‘ಕರಾವಳಿಗೆ ಪ್ರತ್ಯೇಕ ಮರಳು ನೀತಿ ಅನಿವಾರ್ಯ’
Team Udayavani, Mar 6, 2019, 9:29 AM IST
ಬೆಳ್ತಂಗಡಿ : ಕರಾವಳಿ ಜಿಲ್ಲೆಗಳಲ್ಲಿ ಮರಳು ಅಭಾವದಿಂದ ಕಾಮಗಾರಿಗಳ ಅಭಿವೃದ್ಧಿಗೆ ಹೊಡೆತ ಬೀಳುತ್ತಿದೆ. ಆದ್ದರಿಂದ ಸರಕಾರ ಕರಾವಳಿ ಜಿಲ್ಲೆಗೆ ಪ್ರತ್ಯೇಕ ಮರಳು ನೀತಿ ರೂಪಿಸುವುದು ಅಗತ್ಯ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.
ಗುರುವಾಯನಕೆರೆ ನಾಗರಿಕ ಸೇವಾ ಟ್ರಸ್ಟ್ ಕಚೇರಿ ಸಭಾಭವನದಲ್ಲಿ ಜರಗಿದ ಟ್ರಸ್ಟ್‌ನ ಸಮಾವೇಶದಲ್ಲಿ ಮಂಡಿಸಿದ್ದ 22 ನಿರ್ಣಯ (ಹಕ್ಕೊತ್ತಾಯ)ಗಳಿಗೆ ಸ್ಪಂದಿಸಿ ಅವರು ಮಾತನಾಡಿದರು. ಕೇಂದ್ರಕ್ಕೆ ಸಂಬಂಧಪಟ್ಟ ಹಲವು ವಿಷಯಗಳ ಬಗ್ಗೆ ಈಗಾಗಲೇ ಸ್ಪಂದಿಸಿದ್ದೇವೆ, ಹೋರಾಟವನ್ನೂ ಮಾಡಿದ್ದೇವೆ. ಪಕ್ಷದ ಪ್ರಣಾಳಿಕೆಯಲ್ಲಿ ಹಿರಿಯರೊಂದಿಗೆ ಮಾತುಕತೆ ಮಾಡಿ ಸೇರಿಸುತ್ತೇವೆ ಎಂದರು. ಯುವಜನರಿಗೆ, ಮಹಿಳೆಯರಿಗೆ, ಎಸ್‌ಸಿ, ಎಸ್‌ಟಿಗಳಿಗೆ ಉದ್ಯೋಗ ಒದಗಿಸಲು ಉದ್ಯಮಶೀಲತೆ ಬೆಳೆಸಿ ಉದ್ಯೋಗಾವಕಾಶ ಸೃಷ್ಟಿಸುವ ಕೆಲಸ ಮಾಡುತ್ತಿದ್ದೇವೆ. ದಲಿತರ ಸ್ಥಿತಿಗತಿ ಕುರಿತು ಟ್ರಸ್ಟ್‌ನ ಅಧ್ಯಯನ ವರದಿ ಪರಿಶೀಲಿಸಿ ವಿಶೇಷ ಗಮನ ಹರಿಸುವುದಾಗಿ ಅವರು ತಿಳಿಸಿದರು.
ಟ್ರಸ್ಟ್ ಅಧ್ಯಕ್ಷ ಕೆ. ಸೋಮನಾಥ ನಾಯಕ್ ಟ್ರಸ್ಟ್‌ನ ಜನರ ಪ್ರಣಾಳಿಕೆ, ಮುಖಾಮುಖೀ ಕಾರ್ಯಾಚರಣೆಗಳ ವಿವರ ನೀಡಿದರು. ಕಾರ್ಯದರ್ಶಿ ಜಯಪ್ರಕಾಶ್ ಭಟ್ ಸಿ.ಎಚ್. ಸ್ವಾಗತಿಸಿ, ಸಹಕಾರ್ಯದರ್ಶಿ ನಾರಾಯಣ ಕಿಲಂಗೋಡಿ ವಂದಿಸಿದರು. ಉಪಾಧ್ಯಕ್ಷ ಕೆ. ರಮಾನಂದ ಸಾಲ್ಯಾನ್ ಮತ್ತು ಸಹಕಾರ್ಯದರ್ಶಿ ವನಿತಾ ಜೈನ್ ಉಪಸ್ಥಿತರಿದ್ದರು. ಟ್ರಸ್ಟಿಗಳು ಮತ್ತು ತುಳುವೆರೆ ಪರ್ಬದ ಸಂಚಾಲಕರು ಭಾಗವಹಿಸಿದ್ದರು.
ನಿರ್ಣಯಗಳಿಗೆ ಸಹಮತ
ತುಳು ಭಾಷೆಯನ್ನು 8ನೇ ಪರಿಚ್ಛೇದದಲ್ಲಿ ಸೇರಿಸಲು 3 ಬಾರಿ ನಿಯೋಗದೊಂದಿಗೆ ಪ್ರಯತ್ನ ಮಾಡಿದ್ದೇನೆ. ಇದನ್ನು ಗಂಭೀರವಾಗಿ ಮುಂದುವರಿಸುತ್ತೇನೆ. ಕಲಾಕಾರರಿಗೆ ಪಿಂಚಣಿ ಮತ್ತಿತರ ನಿರ್ಣಯಗಳಿಗೆ ನನ್ನ ಸಹಮತ ಇದೆ.
– ನಳಿನ್ ಕುಮಾರ್ ಕಟೀಲು
ಸಂಸದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Google Map: ಗೂಗಲ್ ಮ್ಯಾಪ್ ನಂಬಿ ಗಡಿ ದಾಟಿದ ಪೊಲೀಸರನ್ನೇ ಹಿಡಿದು ಹಾಕಿದ ಗ್ರಾಮಸ್ಥರು
Pritish Nandy: ಖ್ಯಾತ ಕವಿ, ಚಲನಚಿತ್ರ ನಿರ್ಮಾಪಕ ಪ್ರಿತೀಶ್ ನಂದಿ ನಿಧನ
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.