ಸಿಪಿಎಂ-ಕಾಂಗ್ರೆಸ್ ಒಳ ಒಪ್ಪಂದ : ಎಂ.ಟಿ.ರಮೇಶ್
Team Udayavani, Mar 7, 2019, 1:00 AM IST
ಕಾಸರಗೋಡು: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳ ಸಹಿತ ವಿವಿಧ ರಾಜ್ಯಗಳಲ್ಲಿ ಸಿಪಿಎಂ ಪಕ್ಷವು ಕಾಂಗ್ರೆಸ್ ಪಕ್ಷದೊಂದಿಗೆ ಕೈಜೋಡಿಸಿ ಒಳ ಒಪ್ಪಂದ ಮೂಲಕ ಸ್ಪರ್ಧಿಸಲು ನಿರ್ಧರಿಸಿದ್ದು, ಇದರಿಂದ ಕೇರಳದ ಎಡರಂಗ ಮತ್ತು ಐಕ್ಯರಂಗದ ಪ್ರಾಶಸ್ತ್ಯ ನಷ್ಟಗೊಳ್ಳಲಿದೆ ಎಂದು ಬಿಜೆಪಿ ಕೇರಳ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಟಿ.ರಮೇಶ್ ಹೇಳಿದ್ದಾರೆ.
ಪ್ರಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡೂ ಪಕ್ಷಗಳುದೇಶದ ವಿವಿಧೆಡೆಗಳಲ್ಲಿ ಒಟ್ಟಾಗಿ ಸ್ಪìರ್ಧಿಸುತ್ತಿರುವುದರಿಂದ ಕೇರಳದಲ್ಲಿ ಎರಡೂ ಒಕ್ಕೂಟಗಳು ಪರಸ್ಪರ ಸೀಟು ಹೊಂದಾಣಿಕೆ ನಡೆಸಿ ಜಂಟಿಯಾಗಿ ಸ್ಪರ್ಧಿಸುವುದು ಒಳಿತು. ನರೇಂದ್ರ ಮೋದಿಯವರನ್ನು ಪರಾಭವ ಗೊಳಿಸುವುದು ಕಾಂಗ್ರೆಸ್ ಮತ್ತು ಸಿಪಿಎಂನ ಏಕೈಕ ಉದ್ದೇಶವಾಗಿದೆ. ಇದರಿಂದ ಎರಡೂ ಒಕ್ಕೂಟಗಳು ಕೇರಳದಲ್ಲಿ ಪರಸ್ಪರ ಸ್ಪರ್ಧಿಸುವುದರಲ್ಲಿ ಯಾವ ನ್ಯಾಯವಿದೆ. ಕೇರಳದಲ್ಲಿ ಸಿಪಿಎಂ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳ ಧೋರಣೆಯು ಒಂದೇ ಆಗಿದೆ.
ದೇಶದ ಇತರೆಡೆ ಈ ಎರಡೂ ಪಕ್ಷಗಳು ಒಟ್ಟಾಗಿ ಸ್ಪರ್ಧಿಸುವಾಗ ಕೇರಳದಲ್ಲಿ ಮಾತ್ರ ಈ ಎರಡೂ ಪಕ್ಷಗಳು ಪರಸ್ಪರ ವಿರೋಧದ ಮೂಲಕ ಸ್ಪರ್ಧಿಸುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಎಂ.ಟಿ.ರಮೇಶ್ ಅವರು ಹೇಳಿದರು.
ಕೇರಳದ ಹಲವು ಗ್ರಾಮ ಪಂಚಾಯತ್ ಮತ್ತು ನಗರ ಸಭೆಗಳಲ್ಲಿ ಕಾಂಗ್ರೆಸ್ ಮತ್ತು ಸಿಪಿಎಂ ಈಗಾಗಲೇ ಪರಸ್ಪರ ರಹಸ್ಯ ಹೊಂದಾಣಿಕೆಯಿಂದ ಬಿಜೆಪಿಯನ್ನು ಪರಾಭವಗೊಳಿಸಿ ಆಡಳಿತ ನಡೆಸುತ್ತಿವೆ. ಇದಲ್ಲದೆ ಕಳೆದ ವಿಧಾನಸಭಾ ಚುನಾವಣೆಯಲ್ಲಿಯೂ ಈ ಎರಡೂ ಪಕ್ಷಗಳು ರಹಸ್ಯ ಒಪ್ಪಂದ ನಡೆಸಿ ಬಿಜೆಪಿಯನ್ನು ಪರಾಭವಗೊಳಿಸಿದೆ. ಈ ಎರಡೂ ಪಕ್ಷಗಳ ಸ್ಪರ್ಧೆಯು ಕೇರಳದ ಜನರನ್ನು ಅಪಹಾಸ್ಯ ಮತ್ತು ವಂಚಿಸುವಂತಾಗಿದೆ ಎಂದು ಅವರು ಆರೋಪಿಸಿದರು.
ಪೆರಿಯ ಕಲೊÂàಟ್‌ನಲ್ಲಿ ನಡೆದ ಯೂತ್ ಕಾಂಗ್ರೆಸ್ ಕಾರ್ಯಕರ್ತರ ಕೊಲೆಯಲ್ಲಿ ಸಿಪಿಎಂ ನೇತಾರರ ಕೈವಾಡ ಮತ್ತು ಗೂಢಾಲೋಚನೆ ಇದೆ. ಆದರೆ ಇದನ್ನು ಬಹಿರಂಗಗೊಳಿಸುವಲ್ಲಿ ಕಾಂಗ್ರೆಸ್ ನಾಯಕತ್ವವು ಯಾವುದೇ ಆಸಕ್ತಿ ತೋರುತ್ತಿಲ್ಲ. ಕಲೊÂàಟ್ ಮಾತ್ರವಲ್ಲ ಈ ಹಿಂದೆ ಕಣ್ಣೂರಿನಲ್ಲಿ ನಡೆದ ಟಿ.ಪಿ.ಚಂದ್ರಶೇಖರನ್, ಸುಹೈಲ್ ಕೊಲೆ ಪ್ರಕರಣದ ತನಿಖೆಯಲ್ಲಿಯೂ ಕಾಂಗ್ರೆಸ್ ನಾಯಕತ್ವವು ುುತುವರ್ಜಿ ತೋರಿಸಿಲ್ಲ. ಈ ಈ ಹಿಂದೆ ನಡೆದ ಕಾಂಗ್ರೆಸ್ ಕಾರ್ಯಕರ್ತರ ಹಲವು ಕೊಲೆಗಳಲ್ಲಿ ಸಿಪಿಎಂನ ಕೆಲವರನ್ನು ಮಾತ್ರ ಬಂಧಿಸಲಾಗಿದೆ ಹೊರತು, ಆರೋಪಿ ಸ್ಥಾನದಲ್ಲಿರುವ ಸಿಪಿಎಂನ ನೇತಾರರನ್ನು ಇದುವರೆಗೆ ಬಂಧಿಸಲಾಗಿಲ್ಲ. ಇಲ್ಲಿ ನಡೆದ ಕೊಲೆಗಳ ಬಗ್ಗೆ ಕಾಂಗ್ರೆಸ್ ನಾಯಕರ ಮೊಸಳೆ ಕಣ್ಣೀರು ಕೇವಲ ರಾಜಕೀಯ ಲಾಭಕ್ಕೆ ಮಾತ್ರವಾಗಿದೆ. ಕೇರಳದಲ್ಲಿ ಕಾಂಗ್ರೆಸ್ ಪಕ್ಷವು ಆಡಳಿತ ನಡೆಸಿದ ಅವಧಿಯಲ್ಲಿ ಹಲವು ಕಾಂಗ್ರೆಸ್ ಕಾರ್ಯಕರ್ತರನ್ನು ಸಿಪಿಎಂ ಕೊಲೆಗೈದಿದೆ. ಆದರೆ ಇದುವರೆಗೆ ಓರ್ವ ಸಿಪಿಎಂ ನೇತಾರರನ್ನು ಕೂಡ ಬಂಧಿಸಲು ಕಾಂಗ್ರೆಸ್ ಆಡಳಿತಕ್ಕೆ ಸಾಧ್ಯವಾಗಿಲ್ಲ ಎಂದರು. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಎಲ್ಲರನ್ನು ಸಮಾನವಾಗಿ ಕಾಣುತ್ತಿಲ್ಲ. ಇದಕ್ಕೆ ಇತ್ತೀಚೆಗೆ ಕಾಸರಗೋಡಿಗೆ ಬಂದ ಮುಖ್ಯಮಂತ್ರಿ ಕೊಲೆ ನಡೆದ ಕಲೊÂàಟ್‌ಗೆ ಹೋಗದಿರುವುದು ನಿದರ್ಶನವಾಗಿದೆ. ಎಂದರು.
ಮತ್ತೆ ಬೇಕು ಮೋದಿ ಆಡಳಿತ, ಕೇರಳವು ಮೋದಿ ಜತೆ ಎಂಬ ಘೋಷಣೆಯೊಂದಿಗೆ, ಶಬರಿಮಲೆ ಧ್ವಂಸಗೊಳಿಸುವ, ಅಭಿವೃದ್ಧಿ ಕುಂಠಿತಕ್ಕೆ ಕಾರಣಕರ್ತರಾದ ಸರಕಾರದ ನೀತಿಗಳಿಗೆ ಹಾಗೂ ಅಕ್ರಮ ರಾಜಕೀಯ ವಿರುದ್ಧವಾಗಿ ಬಿಜೆಪಿ ನೇತೃತ್ವದಲ್ಲಿ ನಾಲ್ಕು ವಲಯಗಳಲ್ಲಿ ಕೇರಳ ಪರಿವರ್ತನಾ ಯಾತ್ರೆಯು ಪ್ರಾರಂಭಗೊಂಡು ಮಾರ್ಚ್ 10ರಂದು ಸಮಾಪ್ತಿಗೊಳ್ಳುವುದು. ಂದು ಎಂ.ಟಿ.ರಮೇಶ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ , ನ್ಯಾಯವಾದಿ ಕೆ.ಶ್ರೀಕಾಂತ್ ಉಪಸ್ಥಿತರಿದ್ದರು.
ಪಕ್ಷಗಳ ನಿಲುವು ಸಮಾನಪುಲ್ವಾಮಾದಲ್ಲಿ ನಡೆದ ಉಗ್ರರ ಆತ್ಮಾಹುತಿ ದಾಳಿ ವಿಷಯಕಾಂಗ್ರೆಸ್ ಪಕ್ಷವು ಕೇಂದ್ರ ಸರಕಾರವನ್ನು ದೂಷಿಸುತ್ತಿದೆ. ಇದೇ ವಿಷಯದಲ್ಲಿ ಸಿಪಿಎಂ ಕೂಡ ಕೇಂದ್ರ ಸರಕಾರವನ್ನು ದೂಷಿಸುತ್ತಿದ್ದು, ತನ್ಮೂಲಕ ಈ ವಿಚಾರದಲ್ಲಿ ಈ ಎರಡೂ ಪಕ್ಷಗಳ ನಿಲುವು ಸಮಾನವಾಗಿದೆ. ಈ ನಡುವೆ ಉಗ್ರರ ನೆಲೆಗಳಿಗೆ ನಡೆದ ಆಕ್ರಮಣವು ಮುಂದಿನ ಲೋಕಸಭಾ ಚುನಾವಣೆಯನ್ನು ಬುಡಮೇಲುಗೊಳಿಸುವ ಬಿಜೆಪಿಯ ಕುತಂತ್ರವಾಗಿದೆ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಈಗಾಗಲೇ ಆರೋಪಿಸಿದ್ದು, ಉಮ್ಮನ್ ಚಾಂಡಿ ಕೂಡ ಈ ಹೇಳಿಕೆಯನ್ನು ಬೆಂಬಲಿಸಿದ್ದಾರೆ. ವಾಯುಪಡೆಯು ನಡೆಸಿದ ಆಕ್ರಮಣದಲ್ಲಿ ಕಾಂಗ್ರೆಸ್ ಪಕ್ಷವು ಸಂಶಯ ತೋರಿದ್ದು ಖಂಡನಾರ್ಹವಾಗಿದೆ. ಕಾಂಗ್ರೆಸ್‌ನ ಹೇಳಿಕೆಯು ಪಾಕಿಸ್ತಾನಕ್ಕೆ ಸಹಾಯ ಒದಗಿಸಲು ಮತ್ತು ಅವರನ್ನು ಸಂತೋಷಪಡಿಸಲು ಮಾತ್ರವಾಗಿದೆ ಎಂದ ಎಂ.ಟಿ.ರಮೇಶ್, ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.