ಲಂಡನ್ ವೆಸ್ಟ್ ಎಂಡ್‌ನಲ್ಲಿ ನೀರವ್ ಮೋದಿ ಬಂಗ್ಲೆ, ವಜ್ರ ವ್ಯಾಪಾರ
Team Udayavani, Mar 9, 2019, 6:27 AM IST
ಲಂಡನ್ : ಪಂಜಾಬ್ ನ್ಯಾಶನಲ್ ಬ್ಯಾಂಕಿಗೆ 13,000 ಕೋಟಿ ರೂ. ವಂಚನೆಗೈದು ವಿದೇಶಕ್ಕೆ ಪಲಾಯನಗೈದಿರುವ ದೇಶಭ್ರಷ್ಟ ಆರ್ಥಿಕ ಅಪರಾಧಿ, ಬಿಲಿಯಾಧಿಪತಿ ವಜ್ರಾಭರಣ ವ್ಯಾಪಾರಿ, 48ರ ಹರೆಯದ ನೀರವ್ ಮೋದಿ, ಲಂಡನ್ ನ ವೆಸ್ಟ್ ಎಂಡ್ ನಲ್ಲಿ 80 ಲಕ್ಷ ಪೌಂಡ್ ಬೆಲೆಯ ಐಶಾರಾಮಿ ಅಪಾರ್ಟ್‌ಮೆಂಟ್‌ನಲ್ಲಿ ಮುಕ್ತವಾಗಿ, ನಿರ್ಭಿಡೆಯಿಂದ ವಾಸಿಸಿಕೊಂಡಿರುವುದಾಗಿ ಬ್ರಿಟಿಷ್ ದೈನಿಕವೊಂದು ಇಂದು ಶನಿವಾರ ವರದಿ ಮಾಡಿದೆ.
ಲಂಡನ್ ವೆಸ್ಟ್ ಎಂಡ್‌ನಲ್ಲಿರುವ ಸೆಂಟರ್ ಪಾಯಿಂಟ್ ಟವರ್ ಬ್ಲಾಕ್‌ನ ಐಶಾರಾಮಿ ಅಪಾರ್ಟ್‌ಮೆಂಟಿನ, ಮಹಡಿಯೊಂದರ ಅರ್ಧಾಂಶದಷ್ಟು ಸ್ಥಳಾವಕಾಶವನ್ನು ಒಳಗೊಂಡ, ಮೂರು ಬೆಡ್ ರೂಮಿನ ಫ್ಲ್ಯಾಟಿನಲ್ಲಿ ನೀರವ್ ಮೋದಿ ನಿರಾತಂಕವಾಗಿ ಮತ್ತು ಮುಕ್ತವಾಗಿ ವಾಸಿಸಿಕೊಂಡಿದ್ದಾರೆ. ಅವರ ಈ ಫ್ಲ್ಯಾಟು ತಿಂಗಳಿಗೆ 17,000 ಪೌಂಡ್ ಬಾಡಿಗೆ ಆದಾಯ ತರಬಲ್ಲುದು ಎಂದು ಅಂದಾಜಿಸಲಾಗಿದೆ.
ಎರಡು ದಿನಗಳ ಹಿಂದಷ್ಟೇ ನೀರವ್ ಮೋದಿ ಅವರ ಮಹಾರಾಷ್ಟ್ರದಲ್ಲಿನ ಕಿಹಿಂ ಬೀಚ್ ನಲ್ಲಿರುವ 30,000 ಚದರಡಿ ಸ್ಥಳಾವಕಾಶದ ಬೃಹತ್ ಐಶಾರಾಮಿ ಅಕ್ರಮ ಬಂಗಲೆಯನ್ನು ಸರಕಾರಿ ಅಧಿಕಾರಿಗಳು ಡೈನಮಟ್ ಸ್ಫೋಟಿಸಿ ಕೆಡಹಿದ್ದರು.
ಭಾರತದಲ್ಲಿ ನೀರವ್ ಮೋದಿ ಬ್ಯಾಂಕ್ ಖಾತೆಗಳನ್ನು ಅಧಿಕಾರಿಗಳು ಸ್ತಂಭನಗೊಳಿಸಿದ್ದಾರೆ. ಆತನ ವಿರುದ್ಧ ಇಂಟರ್ ಪೋಲ್ ರೆಡ್ ಕಾರ್ನರ್ ನೊಟೀಸ್ ಜಾರಿಯಾಗಿದೆ. ಆತ ಬ್ರಿಟನ್ ನಲ್ಲಿ ಆಸರೆಯನ್ನು ಕೋರಿದ್ದಾರೆ. ಇಷ್ಟಿದ್ದರೂ ನೀರವ್ ಮೋದಿ ಲಂಡನ್‌ನಲ್ಲಿ ಹೊಸ ವಜ್ರಾಭರಣ ವ್ಯಾಪಾರದಲ್ಲಿ ತೊಡಗಿಕೊಂಡಿದ್ದಾರೆ. ಇವೆಲ್ಲದರ ಬಗ್ಗೆ ಪ್ರತಿಕ್ರಿಯೆ ಕೇಳಿದಾಗ ನೀರವ್ ಮೋದಿ, ‘ಸಾರಿ, ನೋ ಕಮೆಂಟ್ಸ್’ ಎಂದು ಹೇಳಿರುವುದಾಗಿ ಲಂಡನ್ ದೈನಿಕ ವರದಿ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್ ಪರೀಕ್ಷೆ
Iran: ಹಿಜಾಬ್ ನಿರಾಕರಿಸಿದರೆ ವಿಶೇಷ ಕ್ಲಿನಿಕ್: ಇರಾನ್ ತೀರ್ಮಾನಕ್ಕೆ ಆಕ್ರೋಶ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.