ಕಾರುಗಳ ಗಾಜು ಪುಡಿ: ಶಿವರಾತ್ರಿ ವಿಕೃತಿ?
Team Udayavani, Mar 6, 2019, 10:10 AM IST
ಉಡುಪಿ, ಮಾ. 5: ಸೋಮವಾರ ಉಡುಪಿ ನಗರದ ಕಲ್ಸಂಕ-ಗುಂಡಿಬೈಲು ಮುಖ್ಯ ರಸ್ತೆಯ ಪಕ್ಕ ನಿಲ್ಲಿಸಿಡಲಾಗಿದ್ದ ಸುಮಾರು 8ಕ್ಕೂ ಅಧಿಕ ಕಾರುಗಳ ಗಾಜನ್ನು ಒಡೆದು ಹಾಕಿರುವ ಘಟನೆ ಸಂಭವಿಸಿದೆ.
ರಸ್ತೆ ಪಕ್ಕದ ಮನೆಯವರು ಎಂದಿನಂತೆ ತಮ್ಮ ವಾಹನಗಳನ್ನು ರಸ್ತೆ ಬದಿ ನಿಲ್ಲಿಸಿದ್ದರು. ಬೆಳಗ್ಗೆ ನೋಡುವಾಗ ಕಾರುಗಳ ಗಾಜುಗಳು ಪುಡಿಯಾಗಿರುವುದು ಗಮನಕ್ಕೆ ಬಂದಿದೆ. ಇನ್ನೋವಾ, ಸ್ಯಾಂಟ್ರೋ, ಕ್ವಿಡ್ ಮೊದಲಾದ ಕಾರುಗಳ ಗಾಜು ಪುಡಿ ಮಾಡಲಾಗಿದೆ.
ಇಂದಿರಾ ನಗರದಲ್ಲಿಯೂ ಕಾರೊಂದಕ್ಕೆ ಹಾನಿ ಮಾಡಿರುವ ಬಗ್ಗೆ ವರದಿಯಾಗಿದೆ. ಆದರೆ ಈ ಘಟನೆಗಳ ಬಗ್ಗೆ ಪೊಲೀಸ್ ದೂರು ದಾಖಲಾಗಿಲ್ಲ. ಶಿವರಾತ್ರಿ ಹಿನ್ನೆಲೆಯಲ್ಲಿ ಈ ಕೃತ್ಯ ನಡೆಸಲಾಗಿದೆಯೋ ಅಥವಾ ಶಿವರಾತ್ರಿಯ ನೆಪವಿಟ್ಟುಕೊಂಡು ದುಷ್ಕರ್ಮಿಗಳು ಈ ರೀತಿಯ
ವಿಕೃತಿ ತೋರಿಸಿದ್ದಾರೆಯೇ ಎಂಬುದು ಗೊತ್ತಾಗಿಲ್ಲ. ಅಕ್ಕಪಕ್ಕದಲ್ಲಿ ಸಿಸಿಟಿವಿಗಳಲ್ಲಿ ಘಟನೆಗಳ ಫೂಟೇಜ್ ದೊರೆಯುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಪರ್ಕಳದ ಡೈರಿ ಆವರಣ, ಅಂಗಡಿಗಳ ಎದುರು ಉಪ್ಪು ಸುರಿಯಲಾಗಿದೆ. ಕೆಲವು ಅಂಗಡಿಗಳ ಬೋರ್ಡ್‌ಗಳನ್ನು ಕಿತ್ತಿರುವ ಘಟನೆಗಳು ಕೂಡ ನಡೆದಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.