ಚೆಕ್‌ ತಿರುಚುತ್ತಿದ್ದ ಖದೀಮರ ಸೆರೆ


Team Udayavani, Mar 11, 2019, 6:30 AM IST

check.jpg

ಬೆಂಗಳೂರು: ಕೊರಿಯರ್‌ ಬಾಯ್‌ಗಳ ಗಮನ ಬೇರೆಡೆ ಸೆಳೆದು ಅಸಲಿ ಚೆಕ್‌ಗಳನ್ನು ಕಳವು ಮಾಡಿ, ರಾಸಾಯನಿಕ ವಸ್ತು ಬಳಿಸಿ, ಚೆಕ್‌ನಲ್ಲಿ ನಮೂದಿಸಿದ ಮೊತ್ತ ಬದಲಿಸಿ ವಂಚನೆ ಮಾಡುತ್ತಿದ್ದ ನಿವೃತ್ತ ಸರ್ಕಾರಿ ನೌಕರ, ಆತನ ಪುತ್ರ ಹಾಗೂ ಮೂವರು ರೌಡಿಶೀಟರ್‌ ಸೇರಿ ಆರು ಮಂದಿಯನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ.

ತ್ಯಾಗರಾಜನಗರ ನಿವಾಸಿ, ನಿವೃತ್ತ ಸರ್ಕಾರಿ ನೌಕರ ಜಿ.ಎಸ್‌.ಶ್ರೀಪಾದ, ಆತನ ಪುತ್ರ ಆನಂದ್‌ತೀರ್ಥ ಮತ್ತು ಖಾಸಗಿ ಕಂಪನಿ ಉದ್ಯೋಗಿ ಹರೀಶ್‌, ರೌಡಿಶೀಟರ್‌ಗಳಾದ ಪ್ರಶಾಂತ್‌, ಪ್ರತಾಪ್‌, ವೆಂಕಟೇಶ್‌ ಬಂಧಿತರು. ಪ್ರಕರಣದ ಪ್ರಮುಖ ಆರೋಪಿ ರೌಡಿಶೀಟರ್‌ ನವೀನ್‌ ಹಾಗೂ ಆತನ ಸಹಚರ ರಾಜೇಶ್‌ ಶೆಟ್ಟಿ  ತಲೆಮರೆಸಿಕೊಂಡಿದ್ದು, ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.

ಕೊರಿಯರ್‌ ಬಾಯ್‌ಗಳನ್ನೇ ಗುರಿಯಾಗಿಸಿಕೊಂಡು ಕೃತ್ಯ ಎಸಗುತ್ತಿದ್ದ ರೌಡಿಶೀಟರ್‌ ಪ್ರಶಾಂತ್‌, ಪ್ರತಾಪ್‌, ವೆಂಕಟೇಶ್‌, ರಾಜೇಶ್‌ ಶೆಟ್ಟಿ  ಸಂಸ್ಥೆಗಳ ಮುಂದೆ ಕೆಲ ಹೊತ್ತು ಕಾಯುತ್ತಿದ್ದರು. ನಂತರ ಕೊರಿಯರ್‌ ಬಾಯ್‌ಗಳನ್ನು ಬೈಕ್‌ಗಳಲ್ಲಿ ಹಿಂಬಾಲಿಸಿ, ವಿತರಣೆ ಸಂದರ್ಭದಲ್ಲಿ ಅವರ ಗಮನ ಬೇರೆಡೆ ಸೆಳೆದು ಬ್ಯಾಗ್‌ಗಳಲ್ಲಿರುವ ಅಸಲಿ ಚೆಕ್‌ಗಳನ್ನು ಕಳವು ಮಾಡಿ,

ಅವುಗಳನ್ನು ನವೀನ್‌ಗೆ ಕೊಡುತ್ತಿದ್ದರು. ನವೀನ್‌ ರಾಸಾಯನಿಕ ವಸ್ತು ಬಳಸಿ ಚೆಕ್‌ಗಳಲ್ಲಿರುವ ಮೊತ್ತ, ದಿನಾಂಕಗಳನ್ನು ಬದಲಾಯಿಸಿ ಅಸಲಿ ಚೆಕ್‌ ರೀತಿ ತಿದ್ದುಪಡಿ ಮಾಡುತ್ತಿದ್ದ. ನಂತರ ಬ್ಯಾಂಕ್‌ನಿಂದ ಲಕ್ಷಾಂತರ ರೂ. ಹಣ ಡ್ರಾ ಅಥವಾ ವರ್ಗಾವಣೆ ಮಾಡಿಕೊಂಡು ವಂಚಿಸುತ್ತಿದ್ದರು ಎಂದು ಪೊಲೀಸರು ಹೇಳಿದರು.

ಜೈಲಿನಲ್ಲೇ ಸಂಚು: ಬೇರೆ ಬೇರೆ ಅಪರಾಧ ಪ್ರಕರಣಗಳಲ್ಲಿ ನವೀನ್‌, ಹರೀಶ್‌, ಪ್ರತಾಪ್‌, ಪ್ರಶಾಂತ್‌ ಹಾಗೂ ವೆಂಕಟೇಶ್‌,ರಾಜೇಶ್‌ ಶೆಟ್ಟಿ ಜೈಲು ಸೇರಿದ್ದರು. ಈ ವೇಳೆ ಎಲ್ಲರಿಗೂ ಪರಸ್ಪರ ಪರಿಚಯವಾಗಿತ್ತು. ಈ ಪೈಕಿ ನವೀನ್‌ ಈ ಮೊದಲು ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದ. ಹೀಗಾಗಿ ಬ್ಯಾಂಕಿಂಗ್‌ ವಂಚನೆ ಬಗ್ಗೆ ಹೆಚ್ಚು ತಿಳಿದುಕೊಂಡಿದ್ದ.

ಜೈಲಿನಿಂದ ಹೊರಹೋಗುತ್ತಿದ್ದಂತೆ ಕೊರಿಯರ್‌ ಬಾಯ್‌ಗಳು ಕೊಂಡೊಯ್ಯುವ ಚೆಕ್‌ಗಳನ್ನು ತನಗೆ ತಂದು ಕೊಟ್ಟರೆ, ಅವುಗಳನ್ನು ರಾಸಾಯನಿಕ ವಸ್ತು ಬಳಸಿ ಮೊತ್ತ, ದಿನಾಂಕ ಬದಲಿಸಿಕೊಡುತ್ತೇನೆ. ಚೆಕ್‌ಗಳನ್ನು ಬ್ಯಾಂಕ್‌ಗೆ ಹಾಕಿ ನಗದು ಪಡೆಯಬಹುದು ಎಂದು ಸಂಚಿನ ಬಗ್ಗೆ ವಿವರಣೆ ನೀಡಿದ್ದ. ಆದರೆ, ಅವುಗಳನ್ನು ನಗದು ರೂಪಕ್ಕೆ ಬದಲಾಯಿಸುವ ಹೊಣೆ ನಿಮ್ಮದು ಎಂದು ನವೀನ್‌ ಹೇಳಿದ್ದ.

ಮತ್ತೂಂದೆಡೆ ಈ ಮೊದಲು ಬ್ಯಾಂಕ್‌ಗಳಿಂದ ಸಾಲ ಕೊಡಿಸುವ ಕೆಲಸ ಮಾಡುತ್ತಿದ್ದ ಹರೀಶ್‌ಗೆ, ಕಳವು ಮಾಡುತ್ತಿದ್ದ ಚೆಕ್‌ ಅನ್ನು ನಗದು ರೂಪಕ್ಕೆ ಬದಲಾಯಿಸಿಕೊಟ್ಟರೆ ಕಮೀಷನ್‌ ಕೊಡುವುದಾಗಿ ಪ್ರತಾಪ್‌ ಭರವಸೆ ನೀಡಿದ್ದ. ಒಟ್ಟಾರೆ ಕೃತ್ಯಕ್ಕೆ ಜೈಲಿನಲ್ಲೇ ಕುಳಿತು ಸಂಚು ರೂಪಿಸಿªದ ಆರೋಪಿಗಳು ಪರಪ್ಪನ ಅಗ್ರಹಾರದಿಂದ ಹೊರಬರುತ್ತಿದ್ದಂತೆ ಕೃತ್ಯ ಎಸಗಲು ಆರಂಭಿಸಿದ್ದರು ಎಂದು ಪೊಲೀಸರು ಹೇಳಿದರು.

ಆರೋಪಿಗಳ ಪೈಕಿ ವೆಂಕಟೇಶ್‌ ಹಾಗೂ ಪ್ರಶಾಂತ್‌ ಕೆಲ ತಿಂಗಳ ಹಿಂದೆ ತಮಿಳುನಾಡಿನ ಶಾಸ್ತ್ರಿ ಭವನದ ಬಳಿ ಕೊರಿಯರ್‌ ಮೂಲಕ ಚೆಕ್‌ಗಳನ್ನು ವಿವಿಧ ಕಂಪನಿಗಳಿಗೆ ವಿತರಿಸುವ ಕೆಲಸ ಮಾಡುತ್ತಿದ್ದ ಯುವಕನನ್ನು ಪತ್ತೆಹಚ್ಚಿದ್ದಾರೆ. ಬಳಿಕ ಆತನನ್ನು ಹಿಂಬಾಲಿಸಿಕೊಂಡು ಹೋಗಿ, ಆತ ಕಂಪನಿಯೊಂದಕ್ಕೆ ಚೆಕ್‌ ವಿತರಣೆ ಮಾಡುವ ಸಂದರ್ಭದಲ್ಲಿ ಯುವಕನ ಗಮನ ಬೇರೆಡೆ ಸಳೆದು ಆತನ ಬ್ಯಾಗ್‌ನಲ್ಲಿದ್ದ ಹತ್ತಾರು ಚೆಕ್‌ಗಳನ್ನು  ಕಳ್ಳತನ ಮಾಡಿದ್ದರು. ನಂತರ ನವೀನ್‌ ಮೂಲಕ ಅಸಲಿ ಚೆಕ್‌ನಲ್ಲಿದ್ದ ಮೊತ್ತವನ್ನು ಬದಲಾಯಿಸಿದ್ದರು.

ಪರಾರಿಯಾಗುವಾಗ ರಸ್ತೆ ಅಪಘಾತ – ಬಂಧನ: ಅನಂತರ ತಮಿಳುನಾಡಿನ ಬ್ಯಾಂಕ್‌ ಒಂದರಲ್ಲಿ ಆ ಚೆಕ್‌ ಬಳಸಿ ಹಣ ಡ್ರಾ ಮಾಡಿಕೊಳ್ಳಲು ಮುಂದಾಗಿದ್ದರು. ಆರೋಪಿಗಳು ನೀಡಿದ ಚೆಕ್‌ ಅನ್ನು ಬ್ಯಾಂಕ್‌ ಸಿಬ್ಬಂದಿ ಪರಿಶೀಲಿಸಿದಾಗ ನಕಲಿ ಎಂಬುದು ಬೆಳಕಿಗೆ ಬಂದಿತ್ತು. ಕೂಡಲೇ ಮ್ಯಾನೇಜರ್‌ ಇಬ್ಬರು ಆರೋಪಿಗಳನ್ನು ತಮ್ಮ ಕೊಠಡಿಗೆ ಕರೆದು ಪ್ರಶ್ನಿಸುತ್ತಿದ್ದಾಗ, ತಮ್ಮ ಬಳಿಯಿದ್ದ ಕಾರದ ಪುಡಿಯನ್ನು ಮ್ಯಾನೇಜರ್‌ ಮುಖಕ್ಕೆ ಎರಚಿ ಪರಾರಿಯಾಗಿದ್ದರು.

ಬೈಕ್‌ನಲ್ಲಿ ಹೋಗುತ್ತಿದ್ದ ಆರೋಪಿಗಳು ತಪ್ಪಿಸಿಕೊಳ್ಳುವ ಭರದಲ್ಲಿ ಸ್ಕೀಡ್‌ ಆಗಿ ಕೆಳಗೆ ಬಿದ್ದಿದ್ದು, ವೆಂಕಟೇಶ್‌ ಕೈಗೆ ಗಂಭೀರ ಪೆಟ್ಟಾಗಿತ್ತು. ಕೂಡಲೇ ತಮಿಳುನಾಡಿನ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ, ವಿಚಾಣೆ ನಡೆಸಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ. ನಂತರ ಜಾಮೀನು ಪಡೆದು ಹೊರಬಂದ ಆರೋಪಿಗಳು ಬೆಂಗಳೂರಿನಲ್ಲಿ ಅದೇ ರೀತಿಯ ಕೃತ್ಯ ಎಸಗಿ ಸಿಕ್ಕಿ ಬಿದ್ದಿದ್ದಾರೆ ಎಂದು ಪೊಲೀಸರು ಹೇಳಿದರು.

ಮಗನ ತಪ್ಪಿಗೆ ತಂದೆಗೆ ಶಿಕ್ಷೆ: ಪ್ರಕರಣದಲ್ಲಿ ಬಂಧಿತರಾಗಿರುವ ನಿವೃತ್ತ ಸರ್ಕಾರಿ ನೌಕರ ಜಿ.ಎಸ್‌.ಶ್ರೀಪಾದ ಅವರಿಗೆ ವಂಚನೆ ಜಾಲದ ಬಗ್ಗೆ ಮಾಹಿತಿಯಿಲ್ಲ. ಆದರೆ, ಶ್ರೀಪಾದ ಅವರ ಪುತ್ರ ಆನಂದತೀರ್ಥ, ಆರೋಪಿ ಹರೀಶನ ಸಂಪರ್ಕದಲ್ಲಿದ್ದ. ಆನಂದತೀರ್ಥ ಲಕ್ಷಾಂತರ ರೂ. ಸಾಲ ಮಾಡಿಕೊಂಡಿದ್ದ.

ಈ ವಿಚಾರ ತಿಳಿದಿದ್ದ ಹರೀಶ್‌, ಆತನಿಗೆ ನಕಲಿ ಚೆಕ್‌ ಮೂಲಕ ಹಣ ಡ್ರಾ ಮಾಡುವ ಪ್ಲಾನ್‌ ಬಗ್ಗೆ ತಿಳಿಸಿ, ಹಣದ ಆಮೀಷವೊಡ್ಡಿ ಕೃತ್ಯದಲ್ಲಿ ಭಾಗಿಯಾಗುವಂತೆ ಕೇಳಿಕೊಂಡಿದ್ದ. ಅದರಂತೆ, ಆನಂದ ತೀರ್ಥ, ತನ್ನ ತಂದೆ ಶ್ರೀಪಾದ್‌ ಅವರಿಗೆ ನಕಲಿ ಚೆಕ್‌ ನೀಡಿ, ವಿಧಾನಸೌಧ ಶಾಖೆಯ ಎಸ್‌ಬಿಐ ಶಾಖೆಯಿಂದ ಹಣ ಡ್ರಾ ಮಾಡಿಕೊಡುವಂತೆ ಹೇಳಿದ್ದ. ಹಣ ಡ್ರಾ ಮಾಡಿದರೆ ಸ್ನೇಹಿತರೊಬ್ಬರು ಕಮೀಷನ್‌ ಕೊಡುತ್ತಾರೆ ಎಂದು ತಿಳಿಸಿದ್ದ. 

ಪುತ್ರನ ವಂಚನೆ ಜಾಲದ ಬಗ್ಗೆ ಅರಿವಿಲ್ಲದ ಶ್ರೀಪಾದ, 57.750 ರೂ. ಮೊತ್ತವನ್ನು 5.77.500 ಎಂದು ತಿರುಚಲಾಗಿದ್ದ ನಕಲಿ ಚೆಕ್‌ ಅನ್ನು ಬ್ಯಾಂಕ್‌ಗೆ ಸಲ್ಲಿಸಿದ್ದರು. ಅನುಮಾನಗೊಂಡ ಬ್ಯಾಂಕ್‌ ಸಿಬ್ಬಂದಿ ಪರಿಶೀಲಿಸಿದಾಗ ವಂಚನೆ ಬೆಳಕಿಗೆ ಬಂದಿತ್ತು. ಈ ಸಂಬಂಧ ಬ್ಯಾಂಕ್‌ ಮ್ಯಾನೇಜರ್‌ ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ತನಿಖೆ ನಡೆಸಿದ ಪೊಲೀಸರು, ಆರೋಪಿಗಳನ್ನು ಬಂಧಿಸಿದ್ದಾರೆ.

ಟಾಪ್ ನ್ಯೂಸ್

yathanal-jarakiholi

Waqf Notice: ಬಸನಗೌಡ ಪಾಟೀಲ್‌ ಯತ್ನಾಳ್‌ ತಂಡದಿಂದ 1 ತಿಂಗಳು ಜನ ಜಾಗೃತಿ

BYV-yathnal

Waqf Issue: ಕಾಂಗ್ರೆಸ್‌ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ

IT employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

HD-Kumaraswmy

Black Days: ಜಮೀರ್‌+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್‌.ಡಿ.ಕುಮಾರಸ್ವಾಮಿ

Delhi-Air

Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!

north

Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್‌ ಪರೀಕ್ಷೆ

Horoscope new-1

Daily Horoscope: ಕ್ಷಣಿಕ ಸಮಸ್ಯೆಗಳನ್ನು ನಿರ್ಲಕ್ಷಿಸಿರಿ, ನಿರೀಕ್ಷಿತ ಆರ್ಥಿಕ ನೆರವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Organ Donation: ಸಾವಿನ ನಂತರವೂ ನೆರವಾದ ಜೀವ

Organ Donation: ಸಾವಿನ ನಂತರವೂ ನೆರವಾದ ಜೀವ

15-bng

Bengaluru: ವೈದ್ಯೆಗೆ ಲೈಂಗಿಕ ಕಿರುಕುಳ: ಪಿಎಸ್‌ಐ ವಿರುದ್ದ ಪೊಲೀಸ್‌ ಆಯುಕ್ತರಿಗೆ ದೂರು

14-bng

Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು

9-munirathna

Bengaluru: ಮುನಿರತ್ನ ವಿರುದ್ಧ ಹನಿಟ್ರ್ಯಾಪ್‌ ಕೇಸ್‌: ಪಿಐ ಸೆರೆ

8-bng

Infosys ಪ್ರಶಸ್ತಿ 2024ಕ್ಕೆ ಕರ್ನಾಟಕದವರೂ ಸೇರಿ 6 ಸಾಧಕರ ಆಯ್ಕೆ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

yathanal-jarakiholi

Waqf Notice: ಬಸನಗೌಡ ಪಾಟೀಲ್‌ ಯತ್ನಾಳ್‌ ತಂಡದಿಂದ 1 ತಿಂಗಳು ಜನ ಜಾಗೃತಿ

BYV-yathnal

Waqf Issue: ಕಾಂಗ್ರೆಸ್‌ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ

IT employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

HD-Kumaraswmy

Black Days: ಜಮೀರ್‌+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್‌.ಡಿ.ಕುಮಾರಸ್ವಾಮಿ

Delhi-Air

Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.