ಶೇ.12.62ರಷ್ಟು ಅಭ್ಯರ್ಥಿಗಳು ಶಿಕ್ಷಕರ ಅರ್ಹತಾ ಪರೀಕ್ಷೇಲಿ ಪಾಸ್
Team Udayavani, Mar 10, 2019, 12:25 AM IST
ಬೆಂಗಳೂರು: ಸಾರ್ವಜನಿಕ ಶಿಕ್ಷಣ ಇಲಾಖೆಯ ಕೇಂದ್ರೀಕೃತ ದಾಖಲಾತಿ ಘಟಕ ನಡೆಸಿದ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ(ಟಿಇಟಿ) ಶೇ.12.62ರಷ್ಟು ಅಭ್ಯರ್ಥಿಗಳು ತೇರ್ಗಡೆ ಹೊಂದಿದ್ದಾರೆ.
ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗೆಅರ್ಜಿ ಸಲ್ಲಿಸುವ ಅಭ್ಯರ್ಥಿ ಗಳು ಕಡ್ಡಾಯವಾಗಿ ಟಿಇಟಿ ತೇರ್ಗಡೆ ಹೊಂದಿರಬೇಕು. ಪೇಪರ್-1ರಲ್ಲಿ ತೇರ್ಗಡೆ ಹೊಂದಿದವರು ಒಂದರಿಂದ ಐದನೇ ತರಗತಿ ಹಾಗೂ ಪೇಪರ್-2ರಲ್ಲಿ ತೇರ್ಗಡೆ ಹೊಂದಿದವರು 6ರಿಂದ 8ನೇ ತರಗತಿ ಶಿಕ್ಷಕರಾಗಿ ಸೇವೆ ಸಲ್ಲಿಸಲು ಅರ್ಹತೆ ಪಡೆದಿರುತ್ತಾರೆ.ಪತ್ರಿಕೆ-1ರಲ್ಲಿ 87,166, ಪತ್ರಿಕೆ-2ರಲ್ಲಿ 1,72,907 ಅಭ್ಯರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದರು. ಫೆ.3ರಂದು ನಡೆದ ಟಿಇಟಿ ಪರೀಕ್ಷೆಯಲ್ಲಿ ಪತ್ರಿಕೆ-1ರಲ್ಲಿ 79,280 ಹಾಗೂ ಪತ್ರಿಕೆ-2ರಲ್ಲಿ 1,60,583 ಅಭ್ಯರ್ಥಿಗಳು ಹಾಜರಾಗಿದ್ದರು. ಒಟ್ಟಾರೇ ಪರೀಕ್ಷೆ ಬರೆದಿರುವ 2,39,863 ಅಭ್ಯರ್ಥಿಗಳಲ್ಲಿ 30,274 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ.
ಪೇಪರ್-1ರಲ್ಲಿ ಶೇ.60ರಷ್ಟು ಅಂಕದೊಂದಿಗೆ 1593, ಶೇ.55ರಷ್ಟು ಅಂಕದೊಂದಿಗೆ 1560 ಅಭ್ಯರ್ಥಿಗಳು ಮತ್ತು ಪತ್ರಿಕೆ-2ರಲ್ಲಿ ಶೇ.60ರಷ್ಟು ಅಂಕದೊಂದಿಗೆ 17054, ಶೇ.50ರಷ್ಟು ಅಂಕದೊಂದಿಗೆ 10067 ಅಭ್ಯರ್ಥಿಗಳು ತೇರ್ಗಡೆಹೊಂದಿದ್ದಾರೆ.
ಪತ್ರಿಕೆ-1ರಲ್ಲಿ ಶೇ.3.98 ಹಾಗೂ ಪೇಪರ್-2ರಲ್ಲಿ 16.89ರಷ್ಟು ಫಲಿತಾಂಶ ಬಂದಿದೆ.ಪರೀಕ್ಷೆಯ ಕೀ ಉತ್ತರವನ್ನು ಫೆ.18ರಂದು ಬಿಡಲಾಗಿತ್ತು. 17472 ಆಕ್ಷೇಪಣೆಗಳು ಬಂದಿದ್ದವು. ಆಕ್ಷೇಪಣೆಗಳನ್ನು ತಜ್ಞರಿಂದ ಪರಿಶೀಲಿಸಿ ಮಾ.8ರಂದು ಅಂತಿಮ ಕೀ ಉತ್ತರ ಪ್ರಕಟಿಸಲಾಗಿತ್ತು. ಈ ಬಾರಿ ಟಿಇಟಿಯಲ್ಲಿ ಪತ್ರಿಕೆ-1ರಲ್ಲಿ ಕಡಿಮೆ ಅಭ್ಯರ್ಥಿಗಳು ಹಾಗೂ ಪತ್ರಿಕೆ-2ರಲ್ಲಿ ಹೆಚ್ಚು ಅಭ್ಯರ್ಥಿಗಳು ತೇರ್ಗಡೆ ಹೊಂದಿದ್ದಾರೆ .
ಎಲೆಕ್ಟ್ರಾನಿಕ್ಸ್ ಅಂಕಪಟ್ಟಿ: ತೇರ್ಗಡೆ ಹೊಂದಿರುವ ಅಭ್ಯರ್ಥಿಗಳಿಗೆ ಎಲೆಕ್ಟ್ರಾನಿಕ್ಸ್ ಅಂಕಪಟ್ಟಿ ಒದಗಿಸಲಾಗುತ್ತದೆ. ತಮ್ಮ ಹೆಸರಿನ ಮೊದಲ ಮೂರು ಅಕ್ಷರ ಅಥವಾ ಹುಟ್ಟಿದ ದಿನಾಂಕ ನಮೂದಿಸಿ ಅಂಕಪಟ್ಟಿ ಪಡೆಯಬಹುದಾಗಿದೆ. ವಾರದೊಳಗೆ ಈ ಸಂಬಂಧ ಲಿಂಕ್ ಅನ್ನು ಕೇಂದ್ರೀಕೃತ ದಾಖಲಾತಿ ಘಟಕದ ವೆಬ್ ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CID ನೂತನ ಡಿಐಜಿಪಿ ಆಗಿ ಶಾಂತನು ಸಿನ್ಹಾ
Guarantee schemes; ಸಿದ್ದರಾಮಯ್ಯ ವಿರುದ್ಧದ ಅರ್ಜಿ: ವಿಚಾರಣೆ ಡಿ. 6ಕ್ಕೆ ಮುಂದೂಡಿಕೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.