ಕಾನೂನು ಸಮರದ ನಡುವೆ ಯಶಸ್ವಿ ಕಂಬಳ
Team Udayavani, Mar 8, 2019, 12:30 AM IST
ಮಂಗಳೂರು: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಋತುವಿನ ಕಂಬಳ ಮಾ.16ಕ್ಕೆ ಮುಕ್ತಾಯವಾಗಲಿದೆ. ನಾನಾ ರೀತಿಯ ಅಡೆತಡೆ, ಕಾನೂನು ಸಮರದ ನಡುವೆಯೂ ಕಂಬಳ ಈ ಬಾರಿ ನಿರ್ವಿಘ್ನವಾಗಿ ಮುಕ್ತಾಯಗೊಳ್ಳುತ್ತಿರುವುದು ಅಭಿಮಾನಿಗಳು ಹಾಗೂ ಆಯೋಜಕರಲ್ಲಿ ಸಮಾಧಾನ ಮೂಡಿಸಿದೆ.
ಈ ಋತುವಿನ ಕಂಬಳ ನವೆಂಬರ್‌ನಲ್ಲಿ ಆರಂಭಗೊಂಡಿದ್ದು, ಇನ್ನು ಬಂಗಾಡಿ ಹಾಗೂ ವೇಣೂರು ಕಂಬಳ ಮಾತ್ರ ಬಾಕಿ ಉಳಿದಿವೆ. ಮಾ. 9ರಂದು ಬಂಗಾಡಿಯಲ್ಲಿ ಹಾಗೂ ಮಾ.16ರಂದು ವೇಣೂರಿನಲ್ಲಿ ನಿಗದಿಯಾಗಿವೆ. ಆರು ತಿಂಗಳ ಬಳಿಕ ಮತ್ತೆ ನವೆಂಬರ್‌ನಲ್ಲಿ ಮುಂದಿನ ಕಂಬಳ ಋತು ಆರಂಭಗೊಳ್ಳಲಿದೆ.
ಜಲ್ಲಿಕಟ್ಟು ಹಾಗೂ ಕಂಬಳ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳು ವಿಚಾರಣೆಗೆ ಸಂವಿಧಾನ ಪೀಠಕ್ಕೆ ವರ್ಗಾವಣೆಗೊಂಡಿವೆ. ಆದರೆ ನ್ಯಾಯಾಲಯ ಇದರಲ್ಲಿ ಕಂಬಳ ಅರ್ಜಿಯನ್ನು ಮಾತ್ರ ದ್ವಿಸದಸ್ಯ ಪೀಠಕ್ಕೆ ವರ್ಗಾಯಿಸಿ ಹಿಂದಿನ ನಿಗದಿತ ದಿನಾಂಕದ ಬದಲು ಮುಂಚಿತವಾಗಿಯೇ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಳ್ಳಲು ಜ.25ಕ್ಕೆ ಅಂದಾಜು ದಿನಾಂಕ ಗೊತ್ತು ಮಾಡಿತ್ತು. ಆದರೆ ಸದ್ಯಕ್ಕೆ ಆ ಬಗ್ಗೆ ಇನ್ನೂ ಯಾವುದೇ ತೀರ್ಮಾನ ಆಗಿಲ್ಲ.
ಮುಂದುವರಿದ ಕಾನೂನು ಸಮರ
ಈ ನಡುವೆ ಪ್ರಾಣಿ ಹಿಂಸೆ ತಡೆ (ಕರ್ನಾಟಕ ತಿದ್ದುಪಡಿ) ಪರಿಷ್ಕೃತ ಕಾನೂನು ಜಾರಿಗೊಂಡಿದ್ದರೂ ಕಂಬಳ ವಿರುದ್ಧ ಪ್ರಾಣಿದಯಾ ಸಂಘಟನೆಗಳಿಂದ ಒಂದಲ್ಲ ಒಂದು ರೀತಿಯ ಕಾನೂನು ಸಮರ ಮುಂದುವರಿದಿದೆ. ಇದರಿಂದಾಗಿ, ಕಂಬಳ ಕ್ರೀಡೆ ಮೇಲೆ ಇರುವ ಆತಂಕದ ಕರಿಛಾಯೆ ಇನ್ನೂ ಪೂರ್ಣ ವಾಗಿ ನಿವಾರಣೆಯಾಗಿಲ್ಲ. ಕಂಬಳಕ್ಕೆ ತಡೆ ಕೋರಿ ಪೆಟಾ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಬಾಕಿ ಇದೆ.ಮಾ.16ರ ವೇಳೆಗೆ ನ್ಯಾಯಾಲಯದಲ್ಲಿ ವಿಚಾರಣೆಗೆ ಬರುವ ಸಾಧ್ಯತೆಯಿದೆ ಎನ್ನಲಾಗಿದೆ.
ಬೆತ್ತ ಬಳಸದ ಪ್ರಯೋಗ
ಕಂಬಳದಲ್ಲಿ ಪ್ರಾಣಿಹಿಂಸೆ ಮಾಡಲಾಗುತ್ತಿದೆ ಎಂಬ ಪೆಟಾದ ಆರೋಪಗಳ ಹಿನ್ನೆಲೆಯಲ್ಲಿ ಬೆತ್ತ ಹಿಡಿ ಯದೆ ಕೋಣಗಳನ್ನು ಓಡಿಸುವ ಪ್ರಯೋಗವೊಂದನ್ನು ಈ ಕಂಬಳ ಋತುವಿನಲ್ಲಿ ಮಾಡಲಾಗಿದೆ.ಮೂಡುಬಿದಿರೆ, ಕಕ್ಕೆಪದವು ಹಾಗೂ ಪೈವಳಿಕೆ ಕಂಬಳಗಳಲ್ಲಿ ಕೋಣಗಳನ್ನು ಓಡಿಸುವಾಗ ಬೆತ್ತ ಬಳಕೆ ಮಾಡಿರಲಿಲ್ಲ. ಸುಮಾರು 4 ವರ್ಷಗಳ ಹಿಂದೆ ಕಟಪಾಡಿ ಕಂಬಳದಲ್ಲಿ ಈ ರೀತಿಯ ಪ್ರಯೋಗ ನಡೆದಿತ್ತು. ಸ್ಪಂಜ್‌ನಿಂದ ಆವರಿಸಿದ ಬೆತ್ತ ರೂಪಿಸಿದ್ದರೂ ಇದನ್ನು ಕೋಣಗಳ ಮೇಲೆ ಸವರಿದಾಗ ದೊಡ್ಡ ಶಬ್ದ ಬರುವುದರಿಂದ ಬಳಕೆ ಮಾಡಿರಲಿಲ್ಲ.
ಈ ಋತುವಿನ ಕಂಬಳಗಳು ನಿರಾತಂಕವಾಗಿ ನಡೆಯುತ್ತ ಬಂದಿದ್ದು,ಇನ್ನೆರಡು ಕಂಬಳಗಳು ಬಾಕಿ ಇವೆ.ಮಾ.16ಕ್ಕೆ ವೇಣೂರು ಕಂಬಳದೊಂದಿಗೆ ಈ ಋತು ಮುಕ್ತಾಯವಾಗಲಿದೆ. ತುಳುನಾಡಿನ ಜಾನಪದ ಕ್ರೀಡೆ ಕಂಬಳ ಯಾವುದೇ ಅಡೆತಡೆ ಇಲ್ಲದೆ ಮಂದುವರಿಯಲಿದೆ ಎಂಬ ದೃಢ ವಿಶ್ವಾಸ ನಮ್ಮದು.
– ಪಿ.ಆರ್. ಶೆಟ್ಟಿ
ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Mangaluru: ಗಾಂಜಾ ಸೇವನೆ; ಯುವಕನ ಬಂಧನ
Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್ ಬಾಟಲಿ ಸದ್ದು
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.