ಕೈದಿ ಮೇಲೆ ಸಹ ಕೈದಿಗಳಿಂದ ಗಂಭೀರ ಹಲ್ಲೆ
Team Udayavani, Mar 8, 2019, 1:00 AM IST
ಮಂಗಳೂರು: ಕೊಡಿಯಾಲ್‌ಬೈಲಿನ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯೋರ್ವನಿಗೆ ಸಹಕೈದಿಗಳ ತಂಡ ಗುರುವಾರ ಬೆಳಗ್ಗೆ ಗಂಭೀರ ಹಲ್ಲೆ ನಡೆಸಿದೆ.
ಬಿಡಿಸಲು ಹೋದ ಜೈಲು ಅಧೀಕ್ಷಕ ಮತ್ತು ಹಾಗೂ ಸಿಬಂದಿ ಮೇಲೂ ಹಲ್ಲೆ ಮಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಬಂದರು ಠಾಣೆಯಲ್ಲಿ ದಾಖಲಾದ ಪೋಕೊÕ ಪ್ರಕರಣದ ಆರೋಪಿ ಅಸ್ಸಾಂ ಮೂಲದ ಅಕಲಸುದ್ದೀನ್ ಬುಬುìಹಯ್ಯ (35) ಗಾಯಾಳು.
ಕಬ್ಬಿಣದ ರಿಂಗ್ ಹಾಗೂ ಚೂಪಾದ ಸ್ಟೀಲ್ ಚಮಚದಿಂದ ತಿವಿದ ಪರಿಣಾಮ ಈತನ ತಲೆ ಹಾಗೂ ಬೆನ್ನಿನ ಭಾಗಕ್ಕೆ ಗಂಭೀರ ಗಾಯವಾಗಿದೆ. ಆತನನ್ನು ವೆನಾÉಕ್ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ದಾಖಲಿಸಲಾಗಿದೆ.
ಪೋಕೊÕ ಪ್ರಕರಣದ ಸಂತ್ರಸ್ತ ಬಾಲಕನ ಸಂಬಂಧಿ ಮಹಮ್ಮದ್ ಹಫೀಝ್ ಹಾಗೂ ಆತನ ಸಹಚರರಾದ ಜೀತು ಶಾಜಿ, ಮಹಮ್ಮದ್ ನಝೀರ್ ಮತ್ತು ಉಮ್ಮರ್ ಫಾರೂಕ್ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಸಂದರ್ಭ ಜೈಲು ಅಧೀಕ್ಷಕ ಚಂದನ್ ಜೆ.ಪಾಟೀಲ್ ಮತ್ತು ಸಿಬಂದಿ ಹಲ್ಲೆಯನ್ನು ತಡೆಯಲು ಯತ್ನಿಸಿದ್ದರು. ಆಗ ಅವರಿಗೂ ಬೈದು ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಜೈಲು ಅಧೀಕ್ಷಕರು ನೀಡಿದ ದೂರಿನಂತೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ಹಿನ್ನೆಲೆ
ಅಕಲಸುದ್ದೀನ್ ಮಂಗಳೂರಿನಲ್ಲಿ ಕಟ್ಟಡ ಕಾಮಗಾರಿ ನಿರ್ವಹಿಸುತ್ತಿದ್ದ. ಕುದ್ರೋಳಿ ಸಮೀಪ ಬಾಡಿಗೆ ಮನೆಯಲ್ಲಿದ್ದ ಈತ ಪಕ್ಕದ ಮನೆಯ 7 ವರ್ಷ ಹಾಗೂ 17 ವರ್ಷದ ಬಾಲಕರನ್ನು ಚಾಕ್ಲೇಟ್ ನೆಪದಲ್ಲಿ ಕರೆಸಿ ಲೈಂಗಿಕ ಕಿರುಕುಳ ನೀಡುತ್ತಿದ್ದ. ಬುಧವಾರವೂ ಈತ ಇದೇ ರೀತಿ ಬಾಲಕನನ್ನು ಕರೆದು ಮನೆಯ ಬಾಗಿಲು ಹಾಕಿದಾಗ ನೋಡಿದ ಬಾಲಕನ ತಾಯಿ ಸ್ಥಳೀಯರಿಗೆ ಸುದ್ದಿ ಮುಟ್ಟಿಸಿದ್ದರು. ಅಕ್ಕಪಕ್ಕದವರು ಸೇರಿ ಬಾಗಿಲು ಒಡೆದು ಒಳ ಪ್ರವೇಶಿಸಿದಾಗ ಅಕಲಸುದ್ದೀನ್ ತಪ್ಪಿಸಿಕೊಂಡಿದ್ದ. ವಿಷಯ ತಿಳಿದ ಬಂದರು ಠಾಣಾ ಇನ್ಸ್‌ಪೆಕ್ಟರ್ ಗೋವಿಂದರಾಜು ಮತ್ತು ಸಿಬಂದಿ ಸ್ಥಳಕ್ಕೆ ತೆರಳಿ ಆತನಿಗಾಗಿ ಶೋಧ ನಡೆಸಿ, ರಾತ್ರಿ ಹೊತ್ತು ಬಂಧಿಸಿದ್ದರು.
ಸಂತ್ರಸ್ತ ಬಾಲಕರ ಸಂಬಂಧಿ ಮಹಮ್ಮದ್ ಹಫೀಝ್ ಈ ಮೊದಲೇ ಬೇರೆ ಯಾವುದೋ ಪ್ರಕರಣಕ್ಕೆ ಸಂಬಂಧಿಸಿ ಜೈಲು ಸೇರಿದ್ದು, ಅಕಲಸುದ್ದೀನ್ ಜೈಲಿಗೆ ಬಂದಿರುವ ಬಗ್ಗೆ ಆತನಿಗೆ ಮಾಹಿತಿ ಲಭಿಸಿತ್ತು. ಗುರುವಾರ ಬೆಳಗ್ಗೆ ಮೊಹಮ್ಮದ್ ಸಹ ಕೈದಿಗಳ ಜತೆ ಸೇರಿ ಹಲ್ಲೆ ನಡೆಸಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್
Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ
Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ
EVM Issue: ಮತಯಂತ್ರ ತಿರುಚಿದ್ದು ಸಾಬೀತಿಗೆ ನನ್ನ ಬಳಿ ಪುರಾವೆಗಳಿಲ್ಲ: ಕಾರ್ತಿ ಚಿದಂಬರಂ
Kasaragod;ತೀವ್ರ ತಲೆನೋವು: ವಿದ್ಯಾರ್ಥಿನಿ ಸಾ*ವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.