ಅಭಿನಂದನ್‌ಗೆ ಪಾಪಿಸ್ಥಾನ ನೀಡಿದ್ದ ಚಿತ್ರಹಿಂಸೆ ಹೇಗಿತ್ತು ಗೊತ್ತಾ ?
Team Udayavani, Mar 7, 2019, 10:49 AM IST
ಹೊಸದಿಲ್ಲಿ : ಅಂತಾರಾಷ್ಟ್ರೀಯ ರಾಜತಾಂತ್ರಿಕ ಒತ್ತಡಕ್ಕೆ ಮಣಿದು ಪಾಕಿಸ್ಥಾನ ಕೊನೆಗೂ ತನ್ನ ವಶದಲ್ಲಿದ್ದ ಭಾರತೀಯ ವಾಯು ಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಬಿಡುಗಡೆ ಮಾಡಿತ್ತಾದರೂ, ಆತ ತನ್ನ ವಶದಲ್ಲಿದ್ದ ಮೊದಲ 24 ತಾಸು ಕಾಲ ಆತನಿಗೆ ಅಪಾರ ಹಿಂಸೆ ನೀಡಿ ಮಾನಸಿಕವಾಗಿ ಆತನನ್ನು ಕುಗ್ಗಿಸಿ, ಆತನಿಂದ ವಾಯು ಪಡೆಯ ಅತ್ಯಮೂಲ್ಯ ಮಾಹಿತಿಗಳನ್ನು ಪಡೆಯುವ ವಿಫಲ ಯತ್ನ ಮಾಡಿತ್ತು ಎಂಬುದರ ನೈಜ ಚಿತ್ರಣವನ್ನು ಹಿಂದುಸ್ಥಾನ್ ಟೈಮ್ಸ್ ಇದೀಗ ವರದಿ ಮಾಡಿದೆ.
ಭಾರತೀಯ ವಾಯು ಪಡೆಯು ದಾಳಿ ವೇಳೆ ಬಳಸುತ್ತಿದ್ದ ಅತ್ಯಧಿಕ ಭದ್ರತೆಯ ರೇಡಿಯೋ ತರಂಗಾಂತರಗಳ ಮಾಹಿತಿ, ಭಾರತೀಯ ಸೇನೆಯ ನಿಯೋಜನೆ ಮತ್ತು ಅವುಗಳ ನಿಖರ ತಾಣ, ಅತಿ ಸೂಕ್ಷ್ಮ ಸೇನಾ ಸಾರಿಗೆ ಮಾಹಿತಿ, ದಾಳಿಗೆ ಭಾರತ ಸಿದ್ಧಪಡಿಸಿರುವ ಫೈಟರ್ ಜೆಟ್‌ಗಳ ನಿಖರ ಸಂಖ್ಯೆ ಇತ್ಯಾದಿಗಳ ರಹಸ್ಯ ಮಾಹಿತಿಯನ್ನು ಅಭಿನಂದನ್ ಅವರಿಂದ ಪಡೆಯಲು ಪಾಕ್ ಸೇನೆ ಇನ್ನಿಲ್ಲದ ರೀತಿಯ ಮಾನಸಿಕ ಹಿಂಸೆಯನ್ನು ಆತನಿಗೆ ನೀಡಿತ್ತು.
ಅಭಿನಂದನ್ ಅವರಿಂದ IAF ರೇಡಿಯೋ ತರಂಗಾಂತರ ಮಾತ್ರವಲ್ಲದೆ ಇನ್ನಿತರ ಹಲವು ರಹಸ್ಯ ಮಾಹಿತಿಗಳನ್ನು ಪಡೆಯಲು ಪಾಕ್ ಸೇನೆ ಆತನಿಗೆ ದಿನಪೂರ್ತಿ ನಿಂತಿರುವ ಶಿಕ್ಷೆ ನೀಡಿತು. ಮಾತ್ರವಲ್ಲದೆ ಕಿವಿ ತಮಟೆ ಕಿತ್ತುಹೋಗುವಷ್ಟು ದೊಡ್ಡ ಸದ್ದಿನ ಸಂಗೀತವನ್ನು ಆತ ಬಲವಂತದಿಂದ ಕೇಳುವಂತೆ ಮಾಡಿತು. ಜತೆಗೆ ದೈಹಿಕವಾಗಿ ಆತನ ಮೇಲೆ ಹಲ್ಲೆ ನಡೆಸಲಾಯಿತು.
ವರ್ಧಮಾನ್ ಅವರು ಪಾಕ್ ಕಪಿಮುಷ್ಟಿಯಿಂದ ಬಿಡುಗಡೆಯಾಗಿ ಭಾರತಕ್ಕೆ ಬಂದ ಬಳಿಕ ಮಿಲಿಟರಿ ಆಸ್ಪತ್ರೆಯಲ್ಲಿನ “ಕೂಲಿಂಗ್ ಡೌನ್’ ಪ್ರಕ್ರಿಯೆಯಲ್ಲಿ ತನ್ನ ಹಿರಿಯ ಅಧಿಕಾರಿಗಳಿಗೆ ತಾನು ಪಾಕ್ ಸೇನೆಯ ವಶದಲ್ಲಿದ್ದಾಗ ಅನುಭವಿಸಿದ್ದ ನರಕ ಯಾತನೆಯ ವಿವರಗಳನ್ನು ತಿಳಿಸಿದರು ಎಂದು ಹಿಂದುಸ್ಥಾನ್ ಟೈಮ್ಸ್ ವರದಿ ಮಾಡಿದೆ.
ಆದರೆ ವೀರ ಯೋಧ, ದೃಢ ಚಿತ್ತದ, ಪೈಲಟ್ ಅಭಿನಂದನ್ ಅವೆಲ್ಲವನ್ನೂ ಸಹಿಸಿಕೊಂಡು ಶತ್ರು ಸೇನೆಗೆ ಯಾವುದೇ ಮಾಹಿತಿಯನ್ನು ಬಿಟ್ಟುಕೊಡದಿರುವಲ್ಲಿ ಯಶಸ್ವಿಯಾದರು ಎಂದು ಹಿಂದುಸ್ಥಾನ್ ಟೈಮ್ಸ್ ವರದಿ ತಿಳಿಸಿದೆ.
ಅಭಿನಂದನ್ ಚಲಾಯಿಸುತ್ತಿದ್ದ ಮಿಗ್ 21 ಬೈಸನ್ ಫೈಟರ್ ಜೆಟ್ ವಿಮಾನವನ್ನು ಪಾಕ್ ವಾಯು ಪಡೆ ಎಲ್‌ಓಸಿಯಲ್ಲಿ ಭಾರತೀಯ ವಾಯು ಪಡೆಯೊಂದಿಗಿನ ಡಾಗ್ ಫೈಟ್ ನಲ್ಲಿ ಹೊಡೆದುರುಳಿಸಿತ್ತು. ಅಭಿನಂದನ್ ಪ್ಯಾರಾಶೂಟ್ ಮೂಲಕ ಯಶಸ್ವಿಯಾಗಿ ತನ್ನ ವಿಮಾನದಿಂದ ಹೊರಜಿಗಿದು ಪ್ರಾಣ ಉಳಿಸಿಕೊಂಡರೂ ದುರದೃಷ್ಟವಶಾತ್ ಪಿಓಕೆಯಲ್ಲೇ ಬಿದ್ದು ಪಾಕ್ ಸೇನೆಯ ವಶವಾದರು.
ಶತ್ರು ಸೇನೆಯ ವಶವಾದ ಸಂದರ್ಭದಲ್ಲಿ ಮೊದಲ 24 ತಾಸುಗಳ ಅವಧಿಯಲ್ಲಿ ಕೊಡಲ್ಪಡುವ ಯಾವುದೇ ರೀತಿಯ ಚಿತ್ರ ಹಿಂಸೆಯನ್ನು ಹೇಗಾದರೂ ಸಹಿಸಿಕೊಂಡು, ಐಎಎಫ್ ವಾಯು ದಾಳಿಗಾಗಿ ಬಳಸುವ ಅತ್ಯಧಿಕ ಭದ್ರತೆಯ ರೇಡಿಯೋ ತರಂಗಾಂತರಗಳ ಮಾಹಿತಿಯನ್ನು ಶತ್ರುಗಳಿಗೆ ನೀಡದಿರುವಂತೆ ಪೈಲಟ್‌ಗಳಿಗೆ ತರಬೇತಿ ನೀಡಿರುತ್ತದೆ. ಶತ್ರು ಸೇನೆಗೆ ಭಾರತೀಯ ಪೈಲಟ್ ವಶವಾದ 24 ತಾಸಿನ ಬಳಿಕದಲ್ಲಿ ರೇಡಿಯೋ ತರಂಗಾಂತರಗಳನ್ನು ಬದಲಾಯಿಸುವುದು ಸಾಧ್ಯವಿರುತ್ತದೆ ಎನ್ನುವುದೇ ಇಲ್ಲಿ ಬಹು ಮುಖ್ಯ ಸಂಗತಿಯಾಗಿರುತ್ತದೆ ಎಂದು ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.