ಬೆದ್ರಾಳ-ಮುಕ್ವೆ: ರಸ್ತೆ ಬದಿ ಕಸದ ರಾಶಿ


Team Udayavani, Mar 8, 2019, 6:29 AM IST

8-march-8.jpg

ನರಿಮೊಗರು: ಪುತ್ತೂರು ತಾಲೂಕಿನ ಕೆಲವೆಡೆ ರಸ್ತೆಯ ಪಕ್ಕದಲ್ಲಿ ಸದಾ ಕಾಣಸಿಗುವ ಕಸದ ರಾಶಿಗಳು ಸ್ವಚ್ಛ ಭಾರತ್‌ ಅಭಿಯಾನದ ಆಶಯಗಳನ್ನು ಅಣಕಿಸುವಂತಿವೆ. ನರಿಮೊಗರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಮುಕ್ವೆ- ಬೆದ್ರಾಳ ರಸ್ತೆ ಬದಿಯಲ್ಲಿ ಕಸದ ರಾಶಿಗಳು ಸಮಸ್ಯೆಯನ್ನು ಸೃಷ್ಟಿಸಿದೆ.

ದೊಡ್ಡ ದೊಡ್ಡ ಕಸ ತುಂಬಿದ ಪ್ಲಾಸ್ಟಿಕ್‌ ಚೀಲಗಳು, ಗೋಣಿಗಳು ಬೆಳಗಾಗುವುದರ ಒಳಗೆ ಇಲ್ಲಿ ಪ್ರತ್ಯಕ್ಷವಾಗುತ್ತಿವೆ. ಮಾಂಸದ ತುಂಡುಗಳು, ಹಳಸಿದ ಪದಾರ್ಥ, ತರಕಾರಿ, ಹಣ್ಣು, ಬಟ್ಟೆಯ ತುಂಡುಗಳು, ಬಾಟಲಿಗಳು ಇತ್ಯಾದಿ ಇಲ್ಲಿ ಕಾಣಸಿಗುತ್ತಲಿದೆ. ಬೆದ್ರಾಳದ ರಸ್ತೆ ಬದಿಯಲ್ಲಿ ತ್ಯಾಜ್ಯ ರಾಶಿಯಾಗುತ್ತಿರುವ ಕುರಿತು ವರದಿ ಪ್ರಕಟಿಸಿದ ಬಳಿಕ ಈ ಭಾಗದ ಕಸವನ್ನು ತೆರವುಗೊಳಿಸಿ ನರಿಮೊಗರು ಗ್ರಾ.ಪಂ. ವತಿಯಿಂದ ಎಚ್ಚರಿಕೆ ಫ‌ಲಕ ಅಳವಡಿಸಲಾಗಿತ್ತು. ಆದರೂ ಇಲ್ಲಿನ ಸ್ಥಿತಿ ಬದಲಾಗಿಲ್ಲ.

ಪ್ರಜ್ಞಾವಂತರೇ ಕಸ ಎಸೆಯುತ್ತಾರೆ
ಸಮಾಜದ ಬಗ್ಗೆ ತಿಳಿದಿರುವ ಪ್ರಜ್ಞಾವಂತರೇ ಇಲ್ಲಿ ಕಸ ಎಸೆಯುತ್ತಿರುವುದು ಗೊತ್ತಾಗುತ್ತಿದೆ. ಐಶಾರಾಮಿ ಕಾರು, ದ್ವಿಚಕ್ರ ವಾಹನಗಳಲ್ಲಿ ಬರುವ ಜನರು ಹಗಲು, ರಾತ್ರಿ ಎನ್ನದೆ ರಾಜಾರೋಷವಾಗಿ ಕಸ ಎಸೆದು ಹೋಗುತ್ತಿದ್ದಾರೆ. ಪರಿಸರದಲ್ಲಿ ಇದರಿಂದಾಗಿ ದುರ್ವಾಸನೆ ಹೆಚ್ಚಾಗಿದೆ. ಇಲ್ಲಿನ ಕಸಗಳನ್ನು ಪ್ರಾಣಿ, ಪಕ್ಷಗಳು ಎಳೆದುಕೊಂಡು ಹೋಗಿ ಎಲ್ಲೆಂದರಲ್ಲಿ ಹಾಕುತ್ತಿರುವುದೂ ಸಮಸ್ಯೆ ತಂದೊಡ್ಡಿದೆ.

ಮಾಹಿತಿ ಕೊಡಿ
ಬೆದ್ರಾಳ – ಮುಕ್ವೆ ಪ್ರದೇಶದಲ್ಲಿ ಯಾರಾದರೂ ಕಸವನ್ನು ಎಸೆಯುವುದನ್ನು ನಾಗರಿಕರು ಕಂಡಲ್ಲಿ ತತ್‌ಕ್ಷಣವೇ ಒಂದು ಫೊಟೋ ಕ್ಲಿಕ್ಕಿಸಿ, ವಾಹನದ ನಂಬರ್‌ ನೋಟ್‌ ಮಾಡಿಕೊಂಡು ಪಂಚಾಯತ್‌ನ ಗಮನಕ್ಕೆ ತರಬೇಕು. ಮಾಹಿತಿ ಕೊಟ್ಟಲ್ಲಿ ಕಸ ಎಸೆಯುವವರ ವಿರುದ್ಧ ಕ್ರಮ ಕೈಗೊಳ್ಳಲು ಸಹಕಾರಿಯಾಗುತ್ತದೆ ಎಂದು ನರಿಮೊಗರು ಗ್ರಾ.ಪಂ. ಆಡಳಿತ ಮಂಡಳಿ ತಿಳಿಸಿದೆ.

ದೇವರ ಹೆಸರಿನಲ್ಲಿ ಫ‌ಲಕ ಹಾಕಿದರೂ ಲೆಕ್ಕಕ್ಕಿಲ್ಲ
ಸ್ಥಳೀಯ ಗ್ರಾ.ಪಂ. ಕಸ ಎಸೆಯದಂತೆ ಎಚ್ಚರಿಕೆ ಫ‌ಲಕ ಅಳವಡಿಸಿದರೂ ಜನರು ಕ್ಯಾರೇ ಎನ್ನುತ್ತಿಲ್ಲ. ಇಲ್ಲಿನ ಪರಿಸ್ಥಿಯನ್ನು ನೋಡಲಾಗದೆ ‘ಇದು ಮಹಾಲಿಂಗೇಶ್ವರ ದೇವರ ಅವಭೃಥ ಸ್ನಾನಕ್ಕೆ ಹೋಗುವ ರಾಜ ರಸ್ತೆ. ಇಲ್ಲಿ ಕಸ ಎಸೆಯಬೇಡಿ’ ಎಂದು ಖಾಸಗಿ ವ್ಯಕ್ತಿಯೋರ್ವರು ಫ‌ಲಕ ಅಳವಡಿಸಿದ್ದರೂ ಪ್ರಯೋಜನವಿಲ್ಲ. ಸ್ಥಳೀಯಾಡಳಿತ, ಪೊಲೀಸ್‌ ಇಲಾಖೆ ಸೂಕ್ತ ಕ್ರಮ ಕೈಗೊಳ್ಳದೇ ಇದ್ದಲ್ಲಿ ನಾವೇ ತ್ಯಾಜ್ಯ ಹಾಕುವವರನ್ನು ಹಿಡಿದು ಥಳಿಸುತ್ತೇವೆ ಎನ್ನುವ ಆಕ್ರೋಶದ ಮಾತನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.

ಸಿ.ಸಿ. ಕೆಮರಾ ಅಳವಡಿಕೆಗೆ ಚಿಂತನೆ
ಮುಕ್ವೆಯ ಬಳಿ ಕಸ ಎಸೆಯುತ್ತಿರುವುದು ಪಂಚಾಯತ್‌ ಗಮನಕ್ಕೆ ಬಂದಿದೆ. ಎಚ್ಚರಿಕೆ ಫಲಕವನ್ನು ಅಳವಡಿಸಿದ್ದೇವೆ. ಒಂದು ಬಾರಿ ನಾವೇ ಕಸವನ್ನು ವಿಲೇವಾರಿ ಮಾಡಿರುತ್ತೇವೆ. ಮತ್ತೂ ಮುಂದುವರಿದಿದೆ. ಸಿ.ಸಿ. ಕೆಮರಾವನ್ನು ಅಳವಡಿಸುವ ಬಗ್ಗೆ ಮಾತುಕತೆ ನಡೆದಿದೆ. ಈ ಮೂಲಕ ಕಸ ಎಸೆಯುವವರನ್ನು ಪತ್ತೆ ಹಚ್ಚಿ ಕಾನೂನಿನ ಮೂಲಕ ಕ್ರಮ ಕೈಗೊಳ್ಳಗಾಗುವುದು.
– ಚಂದ್ರಕಲಾ,
ಅಧ್ಯಕ್ಷರು, ನರಿಮೊಗರು ಗ್ರಾ.ಪಂ.

ಪ್ರವೀಣ್‌ ಚೆನ್ನಾವರ

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

1-aaaaaaa

Karkala: ಕಾಂಗ್ರೆಸ್ ನಾಯಕ ಡಿ. ಅರ್.‌ರಾಜು ನಿಧನ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

1-chuii

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.