ಎನ್‌ಎಸ್‌ಡಿಯಿಂದ ವಚನ ಚಳವಳಿ ನಾಟಕ


Team Udayavani, Mar 12, 2019, 6:36 AM IST

nsdf-inda.jpg

ಬೆಂಗಳೂರು: ಕುವೆಂಪು ಕಾದಂಬರಿ ಆಧಾರಿತ ಮಲೆಗಳಲ್ಲಿ ಮದುಮಗಳು ನಾಟಕ ಯಶಸ್ವಿಯಾದ ಬೆನ್ನಲ್ಲೇ ರಾಷ್ಟ್ರೀಯ ನಾಟಕ ಶಾಲೆ (ಎನ್‌ಎಸ್‌ಡಿ) ಬೆಂಗಳೂರು ಕೇಂದ್ರ ಮತ್ತೊಂದು ಐತಿಹಾಸಿಕ ನಾಟಕ ಪ್ರದರ್ಶನಕ್ಕೆ ಸಿದ್ಧತೆ ನಡೆಸಿದೆ.

ವಚನಕಾರರ ತತ್ತ್ವ ಸಂದೇಶಗಳಿಗೆ ರಂಗರೂಪ ನೀಡಲು ಎನ್‌ಎಸ್‌ಡಿ ಮುಂದಾಗಿದ್ದು, ಇದರೊಂದಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೂ ಕೈ ಜೋಡಿಸಿದೆ. ಬಿಜ್ಜಳನ ಆಸ್ಥಾನ, ಬಸವಣ್ಣ, ಆಯ್ದಕ್ಕಿ ಲಕ್ಕಮ್ಮ, ನೀಲಮ್ಮ, ಸಿದ್ಧರಾಮ, ಮಡಿವಾಳ ಮಾಚೀದೇವ, ಅಲ್ಲಮಪ್ರಭು, ಅಕ್ಕಮಹಾದೇವಿ ಸೇರಿದಂತೆ ಇಡೀ 12ನೇ ಶತಮಾನವನ್ನೇ ರಂಗದ ಮೇಲೆ ಮೂಡಿಸಲು ಎನ್‌ಎಸ್‌ಡಿ ಕಳೆದ 4 ವರ್ಷಗಳಿಂದ ಪ್ರಯತ್ನ ಪಡುತ್ತಿದ್ದು, ಇದೀಗ ಅಂತಿಮ ರೂಪಕ್ಕೆ ಬಂದಿದೆ.

ಆಗಿನ ಕಾಲದಲ್ಲಿ ನಡೆದ ಧರ್ಮ ಜಗಳ, ಕೋಮು ಸೌರ್ಹಾದತೆ, ಲಿಂಗ ಸಮಾನತೆ, ಪುರೋಹಿತ ಶಾಹಿಗಳ ದಬ್ಟಾಳಿಕೆ, ಅವರ ವಿರುದ್ಧ ನಡೆದ ವಚನ ಕ್ರಾಂತಿ ಎಲ್ಲ ಅಂಶಗಳನ್ನಿಟ್ಟಿಕೊಂಡು ನಾಟಕ ಮಾಡಲಾಗುತ್ತಿದೆ. ಮಲೆಗಳಲ್ಲಿ ಮದುಮಗಳ ರೀತಿಯಲ್ಲಿಯೇ 8-9 ಗಂಟೆಗಳ ನಾಟಕ ಇದಾಗಿದ್ದು, ಅದರಂತೆ ಇದು ಕೂಡ ಚಲನಶೀಲವಾಗಿರಲಿದೆ. ನಾಲ್ಕು ದಿಕ್ಕುಗಳಲ್ಲಿ ಶರಣ ಪಂಥ ಸಂಚಾರ ನಡೆಸಲಿದೆ. ಹೀಗಾಗಿ 4 ವೇದಿಕೆಗಳಲ್ಲಿ ನಾಟಕ ಪ್ರದರ್ಶನಗೊಳ್ಳಲಿದೆ.

ಮೊದಲ 2 ವೇದಿಕೆಗಳಲ್ಲಿ ಬಿಜ್ಜಳ ರಾಜನ ಆಸ್ಥಾನ ಹಾಗೂ ಬಸವಣ್ಣ ಪ್ರವರ್ಧನಮಾನಕ್ಕೆ ಬಂದ ಬಗೆಯನ್ನು ಪ್ರದರ್ಶಿಸಲಾಗುವುದು. ಬಿಜ್ಜಳನ ಆಸ್ಥಾನ ಹೇಗೆ ಮತ್ತು ಯಾಕಾಗಿ ಕಲ್ಯಾಣ ರಾಜ್ಯವಾಗಿತ್ತು ಎಂಬ ಅಂಶವನ್ನು ನಾಟಕದಲ್ಲಿ ತೋರಿಸಲಾಗುವುದು. ಶ್ರದ್ಧೆ, ಭಕ್ತಿ, ಕಾಯಕ ಜೀವಿಗಳು, ಕೌಟುಂಬಿಕ ಪರಿಕಲ್ಪನೆ ಹಾಗೂ  ಶರಣರು ಈ ಅಂಶಗಳನ್ನು ಪ್ರಧಾನವಾಗಿಟ್ಟುಕೊಂಡು ನಾಟಕ ರಚಿಸಲಾಗಿದೆ.

ಬಯಲುಸೀಮೆ ರಂಗ ವಿನ್ಯಾಸ: ಕೆ.ವೈ.ನಾರಾಯಣಸ್ವಾಮಿ ಕಳೆದ ಮೂರ್‍ನಾಲ್ಕು ವರ್ಷಗಳಿಂದ ನಾಟಕದ ಕಥಾ ವಸ್ತುವಿನ ಬಗ್ಗೆ ಅಧ್ಯಯನ ಸಂಶೋಧನೆ ನಡೆಸಿ ಸಂಭಾಷಣಾ ಪ್ರತಿ (ಸ್ಕ್ರಿಪ್ಟ್) ತಯಾರಿಸಿದ್ದಾರೆ. ಈ ನಾಟಕಕ್ಕಾಗಿ ಶಶಿಧರ ಅಡಪ ಕಳೆದ ಒಂದು ತಿಂಗಳಿನಿಂದ ರಂಗ ವಿನ್ಯಾಸದ ಸಿದ್ಧತೆ ಮಾಡುತ್ತಿದ್ದಾರೆ. ಬಯಲುಸೀಮೆಯ ಚಿತ್ರಣ ನೋಡುಗರ ಮನಮುಟ್ಟುವಂತೆ ಮಾಡಲು ಕಿತ್ತೊರಿನ ಕೋಟೆಯ ಪರಿಸರ ಅಥವಾ ಬಯಲು ಸೀಮೆಯ ನದಿ ತೀರದ ಪ್ರದೇಶದ ಚಿತ್ರಣ ವಿರುವಂತೆ ರಂಗ ವಿನ್ಯಾಸ ಮಾಡಲು ಶಶಿಧರ ಅಡಪ ಚಿಂತಿಸಿದ್ದಾರೆ.

ನೂರಾರು ಕಲಾವಿದರ ಅಭಿನಯ: ಇಡೀ ನಾಟಕದಲ್ಲಿ 60- 70 ವಚನಗಳನ್ನು ಬಳಸಿಕೊಳ್ಳಲು ಚಿಂತಿಸಲಾಗಿದ್ದು, ನಾಟಕಕ್ಕೆ ಹಂಸಲೇಖ ಸಂಗೀತ ನೀಡಲಿದ್ದಾರೆ. ಒಟ್ಟು 300ಕ್ಕೂ ಹೆಚ್ಚು ವಚನಗಾರರನ್ನು ವೇದಿಕೆ ಮೇಲೆ ತರಲು ಸಾಧ್ಯವಿಲ್ಲದ್ದಿರೂ, 12ನೇ ಶತಮಾನದ ಬಹುತೇಕ ವಚನಕಾರರನ್ನು ರಂಗದಲ್ಲಿ ತೋರಿಸುವ ಪ್ರಯತ್ನ ಮಾಡಲಾಗುವುದು. ಎನ್‌ಎಸ್‌ಡಿಯಲ್ಲಿ ಕಲಿಯಲು ಮುಂದಿನ ಶೈಕ್ಷಣಿಕ ವರ್ಷಕ್ಕೆ ಆಯ್ಕೆಯಾಗುವ ವಿದ್ಯಾರ್ಥಿಗಳು ಹಾಗೂ ಹಳೆಯ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಲಿದ್ದಾರೆ. ಇವರೊಂದಿಗೆ ಹೊರಗಿನ ಕಲಾವಿದರು ಅಭಿನಯಿಸಲಿದ್ದಾರೆ. 100 ರಿಂದ 125 ಕಲಾವಿದರನ್ನೊಳಗೊಂಡ ದೊಡ್ಡ ನಾಟಕ ಪ್ರದರ್ಶನ ಇದಾಗಿರಲಿದೆ.

ಮತ್ತೊಮ್ಮೆ ಮಲೆಗಳಲ್ಲಿ ಮದುಮಗಳು: ವಚನ ಚಳವಳಿಯ ನಾಟಕ ಪ್ರದರ್ಶನ 1.25 ಕೋಟಿ ವೆಚ್ಚದಲ್ಲಿ ರೂಪುಗೊಳ್ಳುತ್ತಿರುವ ಯೋಜನೆ. ಇದಕ್ಕಾಗಿ ಕನ್ನಡ ಸಂಸ್ಕೃತಿ ಇಲಾಖೆ 75 ಲಕ್ಷ ರೂ.ಗಳನ್ನು ಬಿಡುಗಡೆಗೊಳಿಸಿದೆ. ಇನ್ನೂ 25 ಲಕ್ಷ ರೂ.ಗಳನ್ನು ಬಿಡುಗಡೆಗೊಳಿಸುವಂತೆ ಇಲಾಖೆಗೆ ಎನ್‌ಎಸ್‌ಡಿಯಿಂದ ಮನವಿ ಮಾಡಲಾಗಿದೆ. ಈ ಬಾರಿ ದಸರ ವೇಳೆ ವಚನ ಚಳವಳಿ ರಂಗದ ಮೇಲೆ ಮೋಡಿ ಮಾಡಲಿದೆ. ಆದರೆ, ಅದಕ್ಕೂ ಮುನ್ನ ಮಲೆಗಳಲ್ಲಿ ಮದುಮಗಳು ನಾಟಕವನ್ನು ರಂಗಪ್ರಿಯರಿಗಾಗಿ ಮತ್ತೊಮ್ಮೆ ಪ್ರದರ್ಶನ ಮಾಡಲು ಎನ್‌ಎಸ್‌ಡಿ ಚಿಂತನೆ ನಡೆಸಿದೆ.

12ನೇ ಶತಮಾನ ಇವತ್ತಿನ ಚಿಂತನೆಗಳಿಗೆ ತದ್ವಿರುದ್ಧವಾಗಿ ಇತ್ತು. ಇಡೀ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಂದಿನ ಅನುಭವ ಮಂಟಪ ಮಾದರಿಯಾಗಿತ್ತು. ಕೋಮುಗಲಭೆ, ಭಾಷೆ ಗಲಭೆ ವಿಕಾರ ಸ್ವರೂಪ ಪಡೆಯುತ್ತಿರುವ ಹೊತ್ತಿನಲ್ಲಿ ವಚನ ಕಲ್ಯಾಣ ನಾಟಕ ಪ್ರಸ್ತುತವಾಗಲಿದೆ. 
-ಬಸವಲಿಂಗಯ್ಯ, ರಾಷ್ಟ್ರೀಯ ನಾಟಕ ಶಾಲೆ ಬೆಂಗಳೂರು ನಿರ್ದೇಶಕ

* ಶ್ರುತಿ ಮಲೆನಾಡತಿ

ಟಾಪ್ ನ್ಯೂಸ್

ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ

ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ

BYV-yathnal

BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?

Vikram-Naxal-Mud

Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!

peethabailu-1

Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ

Egg-Students

Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!

Naxal-encounter-Vikram-1

Naxal Activity: ಮಲೆನಾಡಿನವರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ವಿಕ್ರಂ ಗೌಡ

Arrest

Ullala: ತ್ರಿವಳಿ ತಲಾಖ್‌ ಪ್ರಕರಣ: ಆರೋಪಿಯ ಸೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ

ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ

18-bng

Bengaluru: ಅನಧಿಕೃತ ಮಳಿಗೆಗಳ ತೆರವು ಕೋರಿ ಅರ್ಜಿ:ಪಾಲಿಕೆಗೆ ಹೈಕೋರ್ಟ್ ನೋಟಿಸ್‌

17-bng

Bengaluru: ವಿಶ್ವನಾಥ್‌ಗೆ ಕೊಲೆ ಬೆದರಿಕೆ: ಆರೋಪಿ ಅರ್ಜಿ ವಜಾ

16-bng

Bengaluru: ಮರಕ್ಕೆ ಬೈಕ್‌ ಡಿಕ್ಕಿ ಹೊಡೆದು ಯುವಕ ಸಾವು

15-bng

Bengaluru: ‘ಪೊಲೀಸರ ಹೆಸರಿನ ನಕಲಿ ಕರೆ ಬಗ್ಗೆ ಎಚ್ಚರ ವಹಿಸಿ’

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ

ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ

BYV-yathnal

BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?

Vikram-Naxal-Mud

Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!

peethabailu-1

Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ

Egg-Students

Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.