ಬಂಗಾಡಿ: ಸೂರ್ಯ-ಚಂದ್ರ ಜೋಡುಕರೆ ಕಂಬಳ ಫಲಿತಾಂಶ
Team Udayavani, Mar 11, 2019, 6:37 AM IST
ಬೆಳ್ತಂಗಡಿ : ಬಂಗಾಡಿ-ಕೊಲ್ಲಿಯಲ್ಲಿ ಜರಗಿದ 22ನೇ ವರ್ಷದ ಸೂರ್ಯ- ಚಂದ್ರ ಜೋಡುಕರೆ ಕಂಬಳ ಕೂಟದ ಫಲಿತಾಂಶ ಪ್ರಕಟಗೊಂಡಿದೆ. ರಂಜನ್ ಜಿ. ಗೌಡ ನೇತೃತ್ವದಲ್ಲಿ ನಡೆದ ಬಂಗಾಡಿ-ಕೊಲ್ಲಿ ಕಂಬಳ ಕೂಟದಲ್ಲಿ ಒಟ್ಟು 122 ಜತೆ ಕೋಣಗಳು ಭಾಗವಹಿಸಿದ್ದವು.
ಕನೆಹಲಗೆ: 4 ಜತೆ, ಅಡ್ಡಹಲಗೆ: 5 ಜತೆ, ಹಗ್ಗ ಹಿರಿಯ: 12 ಜತೆ, ನೇಗಿಲು ಹಿರಿಯ: 15 ಜತೆ, ಹಗ್ಗ ಕಿರಿಯ: 9 ಜತೆ, ನೇಗಿಲು ಕಿರಿಯ: 33 ಜತೆ, ಸಬ್ ಜೂನಿಯರ್ ನೇಗಿಲು: 44 ಜತೆ ಇದ್ದವು.
ಕೂಟದ ವಿಜೇತರು
ಬಾರ್ಕೂರು ಶಾಂತಾರಾಮ ಶೆಟ್ಟಿ, ಓಡಿಸಿದವರು: ಮಂದಾರ್ತಿ ಶಿರೂರು ಮುದ್ದುಮನೆ ಗೋಪಾಲ ನಾಯ್ಕ (6.5 ಕೋಲು ನಿಶಾನೆಗೆ ನೀರು ಹಾಯಿಸಿದ್ದಾರೆ.) ಹಗ್ಗ ಹಿರಿಯ: ಪ್ರಥಮ: ನಂದಳಿಕೆ ಶ್ರೀಕಾಂತ್ ಭಟ್ ಎ., ಓಡಿಸಿದವರು: ಬಜಗೋಳಿ ಜೋಗಿಬೆಟ್ಟು ನಿಶಾಂತ್ ಶೆಟ್ಟಿ, ದ್ವಿತೀಯ: ಮಾಳ ಆನಂದ ನಿಲಯ ಶೇಖರ ಎ. ಶೆಟ್ಟಿ, ಓಡಿಸಿದವರು: ಹೊಕ್ಕಾಡಿಗೋಳಿ ಹಕ್ಕೇರಿ ಸುರೇಶ್ ಎಂ. ಶೆಟ್ಟಿ.
ಹಗ್ಗ ಕಿರಿಯ: ಪ್ರಥಮ: ಮುಂಡ್ಕೂರು ಮುಲ್ಲಡ್ಕ ರವೀಂದ್ರ ಶೆಟ್ಟಿ, ಓಡಿಸಿದವರು: ಕೊಳಕೆ ಇರ್ವತ್ತೂರು ಆನಂದ್, ದ್ವಿತೀಯ: ನಕ್ರೆ ಮಹೋಧರ ನಿವಾಸ ಇಶಾನಿ ತುಕ್ರ ಭಂಡಾರಿ, ಓಡಿಸಿದವರು: ನತೀಶ್ ಬಾರಾಡಿ.
ನೇಗಿಲು ಹಿರಿಯ: ಪ್ರಥಮ: ಪಟ್ಟೆ ಬಿಜೊjಟ್ಟು ಪ್ರಶಾಂತ್ ಶೆಟ್ಟಿ ಬಿ., ಓಡಿಸಿದವರು: ಕೊಳಕೆ ಇರ್ವತ್ತೂರು ಆನಂದ್ ದ್ವಿತೀಯ: ಬೋಳದ ಗುತ್ತು ಜಗದೀಶ್ ಶೆಟ್ಟಿ ಎ., ಓಡಿಸಿದವರು: ಹೊಕ್ಕಾಡಿಗೋಳಿ ಹಕ್ಕೇರಿ ಸುರೇಶ್‌ಒ. ಶೆಟ್ಟಿ.
ನೇಗಿಲು ಕಿರಿಯ: ಪ್ರಥಮ: ಮಿಜಾರ್ ಪ್ರಸಾದ್ ನಿಲಯ ಪ್ರಸಿದ್ಧ ಶಕ್ತಿ ಪ್ರಸಾದ್ ಶೆಟ್ಟಿ, ಓಡಿಸಿದವರು: ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡ, ದ್ವಿತೀಯ: ಕಾರಿಂಜ, ಕೊಂಬೇಲುಗುತ್ತು ಪ್ರಶಾಂತ್ ಪೂಜಾರಿ, ಓಡಿಸಿದವರು: ಪ್ರವೀಣ್ ಕೆರ್ವಾಶೆ. ನೇಗಿಲು ಕಿರಿಯ ಸಬ್ ಜೂನಿಯರ್ -ಪ್ರಥಮ: ಪೆರಿಂಜ ಕೊರ್ಲೊಟ್ಟು ದೀಪಾಕ್ಷಿ ನಿಲಯ ರಾಂಪ ದಿನೇಶ್ ಕುಮಾರ್, ಓಡಿಸಿದವರು: ಅತ್ತೂರು ಕೋಡಂಗೆ ಸುಧೀರ್ ಸಾಲ್ಯಾನ್, ದ್ವಿತೀಯ: ಬಜಗೋಳಿ ಮುಡಾರು ರಾಮೇರಗುತ್ತು ಹಾರ್ದಿಕ್ ಹರ್ಷವರ್ಧನ ಪಡಿವಾಳ್, ಓಡಿಸಿದವರು: ಅಭಿಷೇಕ್ ಪಾವಂಜೆ.
ಅಡ್ಡಹಲಗೆ-ಪ್ರಥಮ: ಮೋರ್ಲ ಗಿರೀಶ್ ಆಳ್ವ, ಓಡಿಸಿದವರು: ಬಂಗಾಡಿ ಕುದ್ಮನ್ ಲೋಕಯ್ಯ ಗೌಡ, ದ್ವಿತೀಯ: ವಾಲ್ಪಾಡಿ ಹಾಲಾಜೆ, ಓಡಿಸಿದವರು: ಸಾವ್ಯ ಗಂಗಯ್ಯ ಪೂಜಾರಿ. ಇವರಿಗೆ ಬಹುಮಾನ ವಿತರಿಸಲಾಯಿತು.
ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕೆ. ವಸಂತ ಬಂಗೇರ, ಮಾಜಿ ಸಚಿವ ಕೆ. ಗಂಗಾಧರ ಗೌಡ, ಕಂಬಳದ ನೇತೃತ್ವ ವಹಿಸಿದ್ದ ಸಮಿತಿಯ ಗೌರವಾಧ್ಯಕ್ಷ ರಂಜನ್ ಜಿ. ಗೌಡ ಅವರನ್ನು ಊರವರ ಪರವಾಗಿ ಗೌರವಿಸಲಾಯಿತು.
ಮಾಜಿ ಶಾಸಕ ಕೆ. ಪ್ರಭಾಕರ ಬಂಗೇರ, ಜಿ.ಪಂ. ಸದಸ್ಯರಾದ ಸೌಮ್ಯಲತಾ, ಶೇಖರ ಕುಕ್ಕೇಡಿ, ಧರಣೇಂದ್ರ ಕುಮಾರ್, ತಾ.ಪಂ. ಸದಸ್ಯರಾದ ಜಯರಾಮ್, ಪ್ರವೀಣ ಗೌಡ, ಜಯಕರ್ನಾಟಕ ಸಂಘಟನೆಯ ಅಧ್ಯಕ್ಷ ಪುಷ್ಪರಾಜ ಶೆಟ್ಟಿ, ಮಂಜುನಾಥ ರೈ, ಉದ್ಯಮಿ ವಿಶ್ವನಾಥ ಲಾೖಲ, ವೇಣೂರು ಪೆರ್ಮುಡ ಕಂಬಳದ ಅಧ್ಯಕ್ಷ ನಿತೇಶ್, ಎಪಿಎಂಸಿ ಅಧ್ಯಕ್ಷ ಕೇಶವ ಬೆಳಾಲು, ಸ್ವಾಗತ ಸಮಿತಿ ಅಧ್ಯಕ್ಷ ಕಾಸಿಂ ಮಲ್ಲಿಗೆಮನೆ,
ಸಮಿತಿ ಪದಾಧಿಕಾರಿಗಳಾದ ಸೀತಾರಾಮ ಹಾರ್ತಕಜೆ, ಕಿಶೋರ್ ಕುಮಾರ್ ವಳಂಬ್ರ, ಭರತ್ ಕುಮಾರ್, ತುಂಗಪ್ಪ ಪೂಜಾರಿ, ಕಿಶೋರ್ ಹೂರ್ಜೆ ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
TV Actor; 35 ನೇ ವಯಸ್ಸಿನಲ್ಲೆ ಜನಪ್ರಿಯ ಕಿರುತೆರೆ ನಟ ನಿತಿನ್ ಚೌಹಾಣ್ ನಿಧ*ನ
Social Media: ಈ ದೇಶದಲ್ಲಿ 16 ವರ್ಷದೊಳಗಿನವರು ಇನ್ಸ್ಟಾಗ್ರಾಮ್, ಫೇಸ್‌ಬುಕ್ ಬಳಸುವಂತಿಲ್ಲ!
Deve Gowda; ನನಗೀಗ ವಯಸ್ಸು 92.. ಮೊಮ್ಮಗ ಗೆದ್ದ ನಂತರ ಮನೆಯಲ್ಲಿ ಮಲಗುವುದಿಲ್ಲ..
Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್ – ಅಥಿಯಾ ಶೆಟ್ಟಿ
ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.