ಒಲಿಂಪಿಕ್ಸ್ ಬಾಕ್ಸಿಂಗ್: ಭಾರತೀಯರ ತೂಕ ವಿಭಾಗ ಬದಲು
Team Udayavani, Mar 9, 2019, 12:30 AM IST
ಹೊಸದಿಲ್ಲಿ: ಅಂತಾರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆ ಮುಂದಿನ ವರ್ಷದ ಒಲಿಂಪಿಕ್ಸ್ ನಲ್ಲಿ ಯಾವ್ಯಾವ ತೂಕ ವಿಭಾಗದಲ್ಲಿ ಸ್ಪರ್ಧೆಗಳು ಇರಲಿವೆ ಎನ್ನುವುದನ್ನು ಅಂತಿಮಗೊಳಿಸಿದೆ. ಪರಿಣಾಮ ಭಾರತದ ಖ್ಯಾತ ಬಾಕ್ಸರ್ಗಳಾದ ಅಮಿತ್ ಪಂಗಲ್, ಶಿವ ಥಾಪ, ಮನೀಷ್ ಕೌಶಿಕ್ ಈಗಿರುವ ತೂಕ ವಿಭಾಗಗಳನ್ನು ಬಿಟ್ಟು ಬೇರೆ ವಿಭಾಗಕ್ಕೆ ನೆಗೆಯಬೇಕಾಗಿದೆ.
ಪಂಗಲ್ 52 ಕೆಜಿ ವಿಭಾಗ
49 ಕೆಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದ ಏಶ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಅಮಿತ್ ಪಂಗಲ್ ಇನ್ನು 52 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ. 60 ಕೆಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದ ಶಿವ ಥಾಪ, ಮನೀಶ್ ಕೌಶಿಕ್ 63 ಕೆಜಿ ವಿಭಾಗಕ್ಕೆ ಬದಲಾಯಿಸಿಕೊಳ್ಳಲಿದ್ದಾರೆ. ಈ ಬಗ್ಗೆ ಮೊದಲೇ ಸುಳಿವು ಲಭಿಸಿದ್ದರಿಂದ ಬದಲಾವಣೆಗೆ ಬಾಕ್ಸರ್ಗಳು ಸಿದ್ಧವಿದ್ದಾರೆ ಎಂದು “ಬಾಕ್ಸಿಂಗ್ ಇಂಡಿಯಾ’ ತಿಳಿಸಿದೆ.
ಅಂತಿಮಗೊಂಡ ತೂಕ ವಿಭಾಗ
ಅಂತಾರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆ ಪುರುಷರ ವಿಭಾಗದಲ್ಲಿ 52 ಕೆಜಿ, 57 ಕೆಜಿ, 63 ಕೆಜಿ, 69 ಕೆಜಿ, 75 ಕೆಜಿ, 81 ಕೆಜಿ, 91 ಕೆಜಿ, +91 ಕೆಜಿಯನ್ನು ಅಂತಿಮಗೊಳಿಸಿದೆ. ಮಹಿಳೆಯರ ವಿಭಾಗದಲ್ಲಿ 51 ಕೆಜಿ, 57 ಕೆಜಿ, 64 ಕೆಜಿ, 69 ಕೆಜಿ, 75 ಕೆಜಿಯನ್ನು ಅಂತಿಮಗೊಳಿಸಲಿದೆ. ಅಂದರೆ ಮುಂದಿನ ವರ್ಷದ ಒಲಿಂಪಿಕ್ಸ್ನಲ್ಲಿ ಈ ವಿಭಾಗದಲ್ಲಿ ಮಾತ್ರ ಸ್ಪರ್ಧೆಗಳು ನಡೆಯಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್ನಲ್ಲಿ ಉದ್ಯೋಗದ ಆಮಿಷ
Kyiv: ಉಕ್ರೇನ್ ವಿದ್ಯುತ್ ಸ್ಥಾವರ ಮೇಲೆ ರಷ್ಯಾ 120 ಕ್ಷಿಪಣಿ ದಾಳಿ
Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್ಸಾನಿಕ್ ಅಸ್ತ್ರ !
Mobs Storm: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ!, ಮೈತೇಯಿ ಸಮುದಾಯದಿಂದ ಭಾರೀ ಪ್ರತಿಭಟನೆ
Puttur: ಮಹಿಳೆಯ ಮಾನಭಂಗಕ್ಕೆ ಯತ್ನ; ಆರೋಪಿಗೆ ಜೈಲು ಶಿಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.