‘ಸಾನಿಧ್ಯ ಸಚ್ಛವಾಗಿದ್ದರೆ ದೇವರ ಅನುಗ್ರಹ’
Team Udayavani, Mar 11, 2019, 9:29 AM IST
ವೇಣೂರು: ಸಾನ್ನಿಧ್ಯ ಸ್ವಚ್ಛವಾಗಿದ್ದರೆ ದೇವರು ಅನುಗ್ರಹಿಸುತ್ತಾನೆ. ದೇವರಲ್ಲಿ ಪ್ರೀತಿ ತೋರಬೇಕು ಮತ್ತು ಸಮರ್ಪಣ ಭಾವನೆ ಬೇಕು. ಆಗ ದೇವಸ್ಥಾನಗಳ ಅಭಿವೃದ್ಧಿ ಸುಲಭವಾಗುತ್ತದೆ. ದೇವಸ್ಥಾನಕ್ಕೆ ಧ್ವಜಸ್ತಂಭ ಹಾಗೂ ರಥ ಸಮರ್ಪಿಸಿದ್ದರಿಂದ ಇಲ್ಲಿ ಭವ್ಯತೆ ಸೃಷ್ಠಿಯಾಗಿದೆ. ದಾನಿಗಳಿಗೆ ದೇವರು ಅನುಗ್ರಹಿಸಲಿ ಎಂದು ಶ್ರೀಕ್ಷೇತ್ರ ಕಟೀಲಿನ ಪ್ರಧಾನ ಅರ್ಚಕ ವೇ| ಮೂ| ಅನಂತ ಪದ್ಮನಾಭ ಆಸ್ರಣ್ಣ ಹೇಳಿದರು.
ಕಾಶಿಪಟ್ಣದ ಕೇಳ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ರವಿವಾರ ಜರಗಿದ ನೂತನ ಧ್ವಜಸ್ತಂಭ-ರಥ ಸಮರ್ಪಣೆ, ವರ್ಷಾವಧಿ ಜಾತ್ರೆ ಕಾರ್ಯಕ್ರಮದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರದ ಪ್ರಧಾನ ಅರ್ಚಕ, ಆಡಳಿತ ಮಂಡಳಿ ಮೊಕ್ತೇಸರ ಕೆ. ಅನಂತ ಆಸ್ರಣ್ಣ ಮಾತನಾಡಿ, ಕ್ಷೇತ್ರ ಇಷ್ಟೊಂದು ಅಭಿವೃದ್ಧಿಯಾಗಲು ಸಮಿತಿ ಹಾಗೂ ದಾನಿಗಳ ಸಹಕಾರವಿದೆ. ಮುಂಭಾಗದಲ್ಲಿ ಗೋಪುರ ಆಗಬೇಕಿದ್ದು, ಅಗತ್ಯಬಿದ್ದರೆ ತನ್ನ ಜಾಗ ಬಿಟ್ಟುಕೊಡಲು ಸಿದ್ಧರಿರುವುದಾಗಿ ತಿಳಿಸಿದರು.
ವಾಸ್ತು ಶಾಸ್ತ್ರಜ್ಞ ಸುಬ್ರಹ್ಮಣ್ಯ ಭಟ್ ಮಾತನಾಡಿ, ದೇವಸ್ಥಾನ ಪ್ರವೇಶಿಸುವಾಗ ಮಕ್ಕಳಂತೆ ಮನಸ್ಸು ನಿರ್ಮಲವಾಗಿರಬೇಕು. ದೇಹ ಮತ್ತು ಮನಸ್ಸನ್ನು ಸ್ವತ್ಛವಾಗಿಡುವುದು ನಮ್ಮ ಕರ್ತವ್ಯ ಎಂದರು.
ಮೂಲ್ಕಿ ಕಾರ್ನಾಡ್ ನಿಶಾನ್ ಟ್ರಾವೆಲ್ಸ್‌ನ ಶಶಿ ಅಮೀನ್, ಪೆರಾಡಿ ಭಂಡಸಾಲೆಯ ಬಿ. ಸಂಜೀವ ಶೆಟ್ಟಿ, ಡಾ| ಆಶೀರ್ವಾದ್, ಉದ್ಯಮಿ ಶಶಿ ಅಮೀನ್ ಕಾರ್ನಾಡ್, ವಿಕ್ರಮ್ ಕುಮಾರ್ ಕೆ.ಆರ್., ಮರೋಡಿ ಗ್ರಾ.ಪಂ. ಅಧ್ಯಕ್ಷ ಸದಾನಂದ ಶೆಟ್ಟಿ ಮತ್ತಿತರರಿದ್ದರು.
ಸಮ್ಮಾನ
ದೇವಸ್ಥಾನದ ಅಭಿವೃದ್ಧಿಯಲ್ಲಿ ವಿವಿಧ ರೀತಿಯಲ್ಲಿ ಸಹಕರಿಸಿದ ವಾಸ್ತುತಜ್ಞ ಸುಬ್ರಹ್ಮಣ್ಯ ಭಟ್, ಶ್ರೀ ಮಹಾಗಣಪತಿ ದೇವರ ಮೂರ್ತಿಗೆ ಬೆಳ್ಳಿಕವಚ ಸಮರ್ಪಿಸಿದ ಶಶಿ ಅಮೀನ್, ಶ್ರೀ ದುರ್ಗಾಪರಮೇಶ್ವರಿ ದೇವಿಯ ಮೂರ್ತಿಗೆ ಬೆಳ್ಳಿ ಕವಚ ಸಮರ್ಪಿಸಿದ ಭಂಡಸಾಲೆ ಕುಟುಂಬಸ್ಥರ ಪರವಾಗಿ ಬಿ. ಸಂಜೀವ ಶೆಟ್ಟಿ, ಧ್ವಜಸ್ತಂಭಕ್ಕೆ ಮರವನ್ನು ನೀಡಿದ ಜಿನ್ನಪ್ಪ ಪೂಜಾರಿ ಆರಂಬೋಡಿ, ರಥ ನಿರ್ಮಾಣದ ಶಿಲ್ಪಿ ಪ್ರಶಾಂತ್ ಆಚಾರ್ಯ ಅವರನ್ನು ಸಮ್ಮಾನಿಸಲಾಯಿತು. ರಥ ನಿರ್ಮಾಣಕ್ಕೆ ಮರ ನೀಡಿದವರನ್ನು, 10 ಸಾವಿರ ರೂ. ಮೇಲ್ಪಟ್ಟು ದೇಣಿಗೆ ನೀಡಿದವರನ್ನು ಗೌರವಿಸಲಾಯಿತು. ಇದಕ್ಕೂ ಮೊದಲು ಧ್ವಜಪ್ರತಿಷ್ಠೆ, ಕಲಶಾಭಿಷೇಕ ಜರಗಿತು.
ಮೊಕ್ತೇಸರ ಎಸ್. ಶಂಕರ ಭಟ್ ಬಾಲ್ಯ ಪ್ರಾಸ್ತಾವಿಸಿ, ಸ್ವಾಗತಿಸಿದರು. ಶಿಕ್ಷಕ ಅಜಿತ್ ಕುಮಾರ್ ಜೈನ್ ಕೊಕ್ರಾಡಿ ನಿರ್ವಹಿಸಿ, ಮೊಕ್ತೇಸರ ಸತೀಶ್ ಕೆ. ಕಾಶಿಪಟ್ಣ ವಂದಿಸಿದರು. ಮೊಕ್ತೇಸರರು ಸಹಕರಿಸಿದರು. ಕಟೀಲು ಮೇಳದವರಿಂದ ಶ್ರೀ ದೇವಿ ಮಹಾತ್ಮೆ ಬಯಲಾಟ ಜರಗಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Siddakatte Kodange Kambala: ಈ ಸೀಸನ್ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ
IPL 2025 Auction: ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..
IPL Auction: ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್ ರಾಹುಲ್; ಖರೀದಿ ಆರಂಭಿಸಿದ ಆರ್ ಸಿಬಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.