ಪ್ರತಿ ಮನೆ ಮಗು ಯೋಧನಾಗಲಿ: ಸಿದ್ಧಲಿಂಗ ಶ್ರೀ
Team Udayavani, Mar 11, 2019, 5:50 AM IST
ಯಡ್ರಾಮಿ: ದೇಶದಲ್ಲಿನ ವ್ಯಕ್ತಿ ಎಷ್ಟೇ ದೊಡ್ಡವನಿರಲಿ, ಬೇರೆ ಏನೇ ಆಗಿರಲಿ. ಅವನು ದೇಶ ಕಾಯುವ ಯೋಧನಿಗೆ ಸಮನಾಗುವುದಿಲ್ಲ. ತನ್ನ ಪ್ರಾಣದ ಹಂಗನ್ನೇ ತೊರೆದು ನಿಸ್ವಾರ್ಥದಿಂದ ಮಾಡುವ ದೇಶದ ರಕ್ಷಣೆ ಕಾರ್ಯ ಶ್ರೇಷ್ಠವಾಗಿದೆ ಎಂದು ಯಡ್ರಾಮಿ ವಿರಕ್ತ ಮಠದ ನೂತನ ಪೀಠಾಧಿಪತಿ ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿ ಹೇಳಿದರು.
ಪಟ್ಟಣದ ವಿರಕ್ತ ಮಠದ ಶಿವಾನುಭವ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ಬಸವೇಶ್ವರ ಶಿಕ್ಷಣ ಸಂಸ್ಥೆಯ ಆದರ್ಶ ಪಬ್ಲಿಕ್ ಸ್ಕೂಲ್‌ನ 7ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಸ್ವಾಮೀಜಿ ಮಾತನಾಡಿದರು.
ತಾಯಂದಿರು ಮಕ್ಕಳಿಗೆ ವಿದ್ಯೆ ಜತೆಗೆ ದೇಶಾಭಿಮಾನ ತುಂಬಬೇಕು ಮತ್ತು ದೇಶ ಕಾಯುವ ಯೋಧರ ಪರಿಶ್ರಮದ ಬಗ್ಗೆ ತಿಳಿಸಬೇಕು. ಆವಾಗ ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ದೇಶಾಭಿಮಾನ ಬೆಳೆಯುತ್ತದೆ. ಪ್ರತಿ ಮನೆಯಿಂದಲೂ ಒಬ್ಬೊಬ್ಬರು ಯೋಧರಾಗುವಂತೆ ಪಾಲಕರು ಮಕ್ಕಳನ್ನು ಬೆಳೆಸಲಿ ಎಂದು ಹೇಳಿದರು.
ಐಟಿಬಿಪಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಯೋಧ ಅಶೋಕ ಹೊಸಮನಿ ಅವರನ್ನು ಸನ್ಮಾನಿಸಿರುವುದು ನಿಜಕ್ಕೂ ಶ್ಲಾಘನಿಯ ಕಾರ್ಯ ಎಂದು ಹೇಳಿದರು. ಆದರ್ಶ ಶಾಲೆ ಮಕ್ಕಳಿಂದ ರಸಮಂಜರಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಯಡ್ರಾಮಿ
ವಿರಕ್ತ ಮಠದ ಹಿರಿಯ ಶ್ರೀ ಸಿದ್ಧರಾಮ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಆದರ್ಶ ಪಬ್ಲಿಕ್ ಸ್ಕೂಲ್‌ಅಧ್ಯಕ್ಷ ರೇವಣಸಿದ್ದಪ್ಪ ಜಿ. ಅಂಕಲಕೋಟಿ, ಜಿಪಂ ಸದಸ್ಯ ದಂಡಪ್ಪ ಸಾಹು ಕುಳಗೇರಿ, ತಾಪಂ ಸದಸ್ಯ ಪ್ರಶಾಂತ ರಾಠೊಡ, ಗ್ರಾಪಂ ಅಧ್ಯಕ್ಷೆ ಮಂಜುಳಾ ಡಂಬಳ, ಉಪಾಧ್ಯಕ್ಷ ಈರಣ್ಣ ಸುಂಕದ ಪ್ರಮುಖರಾದ ಸಿದ್ದನಗೌಡ ಮಾಲಿಪಾಟೀಲ, ಮಹಾಂತಯ್ಯ ಹಿರೇಮಠ, ದೇವಿಂದ್ರಪ್ಪಗೌಡ ಸರಕಾರ, ರವೀಂದ್ರ ಡಗ್ಗಾ, ನಾಗಣ್ಣ ಹಾಗರಗುಂಡಗಿ, ನಿಂಗನಗೌಡ ಜವಳಗಿ, ಗುರುಬಸಪ್ಪ ಸಾಹು ಸನ್ನಳ್ಳಿ, ಬಸವರಾಜ ದೊಡ್ಡಳ್ಳಿ,
ಶಿವಲಿಂಗ ಸುಂಕದ, ಗೊಲ್ಲಾಳಪ್ಪ ಗೆಜ್ಜಿ, ಬಸವರಾಜ ಲಿಂಗದಳ್ಳಿ, ಶ್ರೀಶೈಲ ರಾಠೊಡ, ಮಹಾಂತಪ್ಪ ಮುಳ್ಳೊಳ್ಳಿ, ಸಿದ್ದನಗೌಡ
ಪಾಟೀಲ ತೆಲಗಬಾಳ, ಖಾಜಾಹುಷೇನಸಾಬ್ ಬಾಗವಾನ, ಬಸಯ್ಯಸ್ವಾಮಿ ಕಕ್ಕೇರಾ, ಶಿವಪುತ್ರ ನೆಲ್ಲಗಿ ಇದ್ದರು. ಆದರ್ಶ ಸ್ಕೂಲ್ ಶಿಕ್ಷಕಿ ಇಂದುಮತಿ ಕುಂದಾಪುರ ಸ್ವಾಗತಿಸಿದರು. ಶಿಕ್ಷಕ ದಸ್ತಗೀರ ಚೌದ್ರಿ ನಿರೂಪಿಸಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು
Hunasagi: ನಕಲಿ ಕ್ಲಿನಿಕ್ ಮೇಲೆ ತಾಲೂಕು ವೈದ್ಯಾಧಿಕಾರಿಗಳಿಂದ ದಾಳಿ
MUST WATCH
ಹೊಸ ಸೇರ್ಪಡೆ
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ
IPL Auction: ಸಂಪೂರ್ಣ ಐಪಿಎಲ್ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.