ಸ್ಪರ್ಧೆಗೆ ತೆರಳಲು ಸರಕಾರಿ ಪದವಿ ಕಾಲೇಜುಗಳಲ್ಲಿ ದುಡ್ಡಿಲ್ಲ !
Team Udayavani, Mar 11, 2019, 1:00 AM IST
ಸುಳ್ಯ: ಮೂರು ಜಿಲ್ಲೆಗಳಲ್ಲಿ ಹರಡಿಕೊಂಡಿರುವ ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಪದವಿ ವಿದ್ಯಾರ್ಥಿಗಳಿಗೆ ಕ್ರೀಡಾಕೂಟಗಳಿಗೆ ತೆರಳಲು ಆರ್ಥಿಕ ಸಮಸ್ಯೆ ಕಾಡುತ್ತಿದೆ.
ಸರಕಾರಿ ಕಾಲೇಜುಗಳ ಕ್ರೀಡಾನಿಧಿಯಲ್ಲಿರುವ ಮೊತ್ತವು ವಿ.ವಿ. ಮಟ್ಟದ ಅಂತರ್ ಕಾಲೇಜು ಸ್ಪರ್ಧೆಗಳಿಗೆ ವಿದ್ಯಾರ್ಥಿಗಳನ್ನು ಕಳುಹಿಸಿ ಕೊಡಲು ಸಾಲದು. ಹೀಗಾಗಿ ಪ್ರತಿಭೆ ಇದ್ದರೂ ಪ್ರೋತ್ಸಾಹವಿಲ್ಲದ ಸ್ಥಿತಿ.
ಕ್ರೀಡಾನಿಧಿಗೆ 60 ರೂ.!
ಪದವಿ ಪ್ರವೇಶ ಪಡೆಯುವ ಪ್ರತೀ ವಿದ್ಯಾರ್ಥಿ ಪಾವತಿಸುವ ಶುಲ್ಕದಲ್ಲಿ 60 ರೂ. ಕಾಲೇಜಿನ ಕ್ರೀಡಾನಿಧಿಗೆ ಜಮೆ ಆಗುತ್ತದೆ. ಹೀಗೆ ಒಟ್ಟುಗೂಡಿದ ಮೊತ್ತ ಪ್ರತೀ ಕಾಲೇಜಿನಲ್ಲಿ 15ರಿಂದ 20 ಸಾವಿರ ರೂ. ಆಗಬಹುದು. ವಿ.ವಿ. ಮಟ್ಟದಲ್ಲಿ ವಾರ್ಷಿಕ ಸ್ಪರ್ಧೆಗಳಿಗೆ ವಿದ್ಯಾರ್ಥಿಗಳನ್ನು ಕರೆದೊಯ್ಯುವ ವೆಚ್ಚ, ಕ್ರೀಡಾ ಉಡುಗೆ, ಆಹಾರ ಒದಗಿಸುವುದಕ್ಕೆ ಇಷ್ಟು ಮೊತ್ತ ಸಾಲುವುದಿಲ್ಲ. ಕೆಲವೊಮ್ಮೆ ಕಾಲೇಜಿನ ವಾರ್ಷಿಕ ಕ್ರೀಡಾಕೂಟ ನಡೆಸಲು ಕೂಡ ಇದೇ ನಿಧಿಯನ್ನು ಬಳಸಬೇಕಿದೆ.
ಕೈಯಿಂದ ಖರ್ಚು
ಮಂಗಳೂರು ವಿ.ವಿ. ವಿದ್ಯಾರ್ಥಿಗಳಿಗೆ ವರ್ಷದಲ್ಲಿ 48 ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತದೆ. ಉಡುಪಿ, ದ.ಕ. ಮಾತ್ರವಲ್ಲದೆ ಕೊಡಗು ಜಿಲ್ಲೆಯೂ ವಿವಿ ವ್ಯಾಪ್ತಿಯಲ್ಲಿದೆ. ನಾನಾ ದಿಕ್ಕಿನಲ್ಲಿ ಆಯೋಜನೆ ಗೊಳ್ಳುವ ಸ್ಪರ್ಧೆಗಳಿಗೆ ಕರೆದೊಯ್ಯುವ ಜವಾಬ್ದಾರಿ ಆಯಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ವಿಭಾಗಕ್ಕಿದೆ. ಗೇಮ್ಸ್ ಸ್ಪರ್ಧೆಗಳು 2, ನ್ಪೋರ್ಟ್ಸ್ ವಿಭಾಗದಲ್ಲಿ 3 ದಿನ ಈ ಕ್ರೀಡಾಕೂಟಗಳು ನಡೆಯುತ್ತವೆ.
ಸಾಮಾನ್ಯವಾಗಿ ಒಂದು ಸ್ಪರ್ಧೆಗೆ ತಂಡವನ್ನು ಕರೆದೊಯ್ಯಲು 8ರಿಂದ 10 ಸಾವಿರ ರೂ. ವರೆಗೆ ಖರ್ಚು ತಗಲುತ್ತದೆ. ಎರಡು ಕೂಟಗಳಿಗೆ ತೆರಳಿದರೆ ಕ್ರೀಡಾನಿಧಿ ಕರಗಿಹೋಗುತ್ತದೆ. ಉಳಿದ 46 ಕೂಟಗಳಿಗೆ ತೆರಳಲು ಹಣ ಇರುವುದಿಲ್ಲ.
ಬೆರಳೆಣಿಕೆಯ ಕಾಲೇಜುಗಳಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರು, ಇತರ ಉಪನ್ಯಾಸಕರು ಸ್ವತಃ ಹಣ ಭರಿಸಿ ವಿದ್ಯಾರ್ಥಿಗಳನ್ನು ಕಳುಹಿಸುತ್ತಾರೆ. ಬಹುತೇಕ ಕಡೆ ಕ್ರೀಡಾಪ್ರತಿಭೆಗಳಿಗೆ ನಿರಾಸೆಯೇ ಗತಿ.
ವಿ.ವಿ.ಗೆ 260 ರೂ.
ಪ್ರತೀ ವಿದ್ಯಾರ್ಥಿಯ ಪ್ರವೇಶ ಶುಲ್ಕದಲ್ಲಿ 260 ರೂ. ವಿ.ವಿ.ಗೆ ಪಾವತಿಯಾಗುತ್ತದೆ. ಅಂತರ್ ವಿ.ವಿ.
ಕ್ರೀಡಾಕೂಟಕ್ಕೆ ತೆರಳಲು ಹಾಗೂ ಕಾಲೇಜುಗಳಲ್ಲಿ ಅಂತರ್ ಕಾಲೇಜು ಕ್ರೀಡಾಕೂಟ ಏರ್ಪಡಿಸುವ ಸಂದರ್ಭ ವಿ.ವಿ.ಯಿಂದ ಒಂದಷ್ಟು ಆರ್ಥಿಕ ಸಹಕಾರ ದೊರೆಯುತ್ತದೆ. ಹೀಗಾಗಿ ಶುಲ್ಕದಲ್ಲಿ ವಿ.ವಿ.ಗೆ ಪಾವತಿಸುವ ಮೊತ್ತಕ್ಕಿಂತ ಹೆಚ್ಚಿನ ಭಾಗವನ್ನು ಕಾಲೇಜಿನ ಕ್ರೀಡಾನಿಧಿಗೆ ಬಳಸಿಕೊಂಡಲ್ಲಿ ಅನುಕೂಲ ಅನ್ನುತ್ತಾರೆ ಕ್ರೀಡಾಪಟುಗಳು.
ಪ್ರೋತ್ಸಾಹದ ಕೊರತೆ
ಸರಕಾರಿ ಕಾಲೇಜಿಗಳ ಪೈಕಿ ಬೆರಳೆಣಿಕೆಯವು ಮಾತ್ರ ಅರ್ಧಕ್ಕಿಂತ ಹೆಚ್ಚು ಸ್ಪರ್ಧೆಗಳಿಗೆ ತಂಡ ಕಳುಹಿ
ಸುತ್ತವೆ. ಆರ್ಥಿಕವಾಗಿ ಸದೃಢವಾಗಿರುವ ಕೆಲವು ಖಾಸಗಿ ಕಾಲೇಜುಗಳು ಮಾತ್ರ ಎಲ್ಲ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತವೆ. ಮಂಗಳೂರು ವಿ.ವಿ. ವ್ಯಾಪ್ತಿಯಲ್ಲಿ 211 ಸರಕಾರಿ ಪದವಿ ಕಾಲೇಜುಗಳಿದ್ದು, ಅಂತರ್
ಕಾಲೇಜು ಕ್ರೀಡಾಕೂಟದಲ್ಲಿ 20ರಿಂದ 40 ಕಾಲೇಜುಗಳ ಸ್ಪರ್ಧಿಗಳು ಮಾತ್ರ ಭಾಗವಹಿಸುತ್ತಾರೆ.
ಬಹುತೇಕ ಕಾಲೇಜುಗಳಲ್ಲಿ ಕ್ರೀಡಾ ಮೂಲ ಸೌಕರ್ಯಗಳ ಕೊರತೆಯಿದೆ. ದೇಹ ದಂಡನೆಗೆ ತಕ್ಕಂತೆ ಸಮರ್ಪಕ ಆಹಾರ ಪೂರೈಸುವಷ್ಟು ಆರ್ಥಿಕ ಸಾಮರ್ಥ್ಯ ಲ್ಲ. ದೈಹಿಕ ಶಿಕ್ಷಣ ನಿರ್ದೇಶಕರ ಹುದ್ದೆಗಳು ಖಾಲಿ ಇವೆ. ಇರುವ ವ್ಯವಸ್ಥೆಯಲ್ಲಿ ಅಭ್ಯಾಸ ಮಾಡುವವರಿಗೂ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಆರ್ಥಿಕ ಸಹಕಾರ ಇಲ್ಲ.
ಕ್ರೀಡಾನಿಧಿ ಹೆಚ್ಚಳಕ್ಕೆ ಪ್ರಸ್ತಾವ
ವಿ.ವಿ. ಮಟ್ಟದಲ್ಲಿ ಕ್ರೀಡೆಗೆ ಸಂಬಂಧಿಸಿ ವಾರ್ಷಿಕ 48 ಸ್ಪರ್ಧೆಗಳಿವೆ. ಆದರೆ ಎಲ್ಲ ಕ್ರೀಡಾಕೂಟಗಳಿಗೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುವಷ್ಟು ಆರ್ಥಿಕ ಸಾಮರ್ಥ್ಯ ಕಾಲೇಜುಗಳಲ್ಲಿಲ್ಲ ಅನ್ನುವುದು ಗಮನಕ್ಕೆ ಬಂದಿದೆ. ಹೀಗಾಗಿ ಪ್ರವೇಶ ಶುಲ್ಕದಿಂದ ಕ್ರೀಡಾನಿಧಿಗೆ ಪಾವತಿ ಮೊತ್ತ ಹೆಚ್ಚಿಸಲು ಪ್ರಸ್ತಾವನೆ ಸಲ್ಲಿಸಿದ್ದು, ಅದಕ್ಕೆ ಸ್ಪಂದನೆ ಸಿಗಲಿದೆ.
- ಡಾ| ಕಿಶೋರ್ ಕುಮಾರ್ ಸಿ.ಕೆ., ನಿರ್ದೇಶಕರು, ದೈಹಿಕ ಶಿಕ್ಷಣ ವಿಭಾಗ, ಮಂಗಳೂರು ವಿ.ವಿ.
– ಕಿರಣ್ ಪ್ರಸಾದ್ ಕುಂಡಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.