ಸುಫಾರಿ ಹತ್ಯೆಗೆ ಸಂಚು: ಸ್ಪಷ್ಟನೆ ನೀಡಿದ ಯಶ್
Team Udayavani, Mar 10, 2019, 1:01 AM IST
ಬೆಂಗಳೂರು: ತಮ್ಮ ಹತ್ಯೆಗೆ ಸ್ಕೆಚ್ ರೂಪಿಸಲಾಗಿತ್ತು ಎನ್ನುವ ಊಹಾಪೋಹಕ್ಕೆ ನಟ ಯಶ್ ತೆರೆ ಎಳೆದಿದ್ದಾರೆ. ಈ
ಸಂಬಂಧ ಸುದ್ದಿಗೋಷ್ಠಿ ನಡೆಸಿದ ಯಶ್, ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದ ಸುದ್ದಿಗಳಿಗೆ ಸ್ಪಷ್ಟನೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಯಶ್, “ಸುಪಾರಿ ಪ್ರಕರಣದಲ್ಲಿ ನನ್ನ ಹೆಸರೇ ಇಲ್ಲ, ನನಗೂ ಇದಕ್ಕೂ ಸಂಬಂಧವಿಲ್ಲ. ಈ ವಿಷಯದಲ್ಲಿ ಕೆಲವು ಮಾಧ್ಯಮಗಳಲ್ಲಿ ವಿನಾ ಕಾರಣ ನನ್ನ ಹೆಸರನ್ನು ಬಳಸಿಕೊಳ್ಳಲಾಗುತ್ತಿದೆ.
ಈ ಸುದ್ದಿ ನೋಡಿದ ಮೇಲೆ ಸ್ವತಃ ನಾನೇ ಗೃಹ ಸಚಿವರ ಬಳಿ ಹಾಗೂ ಪೊಲೀಸ್ ಅಧಿಕಾರಿಗಳ ಬಳಿ ಮಾತನಾಡಿದ್ದೇನೆ. ಎಫ್ಐಆರ್ ಅಥವಾ ಈ ಪ್ರಕರಣದಲ್ಲಿ ನನ್ನ ಹೆಸರಿಲ್ಲ ಎಂದು ಅವರೇ ಖಚಿತ ಪಡಿಸಿದ್ದಾರೆ’ ಎಂದು ತಿಳಿಸಿದ್ದಾರೆ.
“ಯಾರೋ ಬಂದು ಕೊಲೆ ಮಾಡೋದಕ್ಕೆ ನಾನೇನು ಕೋಳಿನಾ..ಕುರಿನಾ..? ನಾನೇನು, ನನ್ನ ಶಕ್ತಿಯೇನು ಅಂತ ನನಗೆ ಗೊತ್ತಿದೆ. ಬೇರೆಯವರಿಗೂ ಗೊತ್ತಾಗಲಿ ಅಂತಾನೇ ನಾನು ನಿಮ್ಮ ಮುಂದೆ ಬಂದಿದ್ದೀನಿ. ಆದ್ರೆ, ಆ ರೀತಿ
ಯಾವುದೇ ಘಟನೆ ನಡೆದಿಲ್ಲ. ಇದೆಲ್ಲ ಎಲ್ಲಿಂದ ಆರಂಭವಾಗಿದೆ, ಹೇಗೆ ಹರಡುತ್ತಿದೆ ಎಂಬುದು ಗೊತ್ತಿಲ್ಲ. ದಯವಿಟ್ಟು ಯಾರೂ ಇಂತಹ ಸುದ್ದಿಗಳಿಗೆ ಕಿವಿಕೊಡಬೇಡಿ’ ಎಂದು ಯಶ್ ಮನವಿ ಮಾಡಿದರು.
ನಮ್ಮ ಇಂಡಸ್ಟ್ರಿಯಲ್ಲಿ ಅಂಥವರಿಲ್ಲ: ಸಾಮಾಜಿಕ ಜಾಲತಾಣದಲ್ಲಿ ಇದು ಕೆಟ್ಟ ಪರಿಣಾಮ ಬೀರುತ್ತಿದೆ. ಇನ್ನೊಬ್ಬ ನಟ ಯಾರೋ ಸುಪಾರಿ ಕೊಟ್ಟಿರಬಹುದು ಎಂಬ ಮಾತುಗಳು ಚರ್ಚೆಯಾಗ್ತಿದೆ. ಇದೆಲ್ಲ ನಮ್ಮ ಇಂಡಸ್ಟ್ರಿಯಲ್ಲಿ ಇಲ್ಲ. ನಮ್ಮಲ್ಲಿ ಯಾರೂ ಆ ರೀತಿ ಯೋಚನೆ ಕೂಡ ಮಾಡಲ್ಲ. ಆ ರೀತಿ ಇದ್ದರೇ ದಾಖಲೆ ಕೊಡಿ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ತುಬಚಿ- ಬಬಲೇಶ್ವರ ಏತ ನೀರಾವರಿ: 3,048 ಎಕರೆ ಸ್ವಾಧೀನ, ಹಣ ಬಿಡುಗಡೆಗೆ ಎಂ.ಬಿ.ಪಾಟೀಲ ಸೂಚನೆ
Vijayapura; ಕಾರ್ಮಿಕರ ಕೂಡಿ ಹಾಕಿ ರಾಕ್ಷಸಿ ಕೃತ್ಯ: ಎಲ್ಲ 5 ಆರೋಪಿಗಳ ಬಂಧನ
BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ
Farmers; ಕಬ್ಬು ಹಾನಿಗೆ ಪರಿಹಾರ ನಿಧಿ,ತೊಗರಿಗೆ ಪ್ರೋತ್ಸಾಹ ಧನ: ಸಚಿವ ಶಿವಾನಂದ ಪಾಟೀಲ್
Congress; ಸುರ್ಜೇವಾಲ ವಿರುದ್ಧ ಸಚಿವರಿಂದಲೇ ದೂರು?: ಸತೀಶ್ ಜಾರಕಿಹೊಳಿ ಹೇಳಿದ್ದೇನು?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.