ಕಾರು ಪ್ರಿಯರ ನಿದ್ದೆಗೆಡಿಸಿದ ಜಿನೇವಾ ಮೋಟಾರ್ ಶೋ
Team Udayavani, Mar 11, 2019, 12:30 AM IST
ಜಿನೀವಾದಲ್ಲಿ ಮೋಟರ್ ಶೋ ಆರಂಭವಾಗಿದೆ. ಮುಂಬರುವ ದಿನಗಳಲ್ಲಿ ಯಾವ್ಯಾವ ಕಂಪನಿ ಎಂತೆಂಥ ಮಾದರಿ, ವಿನ್ಯಾಸದ ಕಾರುಗಳನ್ನು ಮಾರುಕಟ್ಟೆಗೆ ತರುತ್ತದೆ ಎಂಬ ಸಂಗತಿಗಳು ಅಲ್ಲಿ ಜಗಜ್ಜಾಹೀರಾಗುತ್ತವೆ. ಮುಂದಿನ ದಿನಗಳಲ್ಲಿ ಸದ್ದು ಮಾಡಲಿರುವ ಕಾರುಗಳ ಪರಿಚಯ ಇಲ್ಲಿದೆ…
ಸ್ವಿಜರ್ಲೆಂಡ್‌ನ ಜಿನೇವಾ ಮೋಟಾರ್ ಶೋ ಅಂದರೆ ಸಾಕು, ಕಾರು ಪ್ರಿಯರಿಗೆ ನಿದ್ದೆಗೆಡುತ್ತದೆ. ಯಾವೆಲ್ಲ ಮಾದರಿಯ ಕಾರು ಈ ಬಾರಿ ಬರುತ್ತದೆ? ಕಾನ್ಸೆಪ್ಟ್ ಕಾರುಗಳು ಹೇಗಿರಬಹುದು? ವಿನ್ಯಾಸ, ಎಷ್ಟು ಶಕ್ತಿಶಾಲಿಯಾಗಿರಬಹುದು? ಏನು ವಿಶೇಷತೆ ಇರಬಹುದು ಎಂಬುದರ ಬಗ್ಗೆಯೇ ಕುತೂಹಲವಿರುತ್ತದೆ. ಈ ಕುತೂಹಲ ತಣಿಸುವಂತೆ ಮೋಟಾರ್ ಶೋ ಕೂಡ ಇರುತ್ತದೆ. ಇಂತಹ ಮೋಟಾರ್ ಶೋ ಇದೀಗ ಜಿನೇವಾದಲ್ಲಿ ನಡೆಯುತ್ತಿದೆ. ಮಾ.7ರಿಂದ 17ರವರೆಗೆ ಈ ಶೋ ನಡೆಯಲಿದ್ದು, ಭಾರತದ ಟಾಟಾ, ಮಹೀಂದ್ರಾ ಸೇರಿದಂತೆ ಜಗತ್ತಿನ ದಿಗ್ಗಜ ಕಾರು ಕಂಪನಿಗಳು ಕಾರುಗಳನ್ನು ಪ್ರದರ್ಶಿಸಿವೆ. ಅದರಲ್ಲೂ ಕಾನ್ಸೆಪ್ಟ್ ಕಾರುಗಳನ್ನು ಪ್ರದರ್ಶಿಸಲಾಗಿದ್ದು, ಯಾವೆಲ್ಲ ಕಂಪನಿಗಳು ಏನನ್ನು ಪ್ರದರ್ಶಿಸಿವೆ ಎಂಬುದನ್ನು ಒಂದು ರೌಂಡ್ ನೋಡ್ಕೊಂಡು ಬರೋಣ..
ಆಸ್ಟಾನ್ ಮಾರ್ಟಿನ್ ವಾಂಕ್ವಿಶ್
ಸೂಪರ್‌ಕಾರ್‌ಗಳ ತಯಾರಿಕಾ ಕಂಪನಿ ಆಸ್ಟಾನ್ ಮಾರ್ಟಿನ್, ವಾಂಕ್ವಿಶ್ ಹೆಸರಿನ ಹೊಸ ಕಾರನ್ನು ಪ್ರದರ್ಶಿಸಿದೆ. ಇದು ಹೈಬ್ರಿಡ್ ಕಾರ್ ಆಗಿದ್ದು, ರಸ್ತೆಯಲ್ಲಿ ಅತ್ಯುನ್ನತ ಸಾಮರ್ಥ್ಯ ತೋರುವಂತೆ ವಿನ್ಯಾಸ ಮಾಡಲಾಗಿದೆ. ಎರಡು ಸೀಟರ್‌ನ ಕಾರು ಇದಾಗಿದ್ದು, ಬ್ಯಾಟರಿ, ಪೆಟ್ರೋಲ್‌ನಲ್ಲಿ ಚಲಿಸಲಿದೆ.
ಆಡಿ ಕ್ಯೂ 4 ಇ
ಪ್ರಸಿದ್ಧ ಎಸ್‌ಯುವಿ ತಯಾರಿಕಾ ಕಂಪೆನಿಯ ಹೊಸ ಮಾದರಿಯ ಎಲೆಕ್ಟ್ರಿಕ್ ಎಸ್‌ಯುವಿ ಇದು. ಸಂಪೂರ್ಣ ಎಲೆಕ್ಟ್ರಿಕ್ ಕಾರು ಇದಾಗಿದ್ದು, 2021ರವೇಳೆಗೆ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ ಎಂದು ಆಡಿ ಕಂಪೆನಿ ಹೇಳಿಕೊಂಡಿದೆ. ಸಿಂಗಲ್ ಚಾರ್ಜ್‌ಗೆ 480 ಕಿ.ಮೀ.ವರೆಗೆ ಸಂಚರಿಸಲಿದೆ. 82 ಕಿ.ವ್ಯಾ.ನ ಬ್ಯಾಟರಿ ಹಾಗೂ ಅತ್ಯಾಧುನಿಕ ಫೀಚರ್ಗಳನ್ನು ಹೊಂದಿದೆ ಎಂದು ಆಡಿ ಹೇಳಿಕೊಂಡಿದೆ.
ಬುಗಟ್ಟಿ ಲಾ ವೋಯcರ್ ನೋಯ್
ಸೂಪರ್ ಕಾರುಗಳನ್ನು ತಯಾರಿಸುವ ಬುಗಟ್ಟಿ ಕಂಪನಿಯವರ ಹೊಸ ಕಾರಿದು. ಲಾ ವೋಯcರ್ ಅಂದರೆ ಫ್ರೆಂಚ್ ಭಾಷೆಯಲ್ಲಿ ಕಪ್ಪು ಕಾರು ಎಂದರ್ಥ. ಸಂಪೂರ್ಣ ಕಾರ್ಬನ್ ಫೈಬರ್ ಬಾಡಿಯನ್ನು ಇದು ಹೊಂದಿದ್ದು, ಒಟ್ಟು 6 ಎಕ್ಸಾಸ್ಟ್‌ಗಳನ್ನು ಹೊಂದಿದೆ. ಭಾರೀ ಎಂಜಿನ್ ಸಾಮರ್ಥ್ಯ ಇದಕ್ಕಿದೆ ಎಂದು ಹೇಳಲಾಗಿದೆ. ಆದರೆ ಇದರ ಶಕ್ತಿ ಸಾಮರ್ಥ್ಯ ಎಷ್ಟು ಎಂದು ಮಾತ್ರ ಕಂಪನಿ ಗುಟ್ಟು ಬಿಟ್ಟುಕೊಟ್ಟಿಲ್ಲ.
ಹೋಂಡಾ ಇ ಪ್ರೊಟೋಟೈಪ್
ಹೋಂಡಾದ ಎಲೆಕ್ಟ್ರಿಕ್ ಕಾರು. ಮುಂದಿನ ಎರಡು ವರ್ಷದೊಳಗೆ ಮಾರುಕಟ್ಟೆಗೆ ಬರುವ ನಿರೀಕ್ಷೆ ಇದೆ. ಸಿಂಗಲ್ ಚಾರ್ಜ್‌ಗೆ ಸುಮಾರು 200 ಕಿ.ಮೀ.ಯಷ್ಟು ಕ್ರಮಿಸಬಲ್ಲದು. ಪಕ್ಕಾ ಪೇಟೆ ಕಾರು ಇದು. ಒಳಭಾಗದಲ್ಲಿ ಡ್ಯಾಶ್‌ಬೋರ್ಡ್ ಪೂರ್ತಿ ಟಚ್‌ಸ್ಕ್ರೀನ್ ಹೊಂದಿದ ನಿಯಂತ್ರಕ ವ್ಯವಸ್ಥೆ ಅತ್ಯಾಧುನಿಕ ಫೀಚರ್ಗಳನ್ನು ಹೊಂದಿದೆ. ಆಧುನಿಕ ರಿಯರ್‌ಡ್ರೈವ್ ವ್ಯವಸ್ಥೆಯನ್ನು ಇದು ಹೊಂದಿರುವ ಇದರಲ್ಲಿ ರಿಯರ್ ವ್ಯೂ ಮಿರರ್ ಬದಲಿಗೆ ಕ್ಯಾಮೆರಾ ಇರಲಿದೆ. ಹಿಂದಿನ ಕಾರು ಎಷ್ಟು ದೂರದಲ್ಲಿದೆ ಇತ್ಯಾದಿ ಸಂಜ್ಞೆಗಳನ್ನೂ ಇದು ಕೊಡಲಿದೆ.
ಫಿನಿನ್‌ಫಾರೈನಾ ಬಟ್ಟಿಸಾ
ನೋಡಲು ಥೇಟ್ ಫೆರಾರಿಯಂತೆ ಕಾಣಿಸುತ್ತದೆ. ಆದರೆ ಇದು ಫೆರಾರಿ ಅಲ್ಲ. ಫಿನಿನ್‌ಫಾರೈನಾ ಇಟಲಿಯ ಕಾರು ಕಂಪನಿಯಾಗಿದ್ದು, ಸಂಪೂರ್ಣ ಎಲೆಕ್ಟ್ರಿಕ್ ಸೂಪರ್‌ಕಾರ್ ಅನ್ನು ಪ್ರದರ್ಶಿಸಿದೆ. ಅಚ್ಚರಿದಾಯಕ ಸಂಗತಿ ಎಂದರೆ ಈ ಕಂಪನಿಯ ಮಾತೃ ಕಂಪನಿ ಭಾರತದ ಮಹೀಂದ್ರಾ. ಈ ಕಾರಿನ ಹೆಚ್ಚುಗಾರಿಕೆಯೆಂದರೆ ಈಗಿನ ಫಾರ್ಮುಲಾ 1 ಕಾರಿಗಿಂತಲೂ ಈ ಕಾರು ಅತ್ಯಧಿಕ ವೇಗದಲ್ಲಿ ಹೋಗುತ್ತಂತೆ. ಇದು ಮುಂಬರುವ ದಿನಗಳಲ್ಲಿ ಹೈಸ್ಪೀಡ್ ಸೂಪರ್‌ಕಾರ್ ಆಗಿರಲಿದೆ ಎಂದು ಕಂಪನಿ ಹೇಳಿಕೊಂಡಿದೆ. ಗಂಟೆಗೆ 250 ಕಿ.ಮೀ. ವೇಗದಲ್ಲಿ ಓಡುವ ಸಾಮರ್ಥ್ಯ ಇದಕ್ಕಿದೆ. ಸಿಂಗಲ್ ಚಾರ್ಜ್‌ಗೆ 480 ಕಿ.ಮೀ.ವರೆಗೆ ಇದನ್ನು ಡ್ರೈವ್ ಮಾಡಬಲ್ಲದು. ಮುಂದಿನ ಮೂರು ವರ್ಷಗಳ ಒಳಗೆ ಇದು ಮಾರುಕಟ್ಟೆಗೆ ಬರುವ ನಿರೀಕ್ಷೆ ಇದೆ.
ಫೋಕ್ಸ್‌ವ್ಯಾಗನ್ ಐಡಿ ಬುಗ್ಗಿ
ಇದೂ ಎಲೆಕ್ಟ್ರಿಕ್ ಕಾರು. ನೋಡಲು ಥೇಟ್ ಪುಟ್ಟ ಜೀಪ್‌ನಂತಿದೆ. 201 ಎಚ್‌ಪಿಯ ಮೋಟಾರ್ ಅನ್ನು ಇದು ಹೊಂದಿದ್ದು, ಸಿಂಗಲ್ ಚಾರ್ಜ್‌ಗೆ 250 ಕಿ.ಮೀ. ಸಂಚರಿಸುತ್ತದೆ. ಕಠಿಣ ದಾರಿಯಲ್ಲೂ ಸಾಗುವಂತೆ ಈ ಕಾರನ್ನು ವಿನ್ಯಾಸಗೊಳಿಸಲಾಗಿದ್ದು, ಫ್ಯಾನ್ಸಿ ಕಾರಿನ ವಿನ್ಯಾಸವಿದೆ. ಎರಡು ಸೀಟರ್‌ನ ಈ ಕಾರು ನಗರ, ಹಳ್ಳಿಗಾಡಿನಲ್ಲೂ ಸಂಚರಿಸುವಂತಿದೆ ಎಂದು ಕಂಪನಿ ಹೇಳಿಕೊಂಡಿದೆ.
ಟಾಟಾ ಎಚ್2ಎಕ್ಸ್
ಟಾಟಾ ಮೋಟಾರ್ನ ನೂನ ಮೈಕ್ರೋ ಎಸ್‌ಯುವಿ ಕಾನ್ಸೆಪ್ಟ್ ಮುಂದಿನ ಎರಡು ವರ್ಷಗಳಲ್ಲಿ ಮಾರುಕಟ್ಟೆಗೆ ಬರುವ ನಿರೀಕ್ಷೆ ಇದೆ. ಇಂಪ್ಯಾಕ್ಟ್ ಡಿಸೈನ್ 2.0 ಮಾದರಿಯಲ್ಲಿ ಇದನ್ನು ವಿನ್ಯಾಸ ಮಾಡಲಾಗಿದೆ. ಅತ್ಯಾಧುನಿಕ ಫೀಚರ್ಗಳನ್ನು ಹೊಂದಿರುವ ಇದು ಆಟೋಮ್ಯಾಟಿಕ್ ಗಿಯರ್ ಬಾಕ್ಸ್ ಮತ್ತು ಸಂಪೂರ್ಣ ಟಚ್ ಎಲ್‌ಇಡಿ ಡಿಸ್ಪೆ$Éà ಇರುವ ಮೀಟರ್ ಮತ್ತು ಇನ್ಫೋಎಂಟರ್‌ಟೈನ್‌ಮೆಂಟ್ ಫೀಚರ್ಗಳನ್ನು ಹೊಂದಿದೆ. ಮಹೀಂದ್ರಾ ಕೆಯುವಿ 100 ಮತ್ತು ಸ್ವಿಫ್ಟ್ ದರ್ಜೆಯಲ್ಲಿ ಇದೂ ಮಾರುಕಟ್ಟೆಗೆ ಬರಲಿದೆ. ಇದರ ಹೆಚ್ಚಿನ ತಾಂತ್ರಿಕತೆ, ಸಾಮರ್ಥ್ಯದ ಗುಟ್ಟನ್ನು ಟಾಟಾ ಮೋಟಾರ್ ಬಿಟ್ಟುಕೊಟ್ಟಿಲ್ಲ.
– ಈಶ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಮುಂಬೈ ದೋಣಿ ದುರಂತ: ನಾಪತ್ತೆಯಾಗಿದ್ದ ಬಾಲಕನ ಶವ ಪತ್ತೆ, ಮೃತರ ಸಂಖ್ಯೆ 15ಕ್ಕೆ ಏರಿಕೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
Mangaluru: ಅಂಬೇಡ್ಕರ್ – ಸಂವಿಧಾನ ಯಾರಿಗೂ ಟೂಲ್ ಆಗಬಾರದು: ಕೈ ವಿರುದ್ದ ಸಂತೋಷ್ ಟೀಕೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿ ಗಂಭೀರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.