ರಂಗವಲ್ಲಿ ಮಾಸಿದೆ ಕನಸು, ದೀಪ ಒಡೆದಿದೆ


Team Udayavani, Mar 12, 2019, 12:30 AM IST

m-10.jpg

ನಿನಗಾಗಿ ಎಷ್ಟೋ ಪ್ರೇಮ ಪತ್ರಗಳನ್ನು ಬರೆದಿದ್ದೆ. ಅದರೆ, ಯಾವುದನ್ನೂ ನಿನಗೆ ಕೊಡಲಾಗಲಿಲ್ಲ. ಅವುಗಳೆಲ್ಲ ನಿನ್ನ ಕೈ ಸೇರಿದ್ದರೆ ಇವತ್ತು ಈ ಪತ್ರವನ್ನು ಬರೆಯುವ ಪ್ರಮೇಯವೇ ಬರುತ್ತಿರಲಿಲ್ಲ. 

ಓ ನನ್ನ ಪ್ರೀತಿಯ ಗೆಳೆಯ
 ಇದನ್ನು ಪ್ರೇಮಪತ್ರ ಅನ್ನೋಕೆ ಕಾಲ ಮೀರಿ ಹೋಗಿದೆ. ಸ್ನೇಹ ಪತ್ರ ಎಂದು ಕರೆಯಲು ಮನಸ್ಸಾಕ್ಷಿ ಒಪ್ಪುತ್ತಿಲ್ಲ. ಇದೆಲ್ಲಾ ಶುರುವಾಗಿದ್ದು ಯಾವಾಗಿಂದ ಹೇಳು? ಮೊದಲ ಬಾರಿಗೆ ನೀನು ಎದುರು ಮನೆಗೆ ಬಾಡಿಗೆಗೆ ಬಂದ ದಿನದಿಂದ ಅಲ್ಲವಾ? ಅವತ್ತೇ ನಾನು ನಿನ್ನ ಮೊದಲು ನೋಡಿದ್ದು.

ಅವತ್ತು ನಾನು ಕನಕಾಂಬರ ಬಣ್ಣದ ಚೂಡಿದಾರದ ಮೇಲೆ ಹಾಲು ಬಿಳುಪಿನ ಟವೆಲ್‌ ಹೊದ್ದು ಮನೆಯಿಂದ ಹೊರ ಬಂದಿದ್ದೆ. ಮನೆಯೆದುರು ರಂಗೋಲಿ ಬಿಡಿಸಲು ಬಂದವಳ ಎದೆಯಂಗಳದಲ್ಲಿ ನೀನು ಪ್ರೀತಿಯ ಮೊದಲ ಚುಕ್ಕೆಯನ್ನಿಟ್ಟಿದ್ದೆ. ಅದ್ಯಾಕೋ ಗೊತ್ತಿಲ್ಲ, ಮೊದಲ ನೋಟದಲ್ಲೇ ನೀನು ನನ್ನನ್ನು ಸೆಳೆದು ಬಿಟ್ಟೆ. 

ಆಮೇಲಿನಿಂದ ದಿನವೂ ನಿನ್ನ ದಿನಚರಿಯನ್ನು ಫಾಲೋ ಮಾಡುವುದೇ ನನ್ನ ಕೆಲಸವಾಯಿತು. ನೀನು ಎದುರು ಮನೆ ಮಾಳಿಗೆಯ ಮೇಲೆ ಬ್ರಷ್‌ ಮಾಡಲು ಬರುವ ಸಮಯಕ್ಕೆ ಸರಿಯಾಗಿ ನಾನು ಕೈಯಲ್ಲಿ ರಂಗೋಲಿ ಡಬ್ಬಿ ಹಿಡಿದು ಅಂಗಳಕ್ಕೆ ಬರುತ್ತಿದ್ದೆ. ನೀನು ಹಲ್ಲುಜ್ಜಿ ಮುಗಿಸುವ ತನಕವೂ ಒಂದೊಂದೇ ಚುಕ್ಕೆ ಇಡುತ್ತಾ ಅಂಗಳದಲ್ಲೇ ಇರುತ್ತಿದ್ದೆ. ನೀನು ಏಳುವುದು ಲೇಟಾದರೆ, ಅಂಗಳಕ್ಕೆ ಚುಕ್ಕಿ ಬೀಳುವುದೂ ತಡವಾಗುತ್ತಿತ್ತು. 

ಈ ಕಣ್ಣಾಮುಚ್ಚಾಲೆ ಆಟ ಇಬ್ಬರಿಗೂ ಗೊತ್ತಿತ್ತು. ಕೆಲವು ದಿನ ನೀನು ಬೇಕಂತಲೇ ಗಂಟೆ ಒಂಬತ್ತಾದರೂ ಎದ್ದು ಬರದೆ ನನ್ನನ್ನು ಕಾಯಿಸುತ್ತಿದ್ದೆ. ಆದರೆ. ನೀನೇ ಮೊದಲು ಹೇಳಬೇಕೆಂದು ನಾನು, ನಾನೇ ಹೆಜ್ಜೆ ಮುಂದಕ್ಕೆ ಇಡಬೇಕೆಂದು ನೀನು 3 ವರ್ಷ ಕಳೆದುಬಿಟ್ಟೆವು. ಇಬ್ಬರ ನಡುವೆ ಒಳ್ಳೆಯ ಗೆಳೆತನವಿತ್ತು. ಆದರೂ, ಆ ಸ್ನೇಹವನ್ನು ಪ್ರೇಮದ ಮನೆಗೆ ಸೇರಿಸಲು ಇಬ್ಬರಿಗೂ ಆಗಲಿಲ್ಲ. ಕಡೆಗೊಂದು ದಿನ ನೀನು ನನ್ನಿಂದ ದೂರಾಗುವ ಗಳಿಗೆ ಬಂತು. ನನ್ನ ಮನಸ್ಸು ನೀರಿಲ್ಲದ ಮೀನಿನಂತೆ ಒದ್ದಾಡಿಬಿಟ್ಟಿತು. ಅದೆಷ್ಟೋ ಸಲ ನಿನಗೆ ಪರೋಕ್ಷವಾಗಿ ಸುಳಿವು ಕೊಟ್ಟೆನಾದರೂ ನೀನು ಅರಿತೂ ಅರಿಯದಂತೆ ಜಾಣಮೌನಿಯಾದೆ. 

ಹೇಳು ಗೆಳೆಯ, ನಿನಗೆ ನಾನಂದ್ರೆ ಇಷ್ಟವಿರಲಿಲ್ವಾ? ನಮ್ಮನೆಯ ರಂಗವಲ್ಲಿ ಡಬ್ಬಿ, ನೀನೆಂದು ಅಪ್ಪಿ ಹಿಡಿದು ಮಲಗಿದ ದಿಂಬು, ಕೈ ಕೈ ಹಿಡಿದು ಓಡಾಡಿದ ಆ ರಸ್ತೆ, ನೀನು ನನಗೇ ಸ್ವಂತವಾಗಲಿ ಅಂತ ಬೇಡಿಕೊಳ್ಳುವಾಗ ಬಿದ್ದ ದೇವಸ್ಥಾನದ ಗುಲಾಬಿ ಹೂವನ್ನು ಕೇಳಿ ನೋಡು, ನಮ್ಮಿಬ್ಬರ ಮಧ್ಯೆ ಇದ್ದದ್ದು ಸ್ನೇಹವೋ, ಪ್ರೀತಿಯೊ ಅಂತ. ನನ್ನ ಕಾಲಿಗೆ ಗೆಜ್ಜೆ ನೀನಾದರೆ, ನಿನ್ನ ಬಾಳಿನ ನಾದ ನಾನಾಗುವ ಆಸೆ. ನನ್ನ ಮುಡಿಯ ಹೂ ನೀನಾದರೆ, ನಿನ್ನ ಜೀವನದ ಪರಿಮಳ ನಾನಾಗುವ ಆಸೆ ಕಣೋ…

ಮತ್ತೂಮ್ಮೆ ನಿನ್ನನ್ನೇ ನೀನು ಕೇಳಿಕೋ. ಇದು ಸ್ನೇಹವಾ, ಪ್ರೀತಿಯಾ ಅಥವಾ ಜಸ್ಟ್‌ ಆಕರ್ಷಣೆಯಾ ಅಂತ. ನಿನಗೆ ನೀನೇ ಉತ್ತರ ಕಂಡು ಹಿಡಿದುಕೋ. ನಿನಗಾಗಿ ಎಷ್ಟೋ ಪ್ರೇಮ ಪತ್ರಗಳನ್ನು ಬರೆದಿದ್ದೆ. ಅದರೆ, ಯಾವುದನ್ನೂ ನಿನಗೆ ಕೊಡಲಾಗಲಿಲ್ಲ. ಅವುಗಳೆಲ್ಲ ನಿನ್ನ ಕೈ ಸೇರಿದ್ದರೆ ಇವತ್ತು ಈ ಪತ್ರವನ್ನು ಬರೆಯುವ ಪ್ರಮೇಯವೇ ಬರುತ್ತಿರಲಿಲ್ಲ. 

ಇತ್ತೀಚೆಗೆ ನಾನಿಡುವ ರಂಗೋಲಿಯಲ್ಲಿ ಚುಕ್ಕಿಗಳು ಇವೇ ಹೊರತು, ಬಣ್ಣವಿಲ್ಲ. ಬದುಕಿನ ರಂಗೂ ಮಾಸಿ ಹೋಗಿದೆ. ನಿನ್ನನ್ನು ಮರೆಯಲು ಸಾಧ್ಯವೇ ಇಲ್ಲ ಅಂತ ಹೃದಯ ಕೂಗಿ ಕೂಗಿ ಹೇಳುತ್ತಿದೆ. ನಿನ್ನ ಪ್ರೀತಿಯಂತೂ ನನ್ನ ಹಣೆಯಲ್ಲಿ ಬರೆದಿಲ್ಲ. ಮತ್ತೇನು ಮಾಡಲಿ ಹೇಳು, ನಿನ್ನ ಸ್ನೇಹಿತಳಾಗೇ ಉಳಿದುಬಿಡುತ್ತೇನೆ.

ಅನ್ನಪೂರ್ಣ ವೈ.ಬಿ.ಕೆ.

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

1-aaaaaaa

Karkala: ಕಾಂಗ್ರೆಸ್ ನಾಯಕ ಡಿ. ಅರ್.‌ರಾಜು ನಿಧನ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

1-chuii

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.