ಭಾರತಕ್ಕೆ ರಶ್ಯ ಶಸ್ತ್ರಾಸ್ತ್ರ ರಫ್ತು ಗಮನಾರ್ಹ ಕುಸಿತ: ಸಿಪ್ರಿ ವರದಿ
Team Udayavani, Mar 11, 2019, 6:00 AM IST
ವಾಷಿಂಗ್ಟನ್ : 2009-2013ರ ಅವಧಿಯಲ್ಲಿದ್ದ ಭಾರತಕ್ಕೆ ರಶ್ಯದ ಶಸ್ತ್ರಾಸ್ತ್ರ ರಫ್ತು ಪ್ರಮಾಣ 2014-18ರ ಅವಧಿಯಲ್ಲಿ ಗಮನಾರ್ಹವಾಗಿ ಕುಸಿದಿರುವುದಾಗಿ ಹೊಸ ವರದಿಯೊಂದು ತಿಳಿಸಿದೆ.
2009-2013ರ ಅವಧಿಯಲ್ಲಿ ಭಾರದ ರಶ್ಯದಿಂದ ಶೇ.76ರಷ್ಟು ಮಾಡಿಕೊಂಡಿದ್ದ ಶಸ್ತ್ರಾಸ್ತ್ರ ಆಮದು, 2014-2018ರ ಅವಧಿಯಲ್ಲಿ ಶೇ.58ಕ್ಕೆ ಕುಸಿದಿದೆ ಎಂದು ವರದಿ ತಿಳಿಸಿದೆ.
ವಿದೇಶೀ ಶಸ್ತ್ರಾಸ್ತ್ರಗಳ ಮೇಲಿನ ದೇಶದ ಅವಲಂಬನೆಯನ್ನು ಕಡಿಮೆ ಮಾಡುವ ಪ್ರಧಾನಿ ನರೇಂದ್ರ ಮೋದಿ ಅವರ ಯತ್ನದ ಫಲವಾಗಿ 2009-2013 ಮತ್ತು 2014-2018ರಲ್ಲಿನ ರಶ್ಯ ಶಸ್ತ್ರಾಸ್ತ್ರ ಆಮದು ಶೇ. 24ರಷ್ಟು ಕಡಿಮೆಯಾಗಿರುವುದಾಗಿ ವರದಿ ತಿಳಿಸಿದೆ.
ಟ್ರೆಂಡ್ಸ್ ಇನ್ ಇಂಟರ್‌ನ್ಯಾಶನಲ್ ಆಮ್ಸ್ì ಟ್ರಾನ್ಸ್‌ಫರ್ 2018 ಎಂಬ ಶೀರ್ಷಿಕೆಯ ವರದಿಯನ್ನು ಸ್ಟಾಕ್‌ಹೋಮ್ ಇಂಟರ್‌ನ್ಯಾಶನಲ್ ಪೀಸ್ ರೀಸರ್ಚ್ ಇನ್‌ಸ್ಟಿಟ್ಯೂಟ್ ಬಿಡುಗಡೆ ಮಾಡಿದೆ.
ರಶ್ಯಕ್ಕೆ 2001ರಲ್ಲಿ ನೀಡಲಾಗಿದ್ದ ಯುದ್ಧ ವಿಮಾನ ಪೂರೈಕೆಗಳ ಆದೇಶ ಮತ್ತು 2008ರಲ್ಲಿ ಫ್ರಾನ್ ಗೆ ನೀಡಲಾಗಿದ್ದ ಜಲಾಂತರ್ಗಾಮಿ ಪೂರೈಕೆ ಆದೇಶಕ್ಕೆ ಪ್ರತಿಯಾಗಿ ಆ ದೇಶಗಳಿಂದ ಪೂರೈಕೆಯ ಅತ್ಯಂತ ವಿಳಂಬಿತವಾಗಿರುವುದು ಕೂಡ ಅವುಗಳ ಮೇಲಿನ ಭಾರತದ ಅವಲಂಬನೆ ಕಡಿಮೆಯಾಗಲು ಕಾರಣವೆಂದು ವರದಿ ತಿಳಿಸಿದೆ.
ಹಾಗಿದ್ದರೂ 2014-18ರ ಅವಧಿಯಲ್ಲಿ ಭಾರತದವು ವಿಶ್ವದ ಎರಡನೇ ಅತೀ ದೊಡ್ಡ ಪ್ರಮುಖ ಶಸ್ತ್ರಾಸ್ತ್ರ ಆಮದು ದೇಶವಾಗಿದೆ. ಇದು ವಿಶ್ವದ ಶೇ.9.5ರ ಪಾಲು ಎನ್ನವುದು ಗಮನಾರ್ಹವಾಗಿದೆ ಎಂದು ವರದಿ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
MUST WATCH
ಹೊಸ ಸೇರ್ಪಡೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.