ಬಂದೂಕು ಠೇವಣಿ: ರೈತರ ಮನವಿಗೆ ಜಿಲ್ಲಾಧಿಕಾರಿ ಸ್ಪಂದನೆ
Team Udayavani, Mar 12, 2019, 1:00 AM IST
ಉಡುಪಿ: ಚುನಾವಣೆ ಸಂದರ್ಭದಲ್ಲಿ ರೈತರು ಪರವಾನಿಗೆ ಹೊಂದಿರುವ ಬಂದೂಕನ್ನು ಪೊಲೀಸ್ ಠಾಣೆಯಲ್ಲಿ ಠೇವಣಿ ಮಾಡುವಂತೆ ತಿಳಿಸಿದ ಜಿಲ್ಲಾಡಳಿತವು ಈಗ ರೈತರ ಮನವಿಗೆ ಸ್ಪಂದಿಸಿ ರಿಯಾಯಿತಿ ನೀಡುವ ಭರವಸೆ ನೀಡಿದೆ.
ಚುನಾವಣೆಗೆ ಒಂದೂವರೆ ತಿಂಗಳುಗಳ ಮೊದಲೇ ಬಂದೂಕನ್ನು ಠೇವಣಿ ಮಾಡಿಸಿಕೊಳ್ಳಲಾಗುತ್ತಿತ್ತು. ಫಲಿತಾಂಶ ಘೋಷಣೆಯ 15 ದಿನದ ಅನಂತರ ಹಿಂಪಡೆಯುವಂತೆ ತಿಳಿಸಲಾ ಗುತ್ತಿದೆ. ಆ ಕಾರಣಕ್ಕೆ ರೈತರು ತಮ್ಮ ಬಂದೂಕನ್ನು 3ರಿಂದ 4 ತಿಂಗಳ ಕಾಲ ಪೋಲೀಸ್ ಠಾಣೆಯಲ್ಲಿಡಬೇಕಾಗಿದೆ. ಇದರಿಂದ ರೈತರ ಬೆಳೆದು ನಿಂತ ಫಸಲನ್ನು ಕಾಡುಪ್ರಾಣಿಗಳಿಂದ ಉಳಿಸಿಕೊಳ್ಳುವುದು ಕಷ್ಟವಾಗುತ್ತದೆ. ಆದ್ದರಿಂದ ರಿಯಾಯಿತಿ ನೀಡುವಂತೆ ಜಿಲ್ಲಾ ಭಾರತೀಯ ಕಿಸಾನ್ ಸಂಘ ಈಗಾಗಲೇ ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಿತ್ತು. ಸೋಮವಾರ ಪುನಃ ಸಂಘದ ನಿಯೋಗ ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು, ಅದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಯವರು, ಎಸ್ಪಿಯವರಿಂದ ಆ ಬಗ್ಗೆ ಅಭಿಪ್ರಾಯ ಪಡೆದು ಕೂಡಲೇ ಆದೇಶಿಸುವುದಾಗಿ ನಿಯೋಗಕ್ಕೆ ಭರವಸೆ ನೀಡಿದರು ಎಂದು ಸಂಘದ ಪ್ರಕಟನೆ ತಿಳಿಸಿದೆ.
ಸಂಘದ ನಿಯೋಗದಲ್ಲಿ ಪದಾಧಿಕಾರಿಗಳಾದ ರಾಮಚಂದ್ರ ಅಲ್ಸೆ, ಸತ್ಯನಾರಾಯಣ ಉಡುಪ, ವಿಶ್ವನಾಥ ಶೆಟ್ಟಿ, ಸೀತಾರಾಮ ಗಾಣಿಗ, ಆಸ್ತೀಕ ಶಾಸಿŒ, ಮತ್ತು ಪ್ರಾಣೆಶ್ ಯಡಿಯಾಳ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dhanashree Verma: ಯಶ್ ಸಿನಿಮಾಕ್ಕೆ ಕ್ರಿಕೆಟಿಗ ಚಹಾಲ್ ಪತ್ನಿ ಹೀರೋಯಿನ್
Re-Release: ಈ ವರ್ಷ ರೀ ರಿಲೀಸ್ ಆದ ಬಾಲಿವುಡ್ ಸಿನಿಮಾಗಳ ಬಾಕ್ಸ್ ಆಫೀಸ್ ಗಳಿಕೆ ಎಷ್ಟು?
Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!
IPL Mega Auction: 2008-2024.. ಪ್ರತಿ ಹರಾಜಿನ ದುಬಾರಿ ಆಟಗಾರರ ಪಟ್ಟಿ ಇಲ್ಲಿದೆ
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.