ಪಲ್ಸ್ ಪೋಲಿಯೋ: ಶೆ.92 ಗುರಿ ಸಾಧನೆ
Team Udayavani, Mar 11, 2019, 7:41 AM IST
ಚಿಕ್ಕಬಳ್ಳಾಪುರ: ಜಿಲ್ಲಾದ್ಯಂತ ಜಿಲ್ಲಾಡಳಿತ, ಜಿಪಂ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಭಾನುವಾರ 640 ಬೂತ್‌ಗಳಲ್ಲಿ ಆಯೋಜಿಸಿದ್ದ ಪಲ್ಸ್ ಪೋಲಿಯೋ ಅಭಿಯಾನದಲ್ಲಿ ಒಟ್ಟು ಗುರಿ ಹೊಂದಿದ್ದ 1.26 ಲಕ್ಷ ಮಕ್ಕಳ ಪೈಕಿ 1.17 ಲಕ್ಷ ಮಕ್ಕಳಿಗೆ ಲಸಿಕೆ ಹಾಕಿ ಜಿಲ್ಲೆಯಲ್ಲಿ ಶೇ.92 ರಷ್ಟು ಗುರಿ ಸಾಧನೆ ಮಾಡಿದೆ. ಗ್ರಾಮಾಂತರ ಪ್ರದೇಶದಲ್ಲಿ ಒಟ್ಟು 93 ಸಾವಿರ ಮಕ್ಕಳ ಪೈಕಿ 87 ಸಾವಿರ ಮಕ್ಕಳಿಗೆ ಹಾಗೂ ನಗರ ಪ್ರದೇಶದಲ್ಲಿ ಒಟ್ಟು 33 ಸಾವಿರ ಮಕ್ಕಳ ಪೈಕಿ 29 ಸಾವಿರ ಮಕ್ಕಳಿಗೆ ಲಸಿಕೆ ಹಾಕಲಾಗಿದೆ.
ತಾಲೂಕುವಾರು ಮಾಹಿತಿ: ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಗ್ರಾಮಾಂತರ ಪ್ರದೇಶದಲ್ಲಿ 15 ಸಾವಿರ ಮಕ್ಕಳ ಪೈಕಿ 14 ಸಾವಿರ ಮಕ್ಕಳಿಗೆ ಲಸಿಕೆ ಹಾಕಿ ಶೇ.91.12 ಗುರಿ ಸಾಧಿಸಿದ್ದರೆ, ನಗರ ಪ್ರದೇಶದಲ್ಲಿ 3,635 ಮಕ್ಕಳ ಪೈಕಿ 2,795 ಮಕ್ಕಳಿಗೆ ಲಸಿಕೆ ಹಾಕಿ ಶೇ.76.89 ಗುರಿ ಸಾಧಿಸಲಾಗಿದೆ. ಒಟ್ಟಾರೆ ತಾಲೂಕಿನಲ್ಲಿ 19,570 ಮಕ್ಕಳ ಪೈಕಿ 17,315 ಮಕ್ಕಳಿಗೆ ಲಸಿಕೆ ಹಾಕಿ ಶೇ.88.48 ಗುರಿ ಸಾಧಿಸಲಾಗಿದೆ.
ಚಿಕ್ಕಬಳ್ಳಾಪುರ ತಾಲೂಕು: ಗ್ರಾಮಾಂತರ ಪ್ರದೇಶದಲ್ಲಿ 15,847 ಮಕ್ಕಳ ಪೈಕಿ 15,221 ಮಕ್ಕಳಿಗೆ ಲಸಿಕೆ ಹಾಕಿ ಶೇ.96.05 ಗುರಿ ಸಾಧಿಸಲಾಗಿದೆ. ನಗರ ಪ್ರದೇಶದಲ್ಲಿ 8,016 ಮಕ್ಕಳ ಪೈಕಿ 6,903 ಮಕ್ಕಳಿಗೆ ಲಸಿಕೆ ಹಾಕಿ ಶೇ.86.12 ಗುರಿ ಸಾಧಿಸಲಾಗಿದೆ. ಒಟ್ಟಾರೆ ತಾಲೂಕಿನಲ್ಲಿ 23, 863 ಮಕ್ಕಳ ಪೈಕಿ 22,124 ಮಕ್ಕಳಿಗೆ ಲಸಿಕೆ ಶೇ.92.71 ಗುರಿ ಸಾಧಿಸಲಾಗಿದೆ.
ಚಿಂತಾಮಣಿ: ತಾಲೂಕಿನಲ್ಲಿ ಗ್ರಾಮೀಣ ಪ್ರದೇಶದಲ್ಲಿ 18,484 ಮಕ್ಕಳ ಪೈಕಿ 18,118 ಮಕ್ಕಳಿಗೆ ಲಸಿಕೆ ಹಾಕಿ ಶೇ.98.02 ಗುರಿ ಸಾಧಿಸಲಾಗಿದೆ. ನಗರ ಪ್ರದೇಶದಲ್ಲಿ 9,300 ಮಕ್ಕಳ ಪೈಕಿ 8,350 ಮಕ್ಕಳಿಗೆ ಲಸಿಕೆ ಹಾಕಿ ಶೇ.89.78 ಗುರಿ ಸಾಧಿಸಿ ಒಟ್ಟಾರೆ 27,784 ಮಕ್ಕಳ ಪೈಕಿ 26.468 ಮಕ್ಕಳಿಗೆ ಲಸಿಕೆ ಹಾಕಿ ಶೇ.95.26 ಗುರಿ ಸಾಧಿಸಲಾಗಿದೆ.
ಗೌರಿಬಿದನೂರು: ತಾಲೂಕಿನ ಗ್ರಾಮಾಂತರ ಪ್ರದೇಶದಲ್ಲಿ 21,101 ಮಕ್ಕಳ ಪೈಕಿ 18,751 ಮಕ್ಕಳಿಗೆ ಲಸಿಕೆ ಹಾಕಿ ಶೇ.93.28 ಗುರಿ ಸಾಧಿಸಲಾಗಿದೆ. ನಗರ ಪ್ರದೇಶದಲ್ಲಿ 4,391 ಮಕ್ಕಳ ಪೈಕಿ 3,823 ಮಕ್ಕಳಿಗೆ ಲಸಿಕೆ ಹಾಕಿ ಶೇ.87.06 ಗುರಿ ಸಾಧಿಸಿ ಒಟ್ಟಾರೆ ತಾಲೂಕಿನಲ್ಲಿ 24,492 ಮಕ್ಕಳ ಪೈಕಿ 22,574 ಮಕ್ಕಳಿಗೆ ಲಸಿಕೆ ಹಾಕಿ ಶೇ.92.17 ಗುರಿ ಸಾಧಿಸಲಾಗಿದೆ.
ಗುಡಿಬಂಡೆ: ತಾಲೂಕಿನ ಗ್ರಾಮಾಂತರ ಪ್ರದೇಶದಲ್ಲಿ 5,422 ಮಕ್ಕಳ ಪೈಕಿ 4,066 ಮಕ್ಕಳಿಗೆ ಲಸಿಕೆ ಹಾಕಿ ಶೇ.74.99 ಗುರಿ ಸಾಧಿಸಲಾಗಿದೆ. ನಗರ ಪ್ರದೇಶದಲ್ಲಿ 863 ಮಕ್ಕಳ ಪೈಕಿ 877 ಮಕ್ಕಳಿಗೆ ಲಸಿಕೆ ಹಾಕಿ ಶೇ.101 ಗುರಿ ಸಾಧಿಸಲಾಗಿದೆ. ಒಟ್ಟಾರೆ ತಾಲೂಕಿನಲ್ಲಿ 6,285 ಮಕ್ಕಳ ಪೈಕಿ 4,943 ಮಕ್ಕಳಿಗೆ ಲಸಿಕೆ ಹಾಕಿ ಶೇ.78.65 ರಷ್ಟು ಗುರಿ ಸಾಧಿಸಲಾಗಿದೆ.
ಶಿಡ್ಲಘಟ್ಟ: ತಾಲೂಕಿನ ಗ್ರಾಮಾಂತರ ಪ್ರದೇಶದಲ್ಲಿ 17,773 ಮಕ್ಕಳ ಪೈಕಿ 16,893 ಮಕ್ಕಳಿಗೆ ಲಸಿಕೆ ಹಾಕಿ ಶೇ.95.05 ಗುರಿ ಸಾಧಿಸಲಾಗಿದೆ. ನಗರ ಪ್ರದೇಶದಲ್ಲಿ ಒಟ್ಟು 7,129 ಮಕ್ಕಳ ಪೈಕಿ 6.714 ಮಕ್ಕಳಿಗೆ ಲಸಿಕೆ ಹಾಕಿ ಶೇ.94.18 ರಷ್ಟು ಗುರಿ ಸಾಧಿಸಿದೆ. ಒಟ್ಟಾರೆ ತಾಲೂಕಿನಲ್ಲಿ 24,902 ಮಕ್ಕಳ ಪೈಕಿ 23,607 ಮಕ್ಕಳಿಗೆ ಲಸಿಕೆ ಹಾಕಿ ಶೇ.94.80 ರಷ್ಟು ಗುರಿ ಸಾಧಿಸಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಬಿ.ಎಂ.ರವಿಶಂಕರ್ ಭಾನುವಾರ “ಉದಯವಾಣಿ’ಗೆ ತಿಳಿಸಿದರು.
ಅಪರ ಜಿಲ್ಲಾಧಿಕಾರಿಗಳ ಚಾಲನೆ: ಚಿಕ್ಕಬಳ್ಳಾಪುರ ನಗರದ ಜಿಲ್ಲಾಸ್ಪತ್ರೆಯಲ್ಲಿ ಪಲ್ಸ್ ಪೋಲಿಯೋ ಅಭಿಯಾನಕ್ಕೆ ಅಪರ ಜಿಲ್ಲಾಧಿಕಾರಿ ಆರತಿ ನವಜಾತು ಶಿಶುಗೆ ಪೋಲಿಯೋ ಹನಿ ಹಾಕುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು. ನಗರಸಭೆ ಅಧ್ಯಕ್ಷ ಎಂ.ಮುನಿಕೃಷ್ಣ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಬಿ.ಎಂ.ರವಿಶಂಕರ್, ಜಿಲ್ಲಾಸ್ಪತ್ರೆಯ ಸರ್ಜನ್ ಡಾ.ವಿಜಯಕುಮಾರ್, ನಿವಾಸಿ ವೈದ್ಯಾಧಿಕಾರಿ ರಮೇಶ್, ಮಕ್ಕಳ ತಜ್ಞ ಡಾ,ಪ್ರಕಾಶ್, ತಾಲೂಕು ವೈದ್ಯಾಧಿಕಾರಿ ಡಾ.ಮಿತ್ರಣ್ಣ, ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ವೆಂಕಟಾಚಲಪತಿ ಉಪಸ್ಥಿತರಿದ್ದರು.
640 ಬೂತ್‌ಗಳಲ್ಲಿ ಲಸಿಕೆ: ಪಲ್ಸ್ ಪೋಲಿಯೋ ಅಭಿಯಾನಕ್ಕಾಗಿ ಜಿಲ್ಲಾದ್ಯಂತ ಒಟ್ಟು 640 ಲಸಿಕಾ ಕೇಂದ್ರಗಳನ್ನು ತೆರೆಯಲಾಗಿತ್ತು. ಒಟ್ಟು 2,568 ವ್ಯಾಕ್ಸಿನೇಟರ್ಗಳು ಲಸಿಕಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಮೇಲ್ವಿಚಾರಣೆಗಾಗಿ ಒಟ್ಟು 137 ಮೇಲ್ವಿಚಾರಕ ಸಿಬ್ಬಂದಿಗಳನ್ನು ನೇಮಿಸಲಾಗಿತ್ತು. ಜಿಲ್ಲಾದ್ಯಂತ ನಗರ ಪ್ರದೇಶಗಳಲ್ಲಿ ಬಸ್ ರೈಲ್ವೆ ನಿಲ್ದಾಣ, ಜನ ನಿಬಿಡ ಪ್ರದೇಶಗಳಲ್ಲಿ ಪ್ರಯಾಣ ಮಾಡುವ ಮಕ್ಕಳಿಗೆ ಪೋಲಿಯೋ ಹನಿ ಹಾಕಲು 41 ಟ್ರಾನ್ಸಿಟ್ ಬೂತ್‌ಗಳನ್ನು ತೆರೆಯಲಾಗಿತ್ತು ಎಂದು ಡಾ.ಬಿ.ರವಿಶಂಕರ್ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ಮೂವರು ಬುರ್ಖಾಧಾರಿ ಕಳ್ಳಿಯರ ಬಂಧನ
Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್ ಆ್ಯಪ್: ಸದ್ಗುರು
Dr MC Sudhakar: ‘ಹೈಕಮಾಂಡ್ ಎಷ್ಟು ದಿನ ಜವಾಬ್ದಾರಿ ಕೊಡುತ್ತೋ ಅಷ್ಟು ದಿನ ಸಚಿವ’
Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿ ಗಂಭೀರ
Chintamani: ರಸ್ತೆ ಅಪಘಾ*ತದಲ್ಲಿ ಯುವಕ ಸಾ*ವು,ಇಬ್ಬರಿಗೆ ಗಂಭೀರ ಗಾಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.