ರೈತರ ಭೂಮಿಗೆ 4 ಪಟ್ಟು ಪರಿಹಾರ
Team Udayavani, Mar 6, 2019, 7:25 AM IST
ದೊಡ್ಡಬಳ್ಳಾಪುರ: ಎತ್ತಿನಹೊಳೆ ಯೋಜನೆಯ ಬೈರಗೊಂಡ್ಲು ಅಣೆಕಟ್ಟು ನಿರ್ಮಾಣಕ್ಕಾಗಿ ಮುಳುಗಡೆಯಾಗುವ ರೈತರ ಜಮೀನಿಗೆ ಒಂದಕ್ಕೆ ನಾಲ್ಕು ಪಟ್ಟು ಪರಿಹಾರ ನೀಡಲು ಸರಕಾರ ತೀರ್ಮಾನಿಸಿದ್ದು, ಒಂದು ಎಕರೆಗೆ 32ಲಕ್ಷ ರೂ.ಪರಿಹಾರ ರೈತರಿಗೆ ದೊರೆಯಲಿದೆ ಎಂದು ಶಾಸಕ ಟಿ.ವೆಂಕಟರಮಣಯ್ಯ ತಿಳಿಸಿದರು.
ತಾಲೂಕಿನ ಸಾಸಲು, ದೊಡ್ಡಬೆಳವಂಗಲ ಹೋಬಳಿ ವ್ಯಾಪ್ತಿಯಲ್ಲಿ ನಡೆದ ರೈತರಿಗೆ ಸಾಗುವಳಿ ಭೂಮಿ ಮಂಜೂರಾತಿ ಹಕ್ಕುಪತ್ರ ಹಾಗೂ ಫಲಾನುಭವಿಗಳಿಗೆ ಪಿಂಚಣಿ ಗುರುತಿನ ಚೀಟಿ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಾಲ್ಕು ಪಟ್ಟು ಪರಿಹಾರ ಹೆಚ್ಚಳ: ಬಯಲು ಸೀಮೆಯಲ್ಲಿನ ನೀರಿನ ಬವಣೆಯನ್ನು ನೀಗಿಸಲು ಸಂಸದ ವೀರಪ್ಪ ಮೊಯ್ಲಿ ಅ ವರ ಮಹತ್ವಾಕಾಂಕ್ಷಿ ಯೋಜನೆಯಾದ ಎತ್ತಿನ ಹೋಳೆ ಯೋಜನೆಯ ಕಾಮಗಾರಿ ಸಕಲೇಶಪುರದವರೆಗೂ ಪೂರ್ಣಗೊಂಡಿದೆ.
ತಾಲೂಕಿನ ಸಾಸಲು ಹೋಬಳಿ ಬೈರಗೊಂಡ್ಲು ಬಳಿ ನಿರ್ಮಾಣವಾಗಲಿರುವ ಎತ್ತಿನಹೊಳೆ ಯೋಜನೆಗೆ ಅಣೆಕಟ್ಟು ನಿರ್ಮಾಣಕ್ಕೆ 7 ಗ್ರಾಮಗಳು ಮತ್ತು 2,500 ಎಕರೆ ಮುಳುಗಡೆಯಾಗುತ್ತಿದೆ. ರೈತರ ಹಿತವನ್ನು ಕಾಪಾಡಲು ಒಂದಕ್ಕೆ ನಾಲ್ಕು ಪಟ್ಟು ಪರಿಹಾರ ನಿಗದಿಪಡಿಸುವ ಮೂಲಕ ಕಾಂಗ್ರೆಸ್ ಹಾಗೂ ಜೆಡಿಸ್ ಸಮ್ಮಿಶ್ರ ಸರಕಾರ ಎಕರೆಗೆ 8 ಲಕ್ಷ ರೂ.ನಷ್ಟಿದ್ದ ಪರಿಹಾರದ ಮೊತ್ತವನ್ನು 32 ಲಕ್ಷ ರೂ.ಗೆ ಏರಿಕೆ ಮಾಡಿ ಅಧಿವೇಶನದಲ್ಲಿ ಮ ಸೂದೆ ಮಂಡಿಸಿ ದೆ ಎಂದು ತಿಳಿಸಿದರು.
ಹಕ್ಕು ಪತ್ರ ಅದಾಲತ್: 2018ರಲ್ಲಿ ಅರ್ಜಿ ಸಲ್ಲಿಸಿದ ರೈತರಿಗೆ ಸಾಂಕೇತಿಕವಾಗಿ ಹಕ್ಕು ಪತ್ರ ವಿತರಿಸುತ್ತಿದ್ದು, 2018ಕ್ಕೂ ಮುಂಚೆ ಸಲ್ಲಿಸಿದ ಅರ್ಹ ಫಲಾನುಭವಿಗಳಿಗೆ ಲೋಕಸಭೆ ಚುನಾವಣೆ ಮುಗಿದ ನಂತರ ಅದಾಲತ್ ಕಾರ್ಯಕ್ರಮವನ್ನು ನಡೆಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ರೈತರು ಆತಂಕಪಡುವ ಅಗತ್ಯವಿಲ್ಲ: ಪಿಂಚಣಿ, ಕಂದಾಯ ಅದಾಲತ್‌ನಂತೆಯೇ ಸ್ಥಳದಲ್ಲಿಯೇ ಸಾಗುವಳಿ ಚೀಟಿಗಳ ಗೊಂದಲವನ್ನು ಪರಿಹರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಹಕ್ಕು ಪತ್ರ ದೊರೆಯದ ರೈತರು ಆತಂಕಕ್ಕೆ ಒಳಗಾಗಬಾರದೆಂದು ಮನವಿ ಮಾಡಿದರು.
31ರ ವರೆಗೂ ಅವಕಾಶ: ತಾಲೂಕು ಪಂಚಾ ಯಿ ತಿ ಅಧ್ಯಕ್ಷ ಎ ಚ್. ವಿ. ಶ್ರೀ ವತ್ಸ ಮಾತನಾಡಿ, 2018ರಲ್ಲಿ ಅರ್ಜಿ ಸಲ್ಲಿಸಿದ ರೈತರಿಗೆ ಸಾಂಕೇತಿಕವಾಗಿ ಸಾಸಲು ವ್ಯಾಪ್ತಿಯಲ್ಲಿ 37,ದೊಡ್ಡಬೆಳವಂಗಲ ವ್ಯಾಪ್ತಿಯಲ್ಲಿ 45 ಸಾಗುವಳಿ ಹಕ್ಕು ಪತ್ರಗಳನ್ನು ನೀಡುತ್ತಿದ್ದೇವೆ. ಈ ಮುಂಚೆ ಅರ್ಜಿ ಸಲ್ಲಿಸಿದ ರೈತರಿಗೂ ಹಕ್ಕು ಪತ್ರ ಒದಗಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿದ್ದಾರೆ. ಸಾಗುವಳಿ ಅರ್ಜಿ ಸಲ್ಲಿಸಲು ಮಾ.31ರವರೆಗೂ ಅವಕಾಶವಿದ್ದು, ರೈತರು ಅರ್ಜಿ ಸಲ್ಲಿಬಹುದೆಂದು ತಿಳಿಸಿದರು.
ಗುರುತಿನ ಚೀಟಿ ಶೀಘ್ರ ಪರಿಶೀಲನೆ: ತಹಶೀಲ್ದಾರ್ ಎಂ.ಕೆ.ರಮೇಶ್ ಮಾತನಾಡಿ, ಬಗರ್ ಹುಕುಂ ಸಾಗುವಳಿ ಫಲಾನುಭವಿಗಳಿಗೆ ಹಕ್ಕು ಪತ್ರ ಹಾಗೂ ಪಿಂಚಣಿಯ ಗುರುತಿನ ಚೀಟಿಯನ್ನು ವಿತರಿಸಲಾಗುತ್ತಿದ್ದು, ಕೆಲ ಗೊಂದಲಗಳಿಂದ ವಿತರಣೆಯಾಗದ ಹಕ್ಕು ಪತ್ರ ಹಾಗೂ ಗುರುತಿನ ಚೀಟಿಗಳನ್ನು ತ್ವರಿತವಾಗಿ ಪರಿಶೀಲನೆ ನಡೆಸಿ ನಾಲ್ಕು ತಿಂಗಳ ಒಳಗಾಗಿ ವಿತರಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾ ಯಿ ತಿ ಉಪಾಧ್ಯಕ್ಷೆ ಕನ್ಯಾಕುಮಾರಿ ಶ್ರೀನಿವಾಸ್, ತಾಲೂಕು ಪಂಚಾಯಿತಿ ಸದಸ್ಯರಾದ ಡಿ.ಸಿ.ಶಶಿಧರ್, ಪದ್ಮಾವತಿ ಅಣ್ಣಯ್ಯಪ್ಪ, ಮುತ್ತುಲಕ್ಷಿ ವೆಂಕಟೇಶ್, ಭೂ ಮಂಜೂರಾತಿ ಸಮಿತಿ ಸದಸ್ಯರಾದ ಬೈರೇಗೌಡ, ಸಾಸಲು ಗ್ರಾಮ ಪಂಚಾಯಿತಿ ಪಿಡಿಒ ತಿರುಪತಿ, ಮುಖಂಡರಾದ ರಾಜ್‌ಕುಮಾರ್,ಅಣ್ಣಯ್ಯಪ್ಪ, ಪಿ.ಸಿ.ನರಸಿಂಹಮೂರ್ತಿ, ಡಿ.ಜಿ.ಕೃಷ್ಣಮೂರ್ತಿ, ಲಾವಣ್ಯಾ ನಾಗರಾಜ್, ರಾಜಗೋಪಾಲ್, ಗಂಗಾಧರ್ ಸೇರಿದಂತೆ ರೈತರು ಇತರರು ಹಾಜರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.