“ರೈತರು – ಉತ್ಪಾದಕರು ಸಂಘಟಿತರಾಗಬೇಕು’
Team Udayavani, Mar 9, 2019, 12:30 AM IST
ಹಾಲಾಡಿ: ರೈತರು ಹಾಗೂ ಉತ್ಪಾದಕರು ಸಂಘಟಿತರಾದಾಗ ಸರಕಾರದಿಂದ ಸಿಗುವ ಯೋಜನೆಗಳಿಗೆ ತ್ವರಿತವಾಗಿ ಸ್ಪಂದಿಸಲು ಸಾಧ್ಯವಾಗುತ್ತದೆ ಎಂದು ಕುಂದಾಪುರ ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಸಂಜೀವ ನಾಯಕ್ ಹೇಳಿದರು.
ತೆಂಗು ಅಭಿವೃದ್ಧಿ ಮಂಡಳಿ, ಕಲ್ಪವೃಕ್ಷ ತೆಂಗು ಉತ್ಪಾದಕರ ಫೆಡರೇಶನ್ ಕುಂದಾಪುರ, ಹಾಲಾಡಿಯ ತೆಂಗು ಉತ್ಪಾದಕರ ಸೌಹಾರ್ದ ಸೊಸೈಟಿ ಸಹಯೋಗದಲ್ಲಿ ತಾಲೂಕಿನ 19 ತೆಂಗು ಸೌಹಾರ್ದ ಸೊಸೈಟಿಗಳ ಸದಸ್ಯರಿಗೆ ರಸಗೊಬ್ಬರ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಕುಂದಾಪುರ ತಾಲೂಕು ಕಲ್ಪವೃಕ್ಷ ತೆಂಗು ಉತ್ಪಾದಕರ ಸೊಸೈಟಿ ಅಧ್ಯಕ್ಷ ವೆಂಕಟೇಶ ರಾವ್ ಅಧ್ಯಕ್ಷತೆ ವಹಿಸಿದ್ದರು.
ಬ್ರಹ್ಮಾವರ ಕೆವಿಕೆಯ ಕೃಷಿ ವಿಜ್ಞಾನಿ ಡಾ| ಧನಂಜಯ, ಕಲ್ಪವೃಕ್ಷ ತೆಂಗು ಉತ್ಪಾದಕರ ಸೊಸೈಟಿ ಉಪಾಧ್ಯಕ್ಷ ರಾಮಚಂದ್ರ ಅಲ್ಸೆ, ಬೆಂಗಳೂರು ತೆಂಗು ಅಭಿವೃದ್ಧಿ ಮಂಡಳಿಯ ತಾಂತ್ರಿಕ ಅಧಿಕಾರಿ ರಘೋತ್ತಮ, ಬಿ.ಎನ್. ಕೇಶವ ಮೂರ್ತಿ, ಜಯರಾಮ ಶೆಟ್ಟಿ ಕೆ. ಹಾಲಾಡಿ, ರಾಜೀವಿ ಶೆಟ್ಟಿ ಶಾಡಿಗುಂಡಿ ಹಾಗೂ 19 ಸೊಸೈಟಿಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಉಪಸ್ಥಿತರಿದ್ದರು.
ಕಲ್ಪವೃಕ್ಷ ತೆಂಗು ಉತ್ಪಾದಕ ಫೆಡರೇಶನ್ ಕಾರ್ಯದರ್ಶಿ ಸೀತಾರಾಮ ಗಾಣಿಗ ಸ್ವಾಗತಿಸಿ, ಭಾರತೀಯ ಕಿಸಾನ್ ಸಂಘದ ಪ್ರ. ಕಾರ್ಯದರ್ಶಿ ಸತ್ಯನಾರಾಯಣ ಉಡುಪ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap: ತೆಕ್ಕಟ್ಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ… ಇಬ್ಬರು ಗಂಭೀರ
Karkala: ರಸ್ತೆ ಬದಿ ತೋಡಿಗೆ ಜಾರಿದ ವಿಕ್ರಂ ಗೌಡ ಮೃತದೇಹ ಸಾಗಿಸುತ್ತಿದ್ದ ಆ್ಯಂಬ್ಯುಲೆನ್ಸ್
Udupi: ನಮ್ಮ ಶೌಚಾಲಯ ನಮ್ಮ ಗೌರವ ತಿಂಗಳ ಆಂದೋಲನಕ್ಕೆ ಚಾಲನೆ
Udupi: 10 ತಿಂಗಳಲ್ಲಿ 228 ಕಳವು ಕೇಸ್!
History: ನಕ್ಸಲ್ ಚಳವಳಿಯ ರಕ್ತಸಿಕ್ತ ಇತಿಹಾಸ; ಸಾವಿನೊಂದಿಗೆ ಪೊಲೀಸ್-ನಕ್ಸಲ್ ಮುಖಾಮುಖಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.