ಕನ್ನಡ‌ ಶಾಲೆ ಉಳಿಯಬೇಕಾದರೆ  ಸಹಕಾರ ಅಗತ್ಯ: ಪುಂಡರೀಕಾಕ್ಷ 


Team Udayavani, Mar 10, 2019, 1:00 AM IST

kannada-shale.jpg

ನಾರಾಯಣಮಂಗಲ: ವ್ಯಾಪಕವಾಗಿ ಕನ್ನಡದ ಅವಗಣನೆ ನಡೆಯುತ್ತಿರುವ ವೇಳೆಯಲ್ಲಿ ಶತಮಾನೋತ್ಸವವನ್ನು ಕಂಡ ಶಾಲೆಯ ವಾರ್ಷಿಕೋತ್ಸವವು ಈ ನಾಡಿನ ಉತ್ಸವವಾಗಿದೆ. ಗ್ರಾಮೀಣ ಭಾಗದಿಂದ ದೇಶ ಸೇವೆಗೆ ಅನೇಕ ಪ್ರತಿಭೆಗಳನ್ನು ನೀಡಿದ, ಊರಿನಲ್ಲಿ ಸಂಸ್ಕೃತಿಯನ್ನು ಉಳಿಸಿದ ಕನ್ನಡದ ಶಾಲೆಗಳನ್ನು ಮುಂದಿನ ಜನಾಂಗಕ್ಕೆ ನೀಡಬೇಕಾದರೆ ಎಲ್ಲರ ಸಹಭಾಗಿತ್ವ ಅತೀ ಅಗತ್ಯ ಎಂದು ಕುಂಬಳೆ ಗ್ರಾಮ ಪಂಚಾಯತ್‌ ಅಧ್ಯಕ್ಷ ಕೆ.ಎಲ್‌.ಪುಂಡರೀಕಾಕ್ಷ ಹೇಳಿದರು.

ನಾರಾಯಣಮಂಗಲ ಅನುದಾನಿತ ಕಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವದ ಸಭಾಕಾರ್ಯಕ್ರಮವನ್ನು ದೀಪಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.

ಶಾಲಾ ವ್ಯವಸ್ಥಾಪಕ ಡಾ|ಕೆ.ವಿ.ತೇಜಸ್ವಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ಶಾಲೆಯನ್ನು ಉಳಿಸಿ ಬೆಳೆಸುವ ಮಹತ್ತರವಾದ ಜವಾಬ್ದಾರಿಯನ್ನು ಅರಿತು ನಾವು ಮುಂದುವರಿಯಬೇಕಿದೆ. ಶಾಲೆಯ ಬೆಳವಣಿಗೆಗೆ ಪೂರಕವಾದ ಎಲ್ಲಾ ವ್ಯವಸ್ಥೆಗಳನ್ನೂ ಕೈಗೊಳ್ಳಲಾಗುವುದು. ಊರವರು ತಮ್ಮ ಮಕ್ಕಳನ್ನು ಇಂತಹ ಗ್ರಾಮೀಣ ಶಾಲೆಗಳಿಗೆ ಸೇರಿಸುವ ಮೂಲಕ ಸಹಕರಿಸಬೇಕು ಎಂದರು. ಆರ್ಯ ಕಲಾಭಿವರ್ಧಕ ಸಂಘದ ಅಧ್ಯಕ್ಷ, ಶಾಲಾ ಹಳೆವಿದ್ಯಾರ್ಥಿ ಡಾ|ಸರ್ವೇಶ್ವರ ಭಟ್‌ ಪರೋಪಕಾರೀ ಮನೋಭಾವದಿಂದ ಇತರರ ಜತೆ ಸಂತಸದ ಜೀವನವನ್ನು ಕಳೆಯಬೇಕು ಎಂದರು. ಬ್ಲಾಕ್‌ ಪಂಚಾಯತ್‌ ಸದಸ್ಯ ಸತ್ಯಶಂಕರ ಭಟ್‌ , ಕುಂಬಳೆ ಗ್ರಾಮಪಂಚಾಯತ್‌ ವಾರ್ಡ್‌ ಸದಸ್ಯ ಮುರಳೀಧರ ಯಾದವ್‌ ನಾಯ್ಕಪು ಮೊದಲಾದವರು ಶುಭಹಾರೈಸಿದರು.

ಕನ್ನಡ ಹೋರಾಟ ಸಮಿತಿಯ ಉಪಾಧ್ಯಕ್ಷ ಮಹಾಲಿಂಗೇಶ್ವರ ಭಟ್‌ ಎಂ.ವಿ. ಮಾತನಾಡುತ್ತಾ ಕನ್ನಡವು ಈ ನೆಲದ ಸಂಸ್ಕೃತಿಯಾಗಿದೆ. ಭಾಷೆ, ಸಂಸ್ಕೃತಿ, ಜೀವನದ ಶೈಲಿಯನ್ನು ಉಳಿಸುವುದಕ್ಕೆ ನಾವು ಹೋರಾಡಬೇಕಾದ ಅನಿವಾರ್ಯಇದೆ. ಎಂದರು.

ನಿವೃತ್ತ ಮುಖ್ಯೋಪಾಧ್ಯಾಯ ನರಹರಿ ಮಾತನಾಡುತ್ತಾ ಅಧ್ಯಾಪಕ ನಿರಂತರವಾಗಿ ವಿದ್ಯಾರ್ಥಿಯಾಗಿದ್ದಾಗ ಮಾತ್ರ ಆತನಿಗೆ ವಿದ್ಯೆಯನ್ನು ಕಲಿಸಲು ಸಾಧ್ಯವಿದೆ. ತಂದೆ, ತಾಯಿ, ಗುರುಗಳನ್ನು ಪ್ರೀತಿಸುವ ಮಾನವೀಯ ಗುಣಗಳನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಸಹಜತೆಯನ್ನು ನೀಡುವ ಪ್ರಕೃತಿಯ ಮಡಿಲಲ್ಲಿರುವ ಶಾಲೆಗಳಲ್ಲಿ ಆಡಿ, ಪಾಡಿ ಬೆಳೆದ ಮಕ್ಕಳು ಜೀವನದಲ್ಲಿ ಗೆಲುವನ್ನು ಕಾಣಲು ಸಾಧ್ಯ ಎಂದರು.

ಈ ಸಂದರ್ಭದಲ್ಲಿ ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತ¤ರಾಗಲಿರುವ ಅಧ್ಯಾಪಕರುಗಳಾದ ಉಷಾದೇವಿ ಕೆ. ಮತ್ತು ಶಾಲಾ ಮುಖ್ಯೋಪಾಧ್ಯಾಯ ಕೆ. ಗೋಪಾಲಕೃಷ್ಣ ಭಟ್‌ ಕಬೆಕ್ಕೋಡು ಅವರನ್ನು ಸಮ್ಮಾನಿಸಲಾಯಿತು. ಅಧ್ಯಾಪಿಕೆಯರಾದ ಸುಪ್ರೀತಾ, ಜಯಶ್ರೀ ಅಭಿನಂದನಾ ಪತ್ರ ಓದಿದರು.

ಕುಂಬಳೆ ಉಪಜಿಲ್ಲಾ ವಿದ್ಯಾ ಕಾರಿ ಕೈಲಾಸಮೂರ್ತಿ, ಬಿಆರ್‌ಸಿ ಟ್ರೈನರ್‌ ಮೀನಾಕ್ಷಿ, ಎಸ್‌.ಎಂ.ಸಿ.ಅಧ್ಯಕ್ಷ ಐತ್ತಪ್ಪ, ನಿವೃತ್ತ ಅಧ್ಯಾಪಿಕೆ ಜಯಲಕ್ಷಿ$¾à, ಹಳೆವಿದ್ಯಾರ್ಥಿ ಸಂಘದ ಪ್ರತಿನಿ ಧಿ ಜಯಪ್ರಕಾಶ ನಾರಾಯಣಮಂಗಲ, ಪಿಟಿಎ ಅಧ್ಯಕ್ಷ ಗೋಪಾಲಕೃಷ್ಣ, ಮಾತೃ ಸಂಘದ ಅಧ್ಯಕ್ಷೆ ಹೇಮಲತ ಶುಭಹಾರೈಸಿದರು.

ಶಾಲಾಮುಖ್ಯೋಪಾಧ್ಯಾಯ ಗೋಪಾಲಕೃಷ್ಣ ಕೆ. ಸ್ವಾಗತಿಸಿದರು. ಆರ್ಯ ಕಲಾಭಿವರ್ಧಕ ಸಂಘದ ಕಾರ್ಯದರ್ಶಿ ಶ್ಯಾಮಪ್ರಸಾದ ಕಬೆಕ್ಕೋಡು ವಂದಿಸಿದರು. ಅಧ್ಯಾಪಿಕೆ ಮೇಬಲ್‌ ಡಿ’ಸೋಜ ನಿರೂಪಿಸಿದರು. ‌
ಹಳೆ ವಿದ್ಯಾರ್ಥಿಗಳಿಂದ ವಿವಿಧ ವಿನೋದಾವಳಿಗಳು ಪ್ರದರ್ಶನಗೊಂಡವು.

ಟಾಪ್ ನ್ಯೂಸ್

police

Belgavi; ವೇಶ್ಯಾವಾಟಿಕೆ ಆರೋಪ: ತಾಯಿ, ಮಗಳನ್ನು ರಸ್ತೆಗೆ ಎಳೆದು ಹಲ್ಲೆ!

snehamayi krishna

Snehamayi Krishna ವಿರುದ್ಧ ಕಾಂಗ್ರೆಸ್‌ನಿಂದ ಪೊಲೀಸರಿಗೆ ಮತ್ತೊಂದು ದೂರು

bsy

Covid ವೇಳೆ ಜೀವ ಉಳಿಸುವ ಕೆಲಸ ಮಾಡಿದ್ದೇವೆ: ಬಿಎಸ್‌ವೈ

Parameshwar

Waqf issue; ಬಿಜೆಪಿಯಿಂದ ಕೋಮು ಗಲಭೆಗೆ ಯತ್ನ: ಕಾಂಗ್ರೆಸ್‌

Chaluvarayaswamy

Kumaraswamy ಅವರಿಗೆ ಜತೆಗಿರುವಾಗ ಕೊಚ್ಚೆ ವಾಸನೆ ಬರಲಿಲ್ಲವೇ?: ಚಲುವರಾಯಸ್ವಾಮಿ ತಿರುಗೇಟು

Mangaluru-Sahakara

Mangaluru: ಸಹಕಾರ ಆಂದೋಲನ ಜನರ ಆಂದೋಲನವಾಗಲಿ: ಸಚಿವ ಕೆ.ಎನ್‌.ರಾಜಣ್ಣ

1-reee

BJP; 50 ಅಲ್ಲ ,100 ಕೋಟಿ ರೂ. ಆಮಿಷ: ಶಾಸಕ ರವಿ ಗಣಿಗ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kasargod: ನಾಟಕ ತಂಡ ಸಂಚರಿಸುತ್ತಿದ್ದ ಬಸ್‌ ಮಗುಚಿ ಇಬ್ಬರು ನಟಿಯರ ಸಾವು

Kasargod: ನಾಟಕ ತಂಡ ಸಂಚರಿಸುತ್ತಿದ್ದ ಬಸ್‌ ಮಗುಚಿ ಇಬ್ಬರು ನಟಿಯರ ಸಾವು

3

Kasaragod: ಎಡನೀರು ಶ್ರೀ ವಿಷ್ಣುಮಂಗಲ ದೇವಸ್ಥಾನದಿಂದ ಕಳವು; ಆರೋಪಿಯ ಬಂಧನ

Kumble: ಕುಂಬಳೆ ಪೇಟೆಯಲ್ಲಿ ವಿದ್ಯಾರ್ಥಿಗಳ ಹೊಡೆದಾಟ

Kumble: ಕುಂಬಳೆ ಪೇಟೆಯಲ್ಲಿ ವಿದ್ಯಾರ್ಥಿಗಳ ಹೊಡೆದಾಟ

police

Kumbala: ಸಂತ್ರಸ್ತೆಯ ತಾಯಿ ಆತ್ಮಹ*ತ್ಯೆ: ಸಚಿತಾ ರೈ ವಿರುದ್ಧ ಮತ್ತೊಂದು ದೂರು ದಾಖಲು

Arrest

Madikeri: ಕುಶಾಲನಗರ ಕಳವು ಪ್ರಕರಣ: ಇಬ್ಬರ ಬಂಧನ

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

police

Belgavi; ವೇಶ್ಯಾವಾಟಿಕೆ ಆರೋಪ: ತಾಯಿ, ಮಗಳನ್ನು ರಸ್ತೆಗೆ ಎಳೆದು ಹಲ್ಲೆ!

snehamayi krishna

Snehamayi Krishna ವಿರುದ್ಧ ಕಾಂಗ್ರೆಸ್‌ನಿಂದ ಪೊಲೀಸರಿಗೆ ಮತ್ತೊಂದು ದೂರು

bsy

Covid ವೇಳೆ ಜೀವ ಉಳಿಸುವ ಕೆಲಸ ಮಾಡಿದ್ದೇವೆ: ಬಿಎಸ್‌ವೈ

Parameshwar

Waqf issue; ಬಿಜೆಪಿಯಿಂದ ಕೋಮು ಗಲಭೆಗೆ ಯತ್ನ: ಕಾಂಗ್ರೆಸ್‌

Chaluvarayaswamy

Kumaraswamy ಅವರಿಗೆ ಜತೆಗಿರುವಾಗ ಕೊಚ್ಚೆ ವಾಸನೆ ಬರಲಿಲ್ಲವೇ?: ಚಲುವರಾಯಸ್ವಾಮಿ ತಿರುಗೇಟು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.