ತಳ ಮಟ್ಟದಲ್ಲಿ ಗಟ್ಟಿಗೊಳ್ಳದ ಕೈ ಪಡೆ
Team Udayavani, Mar 10, 2019, 12:56 AM IST
ಬೆಂಗಳೂರು: ಲೋಕಸಭೆ ಚುನಾವಣೆಗೆ ಭರ್ಜರಿ ಸಿದ್ಧತೆಯಲ್ಲಿ ತೊಡಗಿರುವ ಕಾಂಗ್ರೆಸ್ಗೆ ತಳಮಟ್ಟದಲ್ಲಿ ಪಕ್ಷ ಸಂಘಟನೆ ಸಕ್ರಿಯವಾಗದಿರುವುದು ರಾಜ್ಯ ನಾಯಕರಿಗೆ ತಲೆನೋವಾಗಿದೆ. ಚುನಾವಣೆಯನ್ನು ವ್ಯವಸ್ಥಿತವಾಗಿ ಎದುರಿಸಲು ರಾಜ್ಯ ಮಟ್ಟದಲ್ಲಿಅಭ್ಯರ್ಥಿಗಳ ಆಯ್ಕೆಗೆ ಚುನಾವಣಾ ಸಮಿತಿ, ಪ್ರಚಾರ ಸಮಿತಿ, ಸಮನ್ವಯ ಸಮಿತಿ, ಪಬ್ಲಿಸಿಟಿ ಕಮಿಟಿ, ಮಾಧ್ಯಮ ಸಮನ್ವಯ ಸಮಿತಿ ಜೊತೆಗೆ ಚುನಾವಣಾ ನಿರ್ವಹಣಾ ಸಮಿತಿಗಳನ್ನು ರಚನೆ ಮಾಡಲಾಗಿದ್ದು, ಈ ಚುನಾವಣೆಯನ್ನು ಸಂಘಟಿತ ಹಾಗೂ ವ್ಯವಸ್ಥಿತವಾಗಿ ಎದುರಿಸಿ ಹೆಚ್ಚಿನ ಸ್ಥಾನ ಗಳಿಸಲು ಕಾಂಗ್ರೆಸ್ ಲೆಕ್ಕಾಚಾರ ಹಾಕಿಕೊಂಡಿದೆ.
ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಸಂಘಟನೆ ಹಾಗೂ ಜನ ಸಂಪರ್ಕ ಅಭಿಯಾನ ಸೇರಿದಂತೆ ಪಕ್ಷದ ಯೋಜನೆಗಳನ್ನು ಮತದಾರರ ಮನೆಗೆ ಬೂತ್ ಮಟ್ಟದ ಕಾರ್ಯಕರ್ತರು ತಲುಪಿಸುವಂತೆ ನೋಡಿಕೊಳ್ಳಲೆಂದೇ ಉಸ್ತುವಾರಿ ಕಾರ್ಯದರ್ಶಿಗಳನ್ನು ನೇಮಕ ಮಾಡಲಾಗಿದೆ. ಆದರೆ, ಬಿಜೆಪಿಯ ಸಂಘಟನೆ ಹಾಗೂ ಪ್ರಚಾರದ ವೇಗ ಗಮನಿಸಿದರೆ, ಮತದಾರರ ಮನೆ ತಲುಪುವಲ್ಲಿ ಕಾಂಗ್ರೆಸ್ ಇನ್ನೂ ಬಹಳ ಹಿಂದೆ ಉಳಿದಿದೆ ಎಂಬ ಅಭಿಪ್ರಾಯ ಪಕ್ಷದ ವಲಯದಲ್ಲಿಯೇ ಕೇಳಿ ಬರುತ್ತಿದೆ.
ಬಿಜೆಪಿಯಲ್ಲಿ ಚುನಾವಣೆ ಸಿದಟಛಿತೆಗೆ ಕಾರ್ಯಕರ್ತರ ವಿಶೇಷ ಪಡೆಯೇ ಇರುವುದರಿಂದ ಪ್ರತಿ ಚುನಾವಣೆ ಬಂದಾಗಲೂ ಕಾರ್ಯಕರ್ತರು, ಸಂಘಟಿತರಾಗಿ ಪಕ್ಷದ ಆದೇಶಗಳನ್ನು ಮತದಾರರಿಗೆ ತಲುಪಿಸಿ, ಪಕ್ಷದ ಪರ ಮತಗಳಾಗಿ ಪರಿವರ್ತಿಸುವ ಕೆಲಸವನ್ನು ವೇಗವಾಗಿ ಮಾಡುತ್ತಾರೆ. ಆದರೆ, ಕಾಂಗ್ರೆಸ್ನಲ್ಲಿಯೂ ಅದೇ ರೀತಿಯ ಕೇಡರ್ ಬೇಸ್ನಲ್ಲಿ ಪಕ್ಷವನ್ನು ಸಂಘಟಿಸುವ ಪ್ರಯತ್ನ ನಡೆಯುತ್ತಿದೆಯಾದರೂ, ಅದು ಗಟ್ಟಿಯಾಗಿ ನಿಲ್ಲುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.
ಡಾ.ಜಿ. ಪರಮೇಶ್ವರ್ ಕೆಪಿಸಿಸಿ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಕೆ.ಸಿ.ವೇಣುಗೋಪಾಲ್ ರಾಜ್ಯ ಕಾಂಗ್ರೆಸ್ ಉಸ್ತುವಾರಿಯಾಗಿ ನೇಮಕಗೊಂಡ ತಕ್ಷಣ ಪಕ್ಷವನ್ನು ತಳ ಮಟ್ಟದಿಂದ ಕೇಡರ್ ಬೇಸ್ನಲ್ಲಿ ಸಂಘಟಿಸಲು ಬೂತ್ ಮಟ್ಟದ ಸಮಿತಿ ರಚನೆಗೆ ಪ್ರಯತ್ನ ನಡೆಸಿದರು. ಪ್ರತಿ ವಾರ್ಡ್ಗಳಲ್ಲಿ ಬೂತ್ ಸಮಿತಿ ರಚಿಸುವಂತೆ ಕಡ್ಡಾಯ ಆದೇಶ ಹೊರಡಿಸಿದ್ದರು. ಆದರೆ ಅದರ ಯಶಸ್ಸಿನ ಬಗ್ಗೆ ಇನ್ನೂ ಗೊಂದಲವಿದೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕಾರ್ಯಕರ್ತರೊಂದಿಗೆ ನೇರವಾಗಿ ಸಂಪರ್ಕ ಹೊಂದಲು ಶಕ್ತಿ ಯೋಜನೆ ಜಾರಿಗೆ ತಂದರು. ರಾಜ್ಯದಲ್ಲಿ ಸುಮಾರು 15 ಲಕ್ಷ ಕಾರ್ಯಕರ್ತರನ್ನು ನೋಂದಣಿ ಮಾಡಲಾಗಿದೆ ಎಂದು ಪಕ್ಷದ ನಾಯಕರು ಹೇಳಿಕೊಳ್ಳುತ್ತಿದ್ದಾರೆ. ಆದರೆ ಆ ಯೋಜನೆಯ ವಾಸ್ತವ ಸತ್ಯವೇ ಬೇರೆ ಎಂದು ಕಾಂಗ್ರೆಸ್ ಕಾರ್ಯಕರ್ತರೇ ಮಾತನಾಡಿಕೊಳ್ಳುತ್ತಾರೆ.
ಇನ್ನೂ ಫೀಲ್ಡಿಗಿಳಿಯದ ಪ್ರಚಾರ ಸಮಿತಿ: ಚುನಾವಣೆ ದೃಷ್ಟಿಯಿಂದಲೇ ಎಚ್.ಕೆ. ಪಾಟೀಲ್ ನೇತೃತ್ವದಲ್ಲಿ ಹೊಸದಾಗಿ ಪ್ರಚಾರ ಸಮಿತಿ ನೇಮಕ ಮಾಡಲಾಗಿದ್ದರೂ, ಆ ಸಮಿತಿ ಇನ್ನೂ ಚುನಾವಣೆ ಪ್ರಚಾರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿಲ್ಲ. ಎಚ್.ಕೆ. ಪಾಟೀಲ್ ರಾಜ್ಯಾಧ್ಯಕ್ಷರಾಗಿ ನೇಮಕವಾಗಿ 2 ತಿಂಗಳು ಕಳೆಯುತ್ತ ಬಂದಿದ್ದರೂ, ಪ್ರಚಾರ ಸಮಿತಿಗೆ ಜಿಲ್ಲಾ ಹಾಗೂ ಬ್ಲಾಕ್ ಮಟ್ಟದ ಅಧ್ಯಕ್ಷರ ನೇಮಕ ಮಾಡುವ ಪ್ರಕ್ರಿಯೆಯಲ್ಲಿ ಇನ್ನೂ ಅಳೆದು ತೂಗಿ ನೋಡುವ ಲೆಕ್ಕಾಚಾರ ನಡೆಯುತ್ತಿದೆ.
ಪರಿವರ್ತನಾ ಯಾತ್ರೆಗಳ ಮೊರೆ: ಚುನಾವಣೆ ದಿನಾಂಕ ಘೋಷಣೆಗೆ ಕ್ಷಣಗಣನೆ ಆರಂಭವಾಗಿರುವುದರಿಂದ ಕೆಪಿಸಿಸಿ ಅಧ್ಯಕ್ಷರು ಜಿಲ್ಲಾ ಮಟ್ಟದಲ್ಲಿ ಪರಿವರ್ತನಾ ಯಾತ್ರೆಗಳನ್ನು ಆರಂಭಿಸಿದ್ದಾರೆ. ಪ್ರತಿ ಜಿಲ್ಲೆಯಲ್ಲಿಯೂ ಪರಿವರ್ತನಾ ಯಾತ್ರೆಯ ಮೂಲಕ ಕಾಂಗ್ರೆಸ್ನ ಸಾಧನೆಗಳನ್ನು ಜನರಿಗೆ ತಲುಪಿಸುವ ಪ್ರಯತ್ನ ಮುಂದುವರೆಸಿದ್ದಾರೆ. ಈ ಮೂಲಕ ಕಾರ್ಯಕರ್ತರನ್ನು ಸಕ್ರಿಯರಾಗಿಡುವುದರ ಜೊತೆಗೆ ಜಿಲ್ಲಾ ಮಟ್ಟದಲ್ಲಿ ಮತದಾರರನ್ನೂ ತಲುಪುವ ಕಸರತ್ತು ನಡೆಸಿದ್ದಾರೆ.
ಸೋಶಿಯಲ್ ಮಿಡಿಯಾ
ಕಳೆದ ಚುನಾವಣೆಯಲ್ಲಿ ಬಿಜೆಪಿ ಸಾಮಾಜಿಕ ಜಾಲ ತಾಣವನ್ನೇ ಹೆಚ್ಚಾಗಿ ಬಳಸಿಕೊಂಡು ಮತದಾರರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಕಾಂಗ್ರೆಸ್ ಕೂಡ ಸಾಮಾಜಿಕ ಜಾಲತಾಣದ ಮಹತ್ವ ಅರಿತು. ಸಾಮಾಜಿಕ ಜಾಲ ತಾಣ ನಿರ್ವಹಿಸಲು ಪ್ರತ್ಯೇಕ ವಿಭಾಗವನ್ನೇ ರಚಿಸಿ ಚುನಾವಣಾ ಕಾರ್ಯಕ್ಕಿಳಿಸಿದೆ. ಆದರೆ, ಸಾಮಾಜಿಕ ಜಾಲತಾಣ ವಿಭಾಗ ಕಾಂಗ್ರೆಸ್ನ ಸಾಧನೆಗಳನ್ನು ಜನರಿಗೆ ತಲುಪಿಸುವ ಕೆಲಸಕ್ಕಿಂತ ಬಿಜೆಪಿಯ ತಪ್ಪುಗಳನ್ನು ಪತ್ತೆ ಹಚ್ಚುವುದರಲ್ಲಿಯೇ ತೊಡಗಿಕೊಂಡಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಶಂಕರ ಪಾಗೋಜಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
AI world: ಕ್ರಿಮಿನಲ್ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
MUST WATCH
ಹೊಸ ಸೇರ್ಪಡೆ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ನವೆಂಬರ್ 26-30: ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.