ಕೋಲ್ಕತ STFನಿಂದ 1,000 ಕೆಜಿ ಸ್ಫೋಟಕವಿದ್ದ ವಾಹನ ವಶ, ಇಬ್ಬರ ಸೆರೆ
Team Udayavani, Mar 9, 2019, 10:42 AM IST
ಕೋಲ್ಕತ : 1,000 ಕಿಲೋ ಸ್ಫೋಟಕ ಸಾಗಿಸುತ್ತಿದ್ದ ವಾಹನವೊಂದನ್ನು ಕೋಲ್ಕತ STF ಪೊಲೀಸರು ಅಡ್ಡಗಟ್ಟಿ ಇಬ್ಬರನ್ನು ಬಂಧಿಸಿದ್ದಾರೆ.
ಸ್ಫೋಟಕ ತುಂಬಿದ ಈ ವಾಹನ ಒಡಿಶಾದಿಂದ ಬರುತ್ತಿತ್ತು. ಇದು 24 ಉತ್ತರ ಪರಗಣ ಮೂಲಕ ಸಂಚರಿಸುತ್ತಿತ್ತು.
ಸ್ಫೋಟಕ ತುಂಬಿಕೊಂಡ ವಾಹನವೊಂದು ಸಾಗುತ್ತಿದೆ ಎಂಬ ಖಚಿತ ಮಾಹಿತಿಯ ಪ್ರಕಾರ ಪೊಲೀಸರು ಶಂಕಿತ ಟಾಟಾ 407 ಮೆಟಾಡರ್ ವಾಹನವನ್ನು ಎಸ್‌ಟಿಎಫ್ (ವಿಶೇಷ ಕಾರ್ಯಪಡೆ) ತಂಡದವರು ಬಿ ಟಿ ರಸ್ತೆಯಲ್ಲಿನ ತಾಲಾ ಸೇತುವೆಯ ಬಳಿ ಅಡ್ಡಗಟ್ಟಿದರು. ಈ ಪ್ರದೇಶವು ಚಿತ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಗೆ ಒಳಪಡುತ್ತದೆ.
ಶಂಕಿತ ವಾಹನದೊಳಗಿದ್ದ 1,000 ಕಿಲೋ ಸ್ಫೋಟಕ (ಪೊಟ್ಯಾಶಿಯಂ ನೈಟ್ರೇಟ್) ವನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು. ಸ್ಫೋಟಕವನ್ನು 27 ಗೋಣಿ ಚೀಲದೊಳಗೆ ತುಂಬಿಸಿಡಲಾಗಿತ್ತು.
ಶಂಕಿತ ವಾಹನದ ಚಾಲ ಮತ್ತು ಹೆಲ್ಪರ್ ನನ್ನು ಪೊಲೀಸರು ಬಂಧಿಸಿದ್ದು ಇವರನ್ನು ಇಂದ್ರಜಿತ್ ಭೂಯಿ (25) ಮತ್ತು ಪದ್ಮಲೋಚನ ಡೇ (31) ಎಂದು ಗುರುತಿಸಲಾಗಿದೆ. ಇವರನ್ನು ಇಂದು ಕೋರ್ಟಿಗೆ ಹಾಜರಪಡಿಸಲಾಗುತ್ತದೆ ಎಂದು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಎಸ್‌ಟಿಎಫ್ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cyclone Fengal: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ತಮಿಳುನಾಡಲ್ಲಿ 3 ದಿನ ಭಾರೀ ಮಳೆ
Ayodhya: ರಾಮಮಂದಿರ ಪ್ರಾಣಪ್ರತಿಷ್ಠೆ ಸಂಭ್ರಮ ಜ.22ರ ಬದಲು 11ಕ್ಕೆ!
Cyber Fraud: 1 ತಿಂಗಳು ವೃದ್ದೆ ಡಿಜಿಟಲ್ ಅರೆಸ್ಟ್: 3.8 ಕೋಟಿ ಲೂಟಿ ಹೊಡೆದ ಕಳ್ಳರು!
ರಾಹುಲ್ ಬ್ರಿಟನ್ ಪೌರತ್ವದ ಬಗ್ಗೆ ಪರಿಶೀಲಿಸುತ್ತಿದ್ದೇವೆ: ಹೈಕೋರ್ಟ್‌ಗೆ ಸರ್ಕಾರ!
MahaKumbh 2025: ಕುಂಭಮೇಳದಲ್ಲಿ ಬೆಂಕಿ ನಂದಿಸಲು ರೊಬೋಟ್!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Bangladesh: ಚಿನ್ಮಯ್ ಕೃಷ್ಣದಾಸ್ ಬಂಧನ ಖಂಡಿಸಿ ಪ್ರತಿಭಟನೆ: ವಕೀಲನ ಹ*ತ್ಯೆ
Samantha Ruth Prabhu: ನನ್ನ ಸೆಕೆಂಡ್ ಹ್ಯಾಂಡ್ ಅಂದ್ರು!: ಸಮಂತಾ ದುಃಖದ ಮಾತು
Kalaburagi; 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ಮಗು: ಪೊಲೀಸರ ಭರ್ಜರಿ ಕಾರ್ಯಾಚರಣೆ
Ballari: ಜಿಲ್ಲಾಸ್ಪತ್ರೆಯಲ್ಲಿ ಮತ್ತೊಬ್ಬ ಬಾಣಂತಿ ಸಾವು; ಮೃತರ ಸಂಖ್ಯೆ 4ಕ್ಕೆ
ICC; ಚಾಂಪಿಯನ್ಸ್ ಟ್ರೋಫಿ ಸುತ್ತಲಿನ ಬಿಕ್ಕಟ್ಟು: ಶುಕ್ರವಾರ ಮಹತ್ವದ ತೀರ್ಮಾನ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.