ಯುದ್ಧ ಭೂಮಿಯಲ್ಲಿ ವಾನರ ಸೈನಿಕ!
Team Udayavani, Mar 7, 2019, 12:30 AM IST
ಮೊದಲ ವಿಶ್ವ ಮಹಾಯುದ್ಧ ನಡೆಯುತ್ತಿತ್ತು. ದಕ್ಷಿಣ ಆಫ್ರಿಕಾದ ಸೈನಿಕರು ಶತ್ರುಗಳ ವಿರುದ್ಧ ಕೆಚ್ಚೆದೆಯಿಂದ ಹೋರಾಡುತ್ತಿದ್ದರು. ಶತ್ರುಗಳಿಗೆ ತೀವ್ರ ಪ್ರತಿರೋಧ ಒಡ್ಡುತ್ತಿದ್ದ ಮುಂದಿನ ಸಾಲಿನಲ್ಲಿ ಒಂದು ಅಚ್ಚರಿ ಇತ್ತು. ಅಲ್ಲಿ ಸೈನಿಕರ ನಡುವೆ ಕೋತಿಯೊಂದು ಯುದ್ಧದಲ್ಲಿ ತೊಡಗಿತ್ತು. ಸೈನಿಕರಿಗೆ ತನ್ನ ಕೈಲಾದ ಸಹಾಯ ಮಾಡುತ್ತಿತ್ತು. ಮಹಾಯುದ್ಧದಲ್ಲಿ ಪಾಲ್ಗೊಂಡ ಈ ಕೋತಿಯ ಹೆಸರು “ಜಾಕಿ’. ಜಾಕಿ ಸೇನೆಯನ್ನು ಸೇರಿದ್ದೇ ಒಂದು ಸ್ವಾರಸ್ಯಕರ ಸಂಗತಿ.
ಜಾಕಿಯನ್ನು ಸಾಕಿದ್ದು ಅಲ್ಬರ್ಟ್ ಎಂಬ ಕೃಷಿಕ. ಗದ್ದೆ ಕೆಲಸ ಮತ್ತಿತರ ಸಣ್ಣಪುಟ್ಟ ಕೆಲಸಗಳನ್ನು ಮಾಡಲು ಅಲ್ಬರ್ಟ್, ಜಾಕಿಗೆ ತರಬೇತಿ ನೀಡಿದ್ದ. ಮೊದಲ ವಿಶ್ವಮಹಾಯುದ್ಧ ಶುರುವಾದಾಗ ಅಲ್ಬರ್ಟ್ ಸೇನೆ ಸೇರಲೇಬೇಕಿತ್ತು. ಹೋಗುವಾಗ ತನ್ನ ನೆಚ್ಚಿನ ಜಾಕಿಯನ್ನು ಬಿಟ್ಟು ಹೋಗಲು ಅವನಿಗೆ ಮನಸ್ಸಾಗಲಿಲ್ಲ. ಮೇಲಧಿಕಾರಿಗಳಿಗೆ ಜಾಕಿಯನ್ನು ಕರೆತರಲು ಅನುಮತಿ ನೀಡುವಂತೆ ಪತ್ರ ಬರೆದ. ಅನುಮತಿ ಸಿಕ್ಕಿತು. ಹಾಗೆ ಜಾಕಿಯೂ ಸೇನೆ ಸೇರುವಂತಾಯಿತು.
ಜಾಕಿಯನ್ನು ಯಾವತ್ತೂ ವಾನರನಂತೆ ನಡೆಸಿಕೊಳ್ಳಲೇ ಇಲ್ಲ. ಆತನನ್ನು ಸೈನಿಕನಂತೆಯೇ ಕಾಣಲಾಯಿತು. ಆತನಿಗಾಗಿಯೇ ಪ್ರತ್ಯೇಕ ಸಮವಸ್ತ್ರವನ್ನು ಸಿದ್ಧಪಡಿಸಲಾಯಿತು. ಮೇಲಧಿಕಾರಿಗಳು ಬಂದಾಗ ಮಿಕ್ಕ ಸೈನಿಕರಂತೆ ಜಾಕಿಯೂ ಎದ್ದು ನಿಂತು ಸಲ್ಯೂಟ್ ಹೊಡೆಯುತ್ತಿದ್ದ. ರಾತ್ರಿ ತನ್ನ ಪಾಳೆ. ಸೈನಿಕರು ನಿದ್ದೆ ಮಾಡುತ್ತಿದ್ದಾಗ ಜಾಕಿ ಎದ್ದು ಕಾವಲು ಕಾಯುತ್ತಿದ್ದ. ಸ್ವಲ್ಪ ಸದ್ದಾದರೂ ಗಮನಿಸುತ್ತಿದ್ದ.
ಫ್ರಾನ್ಸ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಬಾಂಬ್ ಶೆಲ್ ಸಿಡಿದು ಜಾಕಿಗೆ ಏಟಾಗಿತ್ತು. ಇವೆಲ್ಲದರ ಹೊರತಾಗಿಯೂ ಆತ ಸೇನೆಯಲ್ಲಿ ಸೇವೆ ಸಲ್ಲಿಸಿದ. ಯುದ್ಧ ಕೊನೆಗೊಂಡಾಗ ಸರ್ಕಾರ ಜಾಕಿಗೆ ಶೌರ್ಯ ಪುರಸ್ಕಾರ ನೀಡಿ ಗೌರವಿಸಿತು. ಅಷ್ಟೇ ಅಲ್ಲದೆ ಪಿಂಚಣಿ ಹಣದ(ಪೆನ್ಸ್ ನ್) ಸೌಲಭ್ಯವನ್ನೂ ನೀಡಿತು!
ಹವನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Maharashtra Polls: ಯಾರಾಗಲಿದ್ದಾರೆ ಮಹಾ ಮುಖ್ಯಮಂತ್ರಿ? ಸುಳಿವು ನೀಡಿದ ಫಡ್ನವೀಸ್
ಕೊಪ್ಪಳ: ಫ್ಲೈಟ್ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!
Dhanashree Verma: ಯಶ್ ಸಿನಿಮಾಕ್ಕೆ ಕ್ರಿಕೆಟಿಗ ಚಹಾಲ್ ಪತ್ನಿ ಹೀರೋಯಿನ್
Re-Release: ಈ ವರ್ಷ ರೀ ರಿಲೀಸ್ ಆದ ಬಾಲಿವುಡ್ ಸಿನಿಮಾಗಳ ಬಾಕ್ಸ್ ಆಫೀಸ್ ಗಳಿಕೆ ಎಷ್ಟು?
Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.