ವಿಶ್ವದ ಶ್ರೀಮಂತರ ಪಟ್ಟಿ;ಮುಖೇಶ್ ಅಂಬಾನಿಗೆ ಎಷ್ಟನೇ ಸ್ಥಾನ ?
Team Udayavani, Mar 6, 2019, 1:31 PM IST
ಹೊಸದಿಲ್ಲಿ : ಫೋರ್ಬ್ಸ್ ನಿಯತಕಾಲಿಕೆ ಪ್ರಕಟಿಸಿರುವ 2019 ನೇ ಸಾಲಿನ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಭಾರತದ ದಿಗ್ಗಜ ಉದ್ಯಮಿ ರಿಲಾಯನ್ಸ್ ಇಂಡಸ್ಟ್ರೀಸ್ನ ಅಧ್ಯಕ್ಷ ಮುಖೇಶ್ ಅಂಬಾನಿ ಅವರು 13 ನೇ ಸ್ಥಾನ ಪಡೆದುಕೊಂಡಿದ್ದಾರೆ.
3.5 ಲಕ್ಷ ಕೋಟಿ ರೂಪಾಯಿ ಆಸ್ತಿಯೊಂದಿಗೆ 6 ಸ್ಥಾನ ಜಿಗಿದಿರುವ ಅಂಬಾನಿ ಅವರು 13 ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. 2018 ರಲ್ಲಿ ಅಂಬಾನಿ ಅವರು 50 ಬಿಲಿಯನ್ ಯುಎಸ್ ಡಾಲರ್ ಆಸ್ತಿಯೊಂದಿಗೆ 19 ನೇ ಸ್ಥಾನ ಪಡೆದಿದ್ದರು.
ಅಮೇಜಾನ್ ಸಂಸ್ಥಾಪಕ ಜೆಫ್ ಬೆಝೋಸ್ ಅವರು 131 ಬಿಲಿಯನ್ ಆಸ್ತಿಯೊಂದಿಗೆ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ.ಮೈಕ್ರೋಸಾಫ್ಟ್ನ ಬಿಲ್ಗೇಟ್ಸ್ 2ನೇ ಸ್ಥಾನ, ಎಸ್ ಇನ್ವೆಸ್ಟರ್ ವಾರೆನ್ ಬಫೆಟ್ 3 ನೇ ಸ್ಥಾನ ಪಡೆದುಕೊಂಡಿದ್ದಾರೆ. ಫೇಸ್ಬುಕ್ನ ಮಾರ್ಕ್ ಜುಕರ್ ಬರ್ಗ್ 3 ಸ್ಥಾನ ಕುಸಿದು 8 ನೇ ಸ್ಥಾನ ಪಡೆದಿದ್ದಾರೆ.
ಅಂಬಾನಿ ಅವರು 60 ಬಿಲಿಯನ್ ಡಾಲರ್ ಆದಾಯವಿರುವ ತೈಲ ಮತ್ತು ಗ್ಯಾಸ್ನ ದೈತ್ಯ ಕಂಪೆನಿಗಳ ಒಡೆಯರಾಗಿದ್ದಾರೆ. ಈ ಕಂಪೆನಿಗಳು ಭಾರತದ ಮೌಲ್ಯಯುತ ಕಂಪೆನಿಗಳಾಗಿವೆ ಎಂದು ಫೋರ್ಬ್ಸ್ ಹೇಳಿದೆ.
2016 ರಲ್ಲಿ ರಿಲಾಯನ್ಸ್ ಜಿಯೋ ಸಿಮ್ಗಳನ್ನು ಉಚಿತವಾಗಿ ನೀಡುವ ಮೂಲಕ ಭಾರತದ ಟೆಲಿಕಾಂ ಕ್ಷೇತ್ರದಲ್ಲಿನ ದರ ಸಮರಕ್ಕೆ ಕಿಡಿ ಹಚ್ಚಿತ್ತು ಎಂದು ಫೋರ್ಬ್ಸ್ ಹೇಳಿದೆ.
ಟಾಪ್ 100 ಶ್ರೀಮಂತರಲ್ಲಿ ವಿಪ್ರೋ ಅಧ್ಯಕ್ಷ ಅಜೀಂ ಪ್ರೇಮ್ ಜಿ ಅವರು 36 ನೇ ಸ್ಥಾನ ಪಡೆದು 2 ನೇ ಶ್ರೀಮಂತ ಭಾರತೀಯ ಎನಿಸಿಕೊಂಡಿದ್ದಾರೆ.22.6 ಬಿಲಿಯನ್ ಯುಎಸ್ ಡಾಲರ್ ಅವರ ಆಸ್ತಿ ಮೌಲ್ಯವಾಗಿದೆ. ಎಚ್ಸಿಎಸ್ ಸಂಸ್ಥಾಪಕ ಶಿವ ನಾಡರ್ ಅವರು 14.4 ಬಿಲಿಯನ್ ಯುಎಸ್ ಡಾಲರ್ ಆಸ್ತಿಯೊಂದಿಗೆ 82 ನೇ ಸ್ಥಾನ ಪಡೆದಿದ್ದಾರೆ. ಅರ್ಸೆಲೊರ್ ಮಿತ್ತಲ್ನ ಲಕ್ಷ್ಮೀ ಮಿತ್ತಲ್ ಅವರು 14.1 ಬಿಲಿಯನ್ ಆಸ್ತಿಯೊಂದಿಗೆ 91 ನೇ ಸ್ಥಾನ ಪಡೆದಿದ್ದಾರೆ.
ಆದಿತ್ಯ ಬಿರ್ಲಾ ಗ್ರೂಪ್ನ ಕುಮಾರ್ ಬಿರ್ಲಾ 122 ನೇ ಸಾœನ, ಅದಾನಿ ಗ್ರೂಪ್ನ ಗೌತಮ್ ಅದಾನಿ 167, ಭಾರತಿ ಎರ್ಟೆಲ್ನ ಸುನಿಲ್ ಮಿತ್ತಲ್ 244 ನೇ ಸ್ಥಾನ, ಪತಂಜಲಿಯ ಆಚಾರ್ಯ ಬಾಲಕೃಷ್ಣ ಅವರು 365 ನೇ ಸ್ಥಾನ ಪಡೆದುಕೊಂಡಿದ್ದಾರೆ.
ಅಂದಹಾಗೆ ಮುಖೇಶ್ ಸಹೋದರ ಅನಿಲ್ ಅಂಬಾನಿ ಅವರು 1.8 ಬಿಲಿಯನ್ ಯುಎಸ್ ಡಾಲರ್ ಆಸ್ತಿಯೊಂದಿಗೆ 1349 ನೇ ಸ್ಥಾನ ಪಡೆದುಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.