ಮ್ಯೂಚುವಲ್‌ ಫ‌ಂಡ್‌ ಮೇಲೆ ಸಾಲ ಪಡೆಯುವುದು ಹೇಗೆ?


Team Udayavani, Mar 11, 2019, 12:30 AM IST

shutterstock1030539427.jpg

ನೀವು ಒಂದು ನಿರ್ದಿಷ್ಟ ಮ್ಯೂಚುವಲ್‌ ಫ‌ಂಡ್‌ನ‌ಲ್ಲಿ ಹೂಡಿಕೆ ಮಾಡುತ್ತಿದ್ದೀರಿ, ಮಾಹೆಯಾನ ನಿರ್ದಿಷ್ಟ ಮೊತ್ತ ನಿಮ್ಮ ಬ್ಯಾಂಕ್‌ ಖಾತೆಯಿಂದ ಎಸ್‌.ಐ.ಪಿ. ಮೂಲಕ ಹೂಡಿಕೆಯಾಗುತ್ತಾ ಇದೆ ಎಂದಿಟ್ಟುಕೊಳ್ಳಿ. ನಿಮಗೆ ಯಾವುದೇ ತುರ್ತು ಉದ್ದೇಶಕ್ಕೆ ಹಣಕಾಸಿನ ಅಗತ್ಯವಿದ್ದಲ್ಲಿ ನಿಮ್ಮ ಮ್ಯೂಚುವಲ್‌ ಫ‌ಂಡ್‌ ಹೂಡಿಕೆಯ ಮೇಲೆ ಸಾಲವನ್ನು ಪಡೆಯಬಹುದು.

ಮ್ಯೂಚುವಲ್‌ ಫ‌ಂಡ್‌ ಹೂಡಿಕೆ ಮತ್ತಷ್ಟು ಜನಪ್ರಿಯವಾಗುತ್ತಿದೆ.  ನೇರವಾಗಿ ಶೇರು ಮಾರುಕಟ್ಟೆಯಲ್ಲಿ  ಹೂಡಿಕೆ ಮಾಡಲು ಬಹುತೇಕ ಜನ ಹಿಂಜರಿಯುತ್ತಾರೆ. ಕಾರಣ ಅಲ್ಲಿರುವ ನಷ್ಟಕ್ಕೊಳಗಾಗಬಹುದಾದ ಅಂಜಿಕೆ, ಅನುಭವ, ಮಾಹಿತಿ ಕೊರತೆ.  ಮ್ಯೂಚುವಲ್‌ ಫ‌ಂಡ್‌ ಪರಿಕಲ್ಪನೆ ತುಂಬಾ ಹಳೆಯದು. ಹಿಂದೆ ಯುನಿಟ್‌ ಟ್ರಸ್ಟ್‌ ಆಫ್ ಇಂಡಿಯಾ ಇದನ್ನು 1964ರಲ್ಲೇ ಜಾರಿಗೆ ತಂದಿತ್ತು.  ಅದೊಂದು ಯೋಜನೆಗೆ ಯುನಿಟ್‌-64 ಎಂದೇ ಹೆಸರಿತ್ತು.  ಅದರಲ್ಲಿ ಹೂಡಿಕೆ ಮಾಡುವವರಿಗೆ ಎನ್‌.ಎ.. ಆಧಾರದ ಮೇಲೆ ಯುನಿಟ್‌ ಗಳ ಹೂಡಿಕೆಯಾಗುತ್ತಿತ್ತು. ಖಾಸಗಿ ಸಂಸ್ಥೆಗಳು ಮ್ಯೂಚುವಲ್‌ ಫ‌ಂಡ್‌ ವಹಿವಾಟು ಆರಂಭಿಸುವ ಮೊದಲು ಇದ್ದ ಏಕೈಕ ಮ್ಯೂಚುವಲ್‌ ಫ‌ಂಡ್‌ ಯುನಿಟ್‌ ಟ್ರಸ್ಟ್‌ ಆಫ್ ಇಂಡಿಯಾ ಆಗಿತ್ತು.  ಆಗಲೂ ಸಹ ತಿಂಗಳಿಗೊಮ್ಮೆ ಯು.ಟಿ.ಐ. ಯುನಿಟ್‌ಗಳ ಪರ್ಚೇಸ್‌ ಮತ್ತು ರಿಪರ್ಚೆಸ್‌ ದರಗಳು ಘೋಷಣೆಯಾಗುತ್ತಿದ್ದವು.  ಆ ದಿನಗಳಲ್ಲಿ ಈ ಯುನಿಟ್‌ಗಳನ್ನು ಬ್ಯಾಂಕಿನಲ್ಲಿ ಅಡಮಾನವಿಟ್ಟು ಸಾಲ ಪಡೆಯಬಹುದಿತ್ತು.    1990ರ ದಶಕದ ತನಕವೂ ಯುನಿಟ್‌ ಟ್ರಸ್ಟ್‌ ಆಫ್ ಇಂಡಿಯಾದ ಈ ಯೋಜನೆ ಅತ್ಯಾಕರ್ಷಕವಾಗಿತ್ತು, ಬ್ಯಾಂಕ್‌ ಡಿಪಾಜಿಟ್‌ನಲ್ಲಿ ಸಿಗುವ ಇಳುವರಿಗಿಂತ ಹೆಚ್ಚಿನ ಲಾಭ ಇಲ್ಲಿ ಹೂಡಿಕೆದಾರರಿಗೆ ದಕ್ಕುತ್ತಿತ್ತು.

ನಂತರದಲ್ಲಿ ಭಾರತೀಯ ರಿಸರ್ವ್‌ ಬ್ಯಾಂಕ್‌ ತನ್ನ ನಿಯಮಾವಳಿಯಲ್ಲಿ ಬದಲಾವಣೆಯನ್ನು ತಂದುದರ ಪ್ರತಿಫ‌ಲವಾಗಿ 1987ರಲ್ಲಿ ಎಸ್‌.ಬಿ.ಐ. ಮ್ಯೂಚುವಲ್‌ ಫ‌ಂಡ್‌ ಸ್ಥಾಪನೆಯಾಯಿತು.  ನಂತರದಲ್ಲಿ ಕೆನರಾ ಬ್ಯಾಂಕಿನ ಮ್ಯೂಚುವಲ್‌ ಫ‌ಂಡ್‌ ಯೋಜನೆ ಕಾರ್ಯರೂಪಕ್ಕೆ ಬಂತು. ಜೊತೆಗೆ ಭಾರತೀಯ ಜೀವವಿಮಾ ನಿಗಮ, ಜನರಲ್‌ ಇನುÒರೆನ್ಸ್‌ ಕಾರ್ಪೊàರೇಶನ್‌ಗಳು ಕೂಡ ಮ್ಯೂಚುವಲ್‌ ಫ‌ಂಡ್‌ ಸ್ಥಾಪನೆ ಮಾಡಿದವು. ಇವೆಲ್ಲವೂ ಯು.ಟಿ.ಐ. ಹೊರತಾದ ಸರ್ಕಾರಿ ಸಂಸ್ಥಾಪನೆಗಳಿಂದ ಪ್ರಾಯೋಜಿತವಾದ ಮ್ಯೂಚುವಲ್‌ ಫ‌ಂಡ್‌ ಗಳಾಗಿದ್ದವು.   ಎರಡನೇ ಹಂತದ ಮ್ಯೂಚುವಲ್‌ ಫ‌ಂಡ್‌ ಪರ್ವಕಾಲ ಅಂದರೆ 1987 ರಿಂದ 1993ರ ತನಕದ ಕಾಲಘಟ್ಟ.   1993ರ ಸುಮಾರಿನಲ್ಲಿಯೇ ಮ್ಯೂಚುವಲ್‌ ಫ‌ಂಡ್‌ ಹೂಡಿಕೆ ಮೊತ್ತ 47, 000 ಕೋಟಿಗಳನ್ನು ದಾಟಿತ್ತು.  ಅಂದರೆ ಜನರಿಗೆ ಇಂತಹದೊಂದು ಹೂಡಿಕೆಯಲ್ಲಿ ಆಸಕ್ತಿ ವೃದ್ಧಿಸಿತ್ತು ಎಂಬುದು ಸ್ಪಷ್ಟವಾಗುತ್ತದೆ.  

1993-2003 ರ ನಡುವಣ ಕಾಲಘಟ್ಟದಲ್ಲಿ ಮ್ಯೂಚುವಲ್‌ ಫ‌ಂಡ್‌ ಪರಿಕಲ್ಪನೆಗೆ ಇನ್ನಷ್ಟು ಬಲಬಂತು.  ಕೊಥಾರಿ ಪಯೋನೀರ್‌, ಬಿರ್ಲಾ ಸನ್‌ ಲೈಫ್, ಫ್ರಾಂಕ್ಲಿನ್‌ ಟೆಂಪಲ್‌ ಟನ್‌ ಹೀಗೆ ಅನೇಕ ಖಾಸಗಿ ಮತ್ತು ದೇಶಿ ಸಹಭಾಗಿತ್ವದ ಕಂಪನಿಗಳು ಮ್ಯೂಚುವಲ್‌ ಫ‌ಂಡ್‌ ಸ್ಥಾಪನೆ ಮಾಡಿ ಹೂಡಿಕೆದಾರರಿಂದ ದೊಡ್ಡ ಮಟ್ಟದ ಹಣ ಸಂಗ್ರಹಣೆ ಮಾಡಿದುವಲ್ಲದೇ, ಉತ್ತಮ ಇಳುವರಿಯನ್ನೂ ಕೊಡುವ ಮೂಲಕ ಜನಾಕರ್ಷಣೆ ಉತ್ಕರ್ಷವನ್ನು ತಲುಪುವಂತೆ ನೋಡಿಕೊಂಡವು. ಪರಿಣಾಮವಾಗಿ, ಸರಕಾರಿ ಪ್ರಾಯೋಜಿತ ಕಂಪನಿಗಳು ಕೂಡ ಸ್ಪರ್ಧೆಯಲ್ಲಿ ಮುಂಚೂಣಿಗೆ ಬಂದವು .   ಇಂದು ಭಾರತದ ಮ್ಯೂಚುವಲ್‌ ಫ‌ಂಡ್‌ ಉದ್ಯಮ ಅದೆಷ್ಟು ಅಗಾಧವಾಗಿ ಬೆಳೆದಿದೆ ಎಂದರೆ 2019ರ ಜನವರಿ ಕೊನೆಯ ವೇಳೆಗೆ  ಇದರಲ್ಲಿ ಹೂಡಿಕೆಯಾಗಿರುವ ಒಟ್ಟಾರೆ ಮೊತ್ತ ರೂ: 24,52,000 ಕೋಟಿಗಳಷ್ಟಾಗಿದೆ.   

ವರಮಾನ ತೆರಿಗೆ ಕಾಯಿದೆಯ ವಿಧಿ 80ಸಿ ಅಡಿಯಲ್ಲಿ  ಮ್ಯೂಚುವಲ್‌  ಫ‌ಂಡ್‌ ಹೂಡಿಕೆ ಅಂದರೆ ಇಕ್ವಿಟಿ ಲಿಂಕ್ಡ್ ಸೇವಿಂಗ್ಸ್‌ ಸ್ಕೀಂ ಎಂಬ ಯೋಜನೆಗೆ ರೂ: ಒಂದೂವರೆ ಲಕ್ಷದ ತನಕದ ಹೂಡಿಕೆಗೆ ತೆರಿಗೆ ವಿನಾಯಿತಿ ಇರುವ ಕಾರಣ ಇದು ವೇತನದಾರರಿಗೆ, ತೆರಿಗೆ ಪಾವತಿ ಮಾಡುವವರಿಗೆ ಆಕರ್ಷಕ ಯೋಜನೆ. ಮ್ಯೂಚುವಲ್‌ ಫ‌ಂಡ್‌ ನಲ್ಲಿ ಹೂಡಿಕೆ ಮಾಡುವವರ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿದೆ.  ಅಲ್ಲದೇ ಸಿಸ್ಟಮ್ಯಾಟಿಕ್‌ ಇನ್ವೆಸ್ಟ್‌ಮೆಂಟ್‌ ಪ್ಲಾನ್‌ (ಎಸ್‌.ಐ.ಪಿ) ಅಡಿಯಲ್ಲಿ ಕನಿಷ್ಠ ಐದು ನೂರು ರೂಪಾಯಿಗಳಿಂದ ಮೊದಲ್ಗೊಂಡು ಗರಿಷ್ಠ ಮಿತಿಯ ಹಂಗಿಲ್ಲದೇ ಎಷ್ಟು ಬೇಕಾದರೂ ಹೂಡಿಕೆ ಮಾಡಬಹುದಾದ ಕಾರಣ ಇದರ ಆಕರ್ಷಣೆ ಇನ್ನಷ್ಟು ಹೆಚ್ಚಿದೆ. ಎಕ್ಸ್‌ ಫ್ಯಾಕ್ಟರ್‌ ಹೊರತಾಗಿಯೂ ವಾರ್ಷಿಕ ಇಳುವರಿ ಬ್ಯಾಂಕ್‌ ಬಡ್ಡಿದರಕ್ಕಿಂತ ಹೆಚ್ಚಿನದಾಗಿದೆ. ಶೇರು ಮಾರುಕಟ್ಟೆಯ ಏರಿಳಿತದ ಅನುಪಾತಕ್ಕೆ ಅನುಸಾರವಾಗಿ ಮ್ಯೂಚುವಲ್‌ ಫ‌ಂಡ್‌ಗಳ: ನೆಟ್‌ ಅಸೆಟ್‌ ವಾಲ್ಯೂ (ಎನ್‌.ಎ.) ವ್ಯತ್ಯಯವಾಗುತ್ತದೆ ಯಾದರೂ  ಜಾಗರೂಕತೆ ಮತ್ತು ದೂರದೃಷ್ಟಿ ಇದ್ದಲ್ಲಿ ಇದು ಲಾಭವನ್ನು ಕೊಡುತ್ತದೆ. ಇದು ಎಂದಿಗೂ ಅಲ್ಪಕಾಲೀನ ಹೂಡಿಕೆಯಲ್ಲ./ ಕನಿಷ್ಠ ಐದು ವರ್ಷಗಳ ಕಾಯುವಿಕೆಯ ತಾಳ್ಮೆ ಇದ್ದವರಿಗೆ ಮಾತ್ರ ಇದು ಸೂಕ್ತ ಹೂಡಿಕೆ.

ಸಾಲ ಉಂಟು, ನೇರವಾಗಲ್ಲ
ಬ್ಯಾಂಕಿನಲ್ಲಿರುವ ಫಿಕ್ಸೆಡ್‌ ಡಿಪಾಜಿಟ್‌. ಜೀವವಿಮೆಯ ಖಾತೆಯಲ್ಲಿ ಜಮೆಯಾಗಿರುವ ಮೊತ್ತದ ಮೇಲೆ ಸಾಲ ಪಡೆಯುವುದು ನಮಗೆಲ್ಲರಿಗೂ ಗೊತ್ತಿರುವ ವಿಚಾರ. ಎಲ್‌.ಐ.ಸಿ. ಪಾಲಿಸಿಗಳ  ಸರೆಂಡರ್‌ ವಾಲ್ಯೂ ಮೇಲೆ ಶೇ:70-80 ರ ತನಕದ ಸಾಲ ನೀಡಿಕೆ ಸೌಲಭ್ಯ ಇದೆ.  ಅಂತಹ ಸಾಲವನ್ನು ಆಯಾ ಜೀವವಿಮಾ ಕಚೇರಿಯಿಂದ ಪಡೆಯಬಹುದು, ಇಲ್ಲವೇ ಬ್ಯಾಂಕುಗಳಿಗೆ ಪಾಲಿಸಿ ಅಡಮಾನ ಮಾಡಿಯೂ ಸಾಲವನ್ನು ಪಡೆಯಬಹುದು. ಬಡ್ಡಿದರವೂ ಬೇರೆ ಸಾಲಗಳಿಗಿರುವ ಬಡ್ಡಿದರಕ್ಕಿಂತ ಕಡಿಮೆ ಇರುತ್ತದೆ ಎಂಬುದು ಗಮನಿಸಬೇಕಾದ ಸಂಗತಿ. ನೀವು ಒಂದು ನಿರ್ದಿಷ್ಟ ಮ್ಯೂಚುವಲ್‌ ಫ‌ಂಡ್‌ನ‌ಲ್ಲಿ ಹೂಡಿಕೆ ಮಾಡುತ್ತಿದ್ದೀರಿ, ಮಾಹೆಯಾನ ನಿರ್ದಿಷ್ಟ ಮೊತ್ತ ನಿಮ್ಮ ಬ್ಯಾಂಕ್‌ ಖಾತೆಯಿಂದ ಎಸ್‌.ಐ.ಪಿ. ಮೂಲಕ ಹೂಡಿಕೆಯಾಗುತ್ತಾ ಇದೆ ಎಂದಿಟ್ಟುಕೊಳ್ಳಿ. ನಿಮಗೆ ಯಾವುದೇ ತುರ್ತು ಉದ್ದೇಶಕ್ಕೆ ಹಣಕಾಸಿನ ಅಗತ್ಯವಿದ್ದಲ್ಲಿ ನಿಮ್ಮ ಮ್ಯೂಚುವಲ್‌ ಫ‌ಂಡ್‌ ಹೂಡಿಕೆಯ ಮೇಲೆ ಸಾಲವನ್ನು ಪಡೆಯಬಹುದು.

ಈ ರೀತಿ ಸಾಲ ಪಡೆಯುವುದಕ್ಕೂ ನಿಮ್ಮ ನಿಯಮಿತ ಎಸ್‌.ಐ.ಪಿ. ಮೂಲಕ ಆಗುವ ಅಂಶಿಕ ಹೂಡಿಕೆಗೂ ಸಂಬಂಧವಿಲ್ಲ. ನೀವು ಮ್ಯೂಚುವಲ್‌ ಫ‌ಂಡ್‌ನ‌ ಹೂಡಿಕೆಯನ್ನು ಕೊನೆಗೊಳಿಸುವ ಅಗತ್ಯವೂ ಇಲ್ಲ. ಅದು ಅದರಷ್ಟಕ್ಕೆ ಆಗುತ್ತಿರುತ್ತದೆ. 

ಈ ರೀತಿಯ ಸಾಲವನ್ನು ಮ್ಯೂಚುವಲ್‌ ಫ‌ಂಡ್‌ ನಿರ್ವಹಣೆ ಮಾಡುತ್ತಿರುವ ಕಂಪನಿಗಳು ಕೊಡುವುದಿಲ್ಲ. ಗಮನಿಸಿ: ಬ್ಯಾಂಕ್‌, ಎಲ್‌.ಐ.ಸಿ. ಅಥವಾ ಬೇರೆ ವಿಮಾ ಕಂಪನಿಗಳಲ್ಲಿ ಹೂಡಿಕೆ ಪಡೆದಿರುವ ಆಯಾ ಸಂಸ್ಥಾಪನೆಗಳೇ ಹೂಡಿಕೆದಾರರಿಗೆ ಸಾಲವನ್ನು ಕೊಡುತ್ತವೆ. ಆದರೆ ಮ್ಯೂಚುವಲ್‌ ಫ‌ಂಡ್‌ ಕಂಪನಿಗಳು ತಮ್ಮ ಬಳಿ ಹೂಡಿಕೆ ಮಾಡಿರುವವರಿಗೆ ನೇರವಾಗಿ ಸಾಲವನ್ನು ಕೊಡುವುದಿಲ್ಲ.

ಯಾವುದೇ ಬ್ಯಾಂಕ್‌ ಅಥವಾ ಬ್ಯಾಂಕೇತರ ಹಣಕಾಸು ಸಂಸ್ಥೆ (ಎನ್‌.ಬಿ.ಎಫ್.ಸಿ.) ಗಳನ್ನು ಸಂಪರ್ಕಿಸಿ ಮ್ಯೂಚುವಲ್‌ ಫ‌ಂಡ್‌ ಹೂಡಿಕೆಯ ಮೇಲೆ ಸಾಲವನ್ನುಪಡೆಯಬಹುದು ನಿಮ್ಮ ಹೂಡಿಕೆಯ ಮೊತ್ತ, ನಿಮ್ಮ ಸಾಲದ ಅವಧಿ ಇದೆಲ್ಲವೂ ಇಲ್ಲಿ ಪರಿಗಣನೆಗೆ ಬರುತ್ತದೆ.  ನೀವು ನಿಮ್ಮ ಹೂಡಿಕೆಯ ಯೂನಿಟ್‌ ಗಳನ್ನು ಸಾಲ ಕೊಡುವ ಸಂಸ್ಥೆಗೆ/ಬ್ಯಾಂಕಿಗೆ ಅಡಮಾನ ಇಡಬೇಕಾಗುತ್ತದೆ.  ಈ ರೀತಿಯ ಸಾಲಕ್ಕೆ ಬಡ್ಡಿದರವೂ ಕಡಿಮೆ ಇರುತ್ತದೆ. ಅಂದಾಜು ಶೇ:10-11 ರ ಆಸುಪಾಸಿನಲ್ಲಿರುತ್ತದೆ. ಇದು ಬ್ಯಾಂಕಿನಿಂದ ಬ್ಯಾಂಕಿಗೆ ವ್ಯತ್ಯಯವಾಗಬಹುದು.

ನಿಮ್ಮ ಮ್ಯೂಚುವಲ್‌ ಫ‌ಂಡ್‌ ಹೂಡಿಕೆಯನ್ನು ನಿಮಗೆ ಸಾಲಕೊಡುವ ಬ್ಯಾಂಕಿಗೆ ಅಥವಾ ಸಂಸ್ಥೆಗೆ ಲೀನ್‌ ಮಾಡಿ ಕೊಡಬೇಕಾಗುತ್ತದೆ. ಅದಕ್ಕೆ ಬೇಕಾಗುವ ಕೆಲವು ಕಾಗದಪತ್ರಗಳಿಗೆ ನೀವು ಸಹಿ ಮಾಡಬೇಕಾಗುತ್ತದೆ. ಸಾಲ ಪಡೆಯುವ ಮುನ್ನ ನಿಮ್ಮ ಹೂಡಿಕೆಯ ಮ್ಯೂಚುವಲ್‌ ಫ‌ಂಡ್‌ಗೆ ಈ ವಿಚಾರವನ್ನು ತಿಳಿಸಬೇಕಾಗುತ್ತದೆ.

ಸಾಮಾನ್ಯವಾಗಿ ಹಳೆಯ ಪದ್ಧತಿಯಲ್ಲಾದರೆ ಮ್ಯೂಚುವಲ್‌ ಫ‌ಂಡ್‌ 
ಯೂನಿಟ್‌ಗಳನ್ನು ಸರ್ಟಿಫಿಕೇಟ್‌ಗಳ ರೂಪದಲ್ಲಿ ಅಂದರೆ ಭೌತಿಕ ಸ್ವರೂಪದಲ್ಲಿ ಹೊಂದಿರುತ್ತಿದ್ದೆವು. ಅಲ್ಲದೇ, ಆದರೆ ಈಗ ಎಲ್ಲವೂ ಎಲೆಕ್ಟ್ರಾನಿಕ್‌ ರೂಪದಲ್ಲಿರಬೇಕೆಂಬ ನಿಯಮ ಜಾರಿಗೆ ಬಂದಿರುವ ಕಾರಣ  ನಿಮ್ಮ ಹೂಡಿಕೆ ಡಿಮ್ಯಾಟ್‌ ಸ್ವರೂಪದಲ್ಲಿ ಇರಬೇಕಾದ್ದು ಅಗತ್ಯ ಮತ್ತು ಅನಿವಾರ್ಯ.

ನಿಮ್ಮ ಸಾಲ ಪೂರ್ಣ ತೀರುವಳಿಯಾದಾಗ ಬ್ಯಾಂಕಿನಿಂದ ಮ್ಯೂಚುವಲ್‌ ಫ‌ಂಡ್‌ ಕಂಪನಿಗೆ ಈಮೇಲ್‌ ರವಾನಿಸುವಂತೆ ಮಾಡಿ ಪೂರ್ಣ ಯುನಿಟ್‌ಗಳನ್ನು ಅಡಮಾನದಿಂದ ಮುಕ್ತಗೊಳಿಸಬಹುದು.

ಒಂದೊಮ್ಮೆ ಸಾಲ ಮರುಪಾವತಿಗೆ ಹೂಡಿಕೆದಾರ ತಪ್ಪಿದಲ್ಲಿ ಆಗ ಬ್ಯಾಂಕಿನವರು ನಿಗದಿತ ಸಾಲದ ಅವಧಿ ಕಳೆದ ನಂತರದಲ್ಲಿ ಆ ಯುನಿಟ್‌ಗಳನ್ನು ಮಾರಾಟ ಮಾಡಿ ಉಳಿಕೆಯಾಗಬಹುದಾದ ಮೊತ್ತವನ್ನು ಹೂಡಿಕೆದಾರನಿಗೆ ಮರಳಿಸಿ ವ್ಯವಹಾರ ಸಮಾಪ್ತಿಗೊಳಿಸಬಹುದು.

ಒಂದುವೇಳೆ ಸಾಲದ ಅವಧಿಯ ನಡುವಿನಲ್ಲಿ ಸದ್ರಿ ಅಡಮಾನ ಮಾಡಿದ ಫ‌ಂಡಿನ ಎನ್‌.ಎ.. ಕುಸಿತ ಕಂಡಲ್ಲಿ ಮತ್ತು ಬ್ಯಾಂಕು ನೀಡಿರುವ ಸಾಲದ ಮೊತ್ತಕ್ಕಿಂತ ಅದು ಕೆಳಕ್ಕಿಳಿಯುವ ಸಂಭವ ಬಂದಲ್ಲಿ ಬ್ಯಾಂಕಿನವರು ಸಾಲ ಪಡೆದಾತನಿಗೆ ಕೂಡಲೇ ಸಾಲವನ್ನು ಸಮಾಪ್ತಿಗೊಳಿಸುವಂತೆ ಆಗ್ರಹಿಸಬಹುದು. ಅಂತಹ ಸಂದರ್ಭ ಎದುರಾದಾಗ ಕೆಲವು ಬ್ಯಾಂಕುಗಳಲ್ಲಿ  ತಾವೇ ಸ್ವಯಂ ವಿವೇಚನೆಯಿಂದ ಯೂನಿಟ್‌ ಗಳನ್ನು ಮಾರಾಟ ಮಾಡಿ ಅಪಾಯದಿಂದ ಪಾರಾಗುವ ವ್ಯವಸ್ಥೆಯೂ ಇದೆ. 

ಸಾಲ ಪಡೆಯುವುದರಿಂದ ಏನು ಪ್ರಯೋಜನ?
ನಿಮ್ಮ ಹೂಡಿಕೆಯ ಮೇಲೆ, ನಿಮ್ಮ ಅಗತ್ಯಕ್ಕೆ ತಕ್ಕಂತೆ ಹಣ ಹಿಂಪಡೆಯುವುದಕ್ಕೆ ಇದೊಂದು ಮಾರ್ಗ. ಈ ಮೂಲಕ ಬಹಳ ಬೇಗ ಹೆಚ್ಚಿನ ಕಷ್ಟವಿಲ್ಲದೇ ಸಾಲಸೌಲಭ್ಯ ಪಡೆಯಬಹುದಾಗಿದೆ.  ತುರ್ತು ಅಗತ್ಯಗಳಿಗೆ ಹಣಕಾಸಿಗಾಗಿ ಅಲ್ಲಿ ಇಲ್ಲಿ ಅಡ್ಡಾಡುವುದಕ್ಕಿಂತ ನಿಮ್ಮ ಬಳಿಯೇ ಇರುವ ಹೂಡಿಕೆಯನ್ನು ಬಳಸಿಕೊಂಡು ಸಾಲ ಪಡೆಯುವುದು ಮತ್ತು ತುರ್ತು ಹಣಕಾಸಿನ ದರ್ದಿಗೆ ಬಳಸಿಕೊಳ್ಳುವುದು ಕ್ಷೇಮಕರ.

ತುರ್ತು ಹಣಕಾಸು ಅಗತ್ಯವಿದ್ದಾಗ ಬ್ಯಾಂಕಿನಲ್ಲಿ ಪರ್ಸನಲ್‌ ಲೋನ್‌ ಪಡೆದರೆ ಬೀಳುವ ಬಡ್ಡಿ ದೊಡ್ಡದಾಗಿರುತ್ತದೆ. ಏಕೆಂದರೆ ಪರ್ಸನಲ್‌ ಲೋನ್‌ಗೆ ಬ್ಯಾಂಕುಗಳು ವಿಧಿಸುವ ಬಡ್ಡಿ ಶೇ:18 ಕ್ಕಿಂತ ಹೆಚ್ಚು ಇರುತ್ತದೆ. ಆದರೆ ಮ್ಯೂಚುವಲ್‌ಫ‌ಂಡ್‌ ಹೂಡಿಕೆಯ ಮೇಲಿನ ಸಾಲಕ್ಕೆ ತೆರಬೇಕಾದ ಬಡ್ಡಿದರ ಕಡಿಮೆ ಇರುತ್ತದೆ.

ಯಾವುದರಿಂದ ಲಾಭ?
ಎಲ್‌.ಐ.ಸಿ. ಬಾಂಡಿನ ಮೇಲೆ ಸಾಲ ಪಡೆಯುವುದು ಬಹಳ ಸುಲಭವೆನಿಸಬಹುದು. ಕೆಲವೇ ಗಂಟೆಗಳಲ್ಲಿ ನಿಮ್ಮ  ಸಾಲ ಕೈಸೇರುತ್ತದೆ.  ಅಲ್ಲಿ ಸಿಗುವ ಸಾಲದ ಪ್ರಮಾಣವೂ ಬಹುತೇಕ ಹೂಡಿಕೆಯಶೇ:70 ರಷ್ಟು ಇರುತ್ತದೆ.  ಆದರೆ ಮ್ಯೂಚುವಲ್‌ ಫ‌ಂಡಿನಲ್ಲಿ ಸಿಗುವ ಸಾಲದ ಪ್ರಮಾಣ ಹೂಡಿಕೆಯ ಶೇ. 50 ರಷ್ಟಿದೆ. ಸಾಲ ಪಡೆಯುವುದಕ್ಕೆ ಕೊಂಚ ಹೆಚ್ಚು ಸಮಯ ಬೇಕಾದೀತು. 

ಮ್ಯೂಚುವಲ್‌ ಫ‌ಂಡ್‌ ಗಳ ವಿಧ:
ಮ್ಯೂಚುವಲ್‌ ಫ‌ಂಡ್‌ ಗಳಲ್ಲಿ (1) ಡೆಬ್‌r ಫ‌ಂಡ್‌ (2) ಈಕ್ವಿಟಿ ಫ‌ಂಡ್‌ (3)  ಹೈಬ್ರಿಡ್‌ ಫ‌ಂಡ್ಸ್‌ (4) ಎಫ್.ಒ.ಪಿ. ಮತ್ತು   ಈ.ಟಿ.ಎಫ್. ಫ‌ಂಡ್‌   (5) ಸ್ಪೆಷಲ್‌ ಸಿಚುವೇಶನ್‌ ಫ‌ಂಡ್‌ – ಹೀಗೆ ಅನೇಕ ಬಗೆಯ ಹೂಡಿಕೆ ಫ‌ಂಡುಗಳಿವೆ.  ಯಾವುದು ಯಾವ ಸಂದರ್ಭಕ್ಕೆ ಒಳಿತು ಮತ್ತು ಅವುಗಳನ್ನು ಹೇಗೆ ಆಯ್ಕೆ ಮಾಡಿಕೊಳ್ಳುವುದು ಎಂಬುದನ್ನು ಸ್ವತಃ ಅಧ್ಯಯನ ಅಥವಾ ನುರಿತವರ ಮಾರ್ಗದರ್ಶನ ಪಡೆಯುವು ದರಿಂದ ತಿಳಿದುಕೊಳ್ಳಬಹುದು. ಪ್ರಸ್ತುತ ಭಾರತದಲ್ಲಿ 43 ಮ್ಯೂಚವಲ್‌ ಫ‌ಂಡ್‌ ಕಂಪನಿಗಳಿದ್ದು,  ಒಟ್ಟಾರೆ 2, 599 ಫ‌ಂಡ್‌ ಸ್ಕೀಮ್‌ಗಳಿವೆ.   ಬ್ಯಾಂಕುಗಳು ಮತ್ತು ಬ್ಯಾಂಕೇತರ ಆರ್ಥಿಕ ಸಂಸ್ಥೆಗಳು ಮ್ಯೂಚುವಲ್‌ ಫ‌ಂಡ್‌ ಉದ್ಯಮದಲ್ಲಿ ಸಕ್ರಿಯವಾಗಿದ್ದು,  ತಾವು ಸಂಗ್ರಸಿದ ಮೊತ್ತವನ್ನು ವಿವಿಧ ಅನುಪಾತಗಳಲ್ಲಿ ಶೇರು ಮಾರುಕಟ್ಟೆ, ಡೆಟ್‌ ಫ‌ಂಡ್‌ ಮತ್ತು ಇನ್ನಿತರ ಆರ್ಥಿಕ ಚಾರಗಳಲ್ಲಿ ಹೂಡಿಕೆ ಮಾಡುತ್ತವೆ.  ಒಂದು ವಿಚಾರ ಏನೆಂದರೆ,  ತುರ್ತು ಹಣಕಾಸು ಅಗತ್ಯವಿದ್ದರೆ ಮಾತ್ರ ಮ್ಯೂಚುವಲ್‌ ಫ‌ಂಡ್‌ ಮೇಲೆ ಸಾಲ ಮಾಡಲು ಮುಂದಾಗಿ. ಸೌಲಭ್ಯ ಇದೆ ಎಂದು ಸಾಲ ಪಡೆಯಬೇಡಿ. ಸಾಲ ಎಂದಿದ್ದರೂ ಶೂಲ.  

ಯೂನಿಟ್‌ ಮುಖ್ಯ, ಮೊತ್ತವಲ್ಲ
ಗಮನಿಸಬೇಕಾದ ಸಂಗತಿ ಎಂದರೆ, ಯಾವುದೇ ಮ್ಯೂಚುವಲ್‌ ಫ‌ಂಡ್‌ನ‌ ಲೀನ್‌ ದಾಖಲಿಸುವಾಗ ಧಾರಕನು ಹೊಂದಿರುವ ಯುನಿಟ್‌ಗಳ ಸಂಖ್ಯೆಯನ್ನುಪರಿಗಣಿಸಲಾಗುತ್ತದೆಯೇ ಹೊರತು ಮೊತ್ತವನ್ನಲ್ಲ.  

ಸಾಲವನ್ನು ಪಡೆಯುವಾಗ ಬಹುಮುಖ್ಯವಾಗಿ ಗಮನಿಸಬೇಕಾದ ಸಂಗತಿ ಎಂದರೆ ನೀವು ಯಾವ ಸ್ವರೂಪದ ಮ್ಯೂಚುವಲ್‌ ಫ‌ಂಡ್‌ ಹೂಡಿಕೆಯನ್ನು ಮಾಡಿದ್ದೀರಿ ಎಂಬುದಾಗಿದೆ. ಉದಾಹರಣೆಗೆ, ಈಕ್ವಿಟಿ ಲಿಂಕ್ಡ್ ಹೂಡಿಕೆಯಾದರೆ ಅದಕ್ಕೆ ಸಿಗುವ ಸಾಲದ ಪ್ರಮಾಣ ಉತ್ತಮವಾಗಿರುತ್ತದೆ.  ಸದ್ರಿ ಹೂಡಿಕೆಯ ಇಂದಿನ ನೆಟ್‌ ಅಸೆಟ್‌ ವಾಲ್ಯೂ (ಎನ್‌.ಎ.) ಮೇಲೆ ಶೇ. 50ರಷ್ಟು ಸಾಲವು ದೊರೆಯುತ್ತದೆ.  

ಮ್ಯೂಚುವಲ್‌ ಫ‌ಂಡ್‌ ಮೇಲೆ ಸಾಲ ಕೊಡುವ ವಿಚಾರದಲ್ಲಿ ಬ್ಯಾಂಕಿನವರಿಗೂ ಕನಿಷ್ಠ ಮತ್ತು ಗರಿಷ್ಠ ಮಿತಿಯ ಕುರಿತಾಗಿ ಕೆಲವು ನಿರ್ಬಂಧಗಳು ಮತ್ತು ನಿಬಂಧನೆಗಳು ಇವೆ.  ಅವುಗಳ ಅನುಸಾರವಾಗಿಯೇ ಬ್ಯಾಂಕುಗಳು ಸಾಲ ನೀಡಿಕೆಯನ್ನು ಪರಿಗಣಿಸುತ್ತವೆ. ಇನ್ನು ಬ್ಯಾಂಕಿಗೆ ಅಡಮಾನ ಮಾಡಿರುವ ಯುನಿಟ್‌ಗಳ ಲೀನ್‌ ಹಿಂಪಡೆಯುವ ವಿಚಾರಕ್ಕೆ ಬಂದರೆ ನೀವು ಸಾಲ ಪಾವತಿ ಮಾಡುತ್ತ ಹೋದಂತೆ, ಅದಕ್ಕೆ ಅನುಗುಣವಾಗಿ ಭಾಗಶಃ ಯುನಿಟ್‌ಗಳನ್ನು ರಿಲೀಸ್‌ ಮಾಡಿಸಿಕೊಳ್ಳಬಹುದು. ಇಲ್ಲವೇ ಮತ್ತೆ ಪುನಃ ಸಾಲವನ್ನು ಕೇಳಬಹುದು. ಬ್ಯಾಂಕಿನಲ್ಲಿ ಸಾಲ ಪಡೆಯುವಾಗ ಇರುವ ಓವರ್‌ ಡ್ರಾಫ್ಟ್ (ಒ.ಡಿ) ಸೌಲಭ್ಯದಂತೆ ಇದನ್ನು ನಿರ್ವಹಿಸಬಹುದು.

– ನಿರಂಜನ

ಟಾಪ್ ನ್ಯೂಸ್

ಮಕ್ಕಳ ಶಿಕ್ಷಿಸಲು ಅವಕಾಶ ಕೊಡಿ: ಸಿಎಂಗೆ ಪತ್ರ

ಮಕ್ಕಳ ಶಿಕ್ಷಿಸಲು ಅವಕಾಶ ಕೊಡಿ: ಸಿಎಂ ಸಿದ್ದರಾಮಯ್ಯಗೆ ಪತ್ರ

Karnataka: ವಕ್ಫ್: ಡಿ. 4ರಿಂದ ಬಿಜೆಪಿ ಅಧಿಕೃತ ಹೋರಾಟ

Karnataka: ವಕ್ಫ್: ಡಿ. 4ರಿಂದ ಬಿಜೆಪಿ ಅಧಿಕೃತ ಹೋರಾಟ

Kambala

Kambala Special; ಎತ್ತನ್ನು ಗದ್ದೆಗಿಳಿಸಿ ಆರಂಭವಾಗುವ ಯಡ್ತಾಡಿ ಕಂಬಳ

Ashwini-vaishnav

Cabinet Decision: 7 ಕೃಷಿ ಯೋಜನೆಗಳ ಅನುಷ್ಠಾನಕ್ಕೆ ಕೇಂದ್ರ ಸಚಿವ ಸಂಪುಟ ಅನುಮತಿ

1-dharma

Dharmasthala;ಇಂದಿನಿಂದ ಲಕ್ಷದೀಪೋತ್ಸವ ಕಾರ್ಯಕ್ರಮಗಳು

Jammu-Vaishnodevi

Jammu: ವೈಷ್ಣೋದೇವಿ ರೋಪ್‌ವೇ ವಿರೋಧಿ ಪ್ರತಿಭಟನೆ ವೇಳೆ ಭಾರೀ ಘರ್ಷಣೆ

court

Manipal: ಲಂಚ ಸ್ವೀಕಾರ ಆರೋಪದಲ್ಲಿ ಬಂಧಿತರಿಗೆ ಜಾಮೀನು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

ಮಕ್ಕಳ ಶಿಕ್ಷಿಸಲು ಅವಕಾಶ ಕೊಡಿ: ಸಿಎಂಗೆ ಪತ್ರ

ಮಕ್ಕಳ ಶಿಕ್ಷಿಸಲು ಅವಕಾಶ ಕೊಡಿ: ಸಿಎಂ ಸಿದ್ದರಾಮಯ್ಯಗೆ ಪತ್ರ

Suicide 3

Karkala:ಆರ್ಥಿಕ ಮುಗ್ಗಟ್ಟಿಗೆ ಒಳಗಾಗಿ ಕುಗ್ಗಿದ್ದ ಯುವಕ ಆತ್ಮಹ*ತ್ಯೆ

Karnataka: ವಕ್ಫ್: ಡಿ. 4ರಿಂದ ಬಿಜೆಪಿ ಅಧಿಕೃತ ಹೋರಾಟ

Karnataka: ವಕ್ಫ್: ಡಿ. 4ರಿಂದ ಬಿಜೆಪಿ ಅಧಿಕೃತ ಹೋರಾಟ

Kambala

Kambala Special; ಎತ್ತನ್ನು ಗದ್ದೆಗಿಳಿಸಿ ಆರಂಭವಾಗುವ ಯಡ್ತಾಡಿ ಕಂಬಳ

Ashwini-vaishnav

Cabinet Decision: 7 ಕೃಷಿ ಯೋಜನೆಗಳ ಅನುಷ್ಠಾನಕ್ಕೆ ಕೇಂದ್ರ ಸಚಿವ ಸಂಪುಟ ಅನುಮತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.