ಅಜೇಯ ಕರ್ನಾಟಕಕ್ಕೆ ಮುಂಬಯಿ ಸವಾಲು
Team Udayavani, Mar 8, 2019, 12:30 AM IST
ಇಂದೋರ್: ಲೀಗ್ ಹಂತದಲ್ಲಿ ಏಳೂ ಪಂದ್ಯ ಗೆದ್ದು ಅಜೇಯವಾಗಿರುವ ಮನೀಷ್ ಪಾಂಡೆ ನೇತೃತ್ವದ ಕರ್ನಾಟಕ ತಂಡ “ಸಯ್ಯದ್ ದ್ ಮುಷ್ತಾಕ್ ಅಲಿ’ ಟಿ20 ಕ್ರಿಕೆಟ್ ಕೂಟದ ಸೂಪರ್ ಲೀಗ್ ಹಂತದ ಪಂದ್ಯಕ್ಕೆ ಅಣಿಯಾಗಿದೆ. ಶುಕ್ರವಾರ ನಡೆಯಲಿರುವ ಮೊದಲ ಸೆಣಸಾಟದಲ್ಲಿ ರಾಜ್ಯ ತಂಡ ಪ್ರಬಲ ಮುಂಬಯಿ ಸವಾಲನ್ನು ಎದುರಿಸಲಿದೆ.
ರಾಜ್ಯ ತಂಡ “ಡಿ’ ಗುಂಪಿನಲ್ಲಿ ಸ್ಥಾನ ಪಡೆದಿತ್ತು. ಲೀಗ್‌ನಲ್ಲಿ ಆಡಿದ ಎಲ್ಲ ಪಂದ್ಯಗಳಲ್ಲೂ ಜಯಿಸಿತ್ತು. ಸೂಪರ್ ಲೀಗ್‌ನಲ್ಲಿ “ಬಿ’ ವಿಭಾಗದಲ್ಲಿರುವ ಕರ್ನಾಟಕ 4 ಪಂದ್ಯಗಳನ್ನು ಆಡಬೇಕಿದೆ. ಉಳಿದ ಎದುರಾಳಿಗಳೆಂದರೆ ವಿದರ್ಭ, ದಿಲ್ಲಿ ಮತ್ತು ಉತ್ತರಪ್ರದೇಶ. “ಎ’ ವಿಭಾಗದಲ್ಲಿ ಗುಜರಾತ್, ಝಾರ್ಖಂಡ್, ಮಹಾರಾಷ್ಟ್ರ, ಬಂಗಾಲ ಮತ್ತು ರೈಲ್ವೇಸ್. ಪ್ರತೀ ಗುಂಪಿನ ಅಗ್ರಸ್ಥಾನಿ ತಂಡ ಫೈನಲ್‌ಗೆ ಪ್ರವೇಶ ಪಡೆಯಲಿದೆ.
ಬಲಿಷ್ಠ ಮನೀಷ್ ಪಡೆ
ಲೀಗ್‌ನಲ್ಲಿ ನೀಡಿರುವ ಅಮೋಘ ಪ್ರದರ್ಶನ ಕಂಡಾಗ ಕರ್ನಾಟಕ ಬಲಿಷ್ಠ ತಂಡ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ನಾಯಕ ಪಾಂಡೆ ಉತ್ತಮ ಫಾರ್ಮ್ನಲ್ಲಿದ್ದಾರೆ. ಆರಂಭಿಕ ಬ್ಯಾಟ್ಸ್‌ಮನ್ ರೋಹನ್ ಕದಮ್ ಭಾರೀ ಭರವಸೆ ಮೂಡಿಸಿದ್ದಾರೆ. ಕರುಣ್ ನಾಯರ್, ಮಾಯಾಂಕ್ ಅಗರ್ವಾಲ್ ಕೂಡ ತಾರಾ ಬ್ಯಾಟ್ಸ್‌ಮನ್ ಆಗಿದ್ದಾರೆ.
ಬೌಲಿಂಗ್ ವಿಭಾಗದಲ್ಲಿ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ ಅನುಭವಿಗಳಾದ ವಿನಯ್ ಕುಮಾರ್, ಅಭಿಮನ್ಯು ಮಿಥುನ್ ಇದ್ದಾರೆ. ಸ್ಪಿನ್ ವಿಭಾಗದಲ್ಲಿ ಶ್ರೇಯಸ್ ಗೋಪಾಲ್ ಈಗಾಗಲೇ ಎದುರಾಳಿಗೆ ನಡುಕ ಹುಟ್ಟಿಸಿದ್ದಾರೆ. ಒಟ್ಟಾರೆ ರಾಜ್ಯ ತಂಡ ಸಂಘಟಿತ ಪ್ರದರ್ಶನ ನೀಡಲು ತುದಿಗಾಲಲ್ಲಿ ನಿಂತಿದೆ. ಆದರೆ ಟಿ20 ಪಂದ್ಯವೊಂದು ತಿರುವು ಪಡೆದುಕೊಳ್ಳಲು ಒಂದೇ ಒಂದು ಓವರ್ ಅಥವಾ ಒಬ್ಬ ಆಟಗಾರ ಸಾಕು ಎಂಬ ಎಚ್ಚರಿಕೆ ಅತ್ಯಗತ್ಯ.
ಅಜಿಂಕ್ಯ ರಹಾನೆ ಗಾಯಾಳು
ಸೂಪರ್ ಲೀಗ್ ಹಂತದ ಆರಂಭಕ್ಕೂ ಮೊದಲೇ ಮುಂಬಯಿ ತಂಡಕ್ಕೆ ಗಾಯದ ಸಮಸ್ಯೆ ಎದುರಾಗಿದೆ. ತಂಡದ ನಾಯಕನೂ ಪ್ರಮುಖ ಬ್ಯಾಟ್ಸ್‌ಮನ್ ಕೂಡ ಆಗಿರುವ ಅಜಿಂಕ್ಯ ರಹಾನೆ ಗಾಯಗೊಂಡು ಟೂರ್ನಿಯಿಂದ ಹೊರಬಿದ್ದಿದ್ದಾರೆ. ಅವರು ಕಾಲು ನೋವಿಗೊಳಗಾಗಿದ್ದಾರೆ. ರಹಾನೆ ಅನುಪಸ್ಥಿತಿಯಲ್ಲಿ ಶ್ರೇಯಸ್ ಅಯ್ಯರ್ ತಂಡವನ್ನು ಮುನ್ನಡೆಸಲಿದ್ದಾರೆ.
ಮುಂಬಯಿ ರಣಜಿಯಲ್ಲಿ ಕಳಪೆ ಪ್ರದರ್ಶನ ನೀಡಿತ್ತು. ಆದರೆ ಈ ಟಿ20 ಕೂಟದ ಸಿ ಗುಂಪಿನಲ್ಲಿ ಅಗ್ರಸ್ಥಾನಿಯಾಗಿ ಸೂಪರ್ ಲೀಗ್ ಹಂತ ಪ್ರವೇಶಿಸಿತ್ತು. ಅಯ್ಯರ್, ಸೂರ್ಯಕುಮಾರ್ ಯಾದವ್ ಪ್ರಮುಖ ಬ್ಯಾಟ್ಸ್‌ಮನ್‌ಗಳಾಗಿದ್ದಾರೆ. ಇಬ್ಬರೂ ಐಪಿಎಲ್‌ನಲ್ಲಿ ಸಾಕಷ್ಟು ಪಳಗಿದ್ದಾರೆ. ಬೌಲಿಂಗ್‌ನಲ್ಲಿ ಧವಳ್ ಕುಲಕರ್ಣಿ, ತುಷಾರ್ ದೇಶಪಾಂಡೆ ರಾಜ್ಯ ಬ್ಯಾಟ್ಸ್‌ಮನ್‌ಗಳಿಗೆ ಅಪಾಯಕಾರಿಯಾಗಿ ಪರಿಣಮಿಸುವ ಸಾಧ್ಯತೆ ಇದೆ.
ತಂಡಗಳು
ಕರ್ನಾಟಕ: ಮನೀಷ್ ಪಾಂಡೆ (ನಾಯಕ), ಕರುಣ್ ನಾಯರ್, ಮಾಯಾಂಕ್ ಅಗರ್ವಾಲ್, ರೋಹನ್ ಕದಮ್, ಬಿ.ಆರ್. ಶರತ್, ಜೆ. ಸುಚಿತ್, ಶ್ರೇಯಸ್ ಗೋಪಾಲ್, ಆರ್. ವಿನಯ್ ಕುಮಾರ್, ಪ್ರಸಿದ್ಧ್ ಕೃಷ್ಣ, ಅಭಿಮನ್ಯು ಮಿಥುನ್, ಕೆ.ಸಿ. ಕಾರಿಯಪ್ಪ, ವಿ. ಕೌಶಿಕ್, ಕೆ.ವಿ. ಸಿದ್ಧಾರ್ಥ್, ಮನೋಜ್ ಬಾಂಡಗೆ, ಲುವ್ನಿàತ್ ಸಿಸೋಡಿಯಾ.
ಮುಂಬಯಿ: ಶ್ರೇಯಸ್ ಅಯ್ಯರ್ (ನಾಯಕ), ತುಷಾರ್ ದೇಶಪಾಂಡೆ, ಪೃಥ್ವಿ ಶಾ, ಸೂರ್ಯಕುಮಾರ್ ಯಾದವ್, ಸಿದ್ದೇಶ್ ಲಾಡ್, ಶುಭಂ ರಂಜನೆ, ಆದಿತ್ಯ ತಾರೆ, ಶಾದೂìಲ್ ಠಾಕೂರ್, ಶಮ್ಸ್ ಮುಲಾನಿ, ಧವಳ್ ಕುಲಕರ್ಣಿ, ಆಕಾಶ್ ಪಾರ್ಕರ್, ಧ್ರುಮಿಲ್ ಮಟ್ಕರ್, ಏಕನಾಥ್ ಕೇರ್ಕರ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
Shakti scheme; ಪುರುಷರಿಗೆ ಉಚಿತ ಪ್ರಯಾಣ ಸೌಲಭ್ಯ ಇಲ್ಲ: ರಾಮಲಿಂಗಾರೆಡ್ಡಿ
CBSE: ಶೇ.15 ಪಠ್ಯಕ್ರಮ ಕಡಿತ, ತೆರೆದ ಪುಸ್ತಕ ಮಾದರಿ ಪರೀಕ್ಷೆ ಇಲ್ಲ: ಸಿಬಿಎಸ್‌ಇ
B Z Zameer ahmed khan ಹೇಳಿಕೆ ಹಿಂದೆ ಎಚ್‌ಡಿಕೆಯದ್ದೇ ಕೈವಾಡ ಎಂದ ಕೈ ಶಾಸಕ
Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.