾಡಿ, ಅನುದಾನವನ್ನು ಮೀಸಲಿಡುತ್ತಿಲ್ಲ. ಆನೆಗೆ ಅರೆಕಾಸಿನ ಗಂಜಿ ಎಂಬಂತೆ ಸಾವಿರಾರು ಕೋಟಿ ರೂ.ಅನುದಾನ ಬೇಕಿದ್ದರೂ 100-200 ಕೋಟಿ ರೂ.ಅನುದಾನ ನೀಡುತ್ತಿದ್ದಾರೆ. ಅದನ್ನೇಪ್ರಚಾರದಲ್ಲಿ ದೊಡ್ಡ ಅಸ್ತ್ರವನ್ನಾಗಿ ಮಾಡಿಕೊಂಡು ನಾವು ನೀರಾವರಿ ಯೋಜನೆಗಳನ್ನು ಆರಂಭಿಸಿದ್ದೇವೆ ಎನ್ನುವ ಮಾತನ್ನಾಡಿ ಬೀಗುತ್ತಿದ್ದಾರೆ.

ಕಾಂಗ್ರೆಸ್‌ ಅಸ್ತ್ರ ಏನು?: ಈ ಹಿಂದೆ ಕಾಂಗ್ರೆಸ್‌ ನಾಯಕರು “ಕೃಷ್ಣೆಯ ಕಡೆಗೆ ನಮ್ಮ ನಡಿಗೆ’ ಪಾದಯಾತ್ರೆ ನಡೆಸಿ ಚುನಾವಣೆಯಲ್ಲಿ ಎಲ್ಲರ ಗಮನ ಸೆಳೆದು ನೀರಾವರಿಯ ಭರವಸೆ ನೀಡಿದ್ದರು. ಆದರೆ, ಈ ಭಾಗದ ಜನರಿಗೆ ನೀರು ತಲುಪಿಲ್ಲ. ಕೃಷ್ಣಾ “ಬಿ’ ಸ್ಕಿಂಗಾಗಿ ಹೋರಾಟ ನಿಂತಿಲ್ಲ. ಪ್ರಧಾಮೋದಿಯವರು 5 ವರ್ಷ ಬರಿ ಸುಳ್ಳು ಭರವಸೆ ನೀಡುತ್ತಲೇ ಆಡಳಿತ ನಡೆಸಿದ್ದಾರೆ. ಜನ್‌ಧನ್‌ ಖಾತೆಯಡಿ ಜನರ ಖಾತೆಗೆ 15 ಲಕ್ಷ ರೂ.ಹಾಕುತ್ತೇನೆ ಎಂದಿದ್ದರು, ಇನ್ನೂ, ನಯಾಪೈಸೆ ಹಾಕಿಲ್ಲ. ಕಪ್ಪು ಹಣ ಏಲ್ಲಿದೆ?. ರೈತರ ಹಿತ ಕಾಯಬೇಕಿರುವ ಫಸಲ್‌ಬಿಮಾ ಯೋಜನೆಯ ಹಣ ಲಕ್ಷ ಕೋಟಿ ಲೆಕ್ಕದಲ್ಲಿ ಖಾಸಗಿ ವಿಮಾ ಕಂಪನಿಗಳ ಪಾಲಾಗಿದೆ. ರೈತರ ಬೆಳೆ ನಷ್ಟಶೇ.50ರಷ್ಟು ಲಾಭಾಂಶ ಕೊಡುವೆ ಎಂದಿದ್ದರು. ಅದನ್ನೂ ಮಾಡಿಲ್ಲ. ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಹಲವು ಜ್ವಲಂತ ಸಮಸ್ಯೆ ಇದ್ದರೂ ಅವುಗಳನ್ನು ಬಗೆಹರಿಸಿಲ್ಲ. ತುಂಗಭದ್ರಾ ಡ್ಯಾಂನ ಹೂಳು ತೆಗೆಯುವುದು, ಪರ್ಯಾಯ ವ್ಯವಸ್ಥೆ, ದೂರದೃಷ್ಟಿ ಯೋಜನೆಗಳನ್ನು ಮಾಡಿಯೇ ಇಲ್ಲ. ಕಾಲುವೆಗಳ ಅಭಿವೃದ್ದಿ ಸೇರಿದಂತೆ ಹಲವು ಕಾಮಗಾರಿಯಲ್ಲಿ ರಾಜ್ಯದ ಪಾಲು ಇದ್ದರೂ ನಮ್ಮ ಯೋಜನೆ ಎನ್ನುವ ರೀತಿಯಲ್ಲಿ ಾಡಿಕೊಳ್ಳುತ್ತಿರ ಕಾಂಗ್ರೆಸ್‌ಅಭ್ಯರ್ಥಿಗಳು ಮೋದಿ ವಿರುದಟಛಿ ವಾಗ್ಧಾಳಿ ನಡೆಸುತ್ತಾ, ಜನರಿಂದ ಮತ ಕೇಳಲು ಆರಂಭಿಸಿದ್ದಾರೆ.

ಬಿಜೆಪಿ ಬತ್ತಳಿಕೆಯ ಬಾಣ ಯಾವುದು?: ಬಿಜೆಪಿ ನಾಯಕರು ಮೋದಿ ಜಪ ಮುಂದುವರಿಸಿದ್ದಾರೆ. ಈ ಕ್ಷೇತ್ರಕ್ಕೆ ಅವರು ಹಲವು ರೈಲ್ವೆ ಗೇಟ್‌ಗಳಿಗೆ ಅನುಮೋದನೆ ಕೊಟ್ಟಿದ್ದಾರೆ. ನೂರಾರು ಕೋಟಿ ರೂ.ಹಣದ ನೆರವು ದೊರೆತಿದೆ. ಹೊಸಪೇಟೆ-ಹುಬ್ಬಳಿ ಅತಿ ದೊಡ್ಡ ಹೆದ್ದಾರಿ ಸೇರಿದಂತೆ ಹಲವು ಹೆದ್ದಾರಿ ಅಭಿವೃದ್ದಿಗೆ ‌ಕೊಪ್ಪಳದಲ್ಲೇ ಉದ್ಘಾಟನೆ  ಮಾಡಿಸಲಾಗಿದೆ. ಕೋತರ ಜನಕ್ಕೆ ಜನ್‌ಧನ್‌ ಖಾತೆ ತೆರೆದಿದ್ದಾರೆ. ಬೆಳೆ ನಷ್ಟಕ್ಕೆ ಫಸಲ್‌ಬಿಮಾ ಯೋಜನೆ ತಂದಿದ್ದು, ಉದ್ಯಮ ನಡೆಸಲು ಮುದ್ರಾ ಸ್ಕೀಂ ಜಾರಿ ಮಾಡಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ತಲೆ ಎತ್ತಿ ನಿಲ್ಲುವಂತೆ ಹಲವು ಒಪ್ಪಂದ ಮಾಡಿಕೊಂಡಿದ್ದಾರೆ ಎನ್ನುತ್ತಿದ್ದಾರೆ. ಕಾಂಗ್ರೆಸ್‌ 60 ವರ್ಷ ಆಡಳಿತ ನಡೆಸಿದೆ. ಆದರೂ, ಏನೂ ಅಭಿವೃದ್ದಿ ಮಾಡಿಲ್ಲ. ಅವರು ಅಭಿವೃದ್ದಿ  ಮಾಡಿದ್ದರೆ ಇಷ್ಟೆಲ್ಲ ಮಾಡಲು ಸಾಧ್ಯವಾಗುತ್ತಿತ್ತೇ ಎನ್ನುವ ಮಾತನ್ನಾಡುತ್ತಿದ್ದಾರೆ.

ದತ್ತು ಕಮ್ಮಾರ

ಟಾಪ್ ನ್ಯೂಸ್

Madikeri-1

Madikeri: ರೈಲ್ವೆ ಕಂಬಿಯ ಬೇಲಿಗೆ ಸಿಲುಕಿದ ಕಾಡಾನೆಯ ರಕ್ಷಣೆ

Kharge

JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ

ಅಗ್ಗಕ್ಕೆ ಸೇಲಾದ ಪಾಂಡೆ, ಬೆಂಗಳೂರಿಗೆ ಬಂದ ಆಸೀಸ್‌ ಆಟಗಾರ

IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್‌ ಗೆ ಬಂಪರ್‌, ಬೆಂಗಳೂರಿಗೆ ಬಂದ ಡೇವಿಡ್

1-Chamundeshwari

Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ

chetah

Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ

1-adani

Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ

K.-J.-George

ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Supreme court

ಒಂದೂವರೆ ತಿಂಗಳಲ್ಲಿ 20 ಕೇಸು; ಬಿಜೆಪಿ ಅಭ್ಯರ್ಥಿಗೆ ಸುಪ್ರೀಂ ರಕ್ಷಣೆ

s-28

ಚೌಕಿದಾರರಾಗಿ ಬದಲಾದ ಪ್ರತಿಪಕ್ಷಗಳ ಕಾರ್ಯಕರ್ತರು!

Voting 1

ಲೋಕನಾಟಕ, ಮತದಾರ ಮೂಕಪ್ರೇಕ್ಷಕ

Modi 5

ಫಿರ್‌ ಏಕ್‌ ಬಾರ್‌ ಚೌಕಿದಾರ್‌

b-36

ಆಂಧ್ರದಲ್ಲಿ ಜಗನ್‌ ಹವಾ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Madikeri-1

Madikeri: ರೈಲ್ವೆ ಕಂಬಿಯ ಬೇಲಿಗೆ ಸಿಲುಕಿದ ಕಾಡಾನೆಯ ರಕ್ಷಣೆ

Untitled-5

Mangaluru: ಗಾಂಜಾ ಸೇವನೆ; ಯುವಕನ ಬಂಧನ

4

Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್‌ ಬಾಟಲಿ ಸದ್ದು  

Kharge

JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ

ಅಗ್ಗಕ್ಕೆ ಸೇಲಾದ ಪಾಂಡೆ, ಬೆಂಗಳೂರಿಗೆ ಬಂದ ಆಸೀಸ್‌ ಆಟಗಾರ

IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್‌ ಗೆ ಬಂಪರ್‌, ಬೆಂಗಳೂರಿಗೆ ಬಂದ ಡೇವಿಡ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.