ಕುಂಚದಲ್ಲಿ ಅನಾವರಣಗೊಂಡ ಗ್ರಾಮೀಣ ಬದುಕು


Team Udayavani, Mar 10, 2019, 1:00 AM IST

kunchadalli.jpg

ಉಡುಪಿ: ಕರಾವಳಿಯ ಗ್ರಾಮೀಣ ಬದುಕು ಕಲೆ ರೂಪದಲ್ಲಿ ಮಣಿಪಾಲದಲ್ಲಿ ಅನಾವರಣಗೊಂಡಿದೆ. ತ್ರಿವರ್ಣ ಸೆಂಟರ್‌ ವತಿಯಿಂದ ಮಣಿಪಾಲ ಗೀತಾಮಂದಿರದಲ್ಲಿ ಆಯೋಜಿಸಲಾಗಿರುವ ಮೂರು ದಿನಗಳ “ವಿಲೇಜ್‌ ಲೈಫ್’ ಚಿತ್ರಕಲಾ ಪ್ರದರ್ಶನ ಶನಿವಾರ ಆರಂಭಗೊಂಡಿತು.

ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಅಂಬಲಪಾಡಿ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ| ನಿ.ಬಿ. ವಿಜಯ ಬಲ್ಲಾಳ್‌ ಅವರು “ಚಿತ್ರಕಲೆಯಂತಹ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗಿಕೊಂಡರೆ ಕೈಬೆರಳುಗಳಿಗೆ ವ್ಯಾಯಾಮ ಸಿಗುವ ಜತೆಗೆ ಮಾನಸಿಕ ಸದೃಢತೆಯೂ 
ಉಂಟಾಗುತ್ತದೆ. ಇಂತಹ ಚಟುವಟಿಕೆಗಳಿಂದ ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸಲೂ ಸಾಧ್ಯ’ ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿದ್ದ ಅಕಾಡೆಮಿ ಆಫ್ ಜನರಲ್‌ ಎಜುಕೇಶನ್‌ನ ಆಡಳಿತಾಧಿಕಾರಿ ಡಾ| ಎಚ್‌.ಶಾಂತಾರಾಮ್‌ ಅವರು ಮಾತನಾಡಿ, “ಗ್ರಾಮೀಣ ಬದುಕು ಇಂದು ಬದಲಾಗುತ್ತಿದೆ. ಚಿತ್ರಪ್ರದರ್ಶನವನ್ನು ವೀಕ್ಷಿಸಿದರೆ ಗ್ರಾಮೀಣ ಬದುಕಿನ ಸೊಬಗಿನ  ಪರಿಚಯ ಸಾಧ್ಯವಾಗಲಿದೆ’ ಎಂದು ಹೇಳಿದರು.

ಅಸೋಸಿಯೇಷನ್‌ ಆಫ್ ಕೋಸ್ಟಲ್‌ ಟೂರಿಸಂ (ಆ್ಯಕ್ಟ್) ಅಧ್ಯಕ್ಷ ಮನೋಹರ ಶೆಟ್ಟಿ, ಸೋನಿಯಾ ಕ್ಲಿನಿಕ್‌ನ ಮಕ್ಕಳ ತಜ್ಞೆ ಡಾ| ಗೌರಿ, ನಗರಸಭಾ ಸದಸ್ಯ ಮಂಜುನಾಥ ಮಣಿಪಾಲ, ತ್ರಿವರ್ಣ ಸೆಂಟರ್‌ನ ನಿರ್ದೇಶಕ ಹರೀಶ್‌ ಸಾಗ ಉಪಸ್ಥಿತರಿದ್ದರು.

ಸುನಿಧಿ ಶೆಟ್ಟಿ ಸ್ವಾಗತಿಸಿದರು. ಅನುಷಾ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು. ನಿವೃತ್ತ ಪ್ರಾಧ್ಯಾಪಕ ಡಿ.ವಿ.ಶೆಟ್ಟಿಗಾರ್‌ ವಂದಿಸಿದರು.

ಕಲೆ ಪ್ರವಾಸೋದ್ಯಮದ ಭಾಗ
ಉಡುಪಿ ಉತ್ತಮ ಪ್ರವಾಸಿ ತಾಣ. ಚಿತ್ರಕಲೆ ಸೇರಿದಂತೆ ವಿವಿಧ ರೀತಿಯ ಕಲೆ ಕೂಡ ಪ್ರವಾಸೋದ್ಯಮದ ಭಾಗವಾಗಿದೆ. ಇಲ್ಲಿನ ವೈಶಿಷ್ಟéಗಳನ್ನು ಚಿತ್ರಗಳ ಮೂಲಕ ಪ್ರವಾಸಿಗರಿಗೆ ತೋರಿಸಿಕೊಡುವ ಪ್ರಯತ್ನಗಳು 
ನಡೆಯಬೇಕಿದೆ. ಇಂತಹ ಕಲೆಗಳ ಪ್ರದರ್ಶನಕ್ಕೆ ಸುವ್ಯವಸ್ಥಿತ ಕೇಂದ್ರವೂ  ನಿರ್ಮಾಣವಾಗಬೇಕು.                
– ಮನೋಹರ್‌ ಶೆಟ್ಟಿ , ಅಧ್ಯಕ್ಷರು ಆ್ಯಕ್ಟ್  

24 ಕಲಾವಿದರು ಭಾಗಿ
ಅಕ್ರಾಲಿಕ್‌ ಕ್ಯಾನ್ವಾಸ್‌ನ 18 ಹಾಗೂ ಚಾರ್ಕೋಲ್‌ ಪೇಪರ್‌ ಮಾಧ್ಯಮದ 6  ಕಲಾಕೃತಿಗಳು ಹಳ್ಳಿಸೊಗಡನ್ನು ಕಟ್ಟಿಕೊಡುತ್ತವೆ. ಕಲಾಕೃತಿಗಳನ್ನು ಬೈಹುಲ್ಲಿನ ಚಪ್ಪರ, ಮಾವಿನ ಎಲೆಯ ತೋರಣದ ನಡುವೆ ಪ್ರದರ್ಶಿಸಲಾಗಿದೆ. ಅಕ್ಕಿಮುಡಿ ಕಟ್ಟುವುದು, ದನ-ಕರುಗಳೊಂದಿಗೆ ಸಾಗುವ ಮಹಿಳೆ, ಬೆಂಕಿ ಮಾಡುತ್ತಿರುವ ತಾಯಿ, ಲಗೋರಿ ಆಡುತ್ತಿರುವ ಹುಡುಗ, ಐಸ್‌ಕ್ಯಾಂಡಿ ಮಾರಾಟ, ಮಗುವಿಗೆ ಎಣ್ಣೆ ಸ್ನಾನ, ಬುಗುರಿ ತಿರುಗಿಸುತ್ತಿರುವ ಬಾಲಕ, ತೋರಣ ಕಟ್ಟುವುದು, ಓದುವ ಬಾಲಕಿ, ಮಡಲು ನೇಯುತ್ತಿರುವ ಚಿತ್ರಣಗಳಿವೆ.   19ರಿಂದ 75 ವರ್ಷ ವಯಸ್ಸಿನ 24 ಮಂದಿ ಕಲಾವಿದರ ಕೃತಿಗಳು ಈ ಪ್ರದರ್ಶನದಲ್ಲಿವೆ.

ಟಾಪ್ ನ್ಯೂಸ್

Hyderabad: Student dies after getting a puri stuck in his throat

Hyderabad: ಗಂಟಲಿಗೆ ಪೂರಿ ಸಿಲುಕಿ ವಿದ್ಯಾರ್ಥಿ ಸಾವು

I have not encroached on anyone’s jurisdiction: Modi

Narendra Modi: ನಾನು ಯಾರದ್ದೇ ಅಧಿಕಾರ ವ್ಯಾಪ್ತಿ ಅತಿಕ್ರಮಿಸಿಕೊಂಡಿಲ್ಲ: ಮೋದಿ

Trump imposes no taxes on India, only taxes on Canada and China!

US: ಭಾರತದ ಮೇಲೆ ತೆರಿಗೆ ಇಲ್ಲ, ಕೆನಡಾ, ಚೀನಾಕ್ಕಷ್ಟೇ ತೆರಿಗೆ ವಿಧಿಸಿದ ಟ್ರಂಪ್‌!

CT-Ravi

Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ

Higher-Edu

Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ

BJP_Cong

Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್‌ 8, ಬಿಜೆಪಿ 3, ಪಕ್ಷೇತರ 1

newspaper

Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗೀತಾರ್ಥ ಚಿಂತನೆ 106: ದುಃಖಶಮನಕ್ಕೆ ಆದ್ಯತೆ, ದುಃಖೋತ್ಕರ್ಷಕ್ಕೆ ಅನಾದ್ಯತೆ

Udupi: ಗೀತಾರ್ಥ ಚಿಂತನೆ-106; ದುಃಖಶಮನಕ್ಕೆ ಆದ್ಯತೆ, ದುಃಖೋತ್ಕರ್ಷಕ್ಕೆ ಅನಾದ್ಯತೆ

2

Malpe: ಬೋಟಿನಲ್ಲಿದ್ದ ಮೀನುಗಾರ ನಾಪತ್ತೆ; ಪ್ರಕರಣ ದಾಖಲು

crime

Padubidri: ಸ್ಕೂಟಿಯಿಂದ ಬಿದ್ದು ಮಹಿಳೆಗೆ ತೀವ್ರ ಗಾಯ

KAUP: ಸಂವಿಧಾನ ಉಳಿಸಿ ಬೃಹತ್‌ ಜಾಥಾ ಮತ್ತು ಸಾರ್ವಜನಿಕ ಸಭೆ

KAUP: ಧರ್ಮಗ್ರಂಥಗಳಷ್ಟೇ ಸಂವಿಧಾನವೂ ಪವಿತ್ರ: ನಿಕೇತ್‌ ರಾಜ್‌ ಮೌರ್ಯ

man-a

Udupi: ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Hyderabad: Student dies after getting a puri stuck in his throat

Hyderabad: ಗಂಟಲಿಗೆ ಪೂರಿ ಸಿಲುಕಿ ವಿದ್ಯಾರ್ಥಿ ಸಾವು

I have not encroached on anyone’s jurisdiction: Modi

Narendra Modi: ನಾನು ಯಾರದ್ದೇ ಅಧಿಕಾರ ವ್ಯಾಪ್ತಿ ಅತಿಕ್ರಮಿಸಿಕೊಂಡಿಲ್ಲ: ಮೋದಿ

Trump imposes no taxes on India, only taxes on Canada and China!

US: ಭಾರತದ ಮೇಲೆ ತೆರಿಗೆ ಇಲ್ಲ, ಕೆನಡಾ, ಚೀನಾಕ್ಕಷ್ಟೇ ತೆರಿಗೆ ವಿಧಿಸಿದ ಟ್ರಂಪ್‌!

ban

Kumble: ಹೆತ್ತವರನ್ನೇ ಕೊಠಡಿಯಲ್ಲಿ ಕೂಡಿ ಹಾಕಿದ ಪುತ್ರಿ

CT-Ravi

Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.